ಕ್ರೀಡೆ

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಅದ್ಧೂರಿ ಸ್ವಾಗತ/ ನಾಳೆ ಪ್ರಧಾನಿ ನಿವಾಸದಲ್ಲಿ ಔತಣಕೂಟ

ಸಮಗ್ರ ನ್ಯೂಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಸಾಧನೆಗೈದ ಭಾರತದ ಕ್ರೀಡಾಪಟುಗಳು ಮಂಗಳವಾರ ತವರಿಗೆ ಹಿಂದಿರುಗಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಅಧಿಕಾರಿಗಳನ್ನು ನೂರಾರು ಕ್ರೀಡಾಭಿಮಾನಿಗಳು, ಕುಟುಂಬಸ್ಥರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಹೂಹಾರ ಹಾಕಿ, ಸಿಹಿ ತಿಂಡಿ ಹಂಚಿ, ಜೈಕಾರ ಕೂಗುತ್ತಾ ಅವರನ್ನು ಸ್ವಾಗತಿಸಲಾಯಿತು. ಭಾರತ ಪ್ಯಾರಾಲಿಂಪಿಕ್‌ ಸಮಿತಿ ಅಧ್ಯಕ್ಷ ದೇವೇಂದ್ರ ಝಝಾರಿಯಾ ಸೇರಿದಂತೆ ಕೆಲ ಕ್ರೀಡಾಪಟುಗಳನ್ನು ಅಭಿಮಾನಿಗಳು ಹೆಗಲ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದರು. ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿ, […]

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಅದ್ಧೂರಿ ಸ್ವಾಗತ/ ನಾಳೆ ಪ್ರಧಾನಿ ನಿವಾಸದಲ್ಲಿ ಔತಣಕೂಟ Read More »

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ೨೯ ಪದಕಗಳನ್ನು ಜಯಿಸಿದ ಭಾರತ

ಸಮಗ್ರ ನ್ಯೂಸ್‌: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ ಸರ್ವಶ್ರೇಷ್ಠ ಪ್ರದರ್ಶನ ತೋರಿವೆ. ಕ್ರೀಡಾಕೂಟದಲ್ಲಿ ಭಾರತ ಅಸ್ಪೀಟ್ ಗಳು 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟಾರೆ 29 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎನಿಸಿಕೊಂಡಿವೆ. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ಚೀನಾ 94 ಚಿನ್ನ ಸಹಿತ 217 ಪದಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿ ಭದ್ರವಾದರೆ, ಗ್ರೇಟ್ ಬ್ರಿಟನ್

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ೨೯ ಪದಕಗಳನ್ನು ಜಯಿಸಿದ ಭಾರತ Read More »

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಜಾವೆಲಿನ್ ನಲ್ಲಿ ಸುಮಿತ್ ಆಂಟಿಲ್ ಪರಾಕ್ರಮ

ಸಮಗ್ರ ನ್ಯೂಸ್ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರಿಂದ ಇಂದು ಸಹ ಚಿನ್ನದ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ನಲ್ಲಿ ಇದ್ದಾಗ ಬರೆಯುವ ಮೂಲಕ ಸುಮಿತ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದೀಗ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಸುಮಿತ್ ಆಂಟಿಲ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಸುಮಿತ್ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದೂ, ಈ ಬಾರಿಯೂ ದಾಖಲೆಯೊಂದಿಗೆ ಬಂಗಾರದ ಪದಕದ ಬೇಟೆ ಮುಂದುವರಿಸಿದ್ದಾರೆ. ಸುಮಿತ್ ಜಾವೆಲಿನ್ ಥ್ರೋ F64

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಜಾವೆಲಿನ್ ನಲ್ಲಿ ಸುಮಿತ್ ಆಂಟಿಲ್ ಪರಾಕ್ರಮ Read More »

ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನ ಗೆದ್ದ ಭಾರತ| ಬ್ಯಾಡ್ಮಿಂಟನ್ ನಲ್ಲಿ ಗೆದ್ದು ಬೀಗಿದ ನಿತೇಶ್ ಕುಮಾರ್

ಸಮಗ್ರ ನ್ಯೂಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದ್ದು, ಬ್ಯಾಡ್ಮಿಂಟನ್‌ನಲ್ಲಿ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕ್ರೀಡಾಕೂಟದ ಆರನೇ ದಿನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್​ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ 21-14, 18-21, 23-21 ರಿಂದ ಗೆಲುವು ಸಾಧಿಸಿದರು. ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನ ಗೆದ್ದ ಭಾರತ| ಬ್ಯಾಡ್ಮಿಂಟನ್ ನಲ್ಲಿ ಗೆದ್ದು ಬೀಗಿದ ನಿತೇಶ್ ಕುಮಾರ್ Read More »

ಕೇವಲ 10 ಎಸೆತದಲ್ಲೇ ಮ್ಯಾಚ್ ಫಿನೀಶ್ ಮಾಡಿದ ಭಾರತೀಯ ಮೂಲದ ಬೌಲರ್| ಕ್ರಿಕೆಟ್ ಇತಿಹಾಸದಲ್ಲೇ ಭರ್ಜರಿ ದಾಖಲೆ ನಿರ್ಮಿಸಿದ ಹಾಂಕಾಂಗ್ ತಂಡ

ಸಮಗ್ರ ನ್ಯೂಸ್: ಹಾಂಕಾಂಗ್‌ ಕ್ರಿಕೆಟ್ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ಇತಿಹಾಸ ನಿರ್ಮಿಸಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ಹಾಂಕಾಂಗ್‌ ತಂಡವು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ನಿರ್ಮಿಸಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗೋಲಿಯಾ ಎದುರು ಹಾಂಕಾಂಗ್ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಕೇವಲ 10 ಎಸೆತಗಳನ್ನು ಎದುರಿಸಿ ಹಾಂಕಾಂಗ್ ತಂಡವು ಗೆಲುವಿನ ನಗೆ

ಕೇವಲ 10 ಎಸೆತದಲ್ಲೇ ಮ್ಯಾಚ್ ಫಿನೀಶ್ ಮಾಡಿದ ಭಾರತೀಯ ಮೂಲದ ಬೌಲರ್| ಕ್ರಿಕೆಟ್ ಇತಿಹಾಸದಲ್ಲೇ ಭರ್ಜರಿ ದಾಖಲೆ ನಿರ್ಮಿಸಿದ ಹಾಂಕಾಂಗ್ ತಂಡ Read More »

ಪ್ಯಾರಾಲಿಂಪಿಕ್ಸ್ – 2024| ಏರ್ ರೈಫಲ್ ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿಯ ಸಂಭ್ರಮ

ಸಮಗ್ರ ನ್ಯೂಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ -2024ರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಭಾರತದ ರೈಫಲ್ ಶೂಟರ್ ಅವನಿ ಲೆಖರಾ ಚಿನ್ನ ಗೆದ್ದಿದ್ದಾರೆ. ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅವನಿ ಲೆಖರಾ ಅವರು ಮೂರು ವರ್ಷಗಳ ಹಿಂದಿನ 249.6 ಅಂಕಗಳ ತನ್ನದೇ ದಾಖಲೆಯನ್ನು ಮುರಿದಿದ್ದು, 249.7 ಅಂಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಏರ್ ರೈಫಲ್‌ನಲ್ಲಿ ಭಾರತದ ಮೋನಾ ಅಗರ್ವಾಲ್ ಅವರು ಕಂಚಿಕ ಪದಕವನ್ನು ಗೆದಿದ್ದಾರೆ. ಮೋನಾ 228.7ರ ಅಂತಿಮ ಸ್ಕೋರ್‌ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಅರ್ಹತಾ

ಪ್ಯಾರಾಲಿಂಪಿಕ್ಸ್ – 2024| ಏರ್ ರೈಫಲ್ ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿಯ ಸಂಭ್ರಮ Read More »

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ನಾಳೆ ಅಧಿಕೃತ ಚಾಲನೆ

ಸಮಗ್ರ ನ್ಯೂಸ್‌: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು, ಭಾರತದಿಂದ ದಾಖಲೆಯ 84 ಸ್ಪರ್ಧಿಗಳು ಈ ಬಾರಿ ಭಾಗವಹಿಸಲಿದ್ದಾರೆ. ಕಳೆದ ಟೋಕಿಯೊದಲ್ಲಿ 19 ಪದಕ ಗೆದ್ದಿದ್ದ ಭಾರತ ಈ ಬಾರಿ 25 ಪದಕ ಗುರಿಯನ್ನಿಟ್ಟುಕೊಂಡಿದೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಬೈಂಡ್, ಟೇಬಲ್‌ ಟೆನಿಸ್‌ ಮತ್ತು ಟೇಕ್ವಾಂಡೊ ಸೇರಿದಂತೆ 12 ಕ್ರೀಡೆಗಳಲ್ಲಿ ಭಾರತ ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ನಾಳೆ ಅಧಿಕೃತ ಚಾಲನೆ Read More »

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಶಿಖರ್ ಧವನ್

ಸಮಗ್ರ ನ್ಯೂಸ್‌: ಭಾರತೀಯ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ 38 ವರ್ಷ ವಯಸ್ಸಿನ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ ವಿದಾಯ ಹೇಳಿದ್ದಾರೆ. ಧವನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. 2022ರ ಬಾಂಗ್ಲಾದೇಶ ಪ್ರವಾಸದ ನಂತರ ಧವನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅದರಲ್ಲೂ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲೂ ಅವರ ಹೆಸರು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಶಿಖರ್ ಧವನ್ Read More »

ತವರಿಗೆ ಮರಳಿದ ವಿನೇಶ್‌ ಪೋಗಟ್‌| ಏರ್ಪೋರ್ಟ್ ನಲ್ಲಿ ಭರ್ಜರಿ ಸ್ವಾಗತ

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ಜತೆಗಿದ್ದರು. ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ

ತವರಿಗೆ ಮರಳಿದ ವಿನೇಶ್‌ ಪೋಗಟ್‌| ಏರ್ಪೋರ್ಟ್ ನಲ್ಲಿ ಭರ್ಜರಿ ಸ್ವಾಗತ Read More »

ಹತ್ತು ಎಸೆತಗಳಲ್ಲಿ 60 ರನ್ ಚಚ್ಚಿದ ಇಶಾನ್ ಕಿಶನ್| ಟೀಂ‌ ಇಂಡಿಯಾದಿಂದ ಹೊರಬಿದ್ದಿದ್ದಕ್ಕೆ ಸೇಡು‌ ತೀರಿಸಿಕೊಂಡರಾ ಕ್ರಿಕೆಟ್ ಸ್ಟಾರ್?

ಸಮಗ್ರ ನ್ಯೂಸ್: ಟೀಂ ಇಂಡಿಯಾದಿಂದ ಹೊರಬಿದ್ದ ಇಶಾನ್ ಕಿಶನ್ ಇದೀಗ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಈ ಎಡಗೈ ಬ್ಯಾಟ್ಸ್‌ಮನ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬುಚ್ಚಿ ಬಾಬು. ಇಶಾನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ವಿರುದ್ಧ ಹೆಚ್ಚು ರನ್ ಗಳಿಸಿದ ಇಶಾನ್‌,

ಹತ್ತು ಎಸೆತಗಳಲ್ಲಿ 60 ರನ್ ಚಚ್ಚಿದ ಇಶಾನ್ ಕಿಶನ್| ಟೀಂ‌ ಇಂಡಿಯಾದಿಂದ ಹೊರಬಿದ್ದಿದ್ದಕ್ಕೆ ಸೇಡು‌ ತೀರಿಸಿಕೊಂಡರಾ ಕ್ರಿಕೆಟ್ ಸ್ಟಾರ್? Read More »