ಕ್ರೀಡೆ

ವಿಜಯ್ ಹಜಾರೆ ಟ್ರೋಫಿ 2023/ ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಯಾಣ

ಸಮಗ್ರ ನ್ಯೂಸ್: ರಾಜಸ್ಥಾನವನ್ನು 30 ರನ್ನುಗಳಿಂದ ಸೋಲಿಸಿದ ಹರಿಯಾಣ ವಿಜಯ್ ಹಜಾರೆ ಟ್ರೋಫಿ 2023 ನ್ನು ತನ್ನ ಮುಡಿಗೇರಿಸಿಕೊಂಡಿದೆ. ಶನಿವಾರ ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡದ ಪರ ತೋಮರ್ 129 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿದರೂ, ಅಂತಿಮವಾಗಿ ರಾಜಸ್ಥಾನ್ 48 […]

ವಿಜಯ್ ಹಜಾರೆ ಟ್ರೋಫಿ 2023/ ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಯಾಣ Read More »

ಮುಂಬೈ ನಾಯಕತ್ವದಿಂದ ಹೊರಬಂದ ರೋಹಿತ್/ ಟಿ-20 ಗೆ ವಿದಾಯ ಹೇಳ್ತಾರಾ ಹಿಟ್‍ಮ್ಯಾನ್

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಇ ಆತಿಥ್ಯದಲ್ಲಿ ಜೂನ್‍ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ವಿಶ್ವಕಪ್‍ನಲ್ಲಿ ರೋಹಿತ್ ಶರ್ಮ ಆಡಲಿದ್ದಾರ? ಎಂಬುದರ ಕುರಿತು ಚರ್ಚೆಗಳು ಕಳೆದ ಕೆಲವು ದಿನಗಳಿಂದ ಶುರುವಾಗಿದೆ. ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿ, ರೋಹಿತ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇದು ರೋಹಿತ್ ಶರ್ಮ ಅವರ ಟಿ20 ಕ್ರಿಕೆಟ್ ಬಾಳ್ವೆ ಬಹುತೇಕ ಕೊನೆಗೊಂಡಿರುವ ಸುಳಿವೊಂದನ್ನು ನೀಡಿದೆ. ‘ಟಿ20

ಮುಂಬೈ ನಾಯಕತ್ವದಿಂದ ಹೊರಬಂದ ರೋಹಿತ್/ ಟಿ-20 ಗೆ ವಿದಾಯ ಹೇಳ್ತಾರಾ ಹಿಟ್‍ಮ್ಯಾನ್ Read More »

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ

ಸಮಗ್ರ ನ್ಯೂಸ್: ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರನ್ನು ರೋಹಿತ್ ಶರ್ಮ ಅವರ ಬದಲಾಗಿ ಮುಂಬೈ ತಂಡದ ನಾಯಕನನ್ನಾಗಿ ಘೋಷಣೆ ಮಾಡಿದೆ. ರೋಹಿತ್ ಶರ್ಮ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. 2013ರ ಐಪಿಎಲ್‍ನ ನಡುವೆಯೇ ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಾಯಕರನ್ನಾಗಿ ಘೋಷಣೆ ಮಾಡಿತ್ತು.2013ರ ಋತುವಿನ ಮೂಲಕ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರವಾಗಿ 92 ಪಂದ್ಯವಾಡಿದ್ದರು.

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ Read More »

ನಾಯಕನ ಆಟವಾಡಿದ ಸೂರ್ಯಕುಮಾರ್/ ಸರಣಿ ಸಮಬಲದಲ್ಲಿ ಅಂತ್ಯ

ಸಮಗ್ರ ನ್ಯೂಸ್: ಭಾರತ ತಂಡ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 106 ರನ್ ಗಳಿಂದ ಜಯ ಸಾದಿಸಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿ ಸಮಬಲಗೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಸ್ಪೋಟಕ ಶತಕ ಮತ್ತು ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧ ಶತಕದ ನೆರವಿನಿಂದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.

ನಾಯಕನ ಆಟವಾಡಿದ ಸೂರ್ಯಕುಮಾರ್/ ಸರಣಿ ಸಮಬಲದಲ್ಲಿ ಅಂತ್ಯ Read More »

ವಿಜಯ್ ಹಜಾರೆ ಟ್ರೋಫಿ/ ಇಂದು ಕರ್ನಾಟಕ ಮತ್ತು ರಾಜಸ್ಥಾನ ನಡುವೆ ಸೆಮಿಫೈನಲ್

ಸಮಗ್ರ ನ್ಯೂಸ್: ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ಇಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಟೂರ್ನಿಯ ಲೀಗ್ ಹಂತದಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‍ಗೇರಿದ್ದ ಕರ್ನಾಟಕ ತಂಡ, ಹರಿಯಾಣ ಎದುರು ಮಾತ್ರ ಸೋಲು ಅನುಭವಿಸಿದೆ.

ವಿಜಯ್ ಹಜಾರೆ ಟ್ರೋಫಿ/ ಇಂದು ಕರ್ನಾಟಕ ಮತ್ತು ರಾಜಸ್ಥಾನ ನಡುವೆ ಸೆಮಿಫೈನಲ್ Read More »

ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ/ ಬಿಸಿಸಿಐ ಶಿಫಾರಸು

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತ ತಂಡದ ವೇಗಿ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ನೀಡಲು ಬಿಸಿಸಿಐ ಶಿಫಾರಸು ಮಾಡಲಾಗಿದೆ. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ನಂತರ ಅರ್ಜುನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿದ್ದು, ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಕಡಿಮೆ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಶಮಿಗೆ ಪ್ರಶಸ್ತಿ ನೀಡಲು ಬಿಸಿಸಿಐ ವಿಶೇಷವಾಗಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಿದೆ. ಮೊದಲ 4 ಪಂದ್ಯಗಳಲ್ಲಿ

ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ/ ಬಿಸಿಸಿಐ ಶಿಫಾರಸು Read More »

ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ/ ಮೊದಲ ಪಂದ್ಯ ಮಳೆಗೆ ಬಲಿ

ಸಮಗ್ರ ನ್ಯೂಸ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಕ್ರಿಕೆಟ್ ಸರಣಿಯ ಮೊದಲ ಟಿ20 ಪಂದ್ಯಾಟವನ್ನು ಮಳೆಯ ಕಾರಣದಿಂದ ರದ್ದುಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯದ ಆರಂಭದಲ್ಲೇ ಮಳೆರಾಯ ಎಂಟ್ರಿಕೊಟ್ಟಿದ್ದು, ಟಾಸ್ ಪ್ರಕ್ರಿಯೆ ಕೂಡ ನಡೆಸಲು ಅವಕಾಶ ನೀಡಿರಲಿಲ್ಲ. ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ/ ಮೊದಲ ಪಂದ್ಯ ಮಳೆಗೆ ಬಲಿ Read More »

ಸುಳ್ಯ: ಟ್ವೆಂಟಿ-ಟ್ವೆಂಟಿ ಪಂದ್ಯಾಟದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಪ್ರಥಮ

ಸಮಗ್ರ ನ್ಯೂಸ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಮೆಡಿಕಲ್ ಕಾಲೇಜು Twenty-Twenty ಪಂದ್ಯಾಟದಲ್ಲಿ ಕೆವಿಜಿ ಮೈದಾನದಲ್ಲಿ ಡಿ.10 ರಂದು ನಡೆಯಿತು. ಈ ಪಂದ್ಯಾಟದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಸುಳ್ಯ: ಟ್ವೆಂಟಿ-ಟ್ವೆಂಟಿ ಪಂದ್ಯಾಟದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಪ್ರಥಮ Read More »

ಇಂಡೋನೇಷ್ಯಾ ರ್‍ಯಾಲಿಯಲ್ಲಿ  ಭಾಗಿ| ನಾಲ್ಕು ವಿಭಾಗದಲ್ಲಿ ಚಾಂಪಿಯನ್

ಸಮಗ್ರ ನ್ಯೂಸ್: ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್-2023 ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕರ್ನಾಟಕದ ಸುಹೇಬ್ ಕಬೀರ್ ಅವರು ಭಾಗವಹಿಸಿ ನಾಲ್ಕು ವಿಭಾಗದಲ್ಲಿ ವಿಜೇತರಾಗುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸುಹೇಮ್ ಕಬೀರ್ ಅವರಿಗೆ ವಾಮ್ಸಿ ಮೇರ್ಲಾ ಸ್ಪೊರ್ಟ್ಸ್ ಫೌಂಡೇಶನ್ ಮತ್ತು ಜೆ.ಕೆ.ಟಯರ್ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದಾರೆ. ಪಿವಿಎಸ್ ಮೂರ್ತಿ ಅವರು ಸಾಹೇಬ್ ಕಬೀರ್ ಅವರ ಸಹ ಚಾಲಕರಾಗಿ ಜೊತೆಗಿದ್ದರು. ಸುಹೇಬ್ ಕಬೀರ್ ಅವರು ಏಷ್ಯಾ ಫೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಎನ್‌ವಿಎ ಕ್ಲಾಸ್ ಚಾಂಪಿಯನ್

ಇಂಡೋನೇಷ್ಯಾ ರ್‍ಯಾಲಿಯಲ್ಲಿ  ಭಾಗಿ| ನಾಲ್ಕು ವಿಭಾಗದಲ್ಲಿ ಚಾಂಪಿಯನ್ Read More »

ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ

ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್‍ನ 10ನೇ ಆವೃತ್ತಿಯ 2ನೇ ಚರಣದ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಕ್ರಿಕೆಟ್ ಪಂದ್ಯಗಳನ್ನು ನೋಡಿ ಮನ ತಣಿಸಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ದೇಸೀಯ ಕ್ರೀಡೆಯ ರೋಚಕತೆ ಸವಿಯುವ ಅವಕಾಶ ದೊರಕಲಿದೆ. ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೋ ಕಬಡ್ಡಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಸೆಣಸಾಟ ನಡೆಸಲಿವೆ. ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ನಿರಾಸೆ

ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ Read More »