ಕ್ರೀಡೆ

ಫಿಫಾ ವಿಶ್ವಕಪ್: ಅರ್ಜೆಂಟೀನಾ ‌ಮಣಿಸಿದ ಸೌದಿ| ಸಂಭ್ರಮಾಚರಣೆಗೆ ರಜೆ ಘೋಷಿಸಿದ ದೊರೆ ಸಲ್ಮಾನ್

ಸಮಗ್ರ ನ್ಯೂಸ್: ಫಿಫಾ ವಿಶ್ವಕಪ್‌ ಫುಟ್ಬಾಲ್‌ ನ ಮಂಗಳವಾರ ನಡೆದ ಪಂದ್ಯಾಟದಲ್ಲಿ ಅನಿರೀಕ್ಷಿತ ಮತ್ತು ಐತಿಹಾಸಿಕವೆಂಬಂತೆ ಬಲಿಷ್ಠ ಅರ್ಜೆಂಟೀನಾದ ವಿರುದ್ಧ ಸೌದಿ ಅರೇಬಿಯಾ ಜಯ ಸಾಧಿಸಿದೆ. 2-1 ಅಂತರದಲ್ಲಿ ಸೌದಿ ಅರೇಬಿಯಾ ಖ್ಯಾತ ಆಟಗಾರ ಲಿಯೋನಲ್‌ ಮೆಸ್ಸಿಯ ಅರ್ಜೆಂಟೀನ ತಂಡಕ್ಕೆ ಸೋಲುಣಿಸಿದೆ. ವಿಶೇಷವೆಂದರೆ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಸಲುವಾಗಿ ನಾಳೆ ಸೌದಿ ದೊರೆ ಸಲ್ಮಾನ್‌ ದೇಶಾದ್ಯಂತ ರಜೆ ಘೋಷಿಸಿದ್ದಾರೆ. “2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡದ ಅದ್ಭುತ ವಿಜಯದ ಸಂಭ್ರಮದಲ್ಲಿ, ನಾಳೆ, ಬುಧವಾರ, ಸಾರ್ವಜನಿಕ […]

ಫಿಫಾ ವಿಶ್ವಕಪ್: ಅರ್ಜೆಂಟೀನಾ ‌ಮಣಿಸಿದ ಸೌದಿ| ಸಂಭ್ರಮಾಚರಣೆಗೆ ರಜೆ ಘೋಷಿಸಿದ ದೊರೆ ಸಲ್ಮಾನ್ Read More »

ಟಿ20 ವಿಶ್ವಕಪ್ | ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್| ಪಾಕಿಸ್ತಾನಕ್ಕೆ ಭಾರೀ ಮುಖಭಂಗ

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಫೈನಲ್ ಇಂಗ್ಲೆಂಡ್ 5 ವಿಕೆಟ್ ಗಳಿಂದ ತಂಡ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಟಿ20 ವಿಶ್ವಕಪ್ | ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್| ಪಾಕಿಸ್ತಾನಕ್ಕೆ ಭಾರೀ ಮುಖಭಂಗ Read More »

ಟಿ20 ವಿಶ್ವಕಪ್| ಸೆಮಿಫೈನಲ್ ನಲ್ಲಿ ಆಂಗ್ಲರ ವಿರುದ್ಧ ಸೋತ ಭಾರತ| ಫೈನಲ್ ನಲ್ಲಿ ಪಾಕ್- ಇಂಗ್ಲೆಂಡ್ ಮುಖಾಮುಖಿ

ಸಮಗ್ರ ನ್ಯೂಸ್: ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌, ಭಾರತದ ವಿರುದ್ಧ 10 ವಿಕೆಟ್ ಅಂತರದ ಸುಲಭ ಜಯ ಸಾಧಿಸಿದೆ. ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಪರ ಆರಂಭಿಕರಾದ ನಾಯಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌

ಟಿ20 ವಿಶ್ವಕಪ್| ಸೆಮಿಫೈನಲ್ ನಲ್ಲಿ ಆಂಗ್ಲರ ವಿರುದ್ಧ ಸೋತ ಭಾರತ| ಫೈನಲ್ ನಲ್ಲಿ ಪಾಕ್- ಇಂಗ್ಲೆಂಡ್ ಮುಖಾಮುಖಿ Read More »

ಸುಳ್ಯ: ಶಾಂತಿನಗರ ಕ್ರೀಡಾಂಗಣದಲ್ಲಿ ಭಾರಿ ಗಾತ್ರದ ಬಿರುಕು|ಸ್ಥಳೀಯರಲ್ಲಿ ಆತಂಕ

ಸಮಗ್ರ ನ್ಯೂಸ್: ಸುಳ್ಯ ಶಾಂತಿನಗರ ಕ್ರೀಡಾಂಗಣದಲ್ಲಿ ಒಂದು ಭಾಗದಲ್ಲಿ ಭಾರಿ ಗಾತ್ರದ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು, ಐದು ತಿಂಗಳ ಮೊದಲು ಶಾಂತಿನಗರ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಆರಂಭಗೊಳಿಸಲಾಗಿದ್ದು,ಆ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಭಾಗದಲ್ಲಿ ಭಾರಿ ಎತ್ತರಕ್ಕೆ ಮಣ್ಣುಗಳನ್ನು ಹಾಕಿ ಕ್ರೀಡಾಂಗಣವನ್ನು ವಿಶಾಲ ಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಭಾಗದಲ್ಲಿ ಹಾಕಿರುವ ಮಣ್ಣುಗಳು ಕುಸಿದು ಕೆಳಭಾಗದಲ್ಲಿ ಇರುವ ಮನೆಗಳಿಗೆ ಹಾನಿಯಾಗುವ ಆತಂಕವನ್ನು ಸೂಚಿಸಿದ ಸ್ಥಳೀಯರು, ಕೆಳಬಾಗದಲ್ಲಿ ತಡೆಗೋಡೆಯನ್ನು ನಿರ್ಮಿಸುವಂತೆ ಆಗ್ರಹವನ್ನು ವ್ಯಕ್ತಪಡಿಸಿದ್ದರು. ಇದರ

ಸುಳ್ಯ: ಶಾಂತಿನಗರ ಕ್ರೀಡಾಂಗಣದಲ್ಲಿ ಭಾರಿ ಗಾತ್ರದ ಬಿರುಕು|ಸ್ಥಳೀಯರಲ್ಲಿ ಆತಂಕ Read More »

ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ| ಬಾಂಗ್ಲಾವನ್ನು ಅಡಿಲೇಡ್ ನಲ್ಲಿ ಪುಡಿಗಟ್ಟಿದ ಭಾರತ| ಟ 20 ಹೈಲೈಟ್ಸ್ ಇಲ್ಲಿದೆ…

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ರೋಚಕ ಘಟ್ಟವನ್ನು ತಲುಪಿದ್ದು ಗುರುವಾರ ನಡೆಯಲಿರುವ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಪಾಕಿಸ್ತಾನ ತಂಡ ಉಳಿದುಕೊಳ್ಳಬೇಕಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾಗಿದೆ. ಸಾಕಷ್ಟು ಉತ್ತಮ ಅಂತರದೊಂದಿಗೆ ಗೆಲುವು ಸಾಧಿಸುವುದು ಪಾಕ್ ಪಾಲಿಗೆ ಅನಿವಾರ್ಯವಾಗಿದೆ. ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೋಲು ಅನುಭವಿಸದೆ ಅಜೇಯವಾಗಿರುವ ಏಕೈಕ ತಂಡವಾಗಿದೆ. ಸೂಪರ್ 12 ಹಂತದಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ತಂಡದ

ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ| ಬಾಂಗ್ಲಾವನ್ನು ಅಡಿಲೇಡ್ ನಲ್ಲಿ ಪುಡಿಗಟ್ಟಿದ ಭಾರತ| ಟ 20 ಹೈಲೈಟ್ಸ್ ಇಲ್ಲಿದೆ… Read More »

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ

ಸಮಗ್ರ ನ್ಯೂಸ್: ಫ್ರೆಂಚ್ ಓಪನ್ ಸೂಪರ್ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯದೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 48 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಜೋಡಿ 25ನೇ ಶ್ರೇಯಾಂಕದ ಲು ಮತ್ತು ಯಾಂಗ್‌ರನ್ನು 21-13, 21-19 ಅಂತರದಿಂದ ಮಣಿಸಿದರು.

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ Read More »

ಟಿ20 ವಿಶ್ವಕಪ್| ಪಾಕಿಸ್ತಾನವನ್ನು 1 ರನ್ ನಿಂದ ಮಣಿಸಿದ ಜಿಂಬಾಬ್ವೆ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಝಿಂಬಾಬ್ವೆ ತಂಡಗಳ ನಡುವಿನ ವಿಶ್ವಕಪ್‌ ಟಿ-ಟ್ವೆಂಟಿ ಸರಣಿಯ 24ನೇ ಪಂದ್ಯಾಟದಲ್ಲಿ ಝಿಂಬಾಬ್ವೆ ಒಂದು ರನ್‌ ಗಳ ರೋಚಕ ಜಯ ಸಾಧಿಸಿದೆ. ಝಿಂಬಾಬ್ವೆ ನೀಡಿದ್ದ 130 ರನ್‌ ಗಳ ಗುರಿಯನ್ನು ತಲುಪಲು ಸಾಧ್ಯವಾಗದೇ ಪಾಕಿಸ್ತಾನ ತಂಡವು 20 ಓವರ್‌ ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿ ಪಂದ್ಯವನ್ನು ಕೈಚೆಲ್ಲಿತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಝಿಂಬಾಬ್ವೆ ತಂಡದ ಪರ ಸೀನ್‌ ವಿಲಿಯಮ್ಸ್‌ 31 ರನ್‌ ಗಳಿಸಿದರು. ಬೌಲಿಂಗ್‌

ಟಿ20 ವಿಶ್ವಕಪ್| ಪಾಕಿಸ್ತಾನವನ್ನು 1 ರನ್ ನಿಂದ ಮಣಿಸಿದ ಜಿಂಬಾಬ್ವೆ Read More »

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ

ಸಮಗ್ರ ನ್ಯೂಸ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿದ್ದಾರೆ. ವೇತನ ತಾರತಮ್ಯವನ್ನು ಎದುರಿಸಲು BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ Read More »

ಟಿ20 ವಿಶ್ವಕಪ್| ಭಾರತಕ್ಕೆ ರೋಚಕ ಜಯ

ಸಮಗ್ರ ನ್ಯೂಸ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು. ಪಾಕಿಸ್ತಾನ ನೀಡಿದ 160ರನ್​ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಉಪ ನಾಯಕ ಕೆ.ಎಲ್ ರಾಹುಲ್ ಹಾಗೂ ನಾಯಕ ರೋಹಿತ್​ ಶರ್ಮ 4 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಜೊತೆಯಾದ ಸೂರ್ಯ ಕುಮಾರ್

ಟಿ20 ವಿಶ್ವಕಪ್| ಭಾರತಕ್ಕೆ ರೋಚಕ ಜಯ Read More »

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ

ಸಮಗ್ರ ನ್ಯೂಸ್: ಕನ್ನಡದಲ್ಲಿ ಬಿಡುಗಡೆಗೊಂಡ ಬಳಿಕ, ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಅಬ್ಬರಿಸುತ್ತಿರುವ “ಕಾಂತಾರ” ಚಿತ್ರ ಬಹುದೊಡ್ಡ ಯಶಸ್ಸು ಸಂಪಾದಿಸಿದೆ. ಅದರ ನಡುವೆ ಭಾನುವಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು. ದೇಶೀಯ ಮಣ್ಣಿನ ಸೊಗಡಿನ ಇನ್ನೊಂದು ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ಬಂದಿದ್ದರು. ಕಂಬಳ ಕ್ರೀಡೆ ಹಾಗೂ ಕರಾವಳಿ ಸಂಸ್ಕೃತಿಯನ್ನು ದೇಶ ಮಟ್ಟದಲ್ಲಿ ಪಸರಿಸಲು ಕಾಂತಾರ ಒಂದು ರೀತಿಯಲ್ಲಿ ಕಾರಣವಾಗಿದ್ದರೆ, ಸ್ಥಳೀಯವಾಗಿಯೇ ಉಳಿದುಕೊಂಡಿದ್ದ ಕಬಡ್ಡಿಗೆ ಬೂಸ್ಟ್‌ನೀಡಿದ್ದು

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ Read More »