ರಾಜ್ಯ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮನೆಗೆ ಸುಳ್ಯದ ಗೋವು| ಮಲೆನಾಡು ಗಿಡ್ಡ ತಳಿಯನ್ನು ದಾನ ಮಾಡಿದ ಅಕ್ಷಯ್ ಆಳ್ವ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಗೋವಿನ ಮೇಲಿನ ವಿಶೇಷ ಕಾಳಜಿಯಿಂದ ಮಲೆನಾಡು ಗಿಡ್ಡ ತಳಿಯ ಗೋವನ್ನು ಸುಳ್ಯದಿಂದ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಅವರು ಮಲೆನಾಡು ಗಿಡ್ಡ ತಳಿಯ ನಾಲ್ಕು (ಎರಡು ತಾಯಿ, ಎರಡು ಕರು) ಗೋವುಗಳನ್ನು ಬೆಂಗಳೂರಿನ ಮನೆಗೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಕೃಷಿಕ ಅಕ್ಷಯ್‌ ಆಳ್ವ ಅವರು ಕೂಡ ಮಲೆನಾಡು ಗಿಡ್ಡ ತಳಿ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಸಕ್ತರಿಗೆ ಮಲೆನಾಡು […]

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮನೆಗೆ ಸುಳ್ಯದ ಗೋವು| ಮಲೆನಾಡು ಗಿಡ್ಡ ತಳಿಯನ್ನು ದಾನ ಮಾಡಿದ ಅಕ್ಷಯ್ ಆಳ್ವ Read More »

ಅಪಹರಿಸಿದಾತನನ್ನೇ ಬಿಟ್ಟು ಬರಲೊಪ್ಪದ ಮಗು| ಕಣ್ಣೀರು ತರಿಸುವ ಕಿಡ್ನಾಪರ್ ಮತ್ತು ಮಗುವಿನ ಬಂಧ!!

ಸಮಗ್ರ ನ್ಯೂಸ್: ಸುಮಾರು 14 ತಿಂಗಳ ಹಿಂದೆ ಅಪಹರಣಗೊಂಡ ಪೃಥ್ವಿ ಎಂಬ ಪುಟಾಣಿ ಅಪಹರಿಸಿದವನನ್ನು ಬಿಟ್ಟು ಬರಲು ನಿರಾಕರಿಸಿ ರಚ್ಚೆ ಹಿಡಿದ ವಿಚಿತ್ರ ಘಟನೆ ಸಂಗನೇರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 14 ತಿಂಗಳ ಹಿಂದೆ ನಡೆದಿದ್ದ 11 ತಿಂಗಳ ಪೃಥ್ವಿ ಹೆಸರಿನ ಮಗುವಿನ ಅಪಹರಣ ಪ್ರಕರಣವನ್ನು ಪೊಲೀಸರು ಈಗ ಭೇದಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಆದರೆ ಮಗುವನ್ನು ಪಡೆಯುವ ವೇಳೆ ಅಪಹರಣಕಾರ ತನುಜ್‌ ಚಾಹರ್‌ನಿಂದ ಮಗುವನ್ನು ಬೇರ್ಪಡಿಸಲು ಮುಂದಾದ ಸಮಯದಲ್ಲಿ ಮಗು ಆತನನ್ನು ಬಿಗಿಯಾಗಿ

ಅಪಹರಿಸಿದಾತನನ್ನೇ ಬಿಟ್ಟು ಬರಲೊಪ್ಪದ ಮಗು| ಕಣ್ಣೀರು ತರಿಸುವ ಕಿಡ್ನಾಪರ್ ಮತ್ತು ಮಗುವಿನ ಬಂಧ!! Read More »

ಭಾರತದ ಶ್ರೀಮಂತ ನಗರ ಮುಂಬಯಿ… ಬೆಂಗಳೂರಿಗೆ ನಾಲ್ಕನೇ ಸ್ಥಾನ..,!

ಸಮಗ್ರ ನ್ಯೂಸ್: ಭಾರತದ ಶ್ರೀಮಂತ ನಗರವಾಗಿ ಇದೀಗ ಮತ್ತೆ ಮುಂಬಯಿ ಮೊದಲ ಸ್ಥಾನ ಗಳಿಸುವುದಲ್ಲದೆ ದೆಹಲಿ ಮತ್ತು ಹೈದರಾಬಾದ್ ಕ್ರಮವಾಗಿ ಎರಡು, ಮೂರು ಸ್ಥಾನಗಳನ್ನು ಅಲಂಕರಿಸಿದೆ. ಐಟಿ ಕ್ಯಾಪಿಟಲ್ ಬೆಂಗಳೂರನ್ನು ಹೈದರಾಬಾದ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ್ದು ಇದು ದೇಶದ ಅತೀ ಹೆಚ್ಚು ಶ್ರೀಮಂತರು ಇರುವ ನಗರಗಳನ್ನು ಗುರುತಿಸಿ ಲೆಕ್ಕಾಚಾರ ನಡೆಸಿದೆ. ಈ ವರ್ಷ ಭಾರತವು 94 ಹೊಸ ಬಿಲಿಯನೇರ್‌ಗಳನ್ನು ಸ್ವಾಗತಿಸಿದೆ. ಭಾರತದ

ಭಾರತದ ಶ್ರೀಮಂತ ನಗರ ಮುಂಬಯಿ… ಬೆಂಗಳೂರಿಗೆ ನಾಲ್ಕನೇ ಸ್ಥಾನ..,! Read More »

ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌.. ಪೊಲೀಸರು ನಿರ್ಬಂಧಿಸಿದಕ್ಕೆ ಮಾಡೆಲ್ ಬೇಸರ

ಸಮಗ್ರ ನ್ಯೂಸ್: ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌ಗೆ ಪೊಲೀಸರು ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಮಾಡೆಲ್‌ವೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್‌ ಮಾಡಿದ ಫೋಟೋಗಳ ಸಹಿತ ಪಡುಕೆರೆ ಬೀಚ್‌ನಲ್ಲಾದ ಕಹಿ ಅನುಭವವನ್ನು ಮಾಡೆಲ್‌ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ನನ್ನ ಪತಿ ಬಿಕಿನಿ ಫೋಟೊಶೂಟ್‌ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಿಕಿನಿ ಹಾಕಿಕೊಂಡು ಫೋಟೊಶೂಟ್‌ ಮಾಡಿಸಲು ಯಾರು ಪರ್ಮಿಷನ್‌ ಕೊಟ್ಟಿದ್ದು ಯಾರು? ಬಟ್ಟೆ ಬದಲಿಸಿ ಎಂದು ಸೂಚಿಸಿದ್ದರಂತೆ. ಇಲ್ಲದೇ ಹೋದರೆ

ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌.. ಪೊಲೀಸರು ನಿರ್ಬಂಧಿಸಿದಕ್ಕೆ ಮಾಡೆಲ್ ಬೇಸರ Read More »

ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಭೀತಿ| ಮುನ್ನೆಚ್ಚರಿಕಾ ಕ್ರಮವಾಗಿ ಸೂಚನಾ ಫಲಕ ಅಳವಡಿಕೆ

ಸಮಗ್ರ ನ್ಯೂಸ್: ಹಾಸನದಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮಣ್ಣು ಕುಸಿಯುತ್ತಿರುವ ಕಡೆ ಸೂಚನಾ ಫಲಕ ಅಳವಡಿಸುವ ಮೂಲಕ ತಾಲೂಕು ಆಡಳಿತ, ಹೆದ್ದಾರಿ ಪ್ರಾಧಿಕಾರದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಭೂಕುಸಿತ ಭೀತಿ ಹಿನ್ನಲೆ ಪ್ರತಿನಿತ್ಯ ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುವಂತಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ದೊಡ್ಡತಪ್ಲು ಬಳಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು.

ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಭೀತಿ| ಮುನ್ನೆಚ್ಚರಿಕಾ ಕ್ರಮವಾಗಿ ಸೂಚನಾ ಫಲಕ ಅಳವಡಿಕೆ Read More »

ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಂಪೂರ್ಣ ಅನುಷ್ಠಾನ ಸಾಧ್ಯವಿಲ್ಲ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬುಧವಾರ (ಆ.20) ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅವರು ನೀಡಿದ ಸಲಹೆಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ 16,632 ಚದರ ಕಿ.ಮೀ. ಪ್ರದೇಶವನ್ನು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳನ್ನಾಗಿ ಘೋಷಣೆ ಮಾಡಿದೆ. ಉಳಿದ ಪ್ರದೇಶದಲ್ಲಿ 1,533

ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಂಪೂರ್ಣ ಅನುಷ್ಠಾನ ಸಾಧ್ಯವಿಲ್ಲ – ಸಚಿವ ಖಂಡ್ರೆ Read More »

ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌. ಶ್ರೀನಿವಾಸ್‌ ಇನ್ನಿಲ್ಲ

ಸಮಗ್ರ ನ್ಯೂಸ್: ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌. ಶ್ರೀನಿವಾಸ್‌ ಅವರು ಇಂದು (ಆ.30)ನಿಧನರಾಗಿದ್ದಾರೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದ ಶ್ರೀನಿವಾಸ್‌ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು, ಆನಂತರ ಕಾಂಗ್ರೆಸ್‌ನಲ್ಲೂ ಇದ್ದವರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಅವರು ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನಿಮಾದಲ್ಲೂ ಅಭಿನಯಿಸಿದ್ದರು. ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ

ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌. ಶ್ರೀನಿವಾಸ್‌ ಇನ್ನಿಲ್ಲ Read More »

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಸೌಜನ್ಯ ಪೋಷಕರು ಸಲ್ಲಿಸಿದ ಮೂರೂ ಅರ್ಜಿಗಳು ವಜಾ

ಸಮಗ್ರ ನ್ಯೂಸ್: ಧರ್ಮಸ್ಥಳದ ಪಾಂಗಾಳ ಸಮೀಪ ಹನ್ನೆರಡು ವರ್ಷಗಳ ಹಿಂದೆ ನಡೆದಿದ್ದ ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಆದೇಶ ಹೊರಬಿದ್ದಿದೆ. ಪ್ರಕರಣದ ಮರುತನಿಖೆ ನಡೆಸುವಂತೆ ಸೌಜನ್ಯ ಪೋಷಕರು ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿ ಆದೇಶೀಸಿತ್ತು. ಇಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಬಿದ್ದಿದ್ದು, ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರಿದ್ದ ಪೀಠವು ಮರುತನಿಖೆ ಅರ್ಜಿಗಳನ್ನು ವಜಾಗೊಳಿಸಿ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಸೌಜನ್ಯ ಪೋಷಕರು ಸಲ್ಲಿಸಿದ ಮೂರೂ ಅರ್ಜಿಗಳು ವಜಾ Read More »

ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ| ಬ್ಯಾನ್ ಆಗುತ್ತಾ ಕೇಕ್ !?

ಸಮಗ್ರ ನ್ಯೂಸ್:ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ, ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ‌ಜನರು ಸೇವಿಸುವ ಆಹಾರ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದ್ದು, ಕಲಬೆರಕೆ ಆಹಾರದ ವಿರುದ್ಧ ಸಮರ ಸಾರಿದೆ. ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.‌ ಇದಕ್ಕೆ ಪೂರಕವಾಗಿ ಮೊದಲಿಗೆ ಸಾಮಾನ್ಯವಾಗಿ ಜನರು ಹೆಚ್ಚು ಸೇವನೆ ಮಾಡುವ ಕೇಕ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ.‌ ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ

ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ| ಬ್ಯಾನ್ ಆಗುತ್ತಾ ಕೇಕ್ !? Read More »

ಕೇಂದ್ರ ಸರ್ಕಾರದಿಂದ ದ. ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ 10.32 ಕೋಟಿ ರೂ. ಅನುದಾನ ಬಿಡುಗಡೆ; ಕ್ಯಾ. ಬ್ರಿಜೇಶ್ ಚೌಟ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್ (ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ್ ಮಹಾ ಅಭಿಯಾನ್) ಯೋಜನೆಯಡಿ ದ. ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಒಟ್ಟು 10.32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಈ ಪಿಎಂ ಜನ್ ಮನ್ ಯೋಜನೆಯಡಿ 2024-25ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು

ಕೇಂದ್ರ ಸರ್ಕಾರದಿಂದ ದ. ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ 10.32 ಕೋಟಿ ರೂ. ಅನುದಾನ ಬಿಡುಗಡೆ; ಕ್ಯಾ. ಬ್ರಿಜೇಶ್ ಚೌಟ Read More »