ಕ್ರೀಡೆ

ಐಸಿಸಿ ನೂತನ ರ‍್ಯಾಂಕಿಂಗ್/ ಭಾರತಕ್ಕೆ ಅಗ್ರಸ್ಥಾನ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಏಕದಿನ ವಿಶ್ವಕಪ್ ಬಳಿಕ ನೂತನ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸಿದ್ದು, ನೂತನ ಪಟ್ಟಿಯಲ್ಲಿ ಭಾರತ ತಂಡದ ಐವರು ಆಟಗಾರರು ಅಗ್ರಸ್ಥಾನ ಅಲಂಕರಿಸಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಶುಭಮನ್ ಗಿಲ್, ಟಿ-20 ಬ್ಯಾಟ್ಸ್‌ಮನ್‌ಗಳ ಪೈಕಿ ಸೂರ್ಯಕುಮಾರ್ ಯಾದವ್, ಆಲ್‍ರೌಂಡರ್ ಗಳ ಪೈಕಿ ರವೀಂದ್ರ ಜಡೇಜಾ, ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್, ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223 […]

ಐಸಿಸಿ ನೂತನ ರ‍್ಯಾಂಕಿಂಗ್/ ಭಾರತಕ್ಕೆ ಅಗ್ರಸ್ಥಾನ Read More »

ಇಂದಿನಿಂದ ಪ್ರೋ ಕಬಡ್ಡಿ ಕಲರವ| ಎರಡು ತಿಂಗಳು ಭರಪೂರ ಮನರಂಜನೆ

ಸಮಗ್ರ‌ ನ್ಯೂಸ್: ಇಂದಿನಿಂದ ಬಹುನಿರೀಕ್ಷಿತ ವಿವೋ ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10ರ ಹವಾ ಶುರುವಾಗಲಿದೆ. ಇಂದು ಪ್ರೊ ಕಬಡ್ಡಿ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಕುತೂಹಲ ಕೆರಳಿಸಿದೆ. ಸದ್ಯ 4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್‌ನಲ್ಲಿ ಎಲ್ಲಾ 12

ಇಂದಿನಿಂದ ಪ್ರೋ ಕಬಡ್ಡಿ ಕಲರವ| ಎರಡು ತಿಂಗಳು ಭರಪೂರ ಮನರಂಜನೆ Read More »

ಅಬ್ಬರಿಸಿದ ಮ್ಯಾಕ್ಸ್ ವೆಲ್| ಆಸೀಸ್ ಗೆ 5 ವಿಕೆಟ್ ಗಳ ಜಯ

ಸಮಗ್ರ ನ್ಯೂಸ್: ಗುವಾಹಟಿಯ ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಶತಕದ ಫಲವಾಗಿ ಆಸೀಸ್​ಗೆ 5 ವಿಕೆಟ್​ಗಳ ಜಯ ದಕ್ಕಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕ ಋತುರಾಜ್​ ಗಾಯಕ್ವಾಡ್ (123 ರನ್, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಸ್ಪೋಟಕ ಶತಕದ ಫಲವಾಗಿ ಟೀಂ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 222 ರನ್​ ಗಳಿಸಿತ್ತು. 223 ರನ್​ಗಳ ಗುರಿ

ಅಬ್ಬರಿಸಿದ ಮ್ಯಾಕ್ಸ್ ವೆಲ್| ಆಸೀಸ್ ಗೆ 5 ವಿಕೆಟ್ ಗಳ ಜಯ Read More »

ದ್ರಾವಿಡ್ ಅವಧಿ ಮುಕ್ತಾಯ/ ನೂತನ ಕೋಚ್ ಆಗಲಿದ್ದಾರೆಯೇ ಲಕ್ಷ್ಮಣ್

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್‌ನ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಮುಕ್ತಾಯಗೊಂಡಿದ್ದು, ನೂತನ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅಧಿಕಾರ ವಹಿಸಿಕೊಳ್ಳಲಿರುವುದು ಬಹುತೇಕ ಖಚಿತಗೊಂಡಿದೆ. ಎರಡು ವರ್ಷದಿಂದ ಭಾರತೀಯ ಕ್ರಿಕೆಟ್‌ಗೆ ಮುಖ್ಯಕೋಚ್ ಆಗಿ ಸೇವೆ ಸಲ್ಲಿಸಿದ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ಸೋಲಿನೊಂದಿಗೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯೂ ಮುಗಿದಿದ್ದು, ದ್ರಾವಿಡ್ ತಂಡದ ಸದಸ್ಯರಾಗಿ ವಿಕ್ರಮ್

ದ್ರಾವಿಡ್ ಅವಧಿ ಮುಕ್ತಾಯ/ ನೂತನ ಕೋಚ್ ಆಗಲಿದ್ದಾರೆಯೇ ಲಕ್ಷ್ಮಣ್ Read More »

ಸೋಲಿನ ಗಾಯಕ್ಕೆ ಮುಲಾಮು ಹಚ್ಚಿದ ರಿಂಕು| T-20 ಸೀರೀಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶುಭಾರಂಭ ಮಾಡಿದ ಭಾರತ

ಸಮಗ್ರ ನ್ಯೂಸ್: ಐಸಿಸಿ ವಿಶ್ವಕಪ್ ಫೈನಲ್ ಸೋಲಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಇದೀಗ ಆಸ್ಟ್ರೇಲಿಯಾ ವಿರುದ್ದಧ ಟಿ20 ಸರಣಿಯ ಶುಭಾರಂಭ ಸಮಾಧಾನ ತಂದಿದೆ. ಆಸ್ಟ್ರೇಲಿಯಾ ನೀಡಿದ 209 ರನ್ ಬೃಹತ್ ಟಾರ್ಗೆಟ್‌ಗೆ ಪ್ರತಿಯಾಗಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಸೂರ್ಯುಕುಮಾರ್ ಯಾದವ್ ಹೋರಾಟ ಆಸ್ಟ್ರೇಲಿಯಾ ಲೆಕ್ಕಾಚಾರ ಬದಲಿಸಿತು. ಆದರೆ ಅಂತಿಮ ಹಂತದಲ್ಲಿ ದಿಢೀರ್ ವಿಕೆಟ್ ಪತನ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಸೂರ್ಯ ಕುಮಾರ್ ವಿಕೆಟ್ ಪತನದ ಬಳಿಕ ಅಕ್ಸರ್ ಪಟೇಲ್, ರವಿ ಬಿಶ್ನೋಯ್,

ಸೋಲಿನ ಗಾಯಕ್ಕೆ ಮುಲಾಮು ಹಚ್ಚಿದ ರಿಂಕು| T-20 ಸೀರೀಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶುಭಾರಂಭ ಮಾಡಿದ ಭಾರತ Read More »

ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20/ ಸವಾಲಿಗೆ ಸಜ್ಜಾಗಿದೆ ಭಾರತದ ಯುವಪಡೆ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದ್ದು ಭಾರತದ ಯುವ ತಂಡ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲು ಸಜ್ಜಾಗಿದೆ. ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಸೋಲಿನ ನಂತರ ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು, ಸೂರ್ಯಕುಮಾ‌ರ್ ಯಾದವ್ ಸಾರಥ್ಯದಲ್ಲಿ ಯುವ ಆಟಗಾರರ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಾಳುವಾದ ಕಾರಣದಿಂದ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದು, ಗೆಲುವಿನ ದಡ ಸೇರಿಸುವರೇ ಎಂಬುದನ್ನು ಕಾದು

ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20/ ಸವಾಲಿಗೆ ಸಜ್ಜಾಗಿದೆ ಭಾರತದ ಯುವಪಡೆ Read More »

ಕಟೀಲ್ ಗೆ ಟಿಕೆಟ್ ಮಿಸ್ ಆಗಲ್ಲ| ಮಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ನೀಡಿದ್ರು ಸುಳಿವು

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಹಂಚಿಕೆಯಲ್ಲಿ ತಂದ ಬದಲಾವಣೆಯನ್ನ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ತರುವ ನಿಟ್ಟಿನಲ್ಲಿ ಕರ್ನಾಟಕದ ಹಾಲಿ 13 ಜನ ಸಂಸದರಿಗೆ ಈ ಬಾರೀ ಟಿಕೆಟ್‌ ನೀಡುವುದಿಲ್ಲ ಎಂಬ ವರದಿಯಾಗಿದ್ದು, ಈ ಬಾರೀ ದಕ್ಷಿಣ ಕನ್ನಡ ಸಂಸದಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರಿಗೂ ಟಿಕೆಟ್‌ ಮಿಸ್‌ ಎನ್ನಲಾಗಿತ್ತು. ಆದರೆ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಟಿಕೆಟ್‌ ನೀಡಲ್ಲ ಎಂಬ ಚರ್ಚೆಗೆ ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು

ಕಟೀಲ್ ಗೆ ಟಿಕೆಟ್ ಮಿಸ್ ಆಗಲ್ಲ| ಮಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ನೀಡಿದ್ರು ಸುಳಿವು Read More »

ಐಸಿಸಿ ಏಕದಿನ ಶ್ರೇಯಾಂಕ/ ಭಾರತದ್ದೇ ಪಾರುಪತ್ಯ

ಸಮಗ್ರ ನ್ಯೂಸ್: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಎಲ್ಲಾ ವಿಭಾಗಗಳಲ್ಲೂ ಭಾರತದ ಆಟಗಾರರು ಪಾರುಪತ್ಯ ಮೆರೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶುಭ್‍ಮನ್ ಗಿಲ್ ವಿಶ್ವಕಪ್ ಫೈನಲ್‍ನಲ್ಲಿ ವಿಫಲಗೊಂಡರೂ ತನ್ನ ಅಗ್ರಸ್ಥಾನ ಉಳಿಸಿಕೊಳ್ಳಲು ಸಫಲರಾಗಿದ್ದಾರೆ, ಆದರೆ ಈ ಬಾರಿ ರೇಟಿಂಗ್ ಅಂಕದಲ್ಲಿ ಕುಸಿತ ಕಂಡಿದ್ದಾರೆ. ವಿಶ್ವಕಪ್‍ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ರೋಹಿತ್ ಶರ್ಮಾ 769 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಶ್ವಕಪ್‍ನಲ್ಲಿ ವೈಫಲ್ಯ ಕಂಡ

ಐಸಿಸಿ ಏಕದಿನ ಶ್ರೇಯಾಂಕ/ ಭಾರತದ್ದೇ ಪಾರುಪತ್ಯ Read More »

ವಿಶ್ವಕಪ್ ಸೋಲಿನ ಆಘಾತ/ ಟಿ-20ಗೆ ವಿದಾಯ ಹೇಳುತ್ತಾರಾ ರೋಹಿತ್?

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಸೋಲಿನ ನೋವಿನಿಂದ ಕ್ರಿಕೆಟ್ ಅಭಿಮಾನಿಗಳು ಹೊರಬರುವ ಮುನ್ನವೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಂದಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‍ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಈ ನಿರ್ಧಾರವನ್ನು ಏಕದಿನ ವಿಶ್ವಕಪ್‍ಗೂ ಮೊದಲೇ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್ ಜೊತೆ ಮಾತನಾಡಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ಒಂದು ವರ್ಷದಿಂದ ಭಾರತ ತಂಡದ ಪರವಾಗಿ ಯಾವುದೇ ಟಿ-20 ಪಂದ್ಯಗಳಲ್ಲಿ

ವಿಶ್ವಕಪ್ ಸೋಲಿನ ಆಘಾತ/ ಟಿ-20ಗೆ ವಿದಾಯ ಹೇಳುತ್ತಾರಾ ರೋಹಿತ್? Read More »

ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌| ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್

ಸಮಗ್ರ ನ್ಯೂಸ್:ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಗೆಲುವು ಸಾಧಿಸುವ ಮೂಲಕ ಭಾರತದ ಪ್ರಖ್ಯಾತ ಬಿಲಿಯರ್ಡ್ಸ್ ಹಾಗೂ ಸ್ನೂಕರ್‌ ಆಟಗಾರ ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸೌರವ್ ಕೊಥಾರಿಯನ್ನು ಸೋಲಿಸುವ ಮೂಲಕ ಬೆಂಗಳೂರಿನ ಪಂಕಜ್ ಆಡ್ವಾಣಿ ಈ ದಾಖಲೆಯನ್ನು ನಿರ್ಮಿಸಿದರು. ಪಂಕಜ್‌ ಆಡ್ವಾಣಿ 1000-416 ರಿಂದ ಸೌರವ್ ಕೊಥಾರಿಯನ್ನು ಸೋಲಿಸಿದರು. ಅವರು 2005 ರಲ್ಲಿ ಈ ಸ್ಪರ್ಧೆಯಲ್ಲಿ ತಮ್ಮ ಮೊದಲ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದರು.

ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌| ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್ Read More »