Sullia news

ಸುಳ್ಯ: ಅಪಾಯದ ಪರಿಸ್ಥಿತಿಯಲ್ಲಿನ ಮನೆಗಳಿಗೆ ಪರ್ಯಾಯ ವ್ಯವಸ್ಥೆಗೆ ಡಿಸಿ ಚಿಂತನೆ

ಸಮಗ್ರ ನ್ಯೂಸ್: ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾಗಿರುವ ಸುಳ್ಯ ತಾಲೂಕಿನ ಕೆಲವು ಮನೆಗಳಿಗೆ ಪರ್ಯಾಯ ಜಾಗದ ವ್ಯವಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ‘ತಾಲೂಕಿನ ಕಲ್ಮಕಾರಿನಲ್ಲಿ ಭೂಕುಸಿತದಿಂದ ಅಪಾಯ ಎದುರಿಸುತ್ತಿರುವ ಎಂಟು ಕುಟುಂಬಗಳನ್ನು ಮುಂದಿನ ಮುಂಗಾರಿನ ಒಳಗೆ ಸ್ಥಳಾಂತರಿಸಲಾಗುವುದು. ಈ ಕುಟುಂಬಗಳಿಗೆ ಪರ್ಯಾಯ ಜಮೀನು ನೀಡಲಿದ್ದೇವೆ. ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಡಿಸಿ, ‘ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗಣೇಶನಗರದಲ್ಲೂ ಕೆಲವು ಮನೆಗಳು ಭೂಕುಸಿತದ […]

ಸುಳ್ಯ: ಅಪಾಯದ ಪರಿಸ್ಥಿತಿಯಲ್ಲಿನ ಮನೆಗಳಿಗೆ ಪರ್ಯಾಯ ವ್ಯವಸ್ಥೆಗೆ ಡಿಸಿ ಚಿಂತನೆ Read More »

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ

ಸುಳ್ಯ : ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕ್ರೀಡಾ ಮತ್ತು ಕಲಾಪೋಷಕರಾದ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರವೀಣ್ ಹಂತಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಎನ್ ಕೌಂಟರ್ ಮಾಡಬೇಕು, ಅದಾಗಲೇ ‌ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ Read More »