ಕ್ರೀಡೆ

ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಮತ್ತೊಂದು ಪದಕ ಫಿಕ್ಸ್

ಟೋಕಿಯೋ: ಭಾರತದ ಪಾಲಿಗೆ ಇಂದು ಶುಭ ಶುಕ್ರವಾರ. ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ವಿರುದ್ದ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಹಿನ್ನಲೆ ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಿದ್ದಾರೆ. ಮಹಿಳಾ ವಾಲ್ಟರ್‌ವೇಟ್‌ ವಿಭಾಗದಲ್ಲಿ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ಎದುರು ಪ್ರಾಬಲ್ಯ ಮೆರದ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಇದೀಗ ಕಂಚಿನ ಪದಕ ಖಚಿತ […]

ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಮತ್ತೊಂದು ಪದಕ ಫಿಕ್ಸ್ Read More »

ಟಿ-20 ಸರಣಿ‌ ಗೆದ್ದ ಶ್ರೀಲಂಕಾ

ಶ್ರೀಲಂಕಾ 3 ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತವನ್ನು 2-1 ಅಂತರದಿಂದ ಸೋಲಿಸಿತು. ಕೊನೆಯ ಟಿ 20 ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸರಣಿ ವಶಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಕಳಪೆ ಆಟದಿಂದಾಗಿ ಎಂಟು ವಿಕೆಟ್‌ಗೆ 81 ರನ್ ಗಳಿಸಿತು. 15 ನೇ ಓವರ್‌ನಲ್ಲಿಯೇ ಆತಿಥೇಯರು ಈ ಗುರಿಯನ್ನು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಲೆಗ್ ಸ್ಪಿನ್ನರ್ ವಹೀಂದು ಹಸರಂಗಾ ಅವರ ಜನ್ಮದಿನದಂದು ಭಾರತದ ಅನನುಭವಿ ಬ್ಯಾಟಿಂಗ್ ಪಕ್ಕೆಲುಬು ಮುರಿದು ಎಂಟು

ಟಿ-20 ಸರಣಿ‌ ಗೆದ್ದ ಶ್ರೀಲಂಕಾ Read More »

ಒಲಿಂಪಿಕ್: ಕ್ವಾರ್ಟರ್ ಫೈನಲ್ ತಲುಪಿದ ಸಿಂಧು

ಟೋಕಿಯೊ: ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು ಮಣಿಸಿದರು. ‘ಐ’ ವಿಭಾಗದ ಅಗ್ರಸ್ಥಾನಿಯಾಗಿದ್ದ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು 21-15, 21-13 ಸೆಟ್ ಗಳ ಅಂತರದಿಂದ ಸೋಲಿಸಿದರು. ಇದರೊಂದಿಗೆ ಥಾಯ್ಲೆಂಡ್ ಓಪನ್ ನಲ್ಲಿನ ಬ್ಲಿಕ್ ಫೆಲ್ಟ್ ವಿರುದ್ಧದ ಸೋಲಿಗೆ ಸಿಂಧು ಒಲಿಂಪಿಕ್ಸ್ ನಲ್ಲಿ ತಿರುಗೇಟು ನೀಡಿದರು. ಜಪಾನ್‌ನ ಅಕಾನೆ ಯಮಗುಚಿ ಮತ್ತು ಕೊರಿಯಾದ ಕಿಮ್ ಗೇನ್

ಒಲಿಂಪಿಕ್: ಕ್ವಾರ್ಟರ್ ಫೈನಲ್ ತಲುಪಿದ ಸಿಂಧು Read More »

ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್

ಕೊಲಂಬೋ: ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆಡುವ ಮೂಲಕ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಆಗಿರುವ ದೇವದತ್ ಪಡಿಕಲ್ ಭಾರತ ತಂಡ ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 21 ವರ್ಷದ ದೇವದತ್ ಪಡಿಕಲ್ ಭಾರತ ತಂಡವನ್ನು ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎಂ ದಾಖಲೆಗೆ ಪಾತ್ರರಾದರು. ಪಡಿಕಲ್ 23 ಎಸೆತಗಳಲ್ಲಿ 29 ರನ್

ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್ Read More »

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಭಾರತದ ಮುಡಿಗೇರಿತು ಚಿನ್ನ

ಹಂಗೇರಿ: ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಈ ಸಾಧನೆ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಬಾಯ್ ಚಾನು ಶನಿವಾರ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದಾದ ಮರುದಿನವೇ ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಭಾರತದ ಮುಡಿಗೇರಿತು ಚಿನ್ನ Read More »

ಟೋಕಿಯೋ ಒಲಿಂಪಿಕ್ಸ್ | ಭಾರತದ ಪದಕ ಬೇಟೆ ಶುರು | ಬೆಳ್ಳಿ ಗೆದ್ದ ವೈಟ್’ಲಿಫ್ಟರ್ ಮೀರಾಬಾಯಿ ಚಾನು

ಟೋಕಿಯೋ: ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್’ನಲ್ಲಿ ಭಾರತದ ವೈಟ್ ಲಿಫ್ಟಿರ್ ಮೀರಾಭಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಬೇಟೆ ಆರಂಭವಾಗಿದೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ಮೀರಾಭಾಯಿ 202 ಕೆಜಿ ಭಾರ ಎತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಒಲಿಂಪಿಕ್ಸ್ -2020ರಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಚಾನು ಅವರಿಗೆ ಭಾರತ ಸರ್ಕಾರ ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ | ಭಾರತದ ಪದಕ ಬೇಟೆ ಶುರು | ಬೆಳ್ಳಿ ಗೆದ್ದ ವೈಟ್’ಲಿಫ್ಟರ್ ಮೀರಾಬಾಯಿ ಚಾನು Read More »

ಚಹಾರ್ ಪರಾಕ್ರಮ, ಭಾರತಕ್ಕೆ ಸರಣಿ ಕೈವಶ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ದೀಪಕ್ ಚಾಹರ್ (ಅಜೇಯ 69 ರನ್ ಹಾಗೂ 2 ವಿಕೆಟ್) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಸೂರ್ಯಕುಮಾರ್ ಯಾದವ್ (53), ಮನೀಶ್ ಪಾಂಡೆ (37), ಕೃಣಾಲ್ ಪಾಂಡ್ಯ (35) ಹಾಗೂ ಭುವನೇಶ್ವರ್ ಕುಮಾರ್

ಚಹಾರ್ ಪರಾಕ್ರಮ, ಭಾರತಕ್ಕೆ ಸರಣಿ ಕೈವಶ Read More »

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ|

ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ- ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಗೆಲುವು ಸಾಧಿಸಿದೆ.ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್, ಪೃಥ್ವಿ ಶಾ ದಿಟ್ಟ ಆರಂಭ, ಶಿಖರ್ ಧವನ್ ನಾಯಕತ್ವದ ಆಟಕ್ಕೆ ಶ್ರೀಲಂಕಾ ತಲೆ ಬಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ಭರ್ಜರಿ ವಿಕೆಟ್ ಗೆಲುವು ಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ ಶ್ರೀಲಂಕಾ ನೀಡಿದ 263

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ| Read More »

ಇಂದಿನಿಂದ ಇಂಡೋ-ಶ್ರೀಲಂಕಾ ಏಕದಿನ ಸರಣಿ, ಗೆಲುವಿನ ‘ಶಿಖರ’ ಏರಲು ಸಜ್ಜು

ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಕ್ರಿಕೆಟ್ ಸರಣಿಯು ಇಂದಿನಿಂದ ಆರಂಭವಾಗಲಿದೆ. ಎಲ್ಲ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಮುಂಬರುವ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತೀಯ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಈ ಸರಣಿಯು ಉತ್ತಮ ವೇದಿಕೆಯಾಗಲಿದೆ. ಇದುವರೆಗೂ 159 ಏಕದಿನ ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿ ಆಗಲಿದ್ದು, ಭಾರತ 91 ಹಾಗೂ ಶ್ರೀಲಂಕಾ 56 ಪಂದ್ಯಗಳಲ್ಲಿ ಗೆಲುವು

ಇಂದಿನಿಂದ ಇಂಡೋ-ಶ್ರೀಲಂಕಾ ಏಕದಿನ ಸರಣಿ, ಗೆಲುವಿನ ‘ಶಿಖರ’ ಏರಲು ಸಜ್ಜು Read More »

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್

ಸ್ವೀಸ್ ಮೇಸ್ಟ್ರೋ ರೋಜರ್ ಫೆಡರರ್ ‘ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುವ ನಿರ್ಧಾರವನ್ನ ಮಂಗಳವಾರ ಘೋಷಿಸಿದ್ದಾರೆ ಸ್ವಿಟ್ಜರ್ಲೆಂಡ್ ಒಲಿಂಪಿಕ್ಸ್ ತಂಡದಲ್ಲಿ ಹೆಸರಿಸಲ್ಪಟ್ಟ ಕೆಲವು ದಿನಗಳ ನಂತರ ಈ ನಿರ್ಧಾರ ಪ್ರಕಟಿಸಿರುವ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಈ ವರ್ಷದ ಆರಂಭದಲ್ಲಿ ಅನೇಕ ಮೊಣಕಾಲು ಶಸ್ತ್ರಚಿಕಿತ್ಸೆಗಳಿಂದಾಗಿ 2020ರ ಹೆಚ್ಚಿನ ಭಾಗವನ್ನು ಕಳೆದುಕೊಂಡ ನಂತರ ಮತ್ತೆ ಆಟಕ್ಕೆ ಮರಳಿದ್ದರು.ಅಂದ ಹಾಗೆ,ಮಾರ್ಚ್ʼನಲ್ಲಿ ದೋಹಾ ಓಪನ್ʼನಲ್ಲಿ ಮರಳಿದ್ದು, ಅಲ್ಲಿ ಅವರು 2ನೇ ಸುತ್ತಿನಲ್ಲಿ

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್ Read More »