Uncategorized

ನ.30ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಬುಧವಾರದವರೆಗೂ ಮಳೆ ಜೋರಾಗಿರಲಿದೆ. ಬೆಂಗಳೂರು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಮತ್ತು ಕರಾವಳಿ ಪ್ರದೇಶದ ಹಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ನವೆಂಬರ್ 30ರವರೆಗೂ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಆಂಧ್ರಪ್ರದೇಶದಲ್ಲೂ ವಿಪರೀತ ಮಳೆಯಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಅಬ್ಬರಿಸಲಿದೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಿದೆ ಮತ್ತು ತಮಿಳುನಾಡು ಕರಾವಳಿ […]

ನ.30ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ Read More »

ಹೊಟ್ಟೆನೋವು ಎಂದ ಮಗಳನ್ನು ಆಸ್ಪತ್ರೆಗೆ ಕೊಂಡೊಯ್ದರು| ಆದರೆ ಆಸ್ಪತ್ರೆಯಲ್ಲಿ ಆಗಿದ್ದೇ ಬೇರೆ…! ಪೋಷಕರಿಗೆ ಕಾದಿತ್ತು ಬಿಗ್ ಶಾಕ್|

ಕೊಪ್ಪಳ: ಹೊಟ್ಟೆನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ಗರ್ಬಿಣಿಯಾಗಿರುವುದನ್ನು ತಿಳಿಸಿದ್ದಾರೆ. 17 ವರ್ಷದ ಅಪ್ರಾಪ್ತೆಗೆ ಹೆರಿಗೆಯಾಗಿದ್ದು ಜನಿಸಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರಟಗಿಯಲ್ಲಿ 17 ವರ್ಷದ ಬಾಲಕಿಗೆ ನವೆಂಬರ್ 23ರಂದು ತೀವ್ರತರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪೋಷಕರು ಆಕೆಯನ್ನು ಕಾರಟಗಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಪುತ್ರಿಯನ್ನು ವಿಚಾರಿಸಿದಾಗ ಆಕೆ ಯಾವುದೇ

ಹೊಟ್ಟೆನೋವು ಎಂದ ಮಗಳನ್ನು ಆಸ್ಪತ್ರೆಗೆ ಕೊಂಡೊಯ್ದರು| ಆದರೆ ಆಸ್ಪತ್ರೆಯಲ್ಲಿ ಆಗಿದ್ದೇ ಬೇರೆ…! ಪೋಷಕರಿಗೆ ಕಾದಿತ್ತು ಬಿಗ್ ಶಾಕ್| Read More »

ರೂಪಾಂತರಿ ವೈರಸ್ ಹಿನ್ನಲೆ| ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಕ್ರಮಕ್ಕೆ ಸಿಎಂ ಸೂಚನೆ|

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಹೊಸ ರೂಪಾಂತರಿ ವೈರಸ್ ಭೀತಿ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ 24 ಗಂಟೆಗಳ ಬಿಗಿ ಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ತುರ್ತು ಸಭೆ ನಡೆಸಿದ ಸಿಎಂ, ಕಳೆದ ಒಂದು ವಾರದಲ್ಲಿನ ಕೋವಿಡ್ ಪಾಸಿಟಿವಿಟಿ ರೇಟ್ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಜ್ಯದಲ್ಲಿ ಕೋವಿಡ್ ಟೆಸ್ಟ್, ನಿಯಂತ್ರಣದ ಬಗ್ಗೆ ವಿವರ ಪಡೆದ ಸಿಎಂ

ರೂಪಾಂತರಿ ವೈರಸ್ ಹಿನ್ನಲೆ| ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಕ್ರಮಕ್ಕೆ ಸಿಎಂ ಸೂಚನೆ| Read More »

ಓಮಿಕ್ರಾನ್ ವೈರಸ್ ಹಿನ್ನಲೆ| ದ.ಆಫ್ರಿಕಾದಲ್ಲಿ ನಡೆಯಬೇಕಿದ್ದ ಮಹಿಳಾ ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯ ರದ್ದು|

ಸ್ಪೋರ್ಟ್ಸ್ ಡೆಸ್ಕ್: ಆಫ್ರಿಕನ್ ಪ್ರದೇಶದಲ್ಲಿ ಹೊಸ COVID-19 ರೂಪಾಂತರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ಹರಾರೆಯಲ್ಲಿ ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ICC ಶನಿವಾರ ರದ್ದುಗೊಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ಬಳಿಕ ಪ್ರಪಂಚದಾದ್ಯಂತ ಉಂಟಾಗಿರುವ ಭಯವನ್ನು ಆಫ್ರಿಕನ್ ದೇಶಗಳಿಂದ ಬರುವವರ ಪ್ರಯಾಣ ನಿರ್ಬಂಧಗಳನ್ನು ಅನೇಕ ದೇಶದಲ್ಲಿ ಹೇರಲಾಗಿದೆ. ಹೀಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಅಂತ ಐಸಿಸಿ ಹೇಳಿದೆ. ಒಂಬತ್ತು-ತಂಡಗಳ ಪಂದ್ಯಾವಳಿಯ ಪ್ರಾಥಮಿಕ ಲೀಗ್ ಹಂತದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಓಮಿಕ್ರಾನ್ ವೈರಸ್ ಹಿನ್ನಲೆ| ದ.ಆಫ್ರಿಕಾದಲ್ಲಿ ನಡೆಯಬೇಕಿದ್ದ ಮಹಿಳಾ ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯ ರದ್ದು| Read More »

ಬೆಂಗಳೂರು: ದ.ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೊನಾ ‌ಸೋಂಕು| ಹೆಚ್ಚಿದ ಆತಂಕ

ದೇವನಹಳ್ಳಿ : ಸೌತ್​ ಆಫ್ರಿಕಾದಲ್ಲಿ ಒಮಿಕ್ರೋನ್ ಕೋವಿಡ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದ್ದು, ಇದೀಗ ಅಲ್ಲಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನ.01 ರಿಂದ ಇವತ್ತಿನವರೆಗೆ ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಸುಮಾರು 94 ಪ್ರಯಾಣಿಕರು ಆಗಮಿಸಿದ್ದು, ಆ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕು ಕಂಡು ಬಂದ ಪ್ರಯಾಣಿಕರನ್ನು ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಒಬ್ಬರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮತ್ತೊಬ್ಬರನ್ನು ಖಾಸಗಿ ಹೋಟೆಲ್​​​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು: ದ.ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೊನಾ ‌ಸೋಂಕು| ಹೆಚ್ಚಿದ ಆತಂಕ Read More »

‘ಶಬರಿಮಲೆ ಯಾತ್ರೆ ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ| ಆರ್‌ಟಿಪಿಸಿಆರ್ ಪರೀಕ್ಷೆ ಅನಿವಾರ್ಯವಲ್ಲ

ತಿರುವನಂತಪುರಂ: ಶಬರಿಮಲೆ ಯಾತ್ರೆ ಮಾಡುವ ಮಕ್ಕಳಿಗೆ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿ ಕಡ್ಡಾಯವಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಹೊಸ ಆದೇಶ ಹೊರಡಿಸಿರುವ ಕೇರಳ ಸರ್ಕಾರ, “ಮಕ್ಕಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಆನಿವಾರ್ಯವಿಲ್ಲ. ಪೋಷಕರು ಮಾಸ್ಕ್‌ ಸೇರಿದಂತೆ ಸ್ಯಾನಿಟೈಸರ್‌‌ಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ” ಎಂದು ಹೇಳಿದೆ. “ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳು 72 ಗಂಟೆಗಳ ಒಳಗೆ ಎರಡು ಡೋಸ್‌ ವ್ಯಾಕ್ಸಿನೇಷನ್‌‌ ಪಡೆದಿರುವ ಪ್ರಮಾಣಪತ್ರ ಅಥವಾ ಆರ್‌ಟಿಪಿಸಿಆರ್‌ ನೆಗೆಟಿವ್‌‌‌ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ” ಎಂದು ತಿಳಿಸಿದೆ.

‘ಶಬರಿಮಲೆ ಯಾತ್ರೆ ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ| ಆರ್‌ಟಿಪಿಸಿಆರ್ ಪರೀಕ್ಷೆ ಅನಿವಾರ್ಯವಲ್ಲ Read More »

ಕಾರ್ಕಳ: ಬಟ್ಟೆ ಒಣಗಿಸಲು ಹೋದ ಮಹಿಳೆ ಮಹಡಿಯಿಂದ ಬಿದ್ದು ಸಾವು

ಕಾರ್ಕಳ(: ಬಟ್ಟೆ ಒಣಗಿಸಲು ಹೋಗಿ 5 ನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ. ಶ್ರೀಮತಿ ಕಮಲ ಪ್ರಿಯಾ ಬಿ (48) ಮೃತಪಟ್ಟವರು. ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜಿನ ವಸತಿ ಗೃಹದ ಎ ಬ್ಲಾಕ್ ನ 5 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ನ.24 ರ ಸಂಜೆ ತಾವು ವಾಸ್ತವ್ಯವಿದ್ದ ಮನೆಯ ಬಾಲ್ಕನಿಯಲ್ಲಿ ಸ್ಟೂಲ್ ನ ಮೇಲೆ ನಿಂತು ಬಟ್ಟೆ ಒಣಗಿಸುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ

ಕಾರ್ಕಳ: ಬಟ್ಟೆ ಒಣಗಿಸಲು ಹೋದ ಮಹಿಳೆ ಮಹಡಿಯಿಂದ ಬಿದ್ದು ಸಾವು Read More »

ಉಳ್ಳಾಲ: ನೇತ್ರಾವತಿ ನದಿಯಲ್ಲಿ ಮಹಿಳೆಯ ಶವ ಪತ್ತೆ| ಕೊಳೆತ ಸ್ಥಿತಿಯಲ್ಲಿನ ಕಳೆಬರ ಬೆಳ್ಳಾರೆ ಮಹಿಳೆಯದ್ದೇ…!?

ಮಂಗಳೂರು: ಉಳ್ಳಾಲ ಹೊಯ್ಗೆ ನೇತ್ರಾವತಿ ನದಿ ತೀರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆ ಮಹಿಳೆಯ ಶವ ಸಂಪೂರ್ಣ ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಂಪೂರ್ಣ ಕೊಳೆತು ಹೋಗಿದೆ. ಹೊಯ್ಗೆ ಕಿಂಗ್ ಸ್ಟಾರ್ ಸೇವಾ ಸಮಿತಿಯ ಪ್ರೇಮ್ ಪ್ರಕಾಶ್ ಡಿಸೋಜ, ರಾಕೇಶ್ ಪ್ರಶಾಂತ್ ಡಿಸೋಜ, ಅನಿಲ್ ಮೊಂತೇರೊ ಮತ್ತು ನಿಶಾನ್ ಜಾಯ್ ಲೋಬೋ, ಅವರು ಶವವನ್ನ ನದಿಯಿಂದ ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಉಳ್ಳಾಲ: ನೇತ್ರಾವತಿ ನದಿಯಲ್ಲಿ ಮಹಿಳೆಯ ಶವ ಪತ್ತೆ| ಕೊಳೆತ ಸ್ಥಿತಿಯಲ್ಲಿನ ಕಳೆಬರ ಬೆಳ್ಳಾರೆ ಮಹಿಳೆಯದ್ದೇ…!? Read More »

ಮಂಗಳೂರು: ನಾಗಬನ ಹಾನಿ ಪ್ರಕರಣ| 8 ಆರೋಪಿಗಳು ಅಂದರ್| ಕೋಮುದ್ವೇಷಕ್ಕೆ ಕಾರಣವಾಗಿದ್ದ ಘಟನೆ|

ಮಂಗಳೂರು: ಕೋಮು ವೈಷಮ್ಯಕ್ಕೆ ಕಾರಣವಾಗಿದ್ದ ಮಂಗಳೂರು ನಾಗಬನದ ಮೂರ್ತಿಗಳನ್ನು ಧ್ವಂಸಗೊಳಿಸಿದ್ದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮಂಗಳೂರು ನಗರದ ಕೂಳೂರು, ಕೋಡಿಕಲ್ ನಾಗನಕಲ್ಲಿಗೆ ಹಾನಿ ಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದರು.ಬಂಧಿತರನ್ನು ಕೂಳೂರಿನ ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ (27), ಕಾವೂರು ಶಾಂತಿನಗರ ನಿವಾಸಿ ನಿಕಿಲೇಶ (22), ಸುರತ್ಕಲ್ ನಿವಾಸಿ ಜಯಂತ್ ಕುಮಾರ್ (30), ಬಂಟ್ವಾಳ ಪಡೂರು ಗ್ರಾಮ ನಿವಾಸಿ ಪ್ರತೀಕ್ (24), ಕೂಳೂರು ಪಡುಕೋಡಿ ಗ್ರಾಮ

ಮಂಗಳೂರು: ನಾಗಬನ ಹಾನಿ ಪ್ರಕರಣ| 8 ಆರೋಪಿಗಳು ಅಂದರ್| ಕೋಮುದ್ವೇಷಕ್ಕೆ ಕಾರಣವಾಗಿದ್ದ ಘಟನೆ| Read More »

ಮಂಗಳೂರು-ಚೆನ್ನೈ ರೈಲು ಗುದ್ದಿ ಹೆಣ್ಣಾನೆ ಹಾಗೂ‌ ಎರಡು ಮರಿಗಳು ಸಾವು|

ಚೆನ್ನೈ: 25 ವರ್ಷದ ಹೆಣ್ಣಾನೆ ಹಾಗೂ ಅದರ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು-ಚೆನ್ನೈ ಎಕ್ಸಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮಡುಕ್ಕುರೈ ಬಳಿ ರಾತ್ರಿ 9 ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಭವಿಸಿದಾಗ ರೈಲು ಅತಿ ವೇಗವಾಗಿ ಚಲಿಸುತ್ತಿತ್ತು, ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಕಾರ್ಯಾಚರಣೆ ತಂಡ ತೆರಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳೂರು-ಚೆನ್ನೈ ಎಕ್ಸಪ್ರೆಸ್‌ ರೈಲು ಕೇರಳದ

ಮಂಗಳೂರು-ಚೆನ್ನೈ ರೈಲು ಗುದ್ದಿ ಹೆಣ್ಣಾನೆ ಹಾಗೂ‌ ಎರಡು ಮರಿಗಳು ಸಾವು| Read More »