ಪ್ರವಾಸಿ ತಾಣ

ಸೌತಡ್ಕ ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಹಲ್ಲೆ

ಸಮಗ್ರ ನ್ಯೂಸ್:ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಾನದ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಮಹೇಂದ್ರ ಕೊಲ್ಲಾಜೆಪಳಿಕೆ ಎಂಬವರಿಗೆ ಯಾತ್ರಾರ್ಥಿಗಳು ಹಲ್ಲೆ ನಡೆಸಿದ ಘಟನೆ ನ.20ರಂದು ನಡೆದಿದೆ. ಸ್ವಚ್ಚತಾ ಸಿಬ್ಬಂದಿಯಾದ ಮಹೇಂದ್ರ ಅವರು ತನ್ನ ಮೊಬೈಲನ್ನು ಶೌಚಾಲಯದ ಒಳಗಿಟ್ಟು, ಸ್ವಚ್ಚತೆಗೊಳಿಸುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆ.ಅವರ ತಲೆಗೆ ಗಂಭೀರ ಏಟಾಗಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು […]

ಸೌತಡ್ಕ ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಹಲ್ಲೆ Read More »

ಕುಕ್ಕೆ‌ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ

ಸಮಗ್ರ ನ್ಯೂಸ್: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಭೇಟಿ ನೀಡಿದರು. ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿದ ಅವರು, ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಈ ವೇಳೆ, ಸೂರ್ಯಕುಮಾರ್ ಯಾದವ್ ದಂಪತಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಹಿಂದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ

ಕುಕ್ಕೆ‌ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ Read More »

ದೀಪಾವಳಿ ಬಂಪರ್‌/ ಕೆಎಸ್‌ಆರ್‌ಟಿಸಿಗೆ ಭರ್ಜರಿ ಆದಾಯ

ಸಮಗ್ರ ನ್ಯೂಸ್‌: ದೀಪಾವಳಿ ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆಗಳಿದ್ದ ಕಾರಣ ಕೆಎಸ್‌ಆರ್‌ಟಿಸಿ (KSRTC) ಬಂಪ‌ರ್ ಆದಾಯಗಳಿಸಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ. ಊರಿನತ್ತ ತೆರಳಿದ್ದವರು ನ.03 ರಂದು ಭಾನುವಾರ ಮತ್ತೆ ಸಿಲಿಕಾನ್ ಸಿಟಿಗೆ ಮರಳಿದ್ದಾರೆ. ಇದರಿಂದಾಗಿ ಭಾನುವಾರ ಒಂದೇ ದಿನ ಆನ್‌ಲೈನ್‌ಲ್ಲಿ 85,462 ಸೀಟುಗಳನ್ನು ಬುಕಿಂಗ್ ಆಗಿದ್ದವು. ಇದಕ್ಕೂ ಮೊದಲು ಅಕ್ಟೋಬರ್ ಅಂತ್ಯದ ದಿನವೊಂದರಲ್ಲಿ 67,033 ಟಿಕೆಟ್ ಮಾರಾಟವಾಗಿದ್ದವು.

ದೀಪಾವಳಿ ಬಂಪರ್‌/ ಕೆಎಸ್‌ಆರ್‌ಟಿಸಿಗೆ ಭರ್ಜರಿ ಆದಾಯ Read More »

ರದ್ದಾಗಿದ್ದ ‘ಹಾಸನಾಂಬೆ’ ವಿಶೇಷ ದರ್ಶನದ ಟಿಕೆಟ್ ಕೌಂಟರ್ ಮತ್ತೆ ರೀ ಓಪನ್.!

ಸಮಗ್ರ ನ್ಯೂಸ್: ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗುತ್ತಿದ್ದ ಪಾಸ್ ನ್ನು ನಿನ್ನೆ ರದ್ದು ಮಾಡಲಾಗಿತ್ತು, ಆದಾಯದ ಆಸೆಗೆ ಜೋತುಬಿದ್ದ ಆಡಳಿತ ಮಂಡಳಿ ರದ್ದಾಗಿದ್ದ ಹಾಸನಾಂಬೆ ದರ್ಶನದ ಟಿಕೆಟ್ ಕೌಂಟರ್’ ರನ್ನು ಮತ್ತೆ ರೀ ಓಪನ್ ಮಾಡಿದೆ.ಆನ್ ಲೈನ್ ಜೊತೆಗೆ ಆಫ್ ಲೈನ್ ನಲ್ಲಿ ಈಗ 300, 400 ರೂ ಬೆಲೆಯ ವಿಶೇಷ ಪಾಸ್ ಮಾರಾಟ ಮಾಡಲಾಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ 20 ಲಕ್ಷ ಮಂದಿ ಹಾಸನಾಂಬ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ

ರದ್ದಾಗಿದ್ದ ‘ಹಾಸನಾಂಬೆ’ ವಿಶೇಷ ದರ್ಶನದ ಟಿಕೆಟ್ ಕೌಂಟರ್ ಮತ್ತೆ ರೀ ಓಪನ್.! Read More »

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ವಿಮಾನಗಳಲ್ಲಿ ‘ಇರುಮುಡಿ’ ಕೊಂಡೊಯ್ಯಬಹುದು!

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶಬರಿಮಲೆ ದೇವಸ್ಥಾನದ ಯಾತ್ರಾರ್ಥಿಗಳಿಗೆ ವಿಮಾನ ಕ್ಯಾಬಿನ್‌ನಲ್ಲಿ ‘ಇರುಮುಡಿ’ ಕೊಂಡೊಯ್ಯಲು ವಿನಾಯಿತಿ ನೀಡಲಾಗಿದೆ. ಬಸ್ಸುಗಳು, ಕಾರುಗಳು ಮತ್ತು ರೈಲುಗಳು ಹೆಚ್ಚಾಗಿ ಶಬರಿಮಲೆಯನ್ನು ತಲುಪುತ್ತಾರೆ. ಅನೇಕ ಜನರು ಶಬರಿಮಲೆಗೆ ವಿಮಾನದಲ್ಲಿ ಹೋಗಬೇಕೆಂದು ಬಯಸುತ್ತಾರೆ, ಆದರೆ ಅವರು ಇರುಮುಡಿ ತಮ್ಮೊಂದಿಗೆ ವಿಮಾನದಲ್ಲಿ ಕೊಂಡೊಯ್ಯಲು ಬಿಡುವುದಿಲ್ಲ. ಆದರೆ, ಶಬರಿಮಲೆಗೆ ವಿಮಾನದಲ್ಲಿ ತೆರಳುವವರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ

ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ವಿಮಾನಗಳಲ್ಲಿ ‘ಇರುಮುಡಿ’ ಕೊಂಡೊಯ್ಯಬಹುದು! Read More »

ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣ| ಧರ್ಮಸ್ಥಳ, ಕುಕ್ಕೆ ಪ್ರಯಾಣಕ್ಕೆ ಬಸ್ ಇಲ್ಲದೇ ಪರದಾಡಿದ ಯಾತ್ರಾರ್ಥಿಗಳು

ಸಮಗ್ರ ನ್ಯೂಸ್: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸೋಮವಾರ ಬಂದಿಳಿದ ಪ್ರಯಾಣಿಕರು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಭಾಗಕ್ಕೆ ತೆರಳಲು ಬಸ್ ಸಿಗದೆ ಪರದಾಡಿದರು. ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಲ್ದಾಣಕ್ಕೆ ಬಂದಿದ್ದರು. ಬಸ್‌ಗಾಗಿ 10 ಗಂಟೆವರೆಗೂ ಕಾಯ್ದು, ಬಸವಳಿದು ರಸ್ತೆ ಬದಿಯಲ್ಲೇ ಕುಳಿತಿದ್ದರು. ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಮೀಪದ ನೆಟ್ಟಣದ ರೈಲು ನಿಲ್ದಾಣದಿಂದ ಸಾವಿರಾರು ಮಂದಿ ಪ್ರಯಾಣ ಬೆಳೆಸುತ್ತಾರೆ. ರೈಲು ನಿಲ್ದಾಣಕ್ಕೆ ಬಸ್ ಸಂಪರ್ಕ ಇದ್ದರೂ

ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣ| ಧರ್ಮಸ್ಥಳ, ಕುಕ್ಕೆ ಪ್ರಯಾಣಕ್ಕೆ ಬಸ್ ಇಲ್ಲದೇ ಪರದಾಡಿದ ಯಾತ್ರಾರ್ಥಿಗಳು Read More »

ಪ್ರವಾಸಕ್ಕೆ ತೆರಳಿದ್ದಾಗ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿ. ಇನ್ನೋರ್ವ ವಿದ್ಯಾರ್ಥಿ ಧನುಶ್ .ಡಿ. ಯನ್ನು ರಕ್ಷಣೆ ಮಾಡಲಾಗಿದೆ. ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದರು. ಅಲೆಗಳ ವೇಗಕ್ಕೆ ಇಬ್ಬರು ನೀರಿನಲ್ಲಿ ಮುಳಿಗಿದ್ದು, 

ಪ್ರವಾಸಕ್ಕೆ ತೆರಳಿದ್ದಾಗ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು Read More »

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ

ಸಮಗ್ರ ನ್ಯೂಸ್‌: ಬೆಂಗಳೂರು ನಗರದಲ್ಲಿ ದರ ಏರಿಕೆಯ ಬಿಸಿ ಹೆಚ್ಚುತ್ತಿದ್ದು, ಇದೀಗ ನಮ್ಮ ಮೆಟ್ರೋ ರೈಲು ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದೆ. ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ, ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ. ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ Read More »

ಚುನಾವಣೆ ಹೊಸ್ತಿಲಲ್ಲಿ ಟ್ರಂಪ್ ನ 43 ಅಡಿ‌ ಎತ್ತರದ ಬೆತ್ತಲೆ ಪ್ರತಿಮೆ| ಅಮೇರಿಕಾ ರಾಜಕೀಯದಲ್ಲಿ ಕೋಲಾಹಲ

ಸಮಗ್ರ ನ್ಯೂಸ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಮಯ ಸಮೀಪಿಸುತ್ತಿದೆ. ನವೆಂಬರ್‌ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆ ನಡೆಯಲಿದೆ. ಈ ನಡುವೆ ಲಾಸ್ ವೇಗಾಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ನಗ್ನ ಪ್ರತಿಮೆ ಕೋಲಾಹಲವನ್ನು ಸೃಷ್ಟಿಸಿದೆ. ಸೆಪ್ಟೆಂಬರ್ 29 ರಂದು ಕಮಲಾ ಹ್ಯಾರಿಸ್ ನೆವಾಡಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಟ್ರಂಪ್‌ ಪ್ರತಿಮೆ ಗಮನ ಸೆಳೆದಿದೆ. ನಗರದ ಮುಖ್ಯ ಹೆದ್ದಾರಿಯಾದ ಇಂಟರ್‌ಸ್ಟೇಟ್ 15ರಲ್ಲಿ ಟ್ರಂಪ್‌ರ ಹೊಸ ನಗ್ನ

ಚುನಾವಣೆ ಹೊಸ್ತಿಲಲ್ಲಿ ಟ್ರಂಪ್ ನ 43 ಅಡಿ‌ ಎತ್ತರದ ಬೆತ್ತಲೆ ಪ್ರತಿಮೆ| ಅಮೇರಿಕಾ ರಾಜಕೀಯದಲ್ಲಿ ಕೋಲಾಹಲ Read More »

ಕೊಟ್ಟಿಗೆಹಾರ: ಗೂಗಲ್ ಮಿಸ್‌ಗೈಡ್| ರಾಣಿಝರಿಗೆ ಅಧಿಕಾರಿಗಳ ದೌಡು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಎಡ್ಜ್ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಆ.21 ರಂದು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ಬಿರುಕು ಕಂಡು ಬರುತ್ತಿರುವ ಹಿನ್ನೆಲೆ ಪುತ್ತೂರು ಉಪವಿಭಾಗಧಿಕಾರಿಗಳು ರಾಣಿಝರಿ ಸಮೀಪಬಾರಿ ಮಳೆಯಾಗುತ್ತಿರುವುದರಿಂದ `ಭೂಮಿಕುಸಿತವಾಗುವ ಸಂಭವವಿದೆ ಎಂದು ಚಿಕ್ಕಮಗಳೂರು ಉಪವಿಭಾಗಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೊಟ್ಟಿಗೆಹಾರ: ಗೂಗಲ್ ಮಿಸ್‌ಗೈಡ್| ರಾಣಿಝರಿಗೆ ಅಧಿಕಾರಿಗಳ ದೌಡು Read More »