ರಾಜ್ಯ

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ನಡೆದ ಸಂಬಂಧಿಕರ ನಡುವಿನ ಘರ್ಷಣೆಯು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ಗ್ರಾಮದ ಮಲ್ಲೇಶ್ ಹಾಗೂ ಸ್ವಾಮಿಗೌಡ ಎಂಬವರ ನಡುವೆ ಜಮೀನು ವಿಚಾರವಾಗಿ ಹಿಂದೆಯೂ ಗಲಾಟೆ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಮತ್ತೆ ಜಮೀನಿನ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹರಿತವಾದ ಆಯುಧದಿಂದ ಇರಿದ ಪರಿಣಾಮ ಮಲ್ಲೇಶ ( 60 ), ಮಲ್ಲೇಶನ ಚಿಕ್ಕಪ್ಪನ ಮಗ ಮಂಜೇಶ ( 35 ), ಮಲ್ಲೇಶನ ಅಳಿಯ ರವಿ ( 35 ) […]

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ Read More »

ಬಡ ಕೂಲಿ ಕಾರ್ಮಿಕರಿಗೆ ಸದ್ಯದಲ್ಲೇ ಇನ್ನೊಂದು ಪ್ಯಾಕೇಜ್: ಸಿಎಂ ಬಿಎಸ್ ವೈ

ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜ್ಯದ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಇನ್ನೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಕೋವಿಡ್ ವಾರ್ ರೂಮ್ ಗಳಿಗೆ ನಿನ್ನೆ ಭೇಟಿ ನೀಡಿದ ಸಿಎಂ ಪತ್ರಕರ್ತರನ್ನುದ್ದೇಶಿಸಿ ಮಾತನಾಡುವಾಗ, ರಾಜ್ಯದ ಜನತೆಯ ಕಷ್ಟ ನಮಗೂ ಅರ್ಥವಾಗುತ್ತದೆ ರಾಜ್ಯದ ಹಣಕಾಸಿನ ಇತಿಮಿತಿಯಲ್ಲಿ ಈ ಹಿಂದೆ ಆರ್ಥಿಕ ಪ್ಯಾಕೇಜ್ ಒಂದನ್ನು ಘೋಷಣೆ ಮಾಡಿದ್ದೆವು. ಇದೀಗ ಇನ್ನೊಂದು ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು

ಬಡ ಕೂಲಿ ಕಾರ್ಮಿಕರಿಗೆ ಸದ್ಯದಲ್ಲೇ ಇನ್ನೊಂದು ಪ್ಯಾಕೇಜ್: ಸಿಎಂ ಬಿಎಸ್ ವೈ Read More »

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಅಮಾನವೀಯ ಘಟನೆಗಳು |ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಮಂಗಮಾಯ…!

ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾಗೆ ತುತ್ತಾಗಿ ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತಿರುವ ಪ್ರಕರಣಗಳು ಆಗಾಗ ಕೇಳಿಬರುತ್ತಿವೆ. ಇದೀಗ ಕೊರೋನಾ ಕಾರಣದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಲಕ್ಷಾಂತರ ರೂ. ಬೆಲೆಬಾಳುವ ಮಾಂಗಲ್ಯ ಸರ ನಾಪತ್ತೆಯಾಗಿದೆ. ಕುಶಾಲನಗರ ತಾಲೂಕಿನ ರಸಲ್ ಪುರ ಗ್ರಾಮದ ಕಮಲ ಎಂಬ ಮಹಿಳೆ ಮೇ 1 ರಂದು ಕೊರೋನಾ ಸೋಂಕಿಗೆ ಒಳಗಾಗಿ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮರುದಿನ ಅವರಿಗೆ ಅನಾರೋಗ್ಯ ಉಲ್ಬಣಗೊಂಡ ಕಾರಣ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಆ ವೇಳೆ

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಅಮಾನವೀಯ ಘಟನೆಗಳು |ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಮಂಗಮಾಯ…! Read More »

ಶಾಕಿಂಗ್ ಸಮಾಚಾರ, ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್ ಗೆ 11 ಮಂದಿ ಬಲಿ. 446 ಮಂದಿಗೆ ಅಂಟಿದ ಸೋಂಕು

ಬೆಂಗಳೂರು: ಈವರೆಗೆ ರಾಜ್ಯದಲ್ಲಿ 446 ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ. 433 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ಮಂದಿ ಮನೆಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. 12 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಕೋವಿಡ್, ಬ್ಲ್ಯಾಕ್ ಫಂಗಸ್ ಸ್ಥಿತಿಗತಿ ಕುರಿತು ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಸೋಂಕು ನಿವಾರಣೆಗೆ 1 ಸಾವಿರ ಔಷಧಿ ವೈಲ್ ಗಳು ಕೇಂದ್ರದಿಂದ ಸಿಗಲಿದೆ ಎಂದು ತಿಳಿಸಿದರು. ರಾಜ್ಯದ ಆರೋಗ್ಯ

ಶಾಕಿಂಗ್ ಸಮಾಚಾರ, ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್ ಗೆ 11 ಮಂದಿ ಬಲಿ. 446 ಮಂದಿಗೆ ಅಂಟಿದ ಸೋಂಕು Read More »

ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…! ತನಿಖಾಧಿಕಾರಿಗಳ ಮುಂದೆ ರಮೇಶ್ ಹೇಳಿದ್ದೇನು….?

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ, ಯುವತಿ ಜೊತೆ ರಾಸಲೀಲೆ ಆಡುತ್ತಿದ್ದ ವಿಡಿಯೋ ಒಂದು ಮೂರು ತಿಂಗಳ ಹಿಂದೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಆ ಸಿಡಿ ಪ್ರಕರಣಕ್ಕೆ ಬಹುದೊಡ್ಡ ತಿರುವು ದೊರೆತಿದ್ದು, ಆ ವಿಡಿಯೋದಲ್ಲಿ ಯುವತಿ  ಜೊತೆ ಚಕ್ಕಂದವಾಡುತ್ತಿರುವುದು ನಾನೇ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊದಲಿಗೆ, ಅದು ನಾನಲ್ಲ. ಯಾರೋ ವೈರಿಗಳು ಯಾವುದೋ ವಿಡಿಯೋಗೆ ನನ್ನನ್ನು ಎಡಿಟ್ ಮಾಡಿದ್ದಾರೆ ಎಂದಿದ್ದ ಜಾರಕಿಹೊಳಿಯನ್ನು ತನಿಖಾಧಿಕಾರಿಗಳು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದರು.

ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…! ತನಿಖಾಧಿಕಾರಿಗಳ ಮುಂದೆ ರಮೇಶ್ ಹೇಳಿದ್ದೇನು….? Read More »

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್

ಕಾಸರಗೋಡು.ಮೇ.24: ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಯುವಕರು ಜಾಲಿಗಾಗಿ ಟಿಕ್ಕಾ ಪಾರ್ಟಿ ಮಾಡಿದರು, ಆದರೆ ಅಲ್ಲಿಗೆ ಖಾಕಿ ಪಡೆ ಲಗ್ಗೆ ಇಟ್ಟಾಗ ಯುವಕರು ಟಿಕ್ಕಾ ಬಿಟ್ಟು ಓಡಿದ್ದಾರೆ. ಇಂಥ ವಿಲಕ್ಷಣ ಪ್ರಕರಣವೊಂದು ಗಡಿಭಾಗ ಕಾಸರಗೋಡಿನಲ್ಲಿ ಮೇ.23 ರಂದು ನಡೆದಿದೆ. ಒಂದೆಡೆ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಯುವಕರು ಭಾನುವಾರದಂದು ವೀಕ್ ಎಂಡ್ ಪಾರ್ಟಿ ಮಾಡಲು ಪ್ಲಾನ್ ರೂಪಿಸಿ ಜಾಗ ಸೆಟ್ ಮಾಡಿದರು. ಅದರಂತೆ ನಿಗದಿತ ಸಮಯಕ್ಕೆ ಅಲ್ಲಿ ಸೇರಿ ಟಿಕ್ಕಾ ಮಾಡಲು ಶುರುವಿಟ್ಟರು. ಇನ್ನೇನು ಟಿಕ್ಕಾ ರೆಡಿ ಆಗಿ ಪಾರ್ಟಿಗೆ

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್ Read More »

ಶಾಲಾ ಮಕ್ಕಳಿಗೆ ಸಿಗಲಿದೆಯಾ ಸ್ಮಾರ್ಟ್ ಫೋನ್…!? ಶಿಕ್ಷಣ ಸಚಿವರು ಹೇಳಿದ್ದೇನು…?

ಮೈಸೂರು: ಮುಂದಿನ ದಿನಗಳಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್ಫೋನ್ ನೀಡಲು ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಕೊರೋನಾ  ಹೋಗಲಾಡಿಸಲು ಲಾಕ್ಡೌನ್ ಹೇರಿದ ನಂತರ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದು ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡಲಾಗುತ್ತಿದೆ. ಈ ಪದ್ಧತಿ ಕೆಲವೆಡೆ ಸರಾಗವಾಗಿ ನಡೆಯುತ್ತಿದ್ದರೂ ಹಲವೆಡೆ, ಅದರಲ್ಲಿಯೂ ಸರಕಾರಿ ಶಾಲಾ ಮಕ್ಕಳು ಸೂಕ್ತ ಮೊಬೈಲ್ ಅಥವಾ ನೆಟ್ವರ್ಕ್ ಕೊರತೆಯಿಂದ ಆನ್ಲೈನ್ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಆ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ

ಶಾಲಾ ಮಕ್ಕಳಿಗೆ ಸಿಗಲಿದೆಯಾ ಸ್ಮಾರ್ಟ್ ಫೋನ್…!? ಶಿಕ್ಷಣ ಸಚಿವರು ಹೇಳಿದ್ದೇನು…? Read More »

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ

ಬೆಂಗಳೂರು ಮೇ.24: ನಿನ್ನೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಳ್ ಅವರು ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ವೀಡಿಯೋ ಸಂವಾದ ನಡೆಸಿದರು. ಈ ವೀಡಿಯೋ ಸಂವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ನೀಡಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಜುಲೈ 3ನೇ

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ Read More »

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ

ಬೆಂಗಳೂರು.ಮೇ.24: ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಕರಡು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ Read More »

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು

ಮೂಡಿಗೆರೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕನೋರ್ವನಿಗೆ ತಲೆಕೆಳಗಾಗಿ ಕಟ್ಟಿಹಾಕಿ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ. ಮೇ10ರಂದು ಪುನೀತ್ ಎಂಬವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಈ ಘಟನೆ ನಡೆದಿತ್ತು. ನಂತರ ಪಿಎಸ್ ಐ ಅರ್ಜುನ್ ಅವರ ಈ ಅಮಾನವೀಯ ವರ್ತನೆ ತಿಳಿಯುತ್ತಿದ್ದಂತೆ ಹಲವೆಡೆ ಪಿಎಸೈ ಅಮಾನತಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಅದರಂತೆ ಅರ್ಜುನ್ ಅವರನ್ನು ಪಶ್ಚಿಮ ವಲಯ ಐಜಿಪಿ ನಿನ್ನೆ ಸೇವೆಯಿಂದ ಅಮಾನತುಗೊಳಿಸಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು Read More »