ರಾಜ್ಯ

ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಸಮಗ್ರ ನ್ಯೂಸ್: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಐತಿಹಾಸಿಕ ವಕ್ಫ್ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದು, ಕಾಯ್ದೆ ಜಾರಿಗೆ ಅಧಿಸೂಚನೆಯೊಂದೇ ಬಾಕಿ ಇದೆ. ಸುಮಾರು 17 ಗಂಟೆಗಳ ಚರ್ಚೆಯ ನಂತರ, ಶುಕ್ರವಾರ ಮುಂಜಾನೆ ರಾಜ್ಯಸಭೆಯು ಮಸೂದೆಯನ್ನು ಪರವಾಗಿ 128 ಮತಗಳು ಮತ್ತು ವಿರುದ್ಧ 95 ಮತಗಳೊಂದಿಗೆ ಅಂಗೀಕರಿಸಿತು. ಇನ್ನು ಸರ್ಕಾರದ ಅಧಿಸೂಚನೆ ಹೊರಬಿ ದ್ದರೆ ಕಾನೂನು ರೂಪದಲ್ಲಿ ಇದು ಜಾರಿಗೆ ಬರಲಿದೆ. ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ. […]

ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ Read More »

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದರೆ ಪಿಡಿಒಗಳೇ ಹೊಣೆ – ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಬೇಸಗೆಯ ಉಳಿದ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸ ಬೇಕು. ಗ್ರಾಮೀಣ ಭಾಗಗಳಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳೇ ನೀರಿನ ಸಮಸ್ಯೆಗೆ ಹೊಣೆಗಾರರು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಗೂ ಮಳೆಗಾಲದಲ್ಲಿ ಆಗಬಹುದಾದ ಪ್ರಾಕೃತಿಕ ವಿಕೋಪ ಎದುರಿಸಲು ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಡ್ಯಾಂಗಳಲ್ಲಿ ಪ್ರಸ್ತುತ ಅಗತ್ಯಕ್ಕೆ

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದರೆ ಪಿಡಿಒಗಳೇ ಹೊಣೆ – ಸಚಿವ ದಿನೇಶ್ ಗುಂಡೂರಾವ್ Read More »

ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ : ಎಚ್.ಡಿ ಕುಮಾರಸ್ವಾಮಿ

ಸಮಗ್ರ ನ್ಯೂಸ್: ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪದಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಇದೀಗ ಏಕಾಏಕಿ ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ. ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ. ಈ ಸರ್ಕಾರಕ್ಕೆ ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ

ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ : ಎಚ್.ಡಿ ಕುಮಾರಸ್ವಾಮಿ Read More »

ಡಿಸೇಲ್ ದರ ಏರಿಕೆ.. ಏ.14 ರಂದು ಲಾರಿ ಮಾಲೀಕರ ಮುಷ್ಕರ..!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇತ್ತೀಚೆಗೆ ಬೆಲೆ ಏರಿಕೆಗಳದ್ದೆ ಹಾವಳಿಯಾಗಿತ್ತು. ಇದರಿಂದ ನೊಂದಿರುವ ಜನಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಡೀಸೆಲ್ ದರ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಏಪ್ರಿಲ್​ 14ರ ಮಧ್ಯರಾತ್ರಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಕೆರಳಿ ಕೆಂಡವಾಗಿರುವ ಲಾರಿ

ಡಿಸೇಲ್ ದರ ಏರಿಕೆ.. ಏ.14 ರಂದು ಲಾರಿ ಮಾಲೀಕರ ಮುಷ್ಕರ..! Read More »

ರಾತ್ರಿಯಿಡೀ ಹುಡುಗಿ ಎಂದು ಹುಡುಗನ ಜೊತೆ ಅಶ್ಲೀಲ ಚಾಟಿಂಗ್| ಬೆಳಿಗ್ಗೆ ಹುಡುಗಿ ನೋಡಲು ಬಂದವನಿಗೆ ಸಿಕ್ತು ಬಿಸಿಬಿಸಿ‌ ಕಜ್ಜಾಯ

ಸಮಗ್ರ ನ್ಯೂಸ್: ಯುವಕನೊಬ್ಬ ಯುವತಿಯ ಮೊಬೈಲ್ ನಂಬರ್ ಪಡೆದು ರಾತ್ರೀ ಇಡೀ ಅಶ್ಲೀಲ ಮಸೇಜ್ ಮಾಡಿ ಮರುದಿನ ಭೇಟಿಯಾಗಲು ಬಂದ ವೇಳೆ ಸ್ಥಳೀಯರು ಸರಿಯಾಗಿ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಧರ್ಮದೇಟು ತಿಂದವನನ್ನು ಕನ್ಯಾನ ಸಮೀಪದ ಪಂಜಾಜೆ ನಿವಾಸಿ ಸವಾದ್(22)ಎಂದು ತಿಳಿದುಬಂದಿದೆ. ಬೆಂಗಳೂರಿನ ಕೋರಮಂಗಲದ ಡ್ರೆಸ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಸವಾದ್ ರಂಝಾನ್ ಹಬ್ಬಕ್ಕೆ ಬಂದಿದ್ದ. ಇದೇ ಸಂದರ್ಭ ಈತನ ಅದೃಷ್ಟ ಕೆಟ್ಟಿದ್ದ ಕಾರಣ ಮಾಡಬಾರದ್ದನ್ನು

ರಾತ್ರಿಯಿಡೀ ಹುಡುಗಿ ಎಂದು ಹುಡುಗನ ಜೊತೆ ಅಶ್ಲೀಲ ಚಾಟಿಂಗ್| ಬೆಳಿಗ್ಗೆ ಹುಡುಗಿ ನೋಡಲು ಬಂದವನಿಗೆ ಸಿಕ್ತು ಬಿಸಿಬಿಸಿ‌ ಕಜ್ಜಾಯ Read More »

ಬಂಗಾರದ ದರ ಮತ್ತೆ ಕೊಂಚ ಕುಸಿತ| ಚಿನ್ನದ ಬೆಲೆ ಇಳಿಕೆಗೆ ಕಾರಣವೇನು?

ಸಮಗ್ರ ನ್ಯೂಸ್: ಚಿನ್ನಾಭರಣ ಪ್ರಿಯರ ಜೇಬು ಭಾರವಾಗಿಸಿದ್ದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಕುಸಿತ ಕಂಡಿದೆ. ಶನಿವಾರ ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದ್ದು ಚಿನ್ನಾಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಕಳೆದ ಕೆಲವು ದಿನದಿಂದ ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಸನಿಹಕ್ಕೆ ಹೋಗುತ್ತಿದೆ. ಶುಕ್ರವಾರ ಮತ್ತು ಶನಿವಾರ ಎರಡೂ ದಿನ ಚಿನ್ನದ ಬೆಲೆ ಇಳಿಕೆಯಾಗಿದ್ದು ಹೂಡಿಕೆದಾರರು, ಚಿನ್ನಾಭರಣ ಪ್ರಿಯರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ. ಶನಿವಾರ ಒಂದೇ ದಿನ 100 ಗ್ರಾಂ

ಬಂಗಾರದ ದರ ಮತ್ತೆ ಕೊಂಚ ಕುಸಿತ| ಚಿನ್ನದ ಬೆಲೆ ಇಳಿಕೆಗೆ ಕಾರಣವೇನು? Read More »

ಪತ್ರಕರ್ತರಿಗೆ ಅವಮಾನ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್| ದುರಹಂಕಾರದ ವರ್ತನೆಗೆ ರಾಜ್ಯಾದ್ಯಂತ ಪತ್ರಕರ್ತರ ಸಂಘ ಖಂಡನೆ| ಪತ್ರಿಕಾಗೋಷ್ಠಿಯಲ್ಲಿ ಹಲವು ಬದಲಾವಣೆಗೆ ತೀರ್ಮಾನ

ಸಮಗ್ರ ನ್ಯೂಸ್: ರಾಜೇಂದ್ರ ಕುಮಾರ್ ಮಾಧ್ಯಮದವರಿಗೆ ಮಾಡಿರುವ ಅವಮಾನವನ್ನು ಪತ್ರಕರ್ತರು ಗಂಭಿರವಾಗಿ ಪರಿಗಣಿಸಿದ್ದಾರೆ. ಜಿಲ್ಲಾ ಸಂಘದ ಕಾರ್ಯಕಾರಿಣಿ ಹಾಗೂ ಪ್ರೆಸ್ ಕ್ಲಬ್ ಪ್ರಮುಖರು ಜಂಟಿಯಾಗಿ ಸಭೆ ನಡೆಸಿ ಈ ವಿಚಾರವನ್ನು ಚರ್ಚಿಸಿದ್ದಾರೆ. ಚರ್ಚೆಯ ಸಮಯದಲ್ಲಿ ರಾಜೇಂದ್ರ ಕುಮಾರ್ ಅವರ ದುರಂಹಕಾರದ ವರ್ತನೆಯನ್ನು ಖಂಡಿಸಿ ಕೆಲವೊಂದು ಪ್ರಮುಖ ತೀರ್ಮಾನವನ್ನು ಕೂಡಾ ತೆಗೆದುಕೊಂಡಿದ್ದಾರೆ. ಮೊದಲನೆಯದಾಗಿ ರಾಜೇಂದ್ರ‌ಕುಮಾರ್ ಜೊತೆ ಪತ್ರಕರ್ತರ ಜಿಲ್ಲಾ ಸಂಘವಾಗಲಿ, ಪ್ರೆಸ್ ಕ್ಲಬ್ ಆಗಲಿ ಯಾವುದೇ ರೀತಿಯಾದ ವ್ಯಾವಹಾರಿಕ ಒಡನಾಟ ಇಟ್ಟುಕೊಳ್ಳಬಾರದು ಹಾಗೂ ಪತ್ರಕರ್ತರ ಎಲ್ಲಾ ಕಾರ್ಯಕ್ರಮಗಳಿಂದಲೂ ಅವರನ್ನು

ಪತ್ರಕರ್ತರಿಗೆ ಅವಮಾನ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್| ದುರಹಂಕಾರದ ವರ್ತನೆಗೆ ರಾಜ್ಯಾದ್ಯಂತ ಪತ್ರಕರ್ತರ ಸಂಘ ಖಂಡನೆ| ಪತ್ರಿಕಾಗೋಷ್ಠಿಯಲ್ಲಿ ಹಲವು ಬದಲಾವಣೆಗೆ ತೀರ್ಮಾನ Read More »

ಎ.6ರಂದು ಸೌಜನ್ಯಳ ನ್ಯಾಯಕ್ಕಾಗಿ ನಡೆಯಬೇಕಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ

ಸಮಗ್ರ ನ್ಯೂಸ್: ಉಜಿರೆಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಎಪ್ರಿಲ್‌ 6ರಂದು ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತು. ಅರ್ಜಿದಾರರ ಪರ ವಕೀಲರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿರುವ ಕುರಿತಂತೆ ವಾಟ್ಸ್‌ಆಯಪ್‌ ಸಂದೇಶ

ಎ.6ರಂದು ಸೌಜನ್ಯಳ ನ್ಯಾಯಕ್ಕಾಗಿ ನಡೆಯಬೇಕಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ Read More »

ಹವಾಮಾನ ವರದಿ| ರಾಜ್ಯಾದ್ಯಂತ ‌ಅಲ್ಲಲ್ಲಿ ಎ.6ರವರೆಗೆ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-60 ಕಿಮೀ ತಲುಪುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 6ರವರೆಗೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಚದುರಿದಂತೆ ಸಾಧಾರಣ ಮಳೆ, ಇನ್ನುಳಿದ ದಿನಗಳಲ್ಲಿ ಒಣ ಹವೆ ಇರಲಿದೆ ಎಂದು ಹೇಳಿದೆ. ರಾಜ್ಯದಾದ್ಯಂತ ಗುಡುಗು, ಮಿಂಚು

ಹವಾಮಾನ ವರದಿ| ರಾಜ್ಯಾದ್ಯಂತ ‌ಅಲ್ಲಲ್ಲಿ ಎ.6ರವರೆಗೆ ಭಾರೀ ಮಳೆ ಸಾಧ್ಯತೆ Read More »

ಮಂಗಳೂರು: ಡಿಸಿಸಿ ಬ್ಯಾಂಕ್ ನಲ್ಲಿ ಭಾರೀ ಅಕ್ರಮದ ಶಂಕೆ| RBI ನಿಂದ ಬರೋಬ್ಬರಿ ₹ 5ಲಕ್ಷ ದಂಡ

ಸಮಗ್ರ ನ್ಯೂಸ್: ಸಾಲಗಳ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಲ್ಲಿ ಭಾರಿ ಅಕ್ರಮ ಶಂಕೆ ವ್ಯಕ್ತವಾದ ಹಿನ್ನೆಲೆ 5 ಲಕ್ಷ ರೂ ದಂಡ ವಿಧಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಡಾ. ಎಂ.ಎನ್​ ರಾಜೇಂದ್ರ ಕುಮಾರ್ ಅಧ್ಯಕ್ಷತೆಯ ಮಂಗಳೂರು ಡಿಸಿಸಿ ಬ್ಯಾಂಕ್,​ ಆರ್​​ಬಿಐ ನಿಯಮ ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಆರ್​ಬಿಐನಿಂದ ಡಿಸಿಸಿ ಬ್ಯಾಂಕ್ ಸಾಲಗಳ ಬಗ್ಗೆ ಉನ್ನತ ತನಿಖೆ ಸಾಧ್ಯತೆ

ಮಂಗಳೂರು: ಡಿಸಿಸಿ ಬ್ಯಾಂಕ್ ನಲ್ಲಿ ಭಾರೀ ಅಕ್ರಮದ ಶಂಕೆ| RBI ನಿಂದ ಬರೋಬ್ಬರಿ ₹ 5ಲಕ್ಷ ದಂಡ Read More »