ರಾಜ್ಯ

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ

ಬೆಂಗಳೂರು ಮೇ.24: ನಿನ್ನೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಳ್ ಅವರು ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ವೀಡಿಯೋ ಸಂವಾದ ನಡೆಸಿದರು. ಈ ವೀಡಿಯೋ ಸಂವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ನೀಡಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಜುಲೈ 3ನೇ […]

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ Read More »

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ

ಬೆಂಗಳೂರು.ಮೇ.24: ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಕರಡು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ Read More »

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು

ಮೂಡಿಗೆರೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕನೋರ್ವನಿಗೆ ತಲೆಕೆಳಗಾಗಿ ಕಟ್ಟಿಹಾಕಿ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ. ಮೇ10ರಂದು ಪುನೀತ್ ಎಂಬವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಈ ಘಟನೆ ನಡೆದಿತ್ತು. ನಂತರ ಪಿಎಸ್ ಐ ಅರ್ಜುನ್ ಅವರ ಈ ಅಮಾನವೀಯ ವರ್ತನೆ ತಿಳಿಯುತ್ತಿದ್ದಂತೆ ಹಲವೆಡೆ ಪಿಎಸೈ ಅಮಾನತಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಅದರಂತೆ ಅರ್ಜುನ್ ಅವರನ್ನು ಪಶ್ಚಿಮ ವಲಯ ಐಜಿಪಿ ನಿನ್ನೆ ಸೇವೆಯಿಂದ ಅಮಾನತುಗೊಳಿಸಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು Read More »

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು.

ಬೆಂಗಳೂರು:ಮೇ.24: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಜಾರಿಯಲ್ಲಿದೆ. ಮೇ 24 ರಂದು 6 ಬೆಳಗ್ಗೆ ಗಂಟೆಯವರೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಜೂನ್ 7 ರವರೆಗೆ ವಿಸ್ತರಿಸಲಾಗಿದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನಕ್ಕೆ ಪೊಲೀಸರು ಸ್ಥಳೀಯ ಆಡಳಿತಗಳಿಂದ ಕ್ರಮಕೈಗೊಳ್ಳಲಾಗಿದೆ. ಅನಗತ್ಯವಾಗಿ ಸಂಚರಿಸುವವರಿಗೆ ಬ್ರೇಕ್ ಹಾಕಲಾಗುತ್ತಿದ್ದು, ವಾಹನ ವಶ, ದಂಡ ವಸೂಲಿ ಸೇರಿ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು. Read More »

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ..

ಹಾಸನ.ಮೇ23: ಎರಡು ವಾರದ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಒಬ್ಬನ ತಲೆಯನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯ ನಿವಾಸಿ ಭರತ್ ಎಂಬುವನೇ ಕೊಲೆಯಾದ ಯುವಕ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮಚ್ಚಿನಿಂದ ಕೊಚ್ಚಿರುವ ಹಂತಕರು ತಲೆಯನ್ನು ಎರಡು ಹೋಳು ಮಾಡಿದ್ದಾರೆ ಎನ್ನಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೂರ್ವದ್ವೇಷದಿಂದಲೇ‌

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ.. Read More »

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್….

ಮಂಡ್ಯ.ಮೇ.23: ಈ ಮುದ್ದಾದ ಕಂದಮ್ಮನ ಹೆಸರು ಮನಸ್ವಿ. ಮಂಡ್ಯದ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಹೆಚ್.ಡಿ ಸುಧಾಕರ್ ಎಂಬುವರ ಮಗಳು. ಈಕೆಗಿನ್ನೂ ಐದೂವರೆ ವರ್ಷ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಸುಧಾಕರ್ ಅವರಿಗೆ ಮಗಳ ಸಮಸ್ಯೆ ಎರಡೂವರೆ ತಿಂಗಳು ಇದ್ದಾಗಲೇ  ಮನವರಿಕೆ ಆಗಿತ್ತು. ಅಂದಿನಿಂದ ಇಲ್ಲೀವರೆಗೂ ಮಗಳ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಸುಧಾಕರ್ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವಾರು ರೀತಿಯ ಕೆಲಸ ಮಾಡಿಕೊಂಡಿದ್ದರು. ಕಳೆದ 5 ವರ್ಷದಿಂದ ಕಾರು ಚಾಲಕನಾಗಿ ಕುಟುಂಬವನ್ನು ಸಾಕುತ್ತಿದ್ದಾರೆ. ಮದುವೆಯಾದ

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್…. Read More »

ಕೇಂದ್ರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಾದೇಶಿಕತೆಯ ಕಾವು ಹೆಚ್ಚಾಗಿದೆ: ಸಚಿವ ಜೆ.ಸಿ. ಮಾಧುಸ್ವಾಮಿ

ಮೈಸೂರು: ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ರಾಜ್ಯದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಕೇಂದ್ರಕ್ಕೆ  ಪ್ರಾದೇಶಿಕತೆಯ ಕಾವು ಹೆಚ್ಚಾಗಿದ್ದು, ರಾಜ್ಯಗಳ ನಡುವೆ ಸರಿಯಾಗಿ ಅನುದಾನ ಹಂಚಿಕೆ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಮೈಸೂರಿನಲ್ಲಿ ನಿನ್ನೆ  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ನಡೆದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರದ

ಕೇಂದ್ರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಾದೇಶಿಕತೆಯ ಕಾವು ಹೆಚ್ಚಾಗಿದೆ: ಸಚಿವ ಜೆ.ಸಿ. ಮಾಧುಸ್ವಾಮಿ Read More »

ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‌ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ‘ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ

ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ Read More »

ಕೊರೋನಾ ಸುಳಿಯದಂತೆ ಗ್ರಾಮದ ನಾಲ್ಕು ಮೂಲೆಗೆ ಕಾಯಿ ಮಂತ್ರಿಸಿ ಕಟ್ಟಿದರು….!

ಚಿತ್ರದುರ್ಗ: ಒಂದೆಡೆ ಭಾರತದಲ್ಲಿ ಮೂಡನಂಬಿಕೆ ತೊಲಗಿದೆ ಎನ್ನುತ್ತಿದ್ದರೂ, ಉನ್ನೊಂದೆಡೆ ಜನ ಆಶ್ಚರ್ಯಕರ ರೀತಿಯಲ್ಲಿ ಮೂಡನಂಬಿಕ ಆಚರಣೆಯಲ್ಲಿ ತೊಡಗಿಕೊಳ್ಳುವುದು ಬೆಳಕಿಗೆ ಬರುತ್ತಿದೆ. ಅದರಂತೆ ಕೋವಿಡ್ ಗ್ರಾಮಕ್ಕೆ ಸುಳಿಯುವುದನ್ನು ತಡೆಯಲು, ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಘಟನೆ ಚಿತ್ರದುರ್ಗ ಜಿಲ್ಲೆಯ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ 15 ಜನರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ.

ಕೊರೋನಾ ಸುಳಿಯದಂತೆ ಗ್ರಾಮದ ನಾಲ್ಕು ಮೂಲೆಗೆ ಕಾಯಿ ಮಂತ್ರಿಸಿ ಕಟ್ಟಿದರು….! Read More »

“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್

ಕುಶಾಲನಗರ: ವಿಶ್ವದಾದ್ಯಂತ  ಕಳೆದೊಂದು ವರ್ಷಗಳಲ್ಲಿ ಕೊರೋನಾ ಹಲವಾರು ಕರುಣಾಜನಕ ವ್ಯಥೆಗಳನ್ನು ಸೃಷ್ಟಿಸಿದೆ. ಕೊರೊನಾದಿಂದಾಗಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರ ಕಳೇಬರವನ್ನೂ ನೋಡಲಾಗದೆ ಜನ ದುಖಃದ ಕಡಲಲ್ಲಿ ತೇಲುತ್ತಿರುವ ಅದೆಷ್ಟೋ ಸನ್ನಿವೇಶಗಳಿಗೆ ನಾವು ನಿತ್ಯ ಸಾಕ್ಷಿಯಾಗುತ್ತಿದ್ದೇವೆ. ಅಂದರಂತೆ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿಯೊಬ್ಬಳು ಅಮ್ಮನ ಜೊತೆ ತಾನು ಕಳೆದ ದಿನಗಳ ನೆನಪು ಹೊತ್ತ ಮೊಬೈಲ್​ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಈ ಕಥೆ ನಿಜಕ್ಕೂ ಕರುಣಾಜನಕವಾಗಿದೆ. ಕೊವಿಡ್ ತುತ್ತಾಗಿ ಜೀವ ತೆತ್ತ ಪ್ರೀತಿಯ ತಾಯಿ ಆಸ್ಪತ್ರೆಯಿಂದ

“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್ Read More »