ಪ್ರಪಂಚ ಪರ್ಯಟನೆ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ| ಮೃತರ ಸಂಖ್ಯೆ 53ಕ್ಕೆ ಏರಿಕೆ; ಅಪಾರ ಹಾನಿ

ಸಮಗ್ರ ನ್ಯೂಸ್: ಟಿಕೆಟ್ ನಲ್ಲಿ ಇಂದು ಬೆಳಂಬೆಳಗ್ಗೆ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಟಿಬೆಟ್ನಲ್ಲಿ ಮಂಗಳವಾರ ಬೆಳಿಗ್ಗೆ ಒಂದು ಗಂಟೆಯಲ್ಲಿ ಸಂಭವಿಸಿದ್ದು, ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ. ದೆಹಲಿ-ಎನ್ಸಿಆರ್ ಮತ್ತು ಉತ್ತರ ಭಾರತದ ವಿವಿಧ ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಪಾಟ್ನಾ ಸೇರಿದಂತೆ ಬಿಹಾರದ ಹಲವಾರು ಪ್ರದೇಶಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಪಶ್ಚಿಮ […]

ಟಿಬೆಟ್ ನಲ್ಲಿ ಪ್ರಬಲ ಭೂಕಂಪ| ಮೃತರ ಸಂಖ್ಯೆ 53ಕ್ಕೆ ಏರಿಕೆ; ಅಪಾರ ಹಾನಿ Read More »

ಮಂಗಳೂರು: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಸಮಗ್ರ ನ್ಯೂಸ್: ಅತಿ ಅಪರೂಪದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನನ ನೀಡಿದ ಮಹಾತಾಯಿ. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನನ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ

ಮಂಗಳೂರು: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ Read More »

ನೇಪಾಳದ ಗಡಿಯಲ್ಲಿ ಪ್ರಬಲ ಭೂಕಂಪ| ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ನೇಪಾಳದ ಗಡಿ ಬಳಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ನಸುಕಿನ ವೇಳೆ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅಲ್ಲಿನ ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಕಾಣಿಸಿಕೊಂಡರು. ಭೂಕಂಪದಿಂದಾಗಿ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ನೇಪಾಳವು ಭೌಗೋಳಿಕವಾಗಿ ಸಕ್ರಿಯವಾಗಿರುವ ಪ್ರದೇಶದಲ್ಲಿ ನೆಲೆಸಿದೆ. ಅಲ್ಲಿ ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಯಾಗಿ ಹಿಮಾಲಯವನ್ನು ರೂಪಿಸುತ್ತವೆ.

ನೇಪಾಳದ ಗಡಿಯಲ್ಲಿ ಪ್ರಬಲ ಭೂಕಂಪ| ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ Read More »

ಹವಾಮಾನ ವರದಿ| ಚಳಿ‌ ಜೊತೆ ಡಿ.18ರಿಂದ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೈ ಕೊರೆವ ಚಳಿ ಆರಂಭವಾಗಿದೆ. ಮನೆಯಿಂದ ಹೊರಬರಲಾಗದಷ್ಟು ಚಳಿ ಆರಂಭವಾಗಿದ್ದು, ಇದರ ನಡುವೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗುವ ಸಾಧ್ಯತೆ ಇದ್ದು, ಡಿಸೆಂಬರ್ 18 ರಿಂದ ಮಳೆಯಾಗುವ ಲಕ್ಷಣಗಳಿವೆ. ಒಂದು ವೇಳೆ ಮತ್ತೆ ಮಳೆಯಾದರೆ ಚಳಿ ಪ್ರಮಾಣ ಕಡಿಮೆಯಾಗಲಿದೆ. ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ, ಧರವಾಡ, ಕೊಪ್ಪಳ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು

ಹವಾಮಾನ ವರದಿ| ಚಳಿ‌ ಜೊತೆ ಡಿ.18ರಿಂದ ಮಳೆ‌ ಮುನ್ಸೂಚನೆ Read More »

ಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ

ಸಮಗ್ರ ನ್ಯೂಸ್: ಓಡಿಶಾದ ಸುಂದರ್‌ಗಡ್ ಜಿಲ್ಲೆಯ ರೂರ್ಕೆಲಾ ಅರಣ್ಯದಲ್ಲಿ ಆನೆ ಪ್ರಭೇದಗಳನ್ನು ಉಳಿಸಲು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ AI ಕ್ಯಾಮೆರಾಗಳ ಸಹಾಯದಿಂದ ಆನೆಗಳನ್ನು ಸಂರಕ್ಷಿಸಲಾಗಿದೆ. ಎರಡು ದೊಡ್ಡ ಆನೆಗಳು ಮತ್ತು ಒಂದು ಮರಿ ಆನೆ ಹಿಂಡು ರುಲಾಚ್ಯಾ ರೈಲು ಹಳಿ ಕಡೆಗೆ ಹೋಗುತ್ತಿದ್ದವು, ಅಲ್ಲಿ ಅವುಗಳಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆಯಬಹುದಾಗಿತ್ತು.ಆದರೆ ಎಐ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳು ಮತ್ತು ರೈಲ್ವೆ ಮತ್ತು ಅರಣ್ಯ ಇಲಾಖೆಯ ಬುದ್ಧಿವಂತಿಕೆಯಿಂದಾಗಿ ಅಪಘಾತವನ್ನು ತಪ್ಪಿಸಲಾಯಿತು. ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್

ಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ Read More »

ಮದುವೆ ಮನೆಗೆ ಮಾಜಿ ಪ್ರೇಯಸಿ ಎಂಟ್ರಿ- ಯುವತಿಯ ಹೈಡ್ರಾಮಾಗೆ ಕುಟುಂಬಸ್ಥರು ಶಾಕ್

ಸಮಗ್ರ ನ್ಯೂಸ್ : ಯುವಕನೊಬ್ಬನ ಮದುವೆಯ ದಿನವೇ ಆತನ ಮಾಜಿ ಪ್ರಿಯತಮೆ ಮದುವೆ ಮನೆಗೆ ಎಂಟ್ರಿಕೊಟ್ಟು ಶಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆಸಿದ್ದು, ವರ ಸೇರಿದಂತೆ ಆತನ ಇಡೀ ಕುಟುಂಸ್ಥರು ಕಂಗಾಲಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಂದೇ ಮದುವೆಯಾಗಬೇಕಿದ್ದ ಯುವಕ ವರನ ಗೆಟಪ್‌ನಲ್ಲಿ ತಯಾರಾಗಿ ಕುಳಿತಿರುವುದು ಕಂಡು ಬಂದರೆ, ಆತನ ಮಾಜಿ ಪ್ರಿಯತಮೆ ಪಕ್ಕದಲ್ಲೇ ಕುಳಿತುಕೊಂಡು ಆತ ತನಗೆ ಮೋಸ

ಮದುವೆ ಮನೆಗೆ ಮಾಜಿ ಪ್ರೇಯಸಿ ಎಂಟ್ರಿ- ಯುವತಿಯ ಹೈಡ್ರಾಮಾಗೆ ಕುಟುಂಬಸ್ಥರು ಶಾಕ್ Read More »

ಅಪಘಾತ ಸಂದರ್ಭ ಬ್ಯಾಗ್ ನೊಂದಿಗೆ ಬಸ್‌ನಿಂದ ಹೊರಗೆ ಹಾರಿದ್ದ ಚಾಲಕ

ಸಮಗ್ರ ನ್ಯೂಸ್ : ಡಿ. 09 ರಂದು ರಾತ್ರಿ ಕುರ್ಲಾದಲ್ಲಿ ನಡೆದ ವಿದ್ಯುತ್ ಚಾಲಿತ ಬಸ್‌ ಅಪಘಾತದ ಸಂದರ್ಭದಲ್ಲಿ ಬಸ್ ಚಾಲಕ ತನ್ನ ಬೆನ್ನಿಗೆ ಎರಡು ಬ್ಯಾಗ್ ಗಳನ್ನು ಕಟ್ಟಿಕೊಂಡು ಬಸ್‌ನ ಕಿಟಕಿಯಿಂದ ಹೊರಗೆ ಹಾರಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮುಂಬೈ ಮಹಾನಗರ ಪಾಲಿಕೆ ನಿರ್ವಹಿಸುವ ಬೆಸ್ಟ್ ವಿದ್ಯುತ್ ಚಾಲಿತ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಶ್ಚಿಮ ಕುರ್ಲಾದ ಎಸ್.ಜಿ.ಬರ್ವೆ ಮಾರ್ಗದ ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದ್ದರಿಂದ, 22 ವಾಹನಗಳು ಜಖಂಗೊಂಡು, ಕರ್ತವ್ಯದಲ್ಲಿದ್ದ

ಅಪಘಾತ ಸಂದರ್ಭ ಬ್ಯಾಗ್ ನೊಂದಿಗೆ ಬಸ್‌ನಿಂದ ಹೊರಗೆ ಹಾರಿದ್ದ ಚಾಲಕ Read More »

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಇನ್ನೆರಡು ದಿನವೂ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುರುವಾರ(ಡಿ.12) ತುಸು ಬಿರುಸಾಗಿ ವರ್ಷಧಾರೆಯಾಗಿದೆ. ಬೆಂಗಳೂರು ನಗರ, ಬೆಂ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಡಿ.13 ಮತ್ತು ಡಿ.18ರಂದು ಬಿರುಸಾಗಿ ವರ್ಷಧಾರೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಇನ್ನೆರಡು ದಿನವೂ ಭಾರೀ ಮಳೆ ಮುನ್ಸೂಚನೆ Read More »

ಕಸ್ತೂರಿರಂಗನ್ ವರದಿ ವಿರೋಧಿಸಿ ಹೆದ್ದಾರಿ‌ ತಡೆದ ಆರೋಪ| 15 ಜನರ ಮೇಲಿನ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ

ಸಮಗ್ರ ನ್ಯೂಸ್: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ಮಾಡಿದ ಶಾಸಕರಾದ ಭಾಗಿರಥಿ ಮುರುಳ್ಯ, ಗುರುರಾಜ್ ಗಂಟಿಹೋಳೆ, ಕಿಶೋರ್ ಶಿರಾಡಿ, ವೆಂಕಟ್ ವಳಲಂಬೆ ಸೇರಿ ಒಟ್ಟು 15 ಜನರ ಮೇಲೆ ದಾಖಲಾಗಿದ್ದ ಕ್ರಿಮೀನಲ್ ಮೊಕದ್ದಮೆಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ. ಕಸ್ತೂರಿರಂಗನ್ ವರದಿ ಜಾರಿಗೊಳಿಸುವುದರಿಂದ ಕೃಷಿಕರಿಗೆ ತೊಂದರೆಯಾಗುತ್ತದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನ. 15ರಂದು ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮಾಡ ಮೈದಾನದಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಉಪ್ಪಿನಂಗಡಿ

ಕಸ್ತೂರಿರಂಗನ್ ವರದಿ ವಿರೋಧಿಸಿ ಹೆದ್ದಾರಿ‌ ತಡೆದ ಆರೋಪ| 15 ಜನರ ಮೇಲಿನ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ Read More »

ಪುತ್ತೂರು: ಮೂಗ ಬಾಲಕನಿಗೆ ಮಾತು ನೀಡಿದ ಶಬರಿಮಲೆ ಅಯ್ಯಪ್ಪ!! ಮಾಲೆ ಧರಿಸಿ ದರ್ಶನ ಪಡೆದ ಬಳಿಕ ನಡೆಯಿತು ಪವಾಡ

ಸಮಗ್ರ ನ್ಯೂಸ್: ಶಬರಿಮಲೆಯ ಅಯ್ಯಪ್ಪನ ಪವಾಡದ ಬಗ್ಗೆ ಎಲ್ಲರಿಗೂ ಗೊತ್ತು. ಸ್ವಾಮಿಯನ್ನು ನಂಬಿ ಹೋದವರಿಗೆ ಆತ ಖಂಡಿತ ಒಲಿಯುತ್ತಾನೆ. ಇದಕ್ಕೆ ಮತ್ತೊಂದು ನಿದರ್ಶನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಾಮೆತ್ತಡ್ಕದಲ್ಲಿ ಪವಾಡವೊಂದು ನಡೆದಿದೆ. ಅದೇನೆಂದರೆ ಮಾತು ಬರದ ಬಾಲಕನೊಬ್ಬ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಮಾತನಾಡಲು ಶುರು ಮಾಡಿದ್ದಾನೆ. ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪನ ಪವಾಡಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಸನ್ನ ಇದೀಗ

ಪುತ್ತೂರು: ಮೂಗ ಬಾಲಕನಿಗೆ ಮಾತು ನೀಡಿದ ಶಬರಿಮಲೆ ಅಯ್ಯಪ್ಪ!! ಮಾಲೆ ಧರಿಸಿ ದರ್ಶನ ಪಡೆದ ಬಳಿಕ ನಡೆಯಿತು ಪವಾಡ Read More »