ರಾಜಕೀಯ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು| ಮಾಜಿ ಸಿಎಂ ಯಡಿಯೂರಪ್ಪ ಏನಂದ್ರು ಗೊತ್ತಾ?

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯಬಾರದು. ಸಿದ್ದರಾಮಯ್ಯ ಇರಲಿ, ಯಡಿಯೂರಪ್ಪ ಇರಲಿ, ಅಥವಾ ಮತ್ಯಾರೋ ಇರಬಹುದು. ಇಂತಹ ಘಟನೆಗಳು ನಡೆಯಬಾರದು. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾರೆ. ಅವರನ್ನು ಗೌರವದಿಂದ ಕಾಣಬೇಕು. ಈ ರೀತಿಯ ನಡವಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಕೂಡದು, ಯಾರೂ ಈ […]

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು| ಮಾಜಿ ಸಿಎಂ ಯಡಿಯೂರಪ್ಪ ಏನಂದ್ರು ಗೊತ್ತಾ? Read More »

ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದು ಆಕ್ರೋಶ

ಸಮಗ್ರ ನ್ಯೂಸ್: ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು, ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಸಿದ್ಧರಾಮಯ್ಯ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಜ.ತಿಮ್ಮಯ್ಯ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಅತಿವೃಷ್ಠಿಯಿಂದಾದ ನಾಶದ ಪರಿಸ್ಥಿತಿ ಅವಲೋಕನಕ್ಕಾಗಿ ಮಡಿಕೇರಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ವಿರುದ್ಧ ಇಂದು ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ಕಪ್ಪು ಪಟ್ಟಿ ಧರಿಸಿ, ಗೋ ಬ್ಯಾಕ್ ಸಿದ್ದುಖಾನ್ ಎಂಬ ಘೋಷಣೆಯೊಂದಿಗೆ ಘೇರಾವ್ ಹಾಕುತ್ತಿದ್ದರು.

ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದು ಆಕ್ರೋಶ Read More »

ಚುನಾವಣಾ ತಂತ್ರಗಾರಿಕೆ‌ ಭಾಗವಾಗಿ‌‌ ತಿಂಗಳಿಗೊಮ್ಮೆ ರಾಜ್ಯಕ್ಕೆ ಮೋದಿ ಕರೆಸುವ ಪ್ರಯತ್ನ – ಬಿಎಸ್ವೈ

ಸಮಗ್ರ ನ್ಯೂಸ್: ಪಕ್ಷದ ಸಂಘಟನೆ, ಚುನಾವಣಾ ತಂತ್ರಗಾರಿಕೆ ಭಾಗವಾಗಿ ಪ್ರತಿ ತಿಂಗಳಿಗೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆ ತರಲು ಪ್ರಯತ್ನಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕವಾದ ಹಿನ್ನೆಲೆಯಲ್ಲಿ ‘ಕಾವೇರಿ’ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಆದಿಯಾಗಿ ಪಕ್ಷದ ಹಲವು ನಾಯಕರ ಜತೆಗೂಡಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ಆನೆ ಬಲ ಬಂದಂತಾಗಿದ್ದು, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವೆ.

ಚುನಾವಣಾ ತಂತ್ರಗಾರಿಕೆ‌ ಭಾಗವಾಗಿ‌‌ ತಿಂಗಳಿಗೊಮ್ಮೆ ರಾಜ್ಯಕ್ಕೆ ಮೋದಿ ಕರೆಸುವ ಪ್ರಯತ್ನ – ಬಿಎಸ್ವೈ Read More »

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನಿನ ಖಾದ್ಯಗಳ ಹೊಟೇಲ್ -ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ‘ಖಾಸಗಿ ಸಹಭಾಗಿತ್ವದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮೀನಿನ ಖಾದ್ಯಗಳ ಹೊಟೇಲ್‍ಗಳನ್ನು ಆರಂಭಿಸಲಾಗುವುದು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ (S. Angara) ಅವರು ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ(ಕೆಆರ್ ಎಸ್), ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಜಲಾಶಯಗಳಲ್ಲಿಯೂ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಮತ್ಸ್ಯ ಕ್ರಾಂತಿ ನಡೆಯಲಿದ್ದು,

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನಿನ ಖಾದ್ಯಗಳ ಹೊಟೇಲ್ -ಸಚಿವ ಎಸ್.ಅಂಗಾರ Read More »

‘ಕೋಮುಗಲಭೆಯಲ್ಲ ಇದು ಜೂಜಿನ ಗಲಭೆ, ರಾಜಕೀಯ ಬೇಳೆ ಬೇಯಿಸಬೇಡಿ’ – ಬಿಜೆಪಿಗೆ ಭದ್ರಾವತಿ ಶಾಸಕರ ತಿರುಗೇಟು

ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆ ದಿನವಾದ ಸೋಮವಾರ ಸಂಜೆ ಸಾವರ್ಕರ್​ ಫ್ಲೆಕ್ಸ್​ ತೆರವು ವಿವಾದದಲ್ಲಿ ಪ್ರೇಮ್​ಸಿಂಗ್​ ಎಂಬಾತನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಪ್ರಕ್ಷ್ಯುಬ್ಧ ಸ್ಥಿತಿ ನಿರ್ಮಾಣಗೊಂಡಿತ್ತು. ಇದರ ಬೆನ್ನಲ್ಲೇ ಮಂಗಳವಾರ ಭದ್ರಾವತಿಯಲ್ಲಿ ಹಿಂದೂ ಯುವಕ ಸುನೀಲ್​ ಎಂಬಾತನ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ನಡೆದಿತ್ತು. ಈ ಘಟನೆ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಸುನೀಲ್​ ಮೇಲಿನ ಹಲ್ಲೆ ಪ್ರಕರಣ ಕುರಿತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಭದ್ರಾವತಿ ಯುವಕನ

‘ಕೋಮುಗಲಭೆಯಲ್ಲ ಇದು ಜೂಜಿನ ಗಲಭೆ, ರಾಜಕೀಯ ಬೇಳೆ ಬೇಯಿಸಬೇಡಿ’ – ಬಿಜೆಪಿಗೆ ಭದ್ರಾವತಿ ಶಾಸಕರ ತಿರುಗೇಟು Read More »

ಸಾವರ್ಕರ್ ಬ್ಯಾನರ್ ಅಳವಡಿಕೆ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ- ಪಾಪ್ಯುಲರ್ ಫ್ರಂಟ್ ಆರೋಪ

ಸಮಗ್ರ ನ್ಯೂಸ್: ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಾವರ್ಕರ್ ಬ್ಯಾನರ್ ಅಳವಡಿಕೆಯ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ ಇದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಆರೋಪಿಸಿದ್ದಾರೆ. ಇತಿಹಾಸದ ಕಳಂಕಿತ ವ್ಯಕ್ತಿ ಸಾವರ್ಕರನ್ನು ಬಿಜೆಪಿ ವೈಭವೀಕರಿಸುತ್ತಾ ಬರುತ್ತಿದೆ. ಅದರೊಂದಿಗೆ ಈ ಬಾರಿ ಸರಕಾರ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತಿನಲ್ಲಿ ನೆಹರೂರಂತಹ ಮೇಧಾವಿ ನಾಯಕರನ್ನು ಕೈಬಿಟ್ಟು ಸಾವರ್ಕರ್ ಗೆ ಪ್ರಮುಖ ಸ್ಥಾನ ನೀಡಲಾಯಿತು. ಇದಕ್ಕೆ ರಾಜ್ಯದ

ಸಾವರ್ಕರ್ ಬ್ಯಾನರ್ ಅಳವಡಿಕೆ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ- ಪಾಪ್ಯುಲರ್ ಫ್ರಂಟ್ ಆರೋಪ Read More »

ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ವೈಗೆ ಸ್ಥಾನ| ಕಮ್ಮಿಯಾಗಿಲ್ಲ ಯಡ್ಡಿ ವೈಖರಿ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರ್ನಾಟಕ ಬಿಜೆಪಿಯಲ್ಲಿ ಸೈಡ್‌ಲೈನ್ ಆಗಿಲ್ಲ. 2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಬುಧವಾರ ಬಿಜೆಪಿ ಸಂಘಟನಾತ್ಮಕವಾಗಿ ಕೆಲವು ಬದಲಾವಣೆ ಮಾಡಿದೆ. ಪಕ್ಷದಲ್ಲಿನ ಪ್ರಮುಖ ತೀರ್ಮಾನ ಕೈಗೊಳ್ಳುವ ಸಮಿತಿಯಾದ ಸಂಸದೀಯ ಮಂಡಳಿ ಪುನಾರಚನೆ ಮಾಡಲಾಗಿದೆ. ಹಲವು ಹೊಸ ಮುಖಗಳನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ 77 ವರ್ಷದ ಬಿ. ಎಸ್. ಯಡಿಯೂರಪ್ಪರನ್ನು ಸಂಸದೀಯ ಮಂಡಳಿಗೆ ಸದಸ್ಯರಾಗಿ

ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ವೈಗೆ ಸ್ಥಾನ| ಕಮ್ಮಿಯಾಗಿಲ್ಲ ಯಡ್ಡಿ ವೈಖರಿ Read More »

ವೋಟಿ ಗಾಗಿ ಸಿದ್ದರಾಮಯ್ಯರಿಂದ ಸಾವರ್ಕರ್ ಅವಹೇಳನ – ಆರಗ ಜ್ಞಾನೇಂದ್ರ ಕಿಡಿ

ಸಮಗ್ರ ನ್ಯೂಸ್: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ. ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ನಗರದಲ್ಲಿಂದು ವೀರ ಸಾವರ್ಕರ್​ ಫೋಟೋ ಅಳವಡಿಕೆ

ವೋಟಿ ಗಾಗಿ ಸಿದ್ದರಾಮಯ್ಯರಿಂದ ಸಾವರ್ಕರ್ ಅವಹೇಳನ – ಆರಗ ಜ್ಞಾನೇಂದ್ರ ಕಿಡಿ Read More »

ಗೃಹ ಸಚಿವರ ಬೆಂಗಾವಲು ವಾಹನ ಅಪಘಾತ!

ಗೃಹ ಸಚಿವ ಆರಗ ಜ್ಞಾನೇಂದ್ರರ ಬೆಂಗಾವಲು ವಾಹನ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಜಂಕ್ಷನ್​​ನಲ್ಲಿ ಬೆಂಗಾವಲು ಜೀಪಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜಂಕ್ಷನ್ ಬಳಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನಕ್ಕೆ, ಮತ್ತೊಂದು ಕಾರು ಡಿಕ್ಕಿಯಾಗಿದೆ. ಈ ಪರಿಣಾಮ, ಬೆಂಗಾವಲು ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತುಮಕೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಎದುರುಗಡೆ ಬರುತ್ತಿದ್ದಂತ ಕಾರೊಂದು

ಗೃಹ ಸಚಿವರ ಬೆಂಗಾವಲು ವಾಹನ ಅಪಘಾತ! Read More »

ರಾಷ್ಟ್ರಧ್ವಜಕ್ಕೆ ಅಪಮಾನ; ನಳಿನ್ ಕುಮಾರ್, ಬೈರತಿ ಬಸವರಾಜ್ ವಿರುದ್ದ ದೂರು ನೀಡಲು ಚಿಂತನೆ

ಸಮಗ್ರ ನ್ಯೂಸ್: ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಧ್ವಜಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಚಿವರು ಅಪಮಾನ ಮಾಡಿದ್ದಾರೆ. ರಾಷ್ಟ್ರ ಧ್ವಜದ ಬ್ಯಾಡ್ಜ್ ಅನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಪಥಸಂಚಲನ ಮಾಡಿದ ನಳೀನ್ ಕುಮಾರ್ ಕಟೀಲ್ ಹಾಗೂ ಭೈರತಿ ಬಸವರಾಜ್. ನಿನ್ನೆ ಕೆ.ಆರ್.ಪುರಂ ನಲ್ಲಿ ನಡೆದ ರೋಡ್ ಶೋ ನಲ್ಲಿ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ದೂರು ನೀಡಲು ಚಿಂತನೆ ನಡೆಸಲಾಗಿದೆ. ಇನ್ನೂ ತಿಪಟೂರುನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು

ರಾಷ್ಟ್ರಧ್ವಜಕ್ಕೆ ಅಪಮಾನ; ನಳಿನ್ ಕುಮಾರ್, ಬೈರತಿ ಬಸವರಾಜ್ ವಿರುದ್ದ ದೂರು ನೀಡಲು ಚಿಂತನೆ Read More »