ಬಟ್ಟೆಬಿಚ್ಚಿ ಓಡಾಡೋರಿಗೇನ್ ಗೊತ್ತು ಗಾಂಧಿ ಮೌಲ್ಯ?: ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕಿಡಿಕಾರಿದ್ದು ಯಾರ ಬಗ್ಗೆ ಗೊತ್ತ?
ಬೆಂಗಳೂರು: ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು ಬರೀ ಭಿಕ್ಷೆ ಮಾತ್ರ. ಒಂದು ಕೆನ್ನೆಗೆ ಹೊಡೆದರೆ ಎರಡೂ ಕೆನ್ನೆಗೆ ಹೊಡೆಸಿಕೊಳ್ಳಿ ಎಂದು ಗಾಂಧೀಜಿ ಅವರಿಗೆ ಸಿಗುವುದು ಭಿಕ್ಷೆ ಮಾತ್ರವೇ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ಧಾರೆ. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್ ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತಿದೆ ಗಾಂಧಿ ಮೌಲ್ಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಕೆಯಂಥವರು ಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ತಿರುಗುವವರು. ಅಂಥವರ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. […]