ರಾಷ್ಟ್ರೀಯ

ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು! ಅದ್ಭುತ ಫೀಚರ್ಸ್, ಸೂಪರ್ ಮೈಲೇಜ್ ಕೂಡ

ಸಮಗ್ರ ನ್ಯೂಸ್: ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರದ ಪ್ರೋತ್ಸಾಹಗಳು ಜನರನ್ನು ಇವಿ ವಾಹನಗಳತ್ತ ತಿರುಗಿಸುತ್ತಿವೆ. ಈ ಕ್ರಮದಲ್ಲಿ, ಅತಿದೊಡ್ಡ ದೇಶೀಯ ಆಟೋಮೊಬೈಲ್ ಕಂಪನಿ ಟಾಟಾ, ಕಡಿಮೆ ಬೆಲೆಯಲ್ಲಿ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರುತ್ತಿದೆ. ಈ ವಾಹನದ ಬುಕ್ಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ಇದೀಗ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಟಾಟಾ ಪಂಚ್ ಇವಿ ಜನವರಿ […]

ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು! ಅದ್ಭುತ ಫೀಚರ್ಸ್, ಸೂಪರ್ ಮೈಲೇಜ್ ಕೂಡ Read More »

ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಐಎನ್‍ಡಿಐಎ ಮೈತ್ರಿಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೈತ್ರಿಕೂಟದ ಮುಖ್ಯಸ್ತರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ನಿತೀಶ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಹುಮತದೊಂದಿಗೆ ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕಕ್ಕೆ ಕೂಡ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕ Read More »

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು! ಇಲ್ಲಿದೆ ನೋಡಿ ಸೂಪರ್ ಫೀಚರ್ಸ್ ಗಳು

ಸಮಗ್ರ ನ್ಯೂಸ್: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್) ಜನವರಿ 13 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 17 ರಂದು ಕೊನೆಗೊಳ್ಳುತ್ತದೆ. ಆದರೆ ಈ ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅನೇಕ ಇತರ ವಸ್ತುಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುವುದು. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುವವರಿಗೆ ಇದು ಉತ್ತಮ ಸಮಯ. Amazon Great Republic Day Sale Redmi Note 13 5G, Vivo Y56, Itel s23+, Realme Narzo

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು! ಇಲ್ಲಿದೆ ನೋಡಿ ಸೂಪರ್ ಫೀಚರ್ಸ್ ಗಳು Read More »

8 ವರ್ಷಗಳ ನಂತರ ಸಮುದ್ರದಾಳದಲ್ಲಿ ಪತ್ತೆಯಾಯ್ತು ವಿಮಾನ

ಸಮಗ್ರ ನ್ಯೂಸ್: 8 ವರ್ಷಗಳ ನಂತರ ಆಳವಾದ ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಿಮಾನ ಇದೀಗ ಪತ್ತೆಯಾಗಿದೆ. AN-32-2743 ವಿಮಾನ ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್​ ದೂರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ವಾಯು ಸೇನೆ ಮೂಲಗಳಿಂದ ಅಧಿಕೃತ ಮಾಹಿತಿ ನೀಡಲಾಗಿದೆ. 2016ರ ಜುಲೈ 22 ರಂದು ಚೆನ್ನೈನ ತಾಂಬರಂ ವಾಯುನೆಲೆಯಿಂದ ಬೆಳಗ್ಗೆ 8.30ಕ್ಕೆ ಹೊರಟಿದ್ದ AN-32-2743 ವಿಮಾನ, ಬೆಳಗ್ಗೆ 9.12ಕ್ಕೆ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್​ಬ್ಲೇರ್ ತಲುಪಬೇಕಿತ್ತು. ಮಧ್ಯಾಹ್ನ 1.50ಕ್ಕೆ ವಿಮಾನ ಕಣ್ಮರೆಯಾಗಿದೆ ಎಂದು IAF ಪ್ರಕಟಣೆಯಲ್ಲಿ ತಿಳಿಸಿತ್ತು.ಇದರಲ್ಲಿ ದಕ್ಷಿಣ

8 ವರ್ಷಗಳ ನಂತರ ಸಮುದ್ರದಾಳದಲ್ಲಿ ಪತ್ತೆಯಾಯ್ತು ವಿಮಾನ Read More »

Apple AirPods ಸಿಗ್ತಾ ಇದೆ ಅತೀ ಕಡಿಮೆ ಬೆಲೆಗೆ! ಬೆಸ್ಟ್ ಆಫರ್ ನ್ನು ಮಿಸ್ ಮಾಡ್ಕೋಬೇಡಿ

ಸಮಗ್ರ ನ್ಯೂಸ್: ಟೆಕ್ ದೈತ್ಯ ಆಪಲ್ ತಯಾರಿಸಿದ ಏರ್‌ಪಾಡ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಡಿಯೊ ಉತ್ಪನ್ನಗಳಲ್ಲಿ ಒಂದಾಗಿದೆ. ಈ ಸಾಲಿನಲ್ಲಿನ ಮೂರನೇ ಆವೃತ್ತಿಯು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತ್ತೀಚಿನ ಉತ್ಪನ್ನವಾಗಿದೆ. ಆದರೆ ಎರಡನೇ ತಲೆಮಾರಿನ ಏರ್‌ಪಾಡ್‌ಗಳ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗೆ, ಅದರ ಬೆಲೆ ಬಹಳ ಕಡಿಮೆಯಾಗಿದೆ. ಫ್ಲಿಪ್‌ಕಾರ್ಟ್ ಈ ಉತ್ಪನ್ನವನ್ನು ರೂ.10 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀಡುತ್ತಿದೆ. ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಸಿದರೆ ಗ್ರಾಹಕರು ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆಯಬಹುದು. ಸಂಗೀತ ಪ್ರಿಯರಿಗೆ

Apple AirPods ಸಿಗ್ತಾ ಇದೆ ಅತೀ ಕಡಿಮೆ ಬೆಲೆಗೆ! ಬೆಸ್ಟ್ ಆಫರ್ ನ್ನು ಮಿಸ್ ಮಾಡ್ಕೋಬೇಡಿ Read More »

ಷೇರು ಮಾರುಕಟ್ಟೆಯಲ್ಲಿ ನಾಗಾಲೋಟ| ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಪ್ಟಿ

ಸಮಗ್ರ ನ್ಯೂಸ್: ಷೇರು ಮಾರುಕಟ್ಟೆ ಇಂದು ಏರಿಕೆಯನ್ನ ಕಾಣುತ್ತಿದ್ದು, ಭಾರತದ ಬ್ಲೂ-ಚಿಪ್ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನ ತಲುಪಿದವು. ಸೆನ್ಸೆಕ್ಸ್ 427 ಪಾಯಿಂಟ್ಸ್ ಏರಿಕೆಗೊಂಡು 72,148 ಕ್ಕೆ ತಲುಪಿದೆ ಮತ್ತು ನಿಫ್ಟಿ 21,735 ಕ್ಕೆ ಪ್ರಾರಂಭವಾಯಿತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 500 ಅಂಕಗಳ ಜಿಗಿತದೊಂದಿಗೆ 72,000 ಮಟ್ಟವನ್ನು ದಾಟಿತು. ನಿಫ್ಟಿ 21,700 ಮಟ್ಟವನ್ನು ದಾಟಿದೆ. ಇದರ ನಂತರವೂ, ಷೇರು ಮಾರುಕಟ್ಟೆ ಏರುತ್ತಲೇ ಇತ್ತು. ಐಟಿ ಸೇವಾ ಸಂಸ್ಥೆಗಳ ಫಲಿತಾಂಶಗಳು ಮತ್ತು

ಷೇರು ಮಾರುಕಟ್ಟೆಯಲ್ಲಿ ನಾಗಾಲೋಟ| ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಪ್ಟಿ Read More »

100 ಶತಕೋಟಿ ಡಾಲರ್ ಕ್ಲಬ್ ಸೇರಿದ ಅಂಬಾನಿ/ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ

ಸಮಗ್ರ ನ್ಯೂಸ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು 100 ಶತಕೋಟಿ ಡಾಲರ್ ಕ್ಲಬ್ ಕೂಡ ಸೇರುವ ಮೂಲಕ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗೌತಮ್ ಅದಾನಿ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಈಗ ಈ ಸ್ಥಾನವನ್ನು ಮುಕೇಶ್ ಅಂಬಾನಿ ಮತ್ತೆ ಪಡೆದುಕೊಂಡಿದ್ದಾರೆ. ರಿಲಯನ್ಸ್ ಕಂಪನಿಯು ಇತ್ತೀಚೆಗೆ ಹೆಚ್ಚು ಲಾಭ ಗಳಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಮುಕೇಶ್ ಅಂಬಾನಿ ಅವರು 8.7 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು

100 ಶತಕೋಟಿ ಡಾಲರ್ ಕ್ಲಬ್ ಸೇರಿದ ಅಂಬಾನಿ/ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ Read More »

ದೇಶದ ಅತೀ ಉದ್ದದ ಸಮುದ್ರ ಸೇತುವೆ ಇಂದು ಲೋಕಾರ್ಪಣೆ/ ಪ್ರಧಾನಿ ಮೋದಿಯಿಂದ ಉದ್ಘಾಟನೆ

ಸಮಗ್ರ ನ್ಯೂಸ್: ದೇಶದ ಅತೀ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಇಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಂಬೈನ ಸವಿ ಹಾಗೂ ರಾಯಗಢದ ಪ್ರವಾ ಪ್ರದೇಶದ ನಡುವಿನ 21.8 ಕಿ.ಮೀ ಉದ್ದದ ಸೇತುವೆಯನ್ನು ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಒಟ್ಟಾರೆ ಆರು ಲೇನ್ ಮಾರ್ಗ ಹೊಂದಿರುವ ಅಟಲ್ ಬಿಹಾರಿ ವಾಜಪೇಯಿ ಸೇವಿ-ನವ ಶೇವಾ ಅಟಲ್ ಸೇತು ಸಮುದ್ರದ ಮೇಲೆ 16.50 ಕಿಮೀ ಹಾಗೂ ಭೂಮಿಯ ಮೇಲೆ 5.50 ಕಿ.ಮೀ ಉದ್ದವನ್ನು ಹೊಂದಿದೆ.

ದೇಶದ ಅತೀ ಉದ್ದದ ಸಮುದ್ರ ಸೇತುವೆ ಇಂದು ಲೋಕಾರ್ಪಣೆ/ ಪ್ರಧಾನಿ ಮೋದಿಯಿಂದ ಉದ್ಘಾಟನೆ Read More »

ಜ.31ರಿಂದ ಬಜೆಟ್ ಅಧಿವೇಶನ/ ಫೆ.1ರಂದು ಮಧ್ಯಂತರ ಬಜೆಟ್

ಸಮಗ್ರ ನ್ಯೂಸ್: ಮೋದಿ ನೇತೃತ್ವದ ಈ ಸರ್ಕಾರದ ಕೊನೆಯ ಬಜೆಟ್ ಗೆ ದಿನಾಂಕ ನಿಗದಿಯಾಗಿದ್ದು, ಫೆ.1ರಂದು ಮಧ್ಯಂತರ ಬಜೆಟ್ ಹಾಗೂ ಜ.31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಜ.31ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂಸತ್‍ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಾರೆ. ಮರುದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ಇರುವ ಕಾರಣ ಅದರ ಮುಂಚಿನ ಬಜೆಟ್‍ನ್ನು ಮಧ್ಯಂತರ ಬಜೆಟ್ ಎನ್ನಲಾಗುತ್ತದೆ. ಚುನಾವಣೆ ನಂತರ ಹೊಸ

ಜ.31ರಿಂದ ಬಜೆಟ್ ಅಧಿವೇಶನ/ ಫೆ.1ರಂದು ಮಧ್ಯಂತರ ಬಜೆಟ್ Read More »

ಅಯೋಧ್ಯೆಯಲ್ಲಿ ಮೊಳಗಲಿದೆ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ”

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ ಎಂದು ಅಯೋಧ್ಯೆ ಟ್ರಸ್ಟ್ ಟ್ವಿಟ್ ಮಾಡುವ ಮೂಲಕ ಖಚಿತಪಡಿಸಿದೆ. ಈ ಕುರಿತು ಡಾ.ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದು ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್‍ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು.ಡಾ.ಗಜಾನನ ಶರ್ಮಾರವರಿಗೆ

ಅಯೋಧ್ಯೆಯಲ್ಲಿ ಮೊಳಗಲಿದೆ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” Read More »