ರಾಜ್ಯ

ದಿ| ಮುತ್ತಪ್ಪ‌ ರೈ ಆಸ್ತಿ ವಿವಾದ| ರಾಜಿಯಲ್ಲಿ ಇತ್ಯರ್ಥಕ್ಕೆ ಕುಟುಂಬಸ್ಥರ‌ ಸಮ್ಮತಿ

ಸಮಗ್ರ ನ್ಯೂಸ್: ಖ್ಯಾತ ಉದ್ಯಮಿ, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ದಿ|ಮುತ್ತಪ್ಪ ರೈ ಅವರ ಆಸ್ತಿ ವಿವಾದವನ್ನು ರಾಜಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಅವರ ಪುತ್ರರಾದ ರಿಕ್ಕಿ ರೈ, ರಾಕಿ ರೈ ಮತ್ತು ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಪರಸ್ಪರ ಸಮ್ಮತಿ ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರೈ ಒಡೆತನದ ಸುಮಾರು 500 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯ ಒಡೆತನಕ್ಕಾಗಿ ಮುತ್ತಪ್ಪ ರೈ ಪುತ್ರರ ವಿರುದ್ಧ ಅನುರಾಧಾ ನ್ಯಾಯಾಲಯದಲ್ಲಿ […]

ದಿ| ಮುತ್ತಪ್ಪ‌ ರೈ ಆಸ್ತಿ ವಿವಾದ| ರಾಜಿಯಲ್ಲಿ ಇತ್ಯರ್ಥಕ್ಕೆ ಕುಟುಂಬಸ್ಥರ‌ ಸಮ್ಮತಿ Read More »

ರಾಷ್ಟ್ರ ರಾಜಧಾನಿಗೆ ನೂತನ ಮುಖ್ಯಮಂತ್ರಿ/ ಇಂದು ಎಎಪಿ ನಾಯಕಿ ಅತಿಶಿ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಸಮಗ್ರ ನ್ಯೂಸ್‌: ದೆಹಲಿ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಅತಿಶಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಮಧ್ಯಾಹ್ನ ರಾಜ್ ನಿವಾಸ್‌ನಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಅಧಿಕಾರಿಗಳು, ರಾಷ್ಟ್ರಪತಿ ದೌಪದಿ ಮುರ್ಮು ಅವರು ಅತಿಶಿ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ನೇಮಕ ಮಾಡಿದ್ದಾರೆ ಮತ್ತು ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ಸಹ ಅಂಗೀಕರಿಸಿದ್ದಾರೆ ಎಂದು ಹೇಳಿದರು. ಐವರು ಸಚಿವರ ನೇಮಕಕ್ಕೆ ರಾಷ್ಟ್ರ ಪತಿಗಳು ಅನುಮತಿ ನೀಡಿದ್ದು, ಸಂಜೆ 4.30ಕ್ಕೆ ರಾಜ್

ರಾಷ್ಟ್ರ ರಾಜಧಾನಿಗೆ ನೂತನ ಮುಖ್ಯಮಂತ್ರಿ/ ಇಂದು ಎಎಪಿ ನಾಯಕಿ ಅತಿಶಿ ಪ್ರಮಾಣ ವಚನ ಸ್ವೀಕಾರ ಸಮಾರಂಭ Read More »

ಅಮೇರಿಕಾದಲ್ಲಿ ನಮೋ ಸಂಚಲನ/ ಕ್ವಾಡ್‌ ನಾಯಕರ ಶೃಂಗಸಭೆಯಲ್ಲಿ ಭಾಗಿ

ಸಮಗ್ರ ನ್ಯೂಸ್‌: ಮೂರು ದಿನಗಳ ಅಮೆರಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದ್ದು, ಕ್ಯಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. “6 ನೇ ಕ್ಯಾಡ್ ಲೀಡರ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಯುಎನ್ ‘ಭವಿಷ್ಯದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಯುಎಸ್‌ಎ ಗೆ ಹಾರಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟ್ವೀಟ್‌‌ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭವಿಷ್ಯದ ಶೃಂಗಸಭೆಯನ್ನು ಉದ್ದೇಶಿಸಿ ಮತ್ತು ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಸೆಪ್ಟೆಂಬರ್ 21 ರಂದು

ಅಮೇರಿಕಾದಲ್ಲಿ ನಮೋ ಸಂಚಲನ/ ಕ್ವಾಡ್‌ ನಾಯಕರ ಶೃಂಗಸಭೆಯಲ್ಲಿ ಭಾಗಿ Read More »

ಮೈಸೂರು: ದಸರಾ ಆನೆಗಳ ಗುದ್ದಾಟ.. ಏಕಾಏಕಿ ಅರಮನೆಯಿಂದ ಓಡಿದ ಗಜಪಡೆ

ಸಮಗ್ರ ನ್ಯೂಸ್: ನಾಡ ಹಬ್ಬದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ನಡುವೆ ಗಲಾಟೆಯಾಗಿದೆ. ‘ಕಂಜನ್’ ಆನೆ ಅರಮನೆಯ ಜಯಮಾರ್ತಾಂಡ ದ್ವಾರದ ಆವರಣ ಮೂಲಕ ರಸ್ತೆಗೆ ಓಡಿ ಬಂದ ಘಟನೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದೆ. ರಾತ್ರಿ ಊಟ ಮಾಡುವ ವೇಳೆ ‘ಧನಂಜಯ’ ಮತ್ತು ‘ಕಂಜನ್’ ಆನೆ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಕಂಜನ್ ಆನೆ ಮೇಲಿದ್ದ ಮಾವುತ ಕೆಳಕ್ಕೆ ಬಿದ್ದಿದ್ದಾನೆ. ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಆನೆಯು ಏಕಾಏಕಿ ಅರಮನೆಯಿಂದ

ಮೈಸೂರು: ದಸರಾ ಆನೆಗಳ ಗುದ್ದಾಟ.. ಏಕಾಏಕಿ ಅರಮನೆಯಿಂದ ಓಡಿದ ಗಜಪಡೆ Read More »

ತಿರುಪತಿ ಲಡ್ಡು ವಿವಾದದ ಹಿನ್ನೆಲೆ| ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ‘ನಂದಿನಿ’ ತುಪ್ಪ ಮಾತ್ರ ಬಳಕೆಗೆ ಸುತ್ತೋಲೆ

ಸಮಗ್ರ ನ್ಯೂಸ್: ತಿರುಪತಿ ಪ್ರಸಾದದ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿನ ಎಲ್ಲಾ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆ ಹಾಗೂ ದಾಸೋಹಕ್ಕೆ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಶುಕ್ರವಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ದೇವಾಲಯಗಳಲ್ಲಿ ತಯಾರಿಸಲಾಗುವ ಪ್ರಸಾದಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಲಾಗಿದೆ.

ತಿರುಪತಿ ಲಡ್ಡು ವಿವಾದದ ಹಿನ್ನೆಲೆ| ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ‘ನಂದಿನಿ’ ತುಪ್ಪ ಮಾತ್ರ ಬಳಕೆಗೆ ಸುತ್ತೋಲೆ Read More »

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಹಂ.ಪ ನಾಗರಾಜಯ್ಯ/ ಸಿಎಂ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್‌: ಮೈಸೂರು ದಸರಾವನ್ನು ಸಾಹಿತಿ ಹಂ.ಪ ನಾಗರಾಜಯ್ಯ ಅವರು ಈ ಬಾರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಅ.3ರಂದು ದಸರಾ ಉದ್ಘಾಟನೆಯಾಗಲಿದೆ. ಈ ಬಾರಿಯ ದಸರಾವನ್ನು ಸಾಹಿತಿ ಹಂಪ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಹಂ.ಪ ನಾಗರಾಜಯ್ಯ/ ಸಿಎಂ ಸಿದ್ದರಾಮಯ್ಯ ಘೋಷಣೆ Read More »

ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ತರಾಟೆ

ಸಮಗ್ರ ನ್ಯೂಸ್: ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದು ಕರೆದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ನ್ಯಾಯಾಲಯದ ವಿಚಾರಣೆ ವೇಳೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಹೈಕೋರ್ಟ್ ನಿಂದ ವರದಿ ಕೇಳಿ, ತರಾಟೆಗೆ ತೆಗೆದುಕೊಂಡಿದೆ. ಜಮೀನ್ದಾರ-ಬಾಡಿಗೆದಾರ ವಿವಾದವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಶ್ರೀಶಾನಂದ, ಬೆಂಗಳೂರಿನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು ಗೋರಿಪಾಳ್ಯವನ್ನು “ಪಾಕಿಸ್ತಾನ” ಎಂದು ಉಲ್ಲೇಖಿಸಿದರು ಮತ್ತು ಮಹಿಳಾ ವಕೀಲರನ್ನು ಒಳಗೊಂಡ ಸ್ತ್ರೀ ವಿರೋಧಿ

ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ತರಾಟೆ Read More »

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌/ ಆಂಧ್ರದಲ್ಲಿ ಹೊಸ ಮದ್ಯ ನೀತಿ ಜಾರಿ

ಸಮಗ್ರ ನ್ಯೂಸ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆ ಹೊಸ ಮದ್ಯದ ನೀತಿ ಜಾರಿಗೆ ಅನುಮೋದನೆ ನೀಡಿದೆ. ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ನೂತನ ಮದ್ಯ ನೀತಿ ಜಾರಿಗೆ ಬರಲಿದ್ದು, ಈ ಹೊಸ ಮದ್ಯ ನೀತಿಯಲ್ಲಿ ಎಲ್ಲಾ ಬ್ರಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂ. ಗರಿಷ್ಠ ದರ ನಿಗದಿಪಡಿಸಲಾಗಿದೆ. ಆಂಧ್ರಪ್ರದೇಶದಲ್ಲಿರುವ 3736 ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಲ್ಲಿ ಶೇಕಡ 10ರಷ್ಟು ಕಳ್ಳು ತೆಗೆಯುವ ಸಮುದಾಯದವರಿಗೆ ನೀಡಲಾಗುವುದು. ಆನೈನ್

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌/ ಆಂಧ್ರದಲ್ಲಿ ಹೊಸ ಮದ್ಯ ನೀತಿ ಜಾರಿ Read More »

‘ಎಮರ್ಜೆನ್ಸಿ ಸಿನಿಮಾಗೆ ಕೇಂದ್ರ ಸೆನ್ಸಾರ್ ಮಂಡಳಿಯು ಸರ್ಟಿಫಿಕೇಟ್/ ಒಂದು ವಾರದ ಒಳಗೆ ಪ್ರಮಾಣ ಪತ್ರ ನೀಡಲು ಬಾಂಬೆ ಹೈಕೋರ್ಟ್‌ ಸೂಚನೆ

ಸಮಗ್ರ ನ್ಯೂಸ್‌: ಕೇಂದ್ರ ಸೆನ್ಸಾರ್ ಮಂಡಳಿಯು ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ ಸಿನಿಮಾಗೆ ಸರ್ಟಿಫಿಕೇಟ್ ನೀಡದೆ ತಡೆ ನೀಡಿದನ್ನು ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದು, ಇದೀಗ ಹೈರ್ಕೋಟ್ ಸೆನ್ಸಾರ್ ಮಂಡಳಿಗೆ ಒಂದು ವಾರದ ಒಳಗೆ ಪ್ರಮಾಣ ಪತ್ರದ ತೀರ್ಮಾನ ತಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. 1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು

‘ಎಮರ್ಜೆನ್ಸಿ ಸಿನಿಮಾಗೆ ಕೇಂದ್ರ ಸೆನ್ಸಾರ್ ಮಂಡಳಿಯು ಸರ್ಟಿಫಿಕೇಟ್/ ಒಂದು ವಾರದ ಒಳಗೆ ಪ್ರಮಾಣ ಪತ್ರ ನೀಡಲು ಬಾಂಬೆ ಹೈಕೋರ್ಟ್‌ ಸೂಚನೆ Read More »

ರಾಹುಲ್‌ ಮತ್ತು ಪ್ರಿಯಾಂಕಾಗೆ ಎಸ್‌ಪಿಜಿ ಭದ್ರತೆ/ ಕಾಂಗ್ರೆಸ್‌ ಒತ್ತಾಯ

ಸಮಗ್ರ ನ್ಯೂಸ್‌: ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಸಚಿವ ರವನೀತ್ ಬಿಟ್ಟು ವಿವಾದಾತ್ಮಕ ಹೇಳಿಕೆಯ ನಂತರ ಎಐಸಿಸಿ ರಾಷ್ಟ್ರೀಯ ವಕ್ತಾರ ಮತ್ತು ಕಾಂಗ್ರೆಸ್ ಶಾಸಕ ಕುಲದೀಪ್ ರಾಥೋಡ್ ಅವರು ಬಿಜೆಪಿಯನ್ನು ಟೀಕಿಸಿದ್ದು, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರಿಗೆ ಎಸ್‌ಪಿಜಿ ಭದ್ರತೆಯನ್ನು ಮರುಸ್ಥಾಪಿಸುವಂತೆ ಕರೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಲು ಬಿಜೆಪಿಯ ಪ್ರಯತ್ನಗಳನ್ನು ರಾಥೋಡ್ ಖಂಡಿಸಿದರು. ಇದು ಅವರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಸೂಚಿಸಿದರು. ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ

ರಾಹುಲ್‌ ಮತ್ತು ಪ್ರಿಯಾಂಕಾಗೆ ಎಸ್‌ಪಿಜಿ ಭದ್ರತೆ/ ಕಾಂಗ್ರೆಸ್‌ ಒತ್ತಾಯ Read More »