ಪತ್ರಕರ್ತರಿಗೆ ಅವಮಾನ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್| ದುರಹಂಕಾರದ ವರ್ತನೆಗೆ ರಾಜ್ಯಾದ್ಯಂತ ಪತ್ರಕರ್ತರ ಸಂಘ ಖಂಡನೆ| ಪತ್ರಿಕಾಗೋಷ್ಠಿಯಲ್ಲಿ ಹಲವು ಬದಲಾವಣೆಗೆ ತೀರ್ಮಾನ
ಸಮಗ್ರ ನ್ಯೂಸ್: ರಾಜೇಂದ್ರ ಕುಮಾರ್ ಮಾಧ್ಯಮದವರಿಗೆ ಮಾಡಿರುವ ಅವಮಾನವನ್ನು ಪತ್ರಕರ್ತರು ಗಂಭಿರವಾಗಿ ಪರಿಗಣಿಸಿದ್ದಾರೆ. ಜಿಲ್ಲಾ ಸಂಘದ ಕಾರ್ಯಕಾರಿಣಿ ಹಾಗೂ ಪ್ರೆಸ್ ಕ್ಲಬ್ ಪ್ರಮುಖರು ಜಂಟಿಯಾಗಿ ಸಭೆ ನಡೆಸಿ ಈ ವಿಚಾರವನ್ನು ಚರ್ಚಿಸಿದ್ದಾರೆ. ಚರ್ಚೆಯ ಸಮಯದಲ್ಲಿ ರಾಜೇಂದ್ರ ಕುಮಾರ್ ಅವರ ದುರಂಹಕಾರದ ವರ್ತನೆಯನ್ನು ಖಂಡಿಸಿ ಕೆಲವೊಂದು ಪ್ರಮುಖ ತೀರ್ಮಾನವನ್ನು ಕೂಡಾ ತೆಗೆದುಕೊಂಡಿದ್ದಾರೆ. ಮೊದಲನೆಯದಾಗಿ ರಾಜೇಂದ್ರಕುಮಾರ್ ಜೊತೆ ಪತ್ರಕರ್ತರ ಜಿಲ್ಲಾ ಸಂಘವಾಗಲಿ, ಪ್ರೆಸ್ ಕ್ಲಬ್ ಆಗಲಿ ಯಾವುದೇ ರೀತಿಯಾದ ವ್ಯಾವಹಾರಿಕ ಒಡನಾಟ ಇಟ್ಟುಕೊಳ್ಳಬಾರದು ಹಾಗೂ ಪತ್ರಕರ್ತರ ಎಲ್ಲಾ ಕಾರ್ಯಕ್ರಮಗಳಿಂದಲೂ ಅವರನ್ನು […]