Uncategorized

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು ಯಾವುದೇ ಗುಂಪಿನ ನಾಯಕನಲ್ಲ

ನವದೆಹಲಿ: ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು. ಕೊರೊನಾ ಸಮಯದಲ್ಲಿ ಜನರನ್ನು […]

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು ಯಾವುದೇ ಗುಂಪಿನ ನಾಯಕನಲ್ಲ Read More »

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ. ಸೂಲಿಬೆಲೆ ಅವರು, ತನ್ನ ಫೇಸ್ಬುಕ್ ಪೇಜ್ ನಲ್ಲಿ, ‘ದುರದೃಷ್ಟವೇನು ಗೊತ್ತೇ ? ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು . ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು Read More »

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು ಉಪ್ಪಿನಂಗಡಿ : ಇಲಿ ವಿಷ ತಿಂದು 2ವರ್ಷದ ಮಗು ಮೃತಪಟ್ಟಿರುವ ಘಟನೆ ನೆಲ್ಯಾಡಿಯ ಬಜತ್ತೂರಿನಲ್ಲಿ ನಡೆದಿದೆ. ಬಜತ್ತೂರಿನ ಕೆಮ್ಮಾರದ ನಿವೃತ್ತ ಸೈನಿಕ ಸೈಜು ಎಂಬವರು ಪುತ್ರಿ ಶ್ರೇಯಾ (2) ಮೃತಪಟ್ಟ ಮಗು. ಶ್ರೇಯಾ ತಂದೆ-ತಾಯಿ ಮನೆಯಲ್ಲಿ ಹಳೇ ವಸ್ತುಗಳನ್ನು ಕ್ಲೀನ್ ಮಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಶ್ರೇಯಾ ಇಲಿ ವಿಷ ತೆಗೆದು ತಿಂದಿದ್ದಾಳೆ. ಇದು ಪೋಷಕರ ಗಮನಕ್ಕೆ ಬರುವುದು ಕೊಂಚ ತಡವಾಗಿದ್ದು, ಮಗು ವಿಷ ತಿಂದಿರುವುದನ್ನು ತಿಳಿದ ತಕ್ಷಣ

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು Read More »

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್

ಸುಬ್ರಹ್ಮಣ್ಯ: ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನಿರ್ಬಂಧವಿದ್ದರೂ ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಭಕ್ತರನ್ನು ಗುಂಡ್ಯ ಚೆಕ್’ಪೋಸ್ಟ್ ನಿಂದಲೇ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಹೊಂದಿದವವರನ್ನು ಮಾತ್ರ ಜಿಲ್ಲೆಯ ಒಳಬರಲು ಬಿಡಲಾಗುತ್ತಿದೆ. ಶಿರಾಡಿ ಘಾಟ್ ಮೂಲಕ ಜಿಲ್ಲೆಯ ಧರ್ಮಸ್ಥಳ ಮತ್ತು ಸುಬ್ರಮಣ್ಯ ಪುಣ್ಯಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ತೀರ್ಥಯಾತ್ರೆ ಆಗಮಿಸಿದ್ದ ಬರೋಬ್ಬರಿ 69 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಕರೆಯಲಾಗುವುದಿಲ್ಲ. ಅಂತರ್ ಜಿಲ್ಲಾ ಗಡಿಗಳಲ್ಲಿ

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್ Read More »

ಅಪ್ಪನ ಕಸಿದ ಕೊರೊನ, ಎತ್ತಿ ಮುದ್ದಾಡೋರು, ಹೊರಗಡೆ ಕರೆದೊಯ್ಯುವವರಾರು?

ಬೆಂಗಳೂರು: ‘ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಮನೆಗೆ ಬಂದು ಒಂದೂವರೆ ವರ್ಷವಾಗಿತ್ತು. ಅವರು ಹೊರಗಡೆ ಕರೆದೊಯ್ದು, ಇಷ್ಟವಾದ ತಿನಿಸು ಹಾಗೂ ವಸ್ತುಗಳನ್ನು ಕೊಡಿಸುತ್ತಿದ್ದರು. ಕೋವಿಡ್‌ ಕಾಯಿಲೆಯು ಅಪ್ಪನನ್ನು ನಮ್ಮಿಂದ ದೂರ ಮಾಡಿತು. ಈಗ ಹೊರಗಡೆ ಕರೆದೊಯ್ಯುವವರು ಯಾರು?’ ಇದು ಎಂಟೂವರೆ ವರ್ಷದ ಬಾಲಕಿಯ ಪ್ರಶ್ನೆ. ಮೂರನೇ ತರಗತಿ ಓದುತ್ತಿರುವ ಪೂರ್ವಿಕಾ ಕಳೆದ ಏಪ್ರಿಲ್‌ನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾಳೆ. ಅವಳ ತಾಯಿ ಶುಶ್ರೂಷಕಿಯಾಗಿದ್ದು, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಹಲವಾರು ಕೊರೊನಾ ಸೋಂಕಿತರ ಆರೈಕೆ ಮಾಡಿದ್ದ

ಅಪ್ಪನ ಕಸಿದ ಕೊರೊನ, ಎತ್ತಿ ಮುದ್ದಾಡೋರು, ಹೊರಗಡೆ ಕರೆದೊಯ್ಯುವವರಾರು? Read More »

ಹಾಸನ ಕಾರು ಲಾರಿ ಭೀಕರ ಅಪಘಾತ ಬೆಳ್ತಂಗಡಿ ಮೂಲದ ಮೂವರು ಸಾವು | ಓರ್ವ ಗಂಭೀರ

ಬೆಳ್ತಂಗಡಿ: ಹಾಸನದಲ್ಲಿ ಲಾರಿ ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರರು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ಇಬ್ಬರನ್ನು ತಾಲೂಕಿನ ಇಂದ್ರಬೆಟ್ಟು ಗ್ರಾಮದ ಕುತ್ರಬೆಟ್ಟುವಿನ ಜಯಪ್ರಕಾಶ್ (25) ಯೋಗೀಶ್(23) ಎಂದು ಗುರುತಿಸಲಾಗಿದೆ. ಮೃತಪಟ್ಟ ಇನ್ನೊಬ್ಬರು ಮತ್ತು ಗಾಯಗೊಂಡ ಒಬ್ಬರ ಮಾಹಿತಿ ತಿಳಿದುಬಂದಿಲ್ಲ.ಹಾಸನ ಹೊರವಲಯದ ಕೆಂಚಟ್ಟಿ ಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿದ್ದ ಹಂಪ್ ಕಂಡು ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ

ಹಾಸನ ಕಾರು ಲಾರಿ ಭೀಕರ ಅಪಘಾತ ಬೆಳ್ತಂಗಡಿ ಮೂಲದ ಮೂವರು ಸಾವು | ಓರ್ವ ಗಂಭೀರ Read More »

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ?

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ? Read More »

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು

ಶಿವಮೊಗ್ಗ: ಪಂಪ್ ಸೆಟ್ ಸರಿಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಯುವಕರಿಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಹಾರೋಗೊಪ್ಪ ಬಿ ಕ್ಯಾಂಪ್ ನಿವಾಸಿಗಳಾದ ಶಶಿಕುಮಾರ್ ನಾಯ್ಕ (32) ಮತ್ತು ಶೇಖರ ನಾಯ್ಕ (36) ಮೃತ ದುರ್ದೈವಿಗಳು. ಇವರಿಬ್ಬರು ಜಮೀನಿನಲ್ಲಿ ಬೋರ್ವೇಲ್ ಗೆ ಅಳವಡಿಸದ್ದ ಪಂಪ್ ಸೆಟ್ ದುರಸ್ಥಿ ಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು Read More »

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ Read More »

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ

ಉಪ್ಪಿನಂಗಡಿ: ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಉಪ್ಪಿನಂಗಡಿಯ ಹಲವು ನೆರೆ ಹಾವಳಿಗೆ ಒಳಗಾಗುವ ಸಂಭವ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಉಪ್ಪಿನಂಗಡಿ ಪ್ರದೇಶವು ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಮಳೆ ಹೆಚ್ಚಾದಾಗ ನೆರೆ ಹಾವಳಿ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ ಪರಿಶೀಲನೆ ನಡೆಸಿದೆ. ಸಹಸ್ರಲಿಂಗೇಶ್ವರ ದೇವಸ್ಥಾನದ

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ Read More »