Mangalore news

ತೀವ್ರ ವಿರೋಧದ ಹಿನ್ನೆಲೆ| ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ನೇಮ ರದ್ದು

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ ಆಚರಣೆ ಮಾಡಲು ನಿರ್ಧರಿಸಲಾಗಿದ್ದ‌ ಕೊರಗಜ್ಜ ನೇಮಕ್ಕೆ ತುಳುನಾಡಿನ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಮೋತ್ಸವವನ್ನು ರದ್ದುಪಡಿಸಲಾಗಿದೆ. ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು […]

ತೀವ್ರ ವಿರೋಧದ ಹಿನ್ನೆಲೆ| ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ನೇಮ ರದ್ದು Read More »

ಮಂಗಳೂರು: 10 ದಿನಗಳಲ್ಲಿ 1.46 ಕೋಟಿ ಅಕ್ರಮ ಚಿನ್ನಾಭರಣ ವಶ

ಸಮಗ್ರ ನ್ಯೂಸ್: ಕಳೆದ ಹತ್ತು ದಿನಗಳ ಅವಧಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು 1.46 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಂಡು ಹಿಡಿದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 22 ರಿಂದ 31 ರವರೆಗೆ ಆರು ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ದಾಖಲಿಸಿದ್ದಾರೆ. ದುಬೈನಿಂದ ಬಂದ ಆರು ಪ್ರಯಾಣಿಕರಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 2,870 ಗ್ರಾಂ ತೂಕದ ಚಿನ್ನ ದೊರೆತಿದೆ. ಇದರ ಮೌಲ್ಯ 1,46,87,410 ರೂ. ಎಂದು ಅಂದಾಜಿಸಲಾಗಿದೆ. ಪ್ರಯಾಣಿಕರು ಜೀನ್ಸ್ ಪ್ಯಾಂಟ್‌ನ ಸೊಂಟದ

ಮಂಗಳೂರು: 10 ದಿನಗಳಲ್ಲಿ 1.46 ಕೋಟಿ ಅಕ್ರಮ ಚಿನ್ನಾಭರಣ ವಶ Read More »

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ Read More »

ಮಂಗಳೂರು: ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಎನ್‍ಐಎ ಅಧಿಕಾರಿಗಳು ಸೆ.22 ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ಕಚೇರಿಯ ಒಳಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಎನ್‍ಐಎ ಅಧಿಕಾರಿಗಳು ಎಸ್‍ಡಿಪಿಐ ಕಚೇರಿಯ ಬೀಗವನ್ನು ಬ್ಲೇಡ್‍ನಿಂದ ಕಟ್ ಮಾಡಿ ಕಚೇರಿಯ ಶಟರ್ ಒಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಒಳಭಾಗದ ಡೋರ್‌ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್‍ಐಎ ಅಧಿಕಾರಿಗಳು ಅಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಂಪ್ಯೂಟರ್ ಸಿಪಿಯುನ ಹಾರ್ಡ್‍ಡಿಸ್ಕ್‌ನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ

ಮಂಗಳೂರು: ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು Read More »

ಮಂಗಳೂರು: ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ರಾತ್ರೋರಾತ್ರಿ ‌ಪರಾರಿ

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೇಲ್ ನಿಂದ ಮೂವರು ವಿಧ್ಯಾರ್ಥಿನಿಯರು ರಾತ್ರೋರಾತ್ರಿ ಪರಾರಿಯಾದ ಘಟನೆ ನಡೆದಿದೆ. ಮಂಗಳೂರಿನ ಮೇರಿ ಹಿಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರ ಹಾಸ್ಟೆಲ್​ನಲ್ಲಿದ್ದ ಮೂವರು ಹಾಸ್ಟೇಲ್ ನ ಕಿಟಕಿ ಮುರಿದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ನಿವಾಸಿಗಳಾಗಿದ್ದು, ಮತ್ತೋರ್ವ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದವಳೆಂದು ಗೊತ್ತಾಗಿದೆ. ವಿದ್ಯಾರ್ಥಿನಿಯರು ಪಿಯುಸಿ ಓದುತ್ತಿದ್ದಾರೆ. “ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಚೀಟಿ ಬರೆದಿಟ್ಟು ಮುಂಜಾನೆ 3 ಗಂಟೆಯ ವೇಳೆಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಕಂಕನಾಡಿ

ಮಂಗಳೂರು: ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ರಾತ್ರೋರಾತ್ರಿ ‌ಪರಾರಿ Read More »

ಮಂಗಳೂರು: ಸೆ.23 ರಂದು ವಿವಿಧ ಕಂಪೆನಿಗಳಿಂದ ನೇರ ಸಂದರ್ಶನ

ಸಮಗ್ರ ನ್ಯೂಸ್: ದ.ಕ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಸೆ.23ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಲಾಲ್‌ಬಾಗ್‌ನಲ್ಲಿರುವ ಮನಪಾ ಕಟ್ಟಡದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಯೋಜಿಸಲಾಗಿದೆ. ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ (ಬಿ.ಫಾರ್ಮಾ, ಎಂ ಫಾರ್ಮಾ, ಬಿಎಸ್ಸಿ, ನರ್ಸಿಂಗ್, ಜಿ.ಎನ್.ಎಂ) ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ:0824-2457139ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ

ಮಂಗಳೂರು: ಸೆ.23 ರಂದು ವಿವಿಧ ಕಂಪೆನಿಗಳಿಂದ ನೇರ ಸಂದರ್ಶನ Read More »

ಮಂಗಳೂರು: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು| ಚಾಲಕ ಮತ್ತು ನಿರ್ವಾಹಕ ಅರೆಸ್ಟ್

ಸಮಗ್ರ ನ್ಯೂಸ್: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ. ಬಂಧಿತ ಬಸ್​ ಚಾಲಕನನ್ನು ಕುಪ್ಪೆಪದವು ನಿವಾಸಿ ಕಾರ್ತಿಕ್ ಆರ್ ಶೆಟ್ಟಿ(30) ಮತ್ತು ಬಸ್​ ನಿರ್ವಾಹಕ ಅಂಬ್ಲಮೊಗರು ನಿವಾಸಿ ದಂಶೀರ್ (30) ಎಂದು ಗುರುತಿಸಲಾಗಿದೆ. ಸೆ 7ರಂದು ಉಳ್ಳಾಲದ ಮಾಸ್ತಿಕಟ್ಟೆಯಿಂದ ಬರುತ್ತಿದ್ದ ಯಶರಾಜ್(16) ಎಂಬ ವಿದ್ಯಾರ್ಥಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ. 44 ಡಿ ನಂಬರಿನ ಖಾಸಗಿ ಬಸ್ಸಿನಲ್ಲಿ ಉಳ್ಳಾಲದಿಂದ ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದ

ಮಂಗಳೂರು: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು| ಚಾಲಕ ಮತ್ತು ನಿರ್ವಾಹಕ ಅರೆಸ್ಟ್ Read More »

ಮಂಗಳೂರು: ಬ್ಯಾರಿ‌ಭಾಷಾ ದಿನಾಚರಣೆ| ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಸಮಗ್ರ ನ್ಯೂಸ್: ಅಕ್ಟೋಬರ್ 3ರಂದು ನಡೆಯುವ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಅಖಿಲ ಭಾರತ ಬ್ಯಾರಿ ಪರಿಷತ್ ವಿವಿಧ ಬ್ಯಾರಿ ಸ್ಪರ್ಧೆಗಳನ್ನು ಆಯೋಜಿಸಿದೆ. 1) ಪ್ರಬಂಧ ಸ್ಪರ್ಧೆ: ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜೀವನ ಮತ್ತು ಸಂದೇಶ ಎಂಬ ವಿಷಯದಲ್ಲಿ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ನಾಲ್ಕು ಪುಟಗಳಿಗೆ ಮೀರದ ಪ್ರಬಂಧವನ್ನು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು (ಮುಕ್ತ ಸ್ಪರ್ಧೆ) ಬರೆದು ಸೆಪ್ಟೆಂಬರ್ 30ರೊಳಗೆ ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕ್ಯಾಪಿಟಲ್ ಅವೆನ್ಯೂ, ತಳ ಅಂತಸ್ತು,

ಮಂಗಳೂರು: ಬ್ಯಾರಿ‌ಭಾಷಾ ದಿನಾಚರಣೆ| ವಿವಿಧ ಸ್ಪರ್ಧೆಗಳಿಗೆ ಆಹ್ವಾನ Read More »

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ| ಮಾತನಾಡಲು ಕರೆದವರು ಚೂರಿಯಿಂದ ತಿವಿದರು

ಸಮಗ್ರ ನ್ಯೂಸ್: ಮಂಗಳೂರು ನಗರದ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ನಂತೂರು ಜಂಕ್ಷನ್ ಬಳಿ ನಡೆದಿದೆ. ನಂತೂರು ಬಳಿಯಿರುವ ಪ.ಪೂ.ಕಾಲೇಜಿನ 17 ವರ್ಷ ಪ್ರಾಯದ ವಿದ್ಯಾರ್ಥಿ ಸೆ.15ರಂದು ಸಂಜೆ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ನಡೆದುಕೊಡು ಹೋಗುತ್ತಿದ್ದಾಗ ಮತ್ತೊಂದು ಪ.ಪೂ.ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಗಮಿಸಿ ‘ಮಾತನಾಡಲು ಇದೆ’ ಎನ್ನುತ್ತಾ ದೈವಸ್ಥಾನದ ಹಿಂಬದಿಗೆ ಕರೆದುಕೊಂಡು ಹೋಗಿ ಚೂರಿಯಿಂದ 17ರ ಹರೆಯದ ವಿದ್ಯಾರ್ಥಿಯ ಹೊಟ್ಟೆ,

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ| ಮಾತನಾಡಲು ಕರೆದವರು ಚೂರಿಯಿಂದ ತಿವಿದರು Read More »

ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ| ಆರೋಪಿ‌ ಹರ್ಷಿತ್ ಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಬಂಟ್ವಾಳದ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ನೀಡಿದೆ. ಜುಲೈ .28ರಂದು ರಾತ್ರಿ ಸುರತ್ಕಲ್ ಅಂಗಡಿಯೊಂದರ ಮುಂಭಾಗದಲ್ಲಿ ಫಾಝಿಲ್‌ನನ್ನು ತಂಡವೊಂದು ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಇದೀಗ ಆರೋಪಿ ಹರ್ಷಿತ್‌ಗೆ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದೆ. ಜುಲೈ 28ರಂದು ರಾತ್ರಿ ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು

ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ| ಆರೋಪಿ‌ ಹರ್ಷಿತ್ ಗೆ ಜಾಮೀನು ಮಂಜೂರು Read More »