Uncategorized

ಐಟಿ ದಾಳಿ: ಬಿಜೆಪಿ ಮಾಜಿ ಶಾಸಕರ ಮನೆಗೆಯಲ್ಲಿ ಮೊಸಳೆ ಪತ್ತೆ

ಸಮಗ್ರ ನ್ಯೂಸ್ : ಆದಾಯ ತೆರಿಗೆ ದಾಳಿಯ ಬಗ್ಗೆ ನಾವು ಪ್ರತಿ ದಿನ ದೇಶಾದ್ಯಂತ ಕೇಳುತ್ತಿರುತ್ತೇವೆ. ಅನೇಕ ಬಾರಿ ಆ ಆದಾಯ ತೆರಿಗೆ ದಾಳಿಗಳಿಂದ ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದೀಗ ಮಧ್ಯಪ್ರದೇಶದ ಬಂಡಾದ ಬಿಜೆಪಿ ಮುಖಂಡ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. 150 ಕೋಟಿ ರೂ.ಗಳ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಣ ಸೇರಿ ಹಲವು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೊಸಳೆಯನ್ನು ಕಂಡು […]

ಐಟಿ ದಾಳಿ: ಬಿಜೆಪಿ ಮಾಜಿ ಶಾಸಕರ ಮನೆಗೆಯಲ್ಲಿ ಮೊಸಳೆ ಪತ್ತೆ Read More »

ಪುತ್ತೂರು: ಬೈಕ್‌ನಿಂದ ಬಿದ್ದು ಗಾಯಗೊಂಡ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ಬೈಕ್‌ನಿಂದ ರಸ್ತೆ ಬಿದ್ದು ಗಾಯಗೊಂಡ ಅರ್ಚಕರೊಬ್ಬರ ನೆರವಿಗೆ ಧಾವಿಸಿದ ಸಮೀಪದ ಮಸೀದಿಯಲ್ಲಿದ್ದವರು, ಅವರನ್ನು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ, ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಕಾಲಿಗೆ ಗಾಯವಾಗಿ, ರಕ್ತಸ್ರಾವ ಆಗುತ್ತಿದ್ದ ಅವರನ್ನು

ಪುತ್ತೂರು: ಬೈಕ್‌ನಿಂದ ಬಿದ್ದು ಗಾಯಗೊಂಡ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ Read More »

ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ

ಸಮಗ್ರ ನ್ಯೂಸ್ : ಚಿರತೆ ಎಂದರೆ ಎಲ್ಲರೂ ಎದ್ದು ಬಿದ್ದು ಓಡೋರೆ ಹೆಚ್ಚು, ಇನ್ನು ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಂದರೆ ಜನ ಹಿಂದೆ ಹಿಂದೆ ಸಾಗುತ್ತಾ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೂ ಅಡ್ಡಿಪಡಿಸುತ್ತಾ ಕ್ವಾಟ್ಲಿ ನೀಡ್ತಾರೆ. ಆದರೆ ಇಲ್ಲೊಂದು ಕಡೆ ಯುವಕನೇ ಅರಣ್ಯ ಇಲಾಖೆಯವರಿಗೆ ಚಿರತೆ ಹಿಡಿದು ಕೊಟ್ಟ ಘಟನೆ ತುಮಕೂರಿನ ತಿಪಟೂರಿನಲ್ಲಿ ನಡೆದಿದೆ. ಊರಿಗೆ ಚಿರತೆ ನುಗ್ಗಿದ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಲೆಯೊಂದಿಗೆ ಚಿರತೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿ ಬಂದಿದ್ದಾರೆ.

ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ Read More »

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! FIRನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಸಮಗ್ರ ನ್ಯೂಸ್ : ಬೆಂಗಳೂರು ನಗರದ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಎಂಬ ವ್ಯಕ್ತಿ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.09 ರಂದು ನಡೆದಿತ್ತು. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.ಅತುಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮೃತ ಅತುಲ್ ಬರಹ ಇರೋ ಬೋರ್ಡ್ ಕತ್ತಿಗೆ ಹಾಕಿಕೊಂಡು ಜೊತೆಗೆ

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! FIRನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ Read More »

ಉಡುಪಿ: 9 ಮಂದಿ‌ ಬಾಂಗ್ಲಾ ಪ್ರಜೆಗಳು ಅರೆಸ್ಟ್

ಸಮಗ್ರ ನ್ಯೂಸ್: ವಿಜಯದಶಮಿ ಹಬ್ಬದ ದಿವನೇ ಉಡುಪಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉಡುಪಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಡುಪಿ ಪೊಲೀಸರು ಮಲ್ಪೆ ಬಳಿ 9 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. ನಕಲಿ ಆಧಾರ್ ಕಾರ್ಡ್, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್,

ಉಡುಪಿ: 9 ಮಂದಿ‌ ಬಾಂಗ್ಲಾ ಪ್ರಜೆಗಳು ಅರೆಸ್ಟ್ Read More »

ತಿರುಪತಿ ಲಡ್ಡು ವಿವಾದ/ ಪುರಿಯ ಜಗನ್ನಾಥ ದೇವಸ್ಥಾನದಲ್ಲೂ ತುಪ್ಪದ ಪರೀಕ್ಷೆಗೆ ಸಿದ್ಧತೆ

ಸಮಗ್ರ ನ್ಯೂಸ್‌: ತಿರುಪತಿ ಲಡ್ಡು ಪ್ರಸಾದದ ವಿವಾದದ ಬೆನ್ನಲ್ಲೇ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಪ್ರಸಾದಕ್ಕೆ ಬಳಸಲಾಗುವ ತುಪ್ಪದ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ನೈವೇದ್ಯ ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಗನ್ನಾಥ ದೇಗುಲದಲ್ಲಿ ಕಲಬೆರಕೆಯಂತಹ ಯಾವುದೇ ಆರೋಪಗಳಿಲ್ಲ. ಅದಾಗ್ಯೂ ಆಡಳಿತ ಮಂಡಳಿಯು ‘ಕೋತ ಬೋಗ’ (ದೇವತೆಗಳಿಗೆ ಪ್ರಸಾದ) ಮತ್ತು ‘ಬಾರಾಡಿ ಭೋಗ’ (ಆದೇಶದ ಮೇರೆಗೆ ಪ್ರಸಾದ) ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು

ತಿರುಪತಿ ಲಡ್ಡು ವಿವಾದ/ ಪುರಿಯ ಜಗನ್ನಾಥ ದೇವಸ್ಥಾನದಲ್ಲೂ ತುಪ್ಪದ ಪರೀಕ್ಷೆಗೆ ಸಿದ್ಧತೆ Read More »

ಆ.29ರಿಂದ ಸೆ.2ರವರೆಗೆ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಸೇವೆ ಸ್ಥಗಿತ

ಸಮಗ್ರ ನ್ಯೂಸ್: ಆ.29ರ ರಾತ್ರಿ ಎಂಟರಿಂದ ಸೆ.2ರ ಬೆಳಿಗ್ಗೆ ಆರು ಗಂಟೆಯವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ ತಾಂತ್ರಿಕ ನಿರ್ವಹಣೆ ನಡೆಯಲಿದ್ದು,ಈ ಅವಧಿಯಲ್ಲಿ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಆ.30ರಂದು ನಿಗದಿಯಾಗಿದ್ದ ಎಲ್ಲ ಅಪಾಯಂಟ್‌ಮೆಂಟ್‌ಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿಗದಿತ ಅಪಾಯಿಂಟ್ಮೆಂಟ್ ಗಳನ್ನು ಹೊಂದಿದ್ದ ಅರ್ಜಿದಾರರಿಗೆ ಹೊಸ ದಿನಾಂಕಗಳ ಕುರಿತು ಎಸ್‌ಎಂಎಸ್ ಸಂದೇಶಗಳನ್ನು ರವಾನಿಸಲಾಗುವುದು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಆ.29ರಿಂದ ಸೆ.2ರವರೆಗೆ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಸೇವೆ ಸ್ಥಗಿತ Read More »

ಉಡುಪಿ: ಕಾರಿನಲ್ಲಿ ಎಸಿ ಹಾಕಿ ಮಲಗಿದ್ದಾತ ಉಸಿರುಗಟ್ಟಿ ಸಾವು

ಸಮಗ್ರ ನ್ಯೂಸ್: ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿ ಬೆಳಗಾಗುವಷ್ಟರಲ್ಲೇ ಸಾವನ್ನಪ್ಪಿದ ಘಟನೆ ಆ.16 ರಂದು ನಡೆದಿದೆ . ಮೃತ ಗುರುರಾಜ್ (32) ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದಾರೆ. ಗುರುರಾಜ್‌ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ, ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ

ಉಡುಪಿ: ಕಾರಿನಲ್ಲಿ ಎಸಿ ಹಾಕಿ ಮಲಗಿದ್ದಾತ ಉಸಿರುಗಟ್ಟಿ ಸಾವು Read More »

ಸುಬ್ರಹ್ಮಣ್ಯ: ಸಂಪೂರ್ಣ ಹದೆಗೆಟ್ಟ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಸಮಗ್ರ ನ್ಯೂಸ್: ಸಂಪೂರ್ಣ ಹದೆಗೆಟ್ಟ ಕೈಕಂಬ – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಬಾಳೆಗಿಡ, ಕೆಸು ನೆಟ್ಟು ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಕೈಕಂಬದಲ್ಲಿ‌ ಸುಬ್ರಹ್ಮಣ್ಯದವರೆಗೆ ಸುಮಾರು ಮೂರು ಕಿ.ಮೀ ಉದ್ದದ ಹೆದ್ದಾರಿ ಸಂಪೂರ್ಣ ‌ಹದೆಗೆಟ್ಟಿದ್ದು, ವಾಹನ ಓಡಾಟ ದುಸ್ತರವಾಗಿದೆ. ಹಲವು ವಾಹನಗಳು ಅಪಘಾತಕ್ಕೆ ಒಳಗಾಗಿದ್ದು, ಇದರಿಂದ ರೋಸಿಹೋದ ಸ್ಥಳೀಯ ರಿಕ್ಷಾ ಚಾಲಕರು ಇಂದು ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ: ಸಂಪೂರ್ಣ ಹದೆಗೆಟ್ಟ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ Read More »

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ!!

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಏನು?: ವಿದ್ಯಾರ್ಥಿನಿ ವಿಸ್ಮಯಳನ್ನು ಜೂ.30ರಂದು ಉಳ್ಳಾಲದಿಂದ ಕಾಸರಗೋಡು ವಿದ್ಯಾನಗರ ನಿವಾಸಿ ಮುಹಮ್ಮದ್‌ ಅಶ್ಫಕ್ ಅಪಹರಿಸಿದ್ದ ಬಗ್ಗೆ ವಿದ್ಯಾರ್ಥಿನಿಯ ತಂದೆ ವಿನೋದ್‌ ಅವರು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ‌ಮಗಳನ್ನು ಮತಾಂತರಗೊಳಿಸುವುದಕ್ಕಾಗಿ ಅಶ್ಪಕ್‌ ಮತ್ತು ಆತನ ತಂಡ ಅಪಹರಣ ನಡೆಸಿದೆ ಎಂದು ದೂರಿನಲ್ಲಿ ಹೇಳಿದ್ದರು. ಅಶ್ಫಕ್ ಈಗಾಗಲೇ ಒಂದು ವಿವಾಹವಾಗಿದ್ದು ಈತನ ಮೇಲೆ

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ!! Read More »