May 2021

ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್

ಬೆಂಗಳೂರು: ಬಹುತೇಕ ನಿಯಂತ್ರಣದ ಹೊರತಾಗಿ, ಹೇರಲಾದ ಲಾಕ್ಡೌನ್ ತೆರವುಗೊಳಿಸಿದರೆ, ಮತ್ತೆ ಸಂಕಷ್ಟ ಎದುರಾದರೆ ಲಾಕ್ಡೌನ್ ಹೇರುವುದು ಕಠಿಣವಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಪ್ರಸ್ತುತ ಹೇರಲಾಗಿರುವ ಲಾಕ್​ಡೌನ್​ ತೆರವುಗೊಳಿಸುವ ಕಾರ್ಯ ಸದ್ಯಕ್ಕಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ತೀರ್ಮಾನಿಸಲಾಗಿದ್ದು, ಇನ್ನಷ್ಟು […]

ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್ Read More »

ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಚಾಮರಾಜನಗರ: ತಾಲೂಕಿನ ಪುಣಜನೂರು ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಮೂಡಹಳ್ಳಿ ಗ್ರಾಮದ ನಂದೀಶ್ ನಾಯಕ (36), ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿ ಬಂಧಿತರು. ಜಿಂಕೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯ ವಲಯ ಅರಣ್ಯ ಅಧಿಕಾರಿಗಳು ನಂದೀಶ್ ನ ಮನೆಗೆ ದಾಳಿ ನಡೆಸಿದ್ದಾರೆ. ಆತನಲ್ಲಿ ಜಿಂಕೆ ಮಾಂಸದ ಮೂಲದ ಬಗ್ಗೆ ವಿಚಾರಿದಾಗ ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿಯಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ. ನಂತರ ರಂಗಸ್ವಾಮಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ವಿಚಾರಿಸಿದಾಗ ಗೋಡೆಮಡುವಿನದೊಡ್ಡಿಯ ಹಳ್ಳದ

ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ Read More »

ಪಿಎಸ್ ಐ ತಲೆಯೊಳಗಿದ್ದವು 23 ವರ್ಷದ ಹಿಂದೆ ಒಳಹೊಕ್ಕ ಗುಂಡುಗಳು | ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ ನಿಧನ

ಚಾಮರಾಜನಗರ: 23 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ, ಚಾಮರಾಜನಗರ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಸಿದ್ದರಾಜನಾಯ್ಕ (59 ವ.) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೀರಪ್ಪನ್ 1993 ರಲ್ಲಿ ಹೊಡೆದಿದ್ದ ಗುಂಡುಗಳನ್ನು ತಲೆ ಮತ್ತು ಕಣ್ಣಿನಲ್ಲಿ ಇಟ್ಟುಕೊಂಡೇ ಕಳೆದ 23 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಜೀವನ ಸಾಗಿಸಿದ್ದ ಪಿಎಸ್ ಐ ನಿವೃತ್ತಿಗೆ ಕೇವಲ 5 ದಿನ ಬಾಕಿ ಇರುವಾಗ ನಿಧನರಾಗಿದ್ದಾರೆ. ಸಬ್ ಇನ್ಸ್​ಪೆಕ್ಟರ್ ಆಗಿದ್ದರೂ ದರ್ಪ, ಗತ್ತು ಪ್ರದರ್ಶಿಸದೇ ಜನರೊಂದಿಗೆ

ಪಿಎಸ್ ಐ ತಲೆಯೊಳಗಿದ್ದವು 23 ವರ್ಷದ ಹಿಂದೆ ಒಳಹೊಕ್ಕ ಗುಂಡುಗಳು | ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ ನಿಧನ Read More »

ಸಿಬಿಐ ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್

ನವದೆಹಲಿ: ಕೇಂದ್ರ ತನಿಖಾ ದಳ ಸಿಬಿಐ ನ ನೂತನ ನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನೇಮಿಸಿ, ಸಿಬ್ಬಂದಿ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಲೋಕಸಭಾ ವಿರೋಧಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನೊಳಗೊಂಡ ಸಮಿತಿ ನಡುವೆ ನಡೆದ ಸರಣಿ ಸಭೆಗಳ ಬಳಿಕ ಮಂಗಳವಾರ ಸಂಜೆ ಸರ್ಕಾರ ಈ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಮಹಾರಾಷ್ಟ್ರ

ಸಿಬಿಐ ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ Read More »

ಅಹಿಂಸೆಯ ಪರಮಾವತಾರಿ ಬುದ್ಧ- ಜಗವೆಲ್ಲ ಮಲಗಿರಲು ಅವನೆದ್ದ

ಸಮಾಚಾರ.ಕಾಂ.ಮೇ26: ಇಂದು ಬುದ್ಧ ಪೂರ್ಣಿಮೆ. ಗೌತಮ ಬುದ್ಧನ ಜನ್ಮ ಆಚರಣೆ. ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿ ವೈಶಾಖ್ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆ (ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ). ಬುದ್ಧನ 2583 ನೇ ಜನ್ಮ ದಿನಾಚರಣೆ ಏಷ್ಯನ್ ಲೂನಿಸೋಲಾರ್ ಕ್ಯಾಲೆಂಡರ್ ಅನ್ನು ಆಧರಿಸಿದೆ, ಅದಕ್ಕಾಗಿಯೇ ಪ್ರತಿವರ್ಷ ದಿನಾಂಕಗಳು ಬದಲಾಗುತ್ತವೆ. ಭಗವಾನ್ ಬುದ್ಧ (Gautam Buddha)ರಾಜಕುಮಾರ

ಅಹಿಂಸೆಯ ಪರಮಾವತಾರಿ ಬುದ್ಧ- ಜಗವೆಲ್ಲ ಮಲಗಿರಲು ಅವನೆದ್ದ Read More »

ನಾಳೆ ವರ್ಷದ ಮೊದಲ ಚಂದ್ರಗ್ರಹಣ | ಭಾರತದಲ್ಲಿ ಗೋಚರವಾಗುತ್ತಾ? ಹೇಗಿದೆ ಇದರ ಪ್ರಭಾವ..!!

ಬೆಂಗಳೂರು.ಮೇ 25. ನಾಳೆ.(ಮೇ.26) ಈ ವರ್ಷದಲ್ಲಿ ಗೋಚರವಾಗುವ ಮೊದಲ ಸೂಪರ್ ಚಂದ್ರ ಹಾಗೂ ಕೆಂಪು ಚಂದ್ರನನ್ನು ನೋಡಲು ಇಡೀ ಜಗತ್ತೇ ಸಜ್ಜಾಗಿದೆ. ಇದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಆಸ್ಟ್ರೇಲಿಯ, ಓಷಿಯಾನಿಯಾದ ಪ್ರದೇಶಗಳಲ್ಲಿ, ಅಲಾಸ್ಕಾ ಮತ್ತು ಕೆನಡಾದ ಹೆಚ್ಚಿನ ಭಾಗಗಳಲ್ಲಿ, ಯುಎಸ್‍ಎಯ ಬಹುಪಾಲು ಸ್ಥಳಗಳು, ಹವಾಯಿ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ ಬಹುಪಾಲು ಪ್ರದೇಶಗಳಲ್ಲಿ ಗೋಚರಿಸಲಿದೆ. ಈ ಅರೆನೆರಳಿನ ಗ್ರಹಣವು ಜಾಗತಿಕ ಕಾಲಮಾನದ ಪ್ರಕಾರ, 08:47:39ರಲ್ಲಿ (ಯುಟಿಸಿ) ಪ್ರಾರಂಭವಾಗಿ, ಮೇ 26 ರಂದು 13:49:44

ನಾಳೆ ವರ್ಷದ ಮೊದಲ ಚಂದ್ರಗ್ರಹಣ | ಭಾರತದಲ್ಲಿ ಗೋಚರವಾಗುತ್ತಾ? ಹೇಗಿದೆ ಇದರ ಪ್ರಭಾವ..!! Read More »

ಅದ್ಧೂರಿ ಮದುವೆಗೆ ಅಧಿಕಾರಿಗಳ ರೈಡ್ | ವಧುವನ್ನು ಬಿಟ್ಟು ವರ ಪರಾರಿ….!

ಕಡೂರು: ಲಾಕ್ಡೌನ್ ನಡುವೆ ನಡೆಯುತ್ತಿದ್ದ ಅದ್ಧೂರಿ ಮದುವೆಗೆ ದಾಳಿ ನಡೆದಿದ್ದು, ಅಧಿಕಾರಿಗಳನ್ನು ನೋಡಿದ ವರ ವಧುವನ್ನು ಮಂಟಪದಲ್ಲಿಯೇ ಬಿಟ್ಟು ಪರಾರಿಯಾದ ಪ್ರಸಂಗ ತಾಲೂಕಿನ ಕರಿಕಲ್ಲಳ್ಳಿಯಲ್ಲಿ ನಡೆದಿದೆ. ಕೋವಿಡ್ ಹರಡುವಿಕೆ ತಡೆಯುವ ಹಿನ್ನಲೆಯಲ್ಲಿ ಹೇರಿದ್ದ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಶಾಸ್ತ್ರೊತ್ತರಗಳು ಸರಾಗವಾಗಿ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಧಿಕಾರಿಗಳನ್ನು ನೋಡುತ್ತಲೇ ವರ ಸೇರಿದಂತೆ ಜನರು ಸ್ಥಳದಿಂದ ತೆರಳಿದ್ದಾರೆ. ಮದುವೆಗೆ ಕೇವಲ 10 ಜನರಿಗೆ ಅನುಮತಿ ಪಡೆದು ನೂರಾರು ಜನರನ್ನು ಸೇರಿಸಲಾಗಿತ್ತು. ಸ್ಥಳಕ್ಕೆ ಜೋಡಿಹೋಚಿಹಳ್ಳಿ

ಅದ್ಧೂರಿ ಮದುವೆಗೆ ಅಧಿಕಾರಿಗಳ ರೈಡ್ | ವಧುವನ್ನು ಬಿಟ್ಟು ವರ ಪರಾರಿ….! Read More »

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು?

ಮಂಗಳೂರು.:ಮೇ 25: ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆಗೈದ ಘಟನೆ ನಗರ ಹೊರವಲಯದ ಮಲ್ಲೂರಿನಲ್ಲಿ ನಡೆದಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯತಿ ಪಿಡಿಓ ರಾಜೇಂದ್ರ ಶೆಟ್ಟಿ ಹಲ್ಲೆಗೆ ಒಳಗಾದವರು. ಮಲ್ಲೂರು ಬಳಿಯ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಅಧಿಕಾರಿ ಸೂಚಿಸಿದ್ದರು. ಆದರೆ ಅಧಿಕಾರಿಯ ಮಾತು ಕೇಳದೇ ಅದೇ ಯುವಕರು ಬಳಿಕ ಮಲ್ಲೂರು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಸೇರಿದ್ದರು. ಪಂಚಾಯತ್ ಕಚೇರಿ ಆವರಣದಲ್ಲಿ ಮಾಸ್ಕ್ ಹಾಕದೆ ಗುಂಪು

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು? Read More »

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್

ಉಜಿರೆ: ಪಿಕ್ ಅಪ್ ವಾಹನವೊಂದು ನದಿ ದಾಟಲು ನದಿಗೆ ಇಳಿಯುತ್ತಿದ್ದಂತೆ ನೀರು ಒಮ್ಮೆಲೆ ಉಕ್ಕಿ ಬಂದ ಪರಿಣಾಮ ವಾಹನ ಮುಳುಗಡೆಯಾಗಿ, ಅದರಲ್ಲಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾರ್ಮಾಡಿ ಬೆಳಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಳದಂಗಡಿಯ ಮನೆಯೊಂದಕ್ಕೆ ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಪರಿಕರಗಳನ್ನು ಕೊಂಡೈೂದು ತಿರುಗಿ ಬರುವಾಗ, ಇಂದು ಎಡೆಬಿಡದೆ ಮಳೆಯಾದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಈ ಘಟನೆ ನಡೆದಿದೆ. ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್ Read More »

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್!

ಮಡಿಕೇರಿ: ಪುಟ್ಟ ಬಾಲಕಿಯೊಬ್ಬಳು ಕೋವಿಡ್ ನಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದು ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್‌ ಪೋನ್‌‌‌ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ಇದು ವೈರಲ್ ಆಗಿದ್ದು, ಎಲ್ಲರ ಮನ ಮಿಡಿದಿತ್ತು. ಇದೀಗ ಕೊರೊನಾ ಕೇಂದ್ರದಿಂದ ಮೊಬೈಲ್ ಎಗರಿಸುತ್ತಿದ್ದಂತ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಡಿಕೇರಿಯ ಕೊರೋನಾ ಆಸ್ಪತ್ರೆಯಲ್ಲಿ ಅನೇಕರ ಮೊಬೈಲ್ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು. ಅದರಲ್ಲಿಯೂ

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್! Read More »