ಲೈಪ್ ಈಸ್ ಅಡ್ವೆಂಚರ್

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆ ತಾಳಿಕೋಟೆಯ ಕ್ರೀಡಾಪಟು ನವೀನಕುಮಾರ ಸಂಗಪ್ಪ ಈಜೇರಿ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದ ಲಕ್ಕೋದ ಕೆ.ಡಿ.ಸಿಂಗ್ ಸ್ಟೇಡಿಯಂನಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ Read More »

ಮಂಗಳೂರು‌ ದಸರಾಕ್ಕೆ ಕೆಎಸ್ಆರ್ ಟಿಸಿ‌ ವಿಶೇಷ ಪ್ಯಾಕೇಜ್| ಮೊದಲ ಬಾರಿಗೆ ನಿಗಮದಿಂದ ಮಂಗಳೂರು ದರ್ಶನ ಪ್ರವಾಸ

ಸಮಗ್ರ ನ್ಯೂಸ್: ಇದೇ ಮೊದಲ ಬಾರಿಗೆ ಕೆಎಸ್‌ಆರ್ಟಿಸಿಯ ಮಂಗಳೂರು ವಿಭಾಗವು ಮಂಗಳೂರು ದಸರಾ ದರ್ಶನ ಪ್ರವಾಸಕ್ಕಾಗಿ ವಿಶೇಷ ಪ್ಯಾಕೇಜ್ ಅನ್ನು ಯೋಜಿಸಿದೆ. ಇದು ದಕ್ಷಿಣ ಕನ್ನಡದ ಒಂಬತ್ತು ಪ್ರಮುಖ ದೇವಾಲಯಗಳನ್ನು ಒಳಗೊಳ್ಳುತ್ತದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನವರಾತ್ರಿ ಉತ್ಸವದ ಎಲ್ಲಾ ದಿನಗಳಲ್ಲಿ ಒಂದು ದಿನದ ಪ್ರವಾಸ ಪ್ಯಾಕೇಜ್ ಲಭ್ಯವಿರುತ್ತದೆ. ಬೆಳಿಗ್ಗೆ 8 ರಿಂದ ರಾತ್ರಿ 10.30 ರವರೆಗೆ ಒಂದು ದಿನದ ಪ್ರವಾಸವು ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಾರಂಭವಾಗಲಿದೆ. ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ

ಮಂಗಳೂರು‌ ದಸರಾಕ್ಕೆ ಕೆಎಸ್ಆರ್ ಟಿಸಿ‌ ವಿಶೇಷ ಪ್ಯಾಕೇಜ್| ಮೊದಲ ಬಾರಿಗೆ ನಿಗಮದಿಂದ ಮಂಗಳೂರು ದರ್ಶನ ಪ್ರವಾಸ Read More »

ಸ್ವತಂತ್ರ ‌ಪತ್ರಿಕೋದ್ಯಮದ ಒಂದನೇ ವರ್ಷ; ನೂರಾರು ಹರ್ಷ

ಸಮಗ್ರ ನ್ಯೂಸ್: ಮಾಧ್ಯಮ ಅಥವಾ ಸಮೂಹ ಮಾಧ್ಯಮಗಳೆಂದು ಬಂದಾಗ ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಎನಿಸಿಕೊಂಡ ಇವುಗಳಿಗೆ ಸೆಡ್ಡು ಹೊಡೆದು ಮಾಹಿತಿಯನ್ನು, ಮನೋರಂಜನೆಯನ್ನು, ದೃಶ್ಯ, ಸುದ್ದಿ ಎಲ್ಲವನ್ನೂ ಕ್ಷಣಮಾತ್ರದಲ್ಲಿ ತಲುಪಿಸಬಲ್ಲ ಮತ್ತೊಂದು ನವಮಾದ್ಯಮ ಎಂದರೆ ಡಿಜಿಟಲ್ ಪತ್ರಿಕೋದ್ಯಮ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” ಎಂದೂ ಕರೆಯುತ್ತಾರೆ. ಈ ನಾಲ್ಕನೇ ಅಂಗಕ್ಕೆ ಹೊಸದಾಗಿ ಸೇರ್ಪಡೆಯಾದ ಡಿಜಿಟಲ್

ಸ್ವತಂತ್ರ ‌ಪತ್ರಿಕೋದ್ಯಮದ ಒಂದನೇ ವರ್ಷ; ನೂರಾರು ಹರ್ಷ Read More »

“ಪ್ರೀತಿಯಲ್ಲಿ ಸಾಗರ, ಮಮತೆಯಲ್ಲಿ ಆಕಾಶ” ಪ್ರೇಮದ ಗಣಿ ಈ ದೇವತೆ…

ಸಮಗ್ರ ವಿಶೇಷ: ಅವಳೇನೂ ಸಂಪತ್ತಿನಲ್ಲಿ ಶ್ರೀಮಂತಳಾಗಿರಲಿಲ್ಲ ಆದರೆ ಪ್ರೀತಿಯಲ್ಲಿ ಯಾರನ್ನಾದರೂ ಮುಳುಗಿಸುವ ಪ್ರೇಮದ ಗಣಿಯಾಗಿದ್ದಳು. ಅವಳ ಬದುಕನ್ನು ಕಂಡಾಗ ಒಮ್ಮೊಮ್ಮೆ ನನಗನ್ನಿಸುತ್ತಿತ್ತು, ಇವಳೇಕೆ ಸಹನಾಮೂರ್ತಿಯಾದಳು. ಜೀವನವೆಲ್ಲ ಅವಳು ತನಗಾಗಿ ಬದುಕಿದ್ದು ತುಂಬಾ ಕಡಿಮೆ ತನ್ನವರ ಖುಷಿಗಾಗಿಯೇ ಜೀವ ಜೀವನ ಸವೆಸಿದ್ದಳು. ಹೊಟ್ಟೆ ಯೊಳಗೆ ಮಗುವ ಹೊತ್ತುಕೊಂಡು ಗುಡ್ಡ ಹತ್ತತ್ತಿದ್ದಳು, ಕಟ್ಟಿಗೆ ಹೊರುತ್ತಿದ್ದಳು. ಕಂಕುಳಲಿ ಮಗುವ ಹಿಡಿದು ಮನೆಯ ಮುನ್ನಡೆಸಿದಳು. ಇದ್ದ ಒಂದು ರೂಪಾಯಿಯಲ್ಲಿ ತನ್ನ ಮಕ್ಕಳಿಗೆ ಜಗವ ತೋರಿದ ಮಹಾಮಾತೆ ಅವಳು. ತನ್ನ ಮಕ್ಕಳಿಗಾಗಿ ಅದೆಷ್ಟೋ ಬಾರಿ

“ಪ್ರೀತಿಯಲ್ಲಿ ಸಾಗರ, ಮಮತೆಯಲ್ಲಿ ಆಕಾಶ” ಪ್ರೇಮದ ಗಣಿ ಈ ದೇವತೆ… Read More »

ನಾಳೆಯಿಂದ ಬಾಹ್ಯಾಕಾಶದಲ್ಲಿ 3 ದಿನ ಉಲ್ಕಾಪಾತ| ಬರಿಗಣ್ಣಿನಲ್ಲೂ ನೋಡಬಹುದು ಪ್ರಕೃತಿಯ ಅಚ್ಚರಿ

ಸಮಗ್ರ ನ್ಯೂಸ್: ಏ.21 ರಿಂದ ಏ.23ರ ರಾತ್ರಿ ಗಗನದಲ್ಲಿ ಉಲ್ಕಾಪಾತವಾಗಲಿದ್ದು ಬರಿಗಣ್ಣಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಈ ಬಾರಿ ಲೈರಿಡಾ ಉಲ್ಕಾಪಾತವಾಗಲಿದ್ದು, ಒಂದು ಮೈಕ್ರಾನ್‌ನಿಂದ ಒಂದು ಸೆಂಟಿ ಮೀಟರ್‌ನಷ್ಟು ದೊಡ್ಡದಿರುವ ಧೂಮಕೇತುವಿನ ಬಾಲದ ಕಣಗಳು, ಕ್ಷುದ್ರಗ್ರಹಗಳ ಕಣಗಳು ವೇಗವಾಗಿ ಭೂ ಕಕ್ಷೆ ಪ್ರವೇಶಿಸಿದಾಗ ವಾತಾವರಣದೊಂದಿಗೆ ಘರ್ಷಣೆಗೆ ಒಳಗಾಗಿ ಉರಿದು ಭಸ್ಮವಾಗಲಿವೆ. ಬೆಂಗಳೂರು ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಒಕ್ಕೂಟದ ಅಧ್ಯಕ್ಷ ರವೀಂದ್ರ ಆರಾಧ್ಯರ ಪ್ರಕಾರ, ಉಲ್ಕಾಪಾತವನ್ನು ಬರಿಗಣ್ಣಿನಿಂದ ನೋಡಬಹುದು. ಪೂರ್ವದ ದಿಕ್ಕಿನಲ್ಲಿ ಉಲ್ಕಾಪಾತ ಕಾಣಿಸಿಕೊಳ್ಳುವುದರಿಂದ

ನಾಳೆಯಿಂದ ಬಾಹ್ಯಾಕಾಶದಲ್ಲಿ 3 ದಿನ ಉಲ್ಕಾಪಾತ| ಬರಿಗಣ್ಣಿನಲ್ಲೂ ನೋಡಬಹುದು ಪ್ರಕೃತಿಯ ಅಚ್ಚರಿ Read More »

ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಬಲೂನು ಮಾರುತ್ತಿದ್ದ ಹುಡುಗಿ ‌ಈಗ ಮೋಡೆಲ್| ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾದ ಇಂಟ್ರೆಸ್ಟಿಂಗ್ ಕಥೆ!

ಸಮಗ್ರ ಡಿಜಿಟಲ್ ಡೆಸ್ಕ್: ಕೇರಳದ ಬೀದಿ ವ್ಯಾಪಾರಿ ಹುಡುಗಿ ತನ್ನ ಮೇಕ್ ಓವರ್‌ನ ಫೋಟೋಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ. ಕಣ್ಣಲ್ಲೇ ಕೊಲ್ಲುವ ಈ ಹುಡುಗಿ ಹೆಸರು ಕಿಸ್ಬು. ಕೇರಳದ ದೇವಸ್ಥಾನದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಾಗ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದಿದ್ದಾಳೆ. ಆಕೆ ಮುಗ್ದತೆ, ಚೆಲುವು ಕ್ಯಾಮೆರಾ ಕಣ್ಣಿನಲ್ಲಿ ಮೋಡಿ ಮಾಡಿದೆ. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಕಟಿಸಿದ್ದಾರೆ. ಆಕೆಯನ್ನು ಗಮನಿಸಿದ ಅನೇಕರು ಆಕೆಯ ಪಾಲಿಗೆ ಹೊಸ ಅದೃಷ್ಟವನ್ನೇ

ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಬಲೂನು ಮಾರುತ್ತಿದ್ದ ಹುಡುಗಿ ‌ಈಗ ಮೋಡೆಲ್| ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾದ ಇಂಟ್ರೆಸ್ಟಿಂಗ್ ಕಥೆ! Read More »

ಬಯಲೇ ಈ ಗಜಮುಖನಿಗೆ ಆಲಯ| ಗಂಟೆಯೇ ಈತನಿಗೆ ಹರಕೆ| ಮೂಡಪ್ಪ ಸೇವೆಗೆ ಒಲಿಯುವ ಗಣಪ ಆಲಯವ ಒಲ್ಲನು| ಸೌತಡ್ಕ ಮಹಾಗಣಪತಿಯ ದರ್ಶನ ಮಾಡೋಣ ಬನ್ನಿ…

ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ರಾಜ್ಯಾದ್ಯಂತ ಹಲವು ಗಣಪತಿ ಆಲಯಗಳಿದ್ದರೂ, ಅದರಲ್ಲಿ ಪ್ರಮುಖವಾಗಿರುವುದು ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ. ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ ನೆಲೆ ನಿಂತಿರುವ ಪುಣ್ಯ ಸ್ಥಾನ. ತನ್ನ ಬೇಡುವ ಭಕ್ತರ ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರನ್ನು ಎಂದೂ ಕೈ ಬಿಡದ, ಗಣೇಶನ ನೆಲೇಬಿಡೇ ಸೌತಡ್ಕ ಮಹಾಗಣಪತಿ ಕ್ಷೇತ್ರ. ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಗಣಪತಿಯ ಕ್ಷೇತ್ರ ಮಹಾತ್ಮೆಯೇ ಅಪಾರವಾಗಿದೆ. ಕಾರಣಿಕ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ

ಬಯಲೇ ಈ ಗಜಮುಖನಿಗೆ ಆಲಯ| ಗಂಟೆಯೇ ಈತನಿಗೆ ಹರಕೆ| ಮೂಡಪ್ಪ ಸೇವೆಗೆ ಒಲಿಯುವ ಗಣಪ ಆಲಯವ ಒಲ್ಲನು| ಸೌತಡ್ಕ ಮಹಾಗಣಪತಿಯ ದರ್ಶನ ಮಾಡೋಣ ಬನ್ನಿ… Read More »

ಮೈಸೂರಲ್ಲೊಬ್ಬ ಉಕ್ಕಿನ ಮನುಷ್ಯ, ಮಗನ ಶವವನ್ನು ಮನೆಯಲ್ಲೇ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಅಂಬ್ಯುಲೆನ್ಸ್ ಡ್ರೈವರ್…!

ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದರೂ ಆತನ ಶವವನ್ನು ಮನೆಯಲ್ಲಿಯೇ ಬಿಟ್ಟು ಆಂಬ್ಯುಲೆನ್ಸ್‌ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ. ಸಹಾಯವಾಣಿ ಕೇಂದ್ರದ ಅಂಬ್ಯುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟಿತ್ತು. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕಂಗೆಟ್ಟು ಹೋಗಿದ್ದ ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ. ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ

ಮೈಸೂರಲ್ಲೊಬ್ಬ ಉಕ್ಕಿನ ಮನುಷ್ಯ, ಮಗನ ಶವವನ್ನು ಮನೆಯಲ್ಲೇ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಅಂಬ್ಯುಲೆನ್ಸ್ ಡ್ರೈವರ್…! Read More »

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ

ಟ್ರಕ್ಕಿಂಗ್ ಅಥವಾ ಚಾರಣವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಷಯ. ಹಲವರು ಚಾರಣದ ಬಗ್ಗೆ ಕೇಳಿರಬಹುದು, ಬಹಳಷ್ಟು ಮಂದಿ‌ ಅದರ ಅನುಭವ ಪಡೆದಿರಬಹುದು. ಬೆಟ್ಟ ಗುಡ್ಡಗಳ ನಡುವೆ ಕಲ್ಲು ಬಂಡೆಗಳ ಮಧ್ಯೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಾದಯಾತ್ರೆ ಸುಂದರ ಅನುಭವವನ್ನೇ ಕೊಡುತ್ತದೆ. ಸದಾ ಬ್ಯುಸಿಯಾಗಿರುವ ಪೇಟೆ ಮಂದಿ ಚಾರಣವನ್ನು ವರ್ಷಕ್ಕೊಮ್ಮೆಯಾದರೂ ಮಾಡಲೇಬೇಕು. ಹಳ್ಳಿ ಜನಕ್ಕೆ ದಿನವೂ ಚಾರಣವೇ ಬಿಡಿ…. ಆದರೆ ಇಲ್ಲೊಂದು ಹೊಸ ಕಾನ್ಸೆಪ್ಟ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತಲೆಎತ್ತುತ್ತಿದೆ. ಅದೇ ಬೀಚ್ ಟ್ರಕ್ಕಿಂಗ್ ಅಥವಾ ಸಮುದ್ರ

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ Read More »

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ

ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ‌ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು‌ ಕೊಡಗು ಜಿಲ್ಲೆಗಳ ನಡುವೆ.ಸಮುದ್ರ ಮಟ್ಟದಿಂದ 1712 ಮೀಟರ್‌ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ Read More »