ರಾಜ್ಯ

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು.ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ […]

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ Read More »

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು. ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು Read More »

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜಕ್ಕೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದುವ ಕುರಿತು ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್‌ ಇಂದು ವಜಾ ಮಾಡಿದೆ. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಎಂಬುವವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಮಾ.8ರಂದು (2018) ಸಿಎಂ ಸಿದ್ದರಾಮಯ್ಯ ಅವರು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜಕ್ಕೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ| ಭಾರೀ ಮಳೆಗೆ ತತ್ತರಿಸಿದ ಪೂರ್ವ ಕರಾವಳಿ

ಸಮಗ್ರ ನ್ಯೂಸ್: ಡಾನಾ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ ಕಾರಣವಾಗಿದೆ. ಕೇಂದ್ರಪಾರ ಜಿಲ್ಲೆಯ ಭಿಟಾರ್ ಕನಿಕ ಹಾಗೂ ಭದ್ರಕ್ ಜಿಲ್ಲೆಯ ಧಮ್ರ ನಡುವೆ ಈ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ ಸುಮಾರು 110 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಹಾಗೂ ಜಗತ್ ಸಿಂಗ್ ಪುರ್ ಗೆ ಮಧ್ಯರಾತ್ರಿ ಗಂಟೆಗೆ ಸುಮಾರು 110 ಕಿಮೀ ವೇಗದ ಬಿರುಗಾಳಿಯೊಂದಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಈ

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ| ಭಾರೀ ಮಳೆಗೆ ತತ್ತರಿಸಿದ ಪೂರ್ವ ಕರಾವಳಿ Read More »

ದೇಶದ ಇತಿಹಾಸದಲ್ಲೇ ಇದೇ ಮೊದಲು : ದಲಿತರ ಮೇಲಿನ ದೌರ್ಜನ್ಯ ಕೇಸ್ ನಲ್ಲಿ 98 ಆರೋಪಿಗಳಿಗೆ `ಜೀವಾವಧಿ’ ಶಿಕ್ಷೆ

ಸಮಗ್ರ ನ್ಯೂಸ್: ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಬಂಧಿತರಾಗಿದ್ದಂತ 101 ಆರೋಪಿಗಳಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಕೋರ್ಟ್‌ ಆದೇಶಿಸಿದೆ.ಈ ಮೂಲಕ ಈ ಪ್ರಕರಣ ದೇಶದ ಇತಿಹಾಸದಲ್ಲೇ ಇಷ್ಟು ಜನರಿಗೆ ಒಂದೇ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಮೊದಲು. ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮೂವರು ಆರೋಪಿಗಳಇಗೆ ಐದು ವರ್ಷ ಕಠಿಣ ಶಿಕ್ಷೆಯನ್ನು ತಲಾ 2 ಸಾವಿರ ದಂಡವನ್ನು ವಿಧಿಸಿದ್ದಾರೆ. ಇನ್ನೂ ಜೀವಾವಧಿ ಶಿಕ್ಷೆಗೆ

ದೇಶದ ಇತಿಹಾಸದಲ್ಲೇ ಇದೇ ಮೊದಲು : ದಲಿತರ ಮೇಲಿನ ದೌರ್ಜನ್ಯ ಕೇಸ್ ನಲ್ಲಿ 98 ಆರೋಪಿಗಳಿಗೆ `ಜೀವಾವಧಿ’ ಶಿಕ್ಷೆ Read More »

ಡಾನಾ ಚಂಡಮಾರುತದ ರೌದ್ರನರ್ತನ| ಒಡಿಶಾದಲ್ಲಿ ಭಾರೀ ಮಳೆ| ಕರ್ನಾಟಕ ಸೇರಿದಂತೆ ದ. ರಾಜ್ಯಗಳಲ್ಲಿ ಹೈ ಅಲರ್ಟ್

ಸಮಗ್ರ ನ್ಯೂಸ್: ಡಾನಾ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಒಡಿಶಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಂಡಿದೆ. ಪ್ರಚಂಡ ಮಳೆ ಹಾಗೂ ಭಾರೀ ಬಿರುಗಾಳಿಯಿಂದಾಗಿ ರಾಜ್ಯಾದ್ಯಂತ ಆತಂಕದ ಪರಿಸ್ಥಿತಿ ಎದುರಾಗಿದೆ.ಡಾನಾ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಸಹ ಬೀರಲಿದ್ದು, ಇನ್ನೂ ಎರಡು ದಿನ ರಾಜ್ಯಾದ್ಯಂತ ಮಳೆಯಾಗುವ ಸಂಭವವಿದೆ. 100-110 ಮೈಲಿ ವೇಗದಲ್ಲಿ ಚಂಡ ಮಾರುತ ಬಂದು ಅಪ್ಪಳಿಸುತ್ತಿದ್ದು, ಏಕಾಏಕಿ ಮಳೆ ಅಬ್ಬರ ಹೆಚ್ಚಾಗಿದೆ. ಭದ್ರಕ್‌, ಕೇಂದ್ರಪರ, ಬಲಸೋರ್‌ ಹಾಗೂ ಜಗತ್‌ ಸಿಂಗ್‌ ಪುರ ಜಿಲ್ಲೆಯಲ್ಲಿ ಇದುವರೆಗೂ 6 ಲಕ್ಷ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಉತ್ತರ

ಡಾನಾ ಚಂಡಮಾರುತದ ರೌದ್ರನರ್ತನ| ಒಡಿಶಾದಲ್ಲಿ ಭಾರೀ ಮಳೆ| ಕರ್ನಾಟಕ ಸೇರಿದಂತೆ ದ. ರಾಜ್ಯಗಳಲ್ಲಿ ಹೈ ಅಲರ್ಟ್ Read More »

ಬೇಲೆಕೇರಿ‌ ಬಂದರು ಅದಿರು ನಾಪತ್ತೆ ಪ್ರಕರಣ ಅಪರಾದ ಸಾಬೀತು ಹಿನ್ನಲೆ| ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅರೆಸ್ಟ್

ಸಮಗ್ರ ನ್ಯೂಸ್: 2010ರ ಬೇಲೆಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣ ಸಂಬಂಧದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಅಪರಾಧಿ ಎಂಬುದಾಗಿ ತನ್ನ ತೀರ್ಪಿನಲ್ಲಿ ಕೋರ್ಟ್ ಪ್ರಕಟಿಸಿದೆ. ಆದರೇ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ- ಪ್ರತಿವಾದವನ್ನು ಆಲಿಸಿತ್ತು. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ್ದು,

ಬೇಲೆಕೇರಿ‌ ಬಂದರು ಅದಿರು ನಾಪತ್ತೆ ಪ್ರಕರಣ ಅಪರಾದ ಸಾಬೀತು ಹಿನ್ನಲೆ| ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅರೆಸ್ಟ್ Read More »

ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ; ವಿರೋಧ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಮಾಡಲು ನಿಗದಿಗೊಳಿಸಿದ ಕೆಲವು ಸ್ಥಳಗಳು ಚರ್ಚೆಗೆ ಕಾರಣವಾಗಿವೆ.ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ, ಟೆಂಡರ್ ಪ್ರಕ್ರಿಯೆಗೆ ಬುಧವಾರ ಮಂಗಳೂರಿನ ನೆಹರೂ ಮೈದಾನಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿದ್ದು, ಈ ವೇಳೆ ಕ್ರಿಕೆಟ್ ಅಸೋಸಿಯೇಶನ್‌ನಿಂದ ವಿರೋಧ ವ್ಯಕ್ತವಾಗಿದೆ. ಗೀತಾಂಜಲಿ ಅವರು ಮಾಧ್ಯಮದ ಜತೆ ಮಾತನಾಡಿ, “ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಟೆಂಡ‌ರ್ ಇದ್ದು ಗೇಟ್‌ ತೆರೆಯುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೆಹರೂ ಮೈದಾನವನ್ನು ಆಟೋಟ

ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ; ವಿರೋಧ Read More »

ವಿಧಾನ ಪರಿಷತ್ ಉಪಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿಗೆ ಭರ್ಜರಿ‌ ಗೆಲುವು

ಸಮಗ್ರ ನ್ಯೂಸ್: ದ.ಕ‌ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಅವರು 1693 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಿಶೋರ್ ಕುಮಾರ್ ಅವರು ಎಂ.ಎ. ಸ್ನಾತಕೋತ್ತರ ಪದವೀಧರರಾಗಿದ್ದು, ಅವರ ವಿದ್ಯಾರ್ಥಿ ಜೀವನದಿಂದಲೇ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ (ಎಬಿವಿಪಿ) ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪ್ರಸ್ತುತ ಅವರು ದ.ಕ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ

ವಿಧಾನ ಪರಿಷತ್ ಉಪಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿಗೆ ಭರ್ಜರಿ‌ ಗೆಲುವು Read More »

ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಹಣದ ಬದಲು ದಿನಸಿ ಕಿಟ್ ನೀಡಲು ರಾಜ್ಯ ಸರ್ಕಾರ ನಿರ್ಧಾರ..!

ಸಮಗ್ರ ನ್ಯೂಸ್: ಇನ್ಮುಂದೆ ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಈ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ.ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಣ್ಣೆ, ಬೇಳೆ, ಕಾಳು ಒಳಗೊಂಡಂತಹ ದಿನಸಿ ಕಿಟ್ ನೀಡಲು ಸರ್ಕಾರ ನಿರ್ಧರಿಸಿದೆ.ಅನ್ನಭಾಗ್ಯದ ಹಣ ಡಿಬಿಟಿ ಫಲಾನುಭವಿಗಳ ಖಾತೆಗೆ ಸರಿಯಾಗಿ ಸಮಯಕ್ಕೆ ಜಮಾ ಆಗದಿರುವ ಹಿನ್ನೆಲೆ ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲು

ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಹಣದ ಬದಲು ದಿನಸಿ ಕಿಟ್ ನೀಡಲು ರಾಜ್ಯ ಸರ್ಕಾರ ನಿರ್ಧಾರ..! Read More »