Uncategorized

“ನಳಿನ್ ಗೆ ಹುಚ್ಚು ಹಿಡಿದಿದೆ, ದಯವಿಟ್ಟು ನಿಮ್ಹಾನ್ಸ್ ಗೆ ಸೇರಿಸಿ”| ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ‌ ಮಾಜಿ ಸಿಎಂ ಸಿದ್ದರಾಮಯ್ಯ

ಸಿಂದಗಿ: ‘ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕೆಂಡ ಕಾರಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಂದಗಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಒಬ್ಬ ಬೇಜವಾಬ್ದಾರಿ, ಅಪ್ರಬುದ್ಧ ರಾಜಕಾರಣಿ. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಹುಚ್ಚನ ತರಹ ಮಾತನಾಡುತ್ತಿದ್ದಾರೆ. ಮೊದಲು ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ನಳೀನ್ ಕಟೀಲ್ ನೀಡಿರುವ ಹೇಳಿಕೆ ಖಂಡನೀಯ. […]

“ನಳಿನ್ ಗೆ ಹುಚ್ಚು ಹಿಡಿದಿದೆ, ದಯವಿಟ್ಟು ನಿಮ್ಹಾನ್ಸ್ ಗೆ ಸೇರಿಸಿ”| ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ‌ ಮಾಜಿ ಸಿಎಂ ಸಿದ್ದರಾಮಯ್ಯ Read More »

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ|

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪ್ರಧಾನಿ ಅವಲೋಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿಯಿಂದ ನೈನಿತಾಲ್ ಮತ್ತು ಕೌಶಾನಿಯಿಂದ ಮುನ್ಸಿವರೆಗೆ ಹೋಗುವ ದಾರಿಯಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಕೌಶನಿಯ ವಿವಿಧ ಸ್ಥಳಗಳಲ್ಲಿ ಸುಮಾರು 500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಲ್ಮೋರಾ ಜಿಲ್ಲೆಯಲ್ಲಿ ಭಾರೀ

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ| Read More »

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಸುಬ್ರಹ್ಮಣ್ಯ: ಇಲ್ಲಿನ ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ವರ ಮೃತದೇಹ ಪತ್ತೆಯಾಗಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕುಮಾರಧಾರ ನದಿಯಿಂದ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದೆ. ಮೃತ ಮಹಿಳೆಯ ಪ್ರಾಯ ಸುಮಾರು 55 ವರ್ಷ ಆಗಬಹುದೆಂದು ಅಂದಾಜಿಸಲಾಗಿದೆ. ವಿಳಾಸ ಪತ್ತೆ ಇನ್ನಷ್ಟೇ ಆಗಬೇಕಿದ್ದು,ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ಎ. ಎಸ್.ಐ ಮೋಹನ್. ಕೆ,ಮಹಾಲಕ್ಷ್ಮಿ, ಮಹೇಶ್ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Read More »

45ರ ವರ, 25ರ ವಧು..! ವೈರಲ್ ಆಗ್ತಾ‌ ಇದೆ ಈ ಜೋಡಿಯ ಫೋಟೋ|

ತುಮಕೂರು: ಮದುವೆಯನ್ನ ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡುತ್ತಾನೆ ಅನ್ನೊ ಮಾತಿದೆ. ಋಣ ಸಂಬಂಧ ಇದ್ದರೆ ಎಲ್ಲೇ ಇದ್ದರೂ, ಹೇಗಾದರೂ ಒಂದಾಗುತ್ತಾರೆ ಅನ್ನೋ ಮಾತುಗಳು ಕೂಡ ಇವೆ. ಅದೇ ರೀತಿ ಈ ಮಾತುಗಳು ನಿಜವೆಂಬಂತೆ 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬುವರ ಜೊತೆ ಮೇಘನಾ ಎಂಬ ಯುವತಿ ಮದುವೆಯಾಗಿದ್ದಾಳೆ. 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ

45ರ ವರ, 25ರ ವಧು..! ವೈರಲ್ ಆಗ್ತಾ‌ ಇದೆ ಈ ಜೋಡಿಯ ಫೋಟೋ| Read More »

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ|

ನವದೆಹಲಿ: ಬುಧವಾರ ಸಂಜೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. AIMS ಆಸ್ಪತ್ರೆಯಲ್ಲಿ ಮನಮೋಹನ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದು, ಹೃದ್ರೋಗ ತಜ್ಞರ ತಂಡ, ನಿತೀಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಅವರ ವೈಯಕ್ತಿಕ ವೈದ್ಯಾಧಿಕಾರಿ, ಹಲವು ವರ್ಷಗಳಿಂದ ಮಾಜಿ ಪ್ರಧಾನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಐಎಎನ್‌ಎಸ್ ಜೊತೆ ಮಾತನಾಡಿದ ಏಮ್ಸ್ ಅಧಿಕಾರಿ, ಕಾಂಗ್ರೆಸ್ ನಾಯಕನ

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ| Read More »

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈಗಾಗಲೇ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿದೆ. ಕೃಪೆ ಡಿಡಿ ಚಂದನ :

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ Read More »

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ?

ಮುಂಬೈ : ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಎನ್‍ಬಿಸಿ ಪರ ವಕೀಲ ಎಎಸ್‍ಜಿ ಅನಿಲ್‌ ಸಿಂಗ್‌ ಮಹತ್ವದ ಅಂಶದೊಂದಿಗೆ ವಾದ ಆರಂಭಿಸಿದ್ದಾರೆ.ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಸೇವಿಸುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಹಾಗೂ ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ? Read More »

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ವಿಜಯದಶಮಿ ದಿನವಾದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ, ಸೋಮಶೇಖರ್ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು. ಚಾಮುಂಡೇಶ್ವರಿ

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ Read More »

ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಕ್ಯಾನ್ಸಲ್|

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಾದ್ಯಂತ ಇಂದು ಕೋಟಿಗೊಬ್ಬ3 ಚಿತ್ರ ರಿಲೀಸ್ ಆಗಬೇಕಿದ್ದು, ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಇವತ್ತಿನ ಎಲ್ಲಾ ಪ್ರದರ್ಶನ ರದ್ದುಗೊಂಡಿದೆ. ಆದರೆ ನಾಳೆ ಎಂದಿನಂತೆ ಚಿತ್ರದ ಪ್ರದರ್ಶನ ಇರಲಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಅಭಿಮಾನಿಗಳು ತಾಳ್ಮೆಯಿಂದ ಇರಿ. ಚಿತ್ರ ಬಿಡುಗಡೆಯಾಗಲು ಕೊಂಚ ವಿಳಂಬವಾಗಿದೆ. ಮುಂದಿನ ಸಮಯವನ್ನ ನಾನೇ ಖುದ್ದು ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಯಿಂದಲೇ ಕಿಚ್ಚನ ಅಭಿಮಾನಿಗಳು

ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಕ್ಯಾನ್ಸಲ್| Read More »

ನದಿಗೆ ಉರುಳಿದ ಬಸ್ಸ್| 32 ಮಂದಿ ದುರ್ಮರಣ| ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ

ನೇಪಾಳ: ಕಣಿವೆ ದೇಶದಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಮುಗು ಜಿಲ್ಲೆಯ ಗಮಗಧಿಗೆ ತೆರಳುತ್ತಿದ್ದ ಬಸ್‌ ಸ್ಕಿಡ್‌ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ನದಿಗೆ ಉರುಳಿಬಿದ್ದಿದೆ. ಘಟನೆಯಿಂದಾಗಿ 29ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ವಿಜಯದಶಮಿ ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಬಸ್ಸಿನ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಬಸ್ಸಿನಲ್ಲಿ ಒಟ್ಟು ಎಷ್ಟು

ನದಿಗೆ ಉರುಳಿದ ಬಸ್ಸ್| 32 ಮಂದಿ ದುರ್ಮರಣ| ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ Read More »