ರಾಜ್ಯ

ಮುಂದಿನ ವರ್ಷ 20,810 ಕೋಟಿ ಬೆಳೆಸಾಲ ಗುರಿ ಸಚಿವ ಸೋಮಶೇಖರ್

ಬೆಂಗಳೂರು: ಮುಂದಿನ ವರ್ಷ ರೈತರಿಗೆ 20,810 ಕೋಟಿಗೂ ಅಧಿಕ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಕಳೆದ ವರ್ಷ ಅಂದರೆ 2020-21 ನೇ ಸಾಲಿನಲ್ಲಿ 15,400 ಕೋಟಿಗೂ ಅಧಿಕ ಬೆಳೆಸಾಲ ವಿತರಿಸಲಾಗಿತ್ತು. ಈ ಬಾರಿ ಅಂದರೆ 2021-22 ನೇ ಸಾಲಿಗೆ ಈಗಾಗಲೇ ಗುರಿ ನಿಗದಿಪಡಿಸಲಾಗಿದ್ದು ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಮೂರು ಕೋಟಿಗೂ ಅಧಿಕ ರೈತರು ಫಲಾನುಭವಿಗಳಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು […]

ಮುಂದಿನ ವರ್ಷ 20,810 ಕೋಟಿ ಬೆಳೆಸಾಲ ಗುರಿ ಸಚಿವ ಸೋಮಶೇಖರ್ Read More »

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ

ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು ಕೋವಿಡ್ ವಾರಿಯರ್ಸ್ ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಗಾನಸುಧೆ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ ಫೇಸ್ ಬುಕ್ ಲೈವ್ ನಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿಕೊಡುವ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿದೆ. ಕೇಳಲಿಚ್ಚಿಸುವವರು Arvind Vivek’s ಫೇಸ್ಬುಕ್ ಪೇಜ್ ಅನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. “ಗಾನಸುಧೆ”ಯನ್ನು ರಾಜ್ಯದ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ಸಮರ್ಪಿಸಲಾಗುತ್ತಿದೆ ಎಂದು ಮಂಗಳೂರು ನಗರ

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ Read More »

ಜೂ. 7 ರ ಬಳಿಕ ಮುಂದುವರಿಯಲಿದೆ ಲಾಕ್ಡೌನ್…? | ಇಲ್ಲಿದೆ ತಜ್ಞರ ಶಿಫಾರಸ್ಸಿನ ಮುಖ್ಯಾಂಶಗಳು

ಬೆಂಗಳೂರು: ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಶಿಫಾರಸ್ಸು ಒಂದನ್ನು ಮಾಡಿದ್ದು ಸದ್ಯ ರಾಜ್ಯದಲ್ಲಿರುವ ಲಾಕ್ಡೌನ್ ಅನ್ನು ಮುಂದುವರೆಸುವಂತೆ ಸಲಹೆ ನೀಡಿದೆ. ಮೇ 30ರಂದು ನಡೆದ ತಜ್ಞರನ್ನೊಳಗೊಂಡ 14 ಸದಸ್ಯರುಗಳ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯ ವರದಿ ನಿನ್ನೆ ರಾಜ್ಯ ಸರ್ಕಾರದ ಕೈಸೇರಿದೆ. ವರದಿಯಲ್ಲಿ ದಿನದ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 5ಕ್ಕಿಂತ ಕೆಳಗೆ ಬರುವವರೆಗೆ ಮತ್ತು ಮರಣ ಪ್ರಮಾಣ ಶೇಕಡ 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಸದ್ಯ ಇರುವ ನಿರ್ಬಂಧಗಳನ್ನು ಮುಂದುವರಿಸಬೇಕು

ಜೂ. 7 ರ ಬಳಿಕ ಮುಂದುವರಿಯಲಿದೆ ಲಾಕ್ಡೌನ್…? | ಇಲ್ಲಿದೆ ತಜ್ಞರ ಶಿಫಾರಸ್ಸಿನ ಮುಖ್ಯಾಂಶಗಳು Read More »

ಪಾಸಿಟಿವ್ ಸಮಾಚಾರ : ಚಾಲಕರಿಂದ ಲಂಚ ಸ್ವೀಕರಿಸಿ ವೈರಲ್ ಆಗಿದ್ದ ಅರಣ್ಯಾಧಿಕಾರಿ ಅಮಾನತು

ಉಪ್ಪು ತಿಂದವ ನೀರು ಕುಡಿಯಬೇಕು ಎಂಬ ಗಾದೆಗೆ‌ ಈ ಘಟನೆ ಸಾಕ್ಷಿಯಾಗಿದೆ. ಮಾಣಿ‌ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಚೆಕ್ ಪೋಸ್ಟ್ ‌ನಲ್ಲಿ ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಇದೀಗ ಸಸ್ಪೆಂಡ್ ಆಗಿದ್ದಾರೆ.ಸಂಪಾಜೆ ವಲಯದ ದಬ್ಬಡ್ಕ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಕ್ಷಿತ್ ಅಮಾನತುಗೊಂಡ ಅಧಿಕಾರಿ. ಮೇ.24ರಂದು‌ ಸಂಪಾಜೆ ‌ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಲಾರಿ ಚಾಲಕನಿಂದ ಹಣ ಪಡೆದು ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು

ಪಾಸಿಟಿವ್ ಸಮಾಚಾರ : ಚಾಲಕರಿಂದ ಲಂಚ ಸ್ವೀಕರಿಸಿ ವೈರಲ್ ಆಗಿದ್ದ ಅರಣ್ಯಾಧಿಕಾರಿ ಅಮಾನತು Read More »

ಕಡಿಮೆಯಾಗುತ್ತಿರುವ ಪಾಸಿಟಿವ್ ದರ. ಜೂ.7ರಿಂದ ರಾಜ್ಯ ಅನ್ ಲಾಕ್!?

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ -19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಅನ್‌ಲಾಕ್ ಪ್ಲಾನ್ ರೂಪಿಸುತ್ತಿದೆ. ಕೊರೊನಾ ಎರಡನೇ ಅಲೆ ಕರುನಾಡನ್ನು ಸಂಪೂರ್ಣ ನಲುಗಿಸಿದೆ. ದಿನೇದಿನೇ ಉಲ್ಬಣಿಸುತ್ತಿದ್ದ ಕೊರೊನಾ ಅಬ್ಬರ, ಮತ್ತೊಂದೆಡೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ ರಾಜ್ಯವನ್ನು ಸಂಪೂರ್ಣ ಹಿಂಡಿ ಹಿಪ್ಪೆಯಾಗಿಸಿತ್ತು. ಈ ಕೊರೊನಾದ ಆರ್ಭಟಕ್ಕೆ ನಿಯಂತ್ರಣ ಹೇರಲು ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಏಪ್ರಿಲ್ 27ರಿಂದ ಚಾಲ್ತಿಯಲ್ಲಿರುವ ಲಾಕ್‌ಡೌನ್‌ ದಿನ ಕಳೆದಂತೆ ಮತ್ತಷ್ಟು ಬಿಗಿಗೊಳಿಸಲಾಯಿತು.‌ ಜೂನ್ 7ರವರೆಗೆ

ಕಡಿಮೆಯಾಗುತ್ತಿರುವ ಪಾಸಿಟಿವ್ ದರ. ಜೂ.7ರಿಂದ ರಾಜ್ಯ ಅನ್ ಲಾಕ್!? Read More »

ಮಕ್ಕಳಲ್ಲೂ ಬ್ಲಾಕ್ ಫಂಗಸ್: ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಈವರೆಗೆ ವಯಸ್ಕರಲ್ಲಿ ಮಾತ್ರ ಕಾಣಸಿಗುತ್ತಿದ್ದ ಬ್ಲಾಕ್ ಫಂಗಸ್ ಸೋಂಕು ಇದೀಗ ಮಕ್ಕಳಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೋವಿಡ್ ಸೋಂಕಿಗೊಳಗಾದ ಚಿಕಿತ್ಸೆ ಪಡೆಯುತ್ತಿದ್ದ ಬಯಲುಸೀಮೆಯ ಮಕ್ಕಳಲ್ಲಿ ತಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಮಕ್ಕಳಿಗೆ ತೀವ್ರ ಅನಾರೋಗ್ಯ ಬಾಧಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ, ಚಿತ್ರದುರ್ಗ ಜಿಲ್ಲೆಯ ಒಬ್ಬ ಬಾಲಕ ಹಾಗೂ ಬಳ್ಳಾರಿಯ ಓರ್ವ ಬಾಲಕಿ ಗೆ ಬ್ಲಾಕ್ ಫಂಗಸ್

ಮಕ್ಕಳಲ್ಲೂ ಬ್ಲಾಕ್ ಫಂಗಸ್: ಇಬ್ಬರ ಸ್ಥಿತಿ ಗಂಭೀರ Read More »

ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ದಿನನಿತ್ಯ ವಾಕ್ಸಮರ ನಡೆಯುತ್ತಿದ್ದು, ಮೈಸೂರಿನಲ್ಲಿ ಮಹಾಯುದ್ಧ ಪ್ರಾರಂಭವಾದಂತಿದೆ. ಒಂದೆಡೆ ಮೈಸೂರಿಗೆ ಬಂದಾಗಿನಿಂದಲೂ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದರೇ, ಜಿಲ್ಲಾಧಿಕಾರಿ ದಿನೇದಿನೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹರಿಹಾಯುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ಪಿಡುಗು ನಮ್ಮನ್ನು ದಿನೇದಿನೇ ಬಾಧಿಸುತ್ತಿದೆ ಆದರೂ ಜಿಲ್ಲಾಡಳಿತದೊಂದಿಗೆ ಒಗ್ಗೂಡಿಕೊಂಡು, ಜಿಲ್ಲೆಯ ಜನರ ಹಿತ ಕಾಯ್ದುಕೊಳ್ಳಬೇಕಾದ ಸಂಸದರು ವಿನಾಕಾರಣ ಏನೇನೋ ಹೇಳಿಕೆ ನೀಡಿದರೆ ಹೇಗಾಗಬಹುದು. ಜಿಲ್ಲಾಡಳಿತ ಹಗಲಿರುಳು ದುಡಿದು

ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ Read More »

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ

ಮೇ 31 ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ Read More »

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ

ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಪುಟ್ಟ ಬಾಲಕನೊರ್ವ ತಾನು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.ಬೆಂಗಳೂರಿನ ಅಭಿನಂದನ್ ಹಾಗೂ ಸ್ವಪ್ನರವರ ಸುಪುತ್ರ ಮಾಯಾಂಕ್ ಜೈನ್ (೧೨) ನೆರವು ನೀಡಿದ ಬಾಲಕ. ಈತ ವರ್ಷಗಳಿಂದ ಹುಂಡಿಯಲ್ಲಿ ೪,೧೯೦ ರೂ. ಹಣವನ್ನು ಕೂಡಿಟ್ಟಿದ್ದ. ಶನಿವಾರ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಉಳಿತಾಯ ಮಾಡಿದ ಹಣವನ್ನು ಹಸ್ತಾಂತರಿಸಿದ್ದಾನೆ. ಕೊರೊನಾದಿಂದಾದ ಸಾವು-ನೋವುಗಳನ್ನು ಮನಗಂಡು

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ Read More »

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಈ ತಿಂಗಳ ವಾಹನ ತೆರಿಗೆ ಕಟ್ಟಬೇಕಾಗಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ನೋಂದಾಯಿತವಾಗಿರುವ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಅನ್ವಯವಾಗುವಂತೆ 2021ರ ಮೇ ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಾದ್ಯಂತ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿದ್ದು ತುರ್ತು ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ಜನರು ಸಂಪಾದನೆ ಇಲ್ಲದೆ ಮನೆಯಲ್ಲೇ ಕೂರುವಂತಾಗಿದೆ ಇದನ್ನು ಗಮನದಲ್ಲಿಟ್ಟು

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ Read More »