Uncategorized

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

ಸಮಗ್ರ ನ್ಯೂಸ್: ಮಂಗಳೂರು ನಗರದ ಪಡೀಲ್ ಅಳಪೆ ಪಡ್ಪು ರೈಲ್ವೇ ಬ್ರಿಡ್ಜ್ ಸಮೀಪ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಜು. 30 ರಂದು ನಡೆದಿದೆ. ಅಳಪೆ ಪಡ್ಪುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು. ಜು.30 ರಂದು ಸಂಜೆ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ […]

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು Read More »

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ವಿಸ್ತರಣೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಪ್ರೌಢಶಾಲೆಗಳಿಗೆ ಜು.27ರಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ವಿಸ್ತರಣೆ Read More »

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಉಡುಪಿಯಲ್ಲಿ ಮೂವರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ಡಂಪರ್ ಟ್ರಕ್ ಎರಡು ಕಿ.ಮೀ ವರೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಎರಡು ವಾಹನಗಳು ಡಿಕ್ಕಿ ಹೊಡೆದು ಕಾರು ಟ್ರಕ್ ಅಡಿಯಲ್ಲಿ ಸಿಲುಕಿಕೊಂಡ ನಂತರ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ವಾಹನವನ್ನು ಹಿಂಬಾಲಿಸಿ ಅಂತಿಮವಾಗಿ ಚಾಲಕನನ್ನು ನಿಲ್ಲಿಸಿದ್ದಾರೆ. ನಂತರ ಟ್ರಕ್ ಚಾಲಕನನ್ನು ಬಂಧಿಸಲಾಯಿತು.

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್ Read More »

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!!

ಸಮಗ್ರ ನ್ಯೂಸ್: ಹೊಳೆಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕದಿಂದ ವರದಿಯಾಗಿದೆ. ನೀರು ಪಾಲಾಗಿರುವ ವ್ಯಕ್ತಿಯನ್ನು ಕೇರಳ ಮೂಲದವರು ಎಂದು ಹೇಳಲಾಗಿದ್ದು ತೋಟದಲ್ಲಿ ‌ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!! Read More »

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌

ಸಮಗ್ರ ನ್ಯೂಸ್: ವಾಟ್ಸಾಪ್‌ ಇದೀಗ ವಿಂಡೋಸ್‌ನಲ್ಲಿ ಟೆಕ್ಸ್ಟ್‌ ಗಾತ್ರವನ್ನು ಅಡ್ಜಸ್ಟ್‌ ಮಾಡುವ ಹೊಸ ಫೀಚರ್‌ ಲಾಂಚ್‌ ಮಾಡಲು ಹೊರಟಿದೆ. ಈ ಹೊಸ ಫೀಚರ್ಸ್ ಬಳಕೆದಾರರಿಗೆ ತಮ್ಮ ವಿಂಡೋಸ್ ಡೆಸ್ಕ್‌ಟಾಪ್‌ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾದ ಟೆಕ್ಸ್ಟ್‌ ಗಾತ್ರವನ್ನು ಕಸ್ಟಮೈಸ್‌ ಮಾಡಲು ಅನುಮತಿಸುವ ಮೂಲಕ ಯೂಸರ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಲಿದೆ. ಸೆಟ್ಟಿಂಗ್‌ನ ಪರ್ಸನಲೈಜೇಷನ್‌ ಮೆನು ಅಡಿಯಲ್ಲಿ ಹೊಸ ಆಯ್ಕೆ ಲಭ್ಯವಿದೆ. ಈ ಹೊಸ ಫೀಚರ್ ನೊಂದಿಗೆ , ಟೆಕ್ಸ್ ಗಾತ್ರವನ್ನು ಸರಿ ಹೊಂದಿಸಲು ಕೆಲವು ಮಹತ್ವದ ಶಾರ್ಟ್ ಕಟ್ ಗಳನ್ನು

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌ Read More »

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಶುಕ್ರವಾರದ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ ಎಂದು ತಿಳಿಸಿದೆ. ಜೂನ್.16ರ ಇಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಕೆಲವು ಭಾಗಗಳಲ್ಲಿಯೂ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ Read More »

ಪ್ರತಿದ್ವನಿ ತಂಡದಿಂದ ಕೆಮ್ಮಣ್ಣುಗುಂಡಿಯಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಚಾರಣ| ‘ಪರಿಸರ ಸಂವೇಧನೆ ಜೀವನದ ಭಾಗವಾಗಲಿ’: ಪ್ರೊ. ಜಡೇಗೌಡ

ಸಮಗ್ರ ನ್ಯೂಸ್: ಒಂದು ಗಿಡ ನೆಡುವುದರಿಂದ ನಾವು ಕೇವಲ ಆಮ್ಲಜನಕ ಸಿಗುತ್ತದೆ ಎಂದು ಮಾತ್ರ ಭಾವಿಸಿದ್ದೇವೆ. ಆದರೆ ಅದು ಹವಾಮಾನ ವೈಪರೀತ್ಯ ತಡೆ, ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರಿನ ನಿರ್ವಹಣೆ, ಮಣ್ಣಿನ ಸವಕಳಿ ತಡೆಗಟ್ಟುವಿಕೆ ಸೇರಿದಂತೆ ಹಲವು ಲಾಭಗಳನ್ನು ಮಾಡಿ ಕೊಡುತ್ತದೆ” ಎಂದು ಸಸ್ಯ ಶಾಸ್ತ್ರಜ್ಞ, ಪೊನ್ನಂಪೇಟೆಯ ಅರಣ್ಯ ಕಾಲೇಜು ಪ್ರಾದ್ಯಾಪಕರಾದ ಜಡೇಗೌಡರು ಹೇಳಿದರು. ಇಲ್ಲಿನ ಕೆಮ್ಮಣ್ಣುಗುಂಡಿಯಲ್ಲಿ ಪ್ರತಿಧ್ವನಿ ತಂಡ ಹಮ್ಮಿಕೊಂಡಿದ್ದ ಚಾರಣ ಮತ್ತು ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಕಾಡಿನ ಆರೋಗ್ಯವನ್ನು ನಮ್ಮ ಸುತ್ತಮುತ್ತಲಿನ

ಪ್ರತಿದ್ವನಿ ತಂಡದಿಂದ ಕೆಮ್ಮಣ್ಣುಗುಂಡಿಯಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಚಾರಣ| ‘ಪರಿಸರ ಸಂವೇಧನೆ ಜೀವನದ ಭಾಗವಾಗಲಿ’: ಪ್ರೊ. ಜಡೇಗೌಡ Read More »

ಬೆಳ್ತಂಗಡಿ: ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿ

ಸಮಗ್ರನ್ಯೂಸ್: ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಸವಣಾಲು ರಸ್ತೆಯ ಪುಲ್ತಡ್ಕ ಎಂಬಲ್ಲಿ ಜೂ.10 ರಂದು ನಡೆದಿದೆ. ಇಂದು ಬೆಳಗ್ಗಿನಿಂದ ತಾಲೂಕಿನ ಹಲವೆಡೆಗಳಲ್ಲಿ ‌ಸುರಿದ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಸವಣಾಲು ಹೋಗುವ ರಸ್ತೆಯ ಲಾಯಿಲ ಗ್ರಾಮದ ಪುಲ್ತಡ್ಕದಲ್ಲಿ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಕಂಬ ಮುರಿದು ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ. ಈ ಬಗ್ಗೆ ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕಿಟ್ಟಣ

ಬೆಳ್ತಂಗಡಿ: ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿ Read More »

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಸಮಗ್ರ ನ್ಯೂಸ್: ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಬಾಲಭವನ ಸಮಿತಿ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ ದ.ಕ. ಸ್ವರ ಮಾಧುರ್ಯ ಬಳಗ ಪುತ್ತೂರು ದ.ಕ. ವತಿಯಿಂದ ಸುಳ್ಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರ ನಡೆದ ಅರಳು ಮಲ್ಲಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಉತ್ತಮವಾದ

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ Read More »

ಮೇ.29ರಿಂದ ರಾಜ್ಯದಲ್ಲಿ ಶಾಲಾರಂಭ| ಸಿಹಿಯೊಂದಿಗೆ ಬರಮಾಡಿಕೊಳ್ಳಲು ರೆಡಿಯಾದ ಶಿಕ್ಷಕರು

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇದೇ ಮೇ 29 ರಿಂದ ಆರಂಭವಾಗುತ್ತಿದ್ದು, ಶಾಲೆಯ ಕೋಣೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ಮೊದಲ ದಿನವೇ ಎಲ್ಲ ಶೀರ್ಷಿಕೆಗಳ ಪಠ್ಯಪುಸ್ತಕ ಮತ್ತು ಒಂದು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಈಗಾಗಲೇ ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಅವುಗಳನ್ನು ಕಳುಹಿಸಲಾಗುತ್ತಿದೆ. ಕೆಲವೆಡೆ ಶಾಲೆ ಆರಂಭದ ಮೊದಲ ದಿನ ತಳಿರು ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಿ ಮಕ್ಕಳಿಗೆ ಅದ್ದೂರಿ ಸ್ವಾಗತ ನೀಡಲು ತಯಾರಿ ನಡೆದಿದೆ. ಇನ್ನು ಶಾಲೆ ಆರಂಭೋತ್ಸವದ

ಮೇ.29ರಿಂದ ರಾಜ್ಯದಲ್ಲಿ ಶಾಲಾರಂಭ| ಸಿಹಿಯೊಂದಿಗೆ ಬರಮಾಡಿಕೊಳ್ಳಲು ರೆಡಿಯಾದ ಶಿಕ್ಷಕರು Read More »