ರಾಜ್ಯ

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ

ಕಾಸರಗೋಡು: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಳ್‌ರವರು  ನೇಮಕರಾಗಿದ್ದಾರೆ. ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಹಿನ್ನೆಲೆ ಅಹಮ್ಮದ್ ದೇವರ್ ಅವರಿಗೆ ಕಾಸರಗೋಡು ಜಿಲ್ಲಾ ಉಸ್ತುವಾರಿ ಸ್ಥಾನ ಲಭಿಸಿದೆ. ಜಿಲ್ಲೆಯ ಸಚಿವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಹಮ್ಮದ್ ದೇವರ್ ಕೋವಿಳ್ ರವರನ್ನು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೋಜಿಕ್ಕೋಡ್ ಸೌತ್ ಕ್ಷೇತ್ರದಿಂದ ಆಯ್ಕೆಯಾದ ಎಲ್‌ಡಿಎಫ್ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐ.ಎನ್.ಎಲ್)ನ ಶಾಸಕರಾಗಿದ್ದು, […]

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ Read More »

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಲಾಗದ ಬೆಳವಣಿಗೆಗಳು ಗರಿಗೆದರುತ್ತಿದ್ದು ಮತ್ತೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನ ಕದ ತಟ್ಟಿದ್ದು, ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.ಈಗಾಗಲೇ ಕೆಲ ಪ್ರಭಾವಿ ನಾಯಕರು ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ದೆಹಲಿಯಲ್ಲಿ ಝಂಡಾ ಹೂಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ತಂತ್ರಗಳನ್ನು ರೂಪಿಸುತ್ತಿರುವುದಾಗಿ ಹೇಳಲಾಗುತ್ತಿದೆ.ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹೈಕಮಾಂಡ್

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ? Read More »

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು

ಮಂಡ್ಯ: ಹೆರಿಗೆ ನೋವು ತೀವ್ರಗೊಂಡು ಗರ್ಬಿಣಿಯೊಬ್ಬರು ದಯವಿಟ್ಟು ಅಡ್ಮಿಟ್​ ಮಾಡಿಕೊಳ್ಳಿ, ನಮ್ಮನ್ನು ಬದುಕಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯೊಳಗೆ ಸೇರಿಸಿಕೊಳ್ಳದೆ, ಆಸ್ಪತ್ರೆ ಆವರಣದಲ್ಲೆ ಹೆರಿಗೆಯಾಗಿ, ನೆಲಕ್ಕೆ ಬಿದ್ದು ಮಗು ಮೃತಪಟ್ಟ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಇಂತಹ ಅಮಾನವೀಯ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಇಂದು ಬೆಳಿಗ್ಗೆ ಸಂಭವಿಸಿದ್ದು, ನಿನ್ನೆ ಸೋನು ಎಂಬ ಗರ್ಬಿಣಿ ಹೆರಿಗೆಗೆ ದಿನವಾದ ಕಾರಣ ಆಸ್ಪತ್ರೆಗೆ ಬಂದಿದ್ದರು. ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂದು ವಿಧಿವಶರಾಗಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಅವರು ನಿಧನಹೊಂದಿದ್ದಾರೆ. ಇತ್ತೀಚೆಗೆ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು.ಬಳಿಕ ಉಸಿರಾಟದ ಸಮಸ್ಯೆ ತಲೆದೋರಿದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಇತರ ಕಾಯಿಲೆಯಿಂದ ಕೂಡ ಅವರು ಬಳಲುತ್ತಿದ್ದರು. ಸಮಾಜದ ಎಲ್ಲ ಪ್ರಸಕ್ತ ವಿದ್ಯಮಾನಗಳಿಗೂ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ Read More »

ಮೂಲ್ಕಿ | ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ; ಬೇಕರಿ ಮಾಲೀಕನ ಮೇಲೆ ಹಲ್ಲೆ- ಐವರು ಯುವಕರ ಬಂಧನ

ಮೂಲ್ಕಿ: ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿ, ಮಾಲೀಕನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಐವರು ಯುವಕರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಘಟನಾ ವಿವರ: ಕಾರ್ನಾಡಿನ ಐಶಾನಿ ಬೇಕರಿ ನಡೆಸುತ್ತಿರುವ ಕುಂದಾಪುರ ಮೂಲದ ಸುರತ್ಕಲ್ ನಿವಾಸಿ ಯುವಕ ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ, ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲಿಸ್ತೇನ್ ಉಗ್ರರ ವಿರುದ್ಧ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು. ಈ ಬಗ್ಗೆ ಆಕ್ರೋಶಗೊಂಡ ಸ್ಥಳೀಯ ಯುವಕರು ಬೇಕರಿಗೆ ನುಗ್ಗಿ ಬೆದರಿಕೆ ಹಾಕಿದ್ದಲ್ಲದೆ, ಯುವಕನಿಂದ ಕ್ಷಮೆ

ಮೂಲ್ಕಿ | ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ; ಬೇಕರಿ ಮಾಲೀಕನ ಮೇಲೆ ಹಲ್ಲೆ- ಐವರು ಯುವಕರ ಬಂಧನ Read More »

ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಮಾತು | ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ ಬಿಎಸ್ ವೈ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಎಂಬ ವಿಚಾರದಲ್ಲಿ ರಾಜ್ಯ ರಾಜಕಾರಣ ಮುಳುಗಿ ಹೋದಂತಿದೆ. ಈ ಕುರಿತು ಸ್ವತ: ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ ಬರುವವರ, ಜತೆಯಲ್ಲಿಯೇ ಇರುವವರ ಹೆಸರೇ ಕೇಳಿಬರುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಸಚಿವರ ಬಳಿ ಚರ್ಚೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಜೂನ್ 7ರಂದು ಬಿಜೆಪಿ ಶಾಸಕಾಂಗ ಪಕ್ಷದ

ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಮಾತು | ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ ಬಿಎಸ್ ವೈ Read More »

ನೀರಿನ ಟ್ಯಾಂಕ್ ಗೆ ಬಿದ್ದ ಚಿರತೆಯ ರಕ್ಷಣೆ

ಕುಂದಾಪುರ:ಆಹಾರ ಹುಡುಕಿಕೊಂಡು ಬಂದು ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯೊಂದನ್ನು ರಕ್ಷಿಸಲಾದ ಘಟನೆ ಮಂಗಳವಾರ ನಡೆದಿದೆ. ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ ಗೆ ೫ ವರ್ಷದ ಗಂಡು ಚಿರತೆ ಮಂಗಳವಾರ ಮುಂಜಾನೆ ವೇಳೆಗೆ ಬಿದ್ದಿದೆ ಎನ್ನಲಾಗಿದ್ದು, ಮಧ್ಯಾಹ್ನ ಮನೆಯವರು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಅರಣ್ಯಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನೀರಿನ ಟ್ಯಾಂಕ್ ಗೆ ಬಿದ್ದ ಚಿರತೆಯ ರಕ್ಷಣೆ Read More »

ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್

ಬೆಂಗಳೂರು: ಬಹುತೇಕ ನಿಯಂತ್ರಣದ ಹೊರತಾಗಿ, ಹೇರಲಾದ ಲಾಕ್ಡೌನ್ ತೆರವುಗೊಳಿಸಿದರೆ, ಮತ್ತೆ ಸಂಕಷ್ಟ ಎದುರಾದರೆ ಲಾಕ್ಡೌನ್ ಹೇರುವುದು ಕಠಿಣವಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಪ್ರಸ್ತುತ ಹೇರಲಾಗಿರುವ ಲಾಕ್​ಡೌನ್​ ತೆರವುಗೊಳಿಸುವ ಕಾರ್ಯ ಸದ್ಯಕ್ಕಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ತೀರ್ಮಾನಿಸಲಾಗಿದ್ದು, ಇನ್ನಷ್ಟು

ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್ Read More »

ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಚಾಮರಾಜನಗರ: ತಾಲೂಕಿನ ಪುಣಜನೂರು ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಮೂಡಹಳ್ಳಿ ಗ್ರಾಮದ ನಂದೀಶ್ ನಾಯಕ (36), ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿ ಬಂಧಿತರು. ಜಿಂಕೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯ ವಲಯ ಅರಣ್ಯ ಅಧಿಕಾರಿಗಳು ನಂದೀಶ್ ನ ಮನೆಗೆ ದಾಳಿ ನಡೆಸಿದ್ದಾರೆ. ಆತನಲ್ಲಿ ಜಿಂಕೆ ಮಾಂಸದ ಮೂಲದ ಬಗ್ಗೆ ವಿಚಾರಿದಾಗ ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿಯಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ. ನಂತರ ರಂಗಸ್ವಾಮಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ವಿಚಾರಿಸಿದಾಗ ಗೋಡೆಮಡುವಿನದೊಡ್ಡಿಯ ಹಳ್ಳದ

ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ Read More »

ಪಿಎಸ್ ಐ ತಲೆಯೊಳಗಿದ್ದವು 23 ವರ್ಷದ ಹಿಂದೆ ಒಳಹೊಕ್ಕ ಗುಂಡುಗಳು | ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ ನಿಧನ

ಚಾಮರಾಜನಗರ: 23 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ, ಚಾಮರಾಜನಗರ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಸಿದ್ದರಾಜನಾಯ್ಕ (59 ವ.) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೀರಪ್ಪನ್ 1993 ರಲ್ಲಿ ಹೊಡೆದಿದ್ದ ಗುಂಡುಗಳನ್ನು ತಲೆ ಮತ್ತು ಕಣ್ಣಿನಲ್ಲಿ ಇಟ್ಟುಕೊಂಡೇ ಕಳೆದ 23 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಜೀವನ ಸಾಗಿಸಿದ್ದ ಪಿಎಸ್ ಐ ನಿವೃತ್ತಿಗೆ ಕೇವಲ 5 ದಿನ ಬಾಕಿ ಇರುವಾಗ ನಿಧನರಾಗಿದ್ದಾರೆ. ಸಬ್ ಇನ್ಸ್​ಪೆಕ್ಟರ್ ಆಗಿದ್ದರೂ ದರ್ಪ, ಗತ್ತು ಪ್ರದರ್ಶಿಸದೇ ಜನರೊಂದಿಗೆ

ಪಿಎಸ್ ಐ ತಲೆಯೊಳಗಿದ್ದವು 23 ವರ್ಷದ ಹಿಂದೆ ಒಳಹೊಕ್ಕ ಗುಂಡುಗಳು | ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ ನಿಧನ Read More »