ರಾಷ್ಟ್ರೀಯ

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು/ ಇಂದು ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 6 ನಿಲ್ದಾಣಗಳನ್ನು ಹೊಂದಿರುವ ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಒಟ್ಟು […]

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು/ ಇಂದು ಮೋದಿ ಉದ್ಘಾಟನೆ Read More »

ಭಾರತ ಸೇರಿದಂತೆ ವಿಶ್ವದಾದ್ಯಂತ ಪೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್

ಸಮಗ್ರ ನ್ಯೂಸ್: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರಿಗೆ ಅಂಡ್ರಾಯ್ಡ್​​, ಐಒಎಸ್​ ಹಾಗೂ ಪಿಸಿಯಲ್ಲಿ ಬಳಸಲು ಸಮಸ್ಯೆ ಎದುರಾಗಿದೆ. ಜಗತ್ತಿನಾದ್ಯಂತ ರಾತ್ರಿ 9:00 ಗಂಟೆ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಎಕ್ಸ್​ (ಈ ಹಿಂದೆ ಟ್ವಿಟರ್​)ನಲ್ಲಿ #Zuckerberg, #facebookDown, #InstagramDown ಎಂಬ ಹ್ಯಾಶ್​​ಟ್ಯಾಗ್ ಟ್ರೆಂಡ್​ ಆಗುತ್ತಿದೆ. ಜಗತಿನಾದ್ಯಂತ ಸುಮಾರು 200ಕೋಟಿಗೂ ಅಧಿಕ ಫೇಸ್​ಬುಕ್​ ಬಳಕೆದಾರರಿದ್ದು, ಇಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಆಯಪ್​ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ. ಏಕಾಏಕಿ

ಭಾರತ ಸೇರಿದಂತೆ ವಿಶ್ವದಾದ್ಯಂತ ಪೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ Read More »

ಮಾಲ್ಡೀವ್ಸ್‍ಗೆ ಮತ್ತೆ ಸೆಡ್ಡು ಹೊಡೆದ ಭಾರತ/ ಮಿನಿಕಾಯ್‍ನಲ್ಲಿ ವಾಯುನೆಲೆ ಸ್ಥಾಪನೆ

ಸಮಗ್ರ ನ್ಯೂಸ್: ಮಾಲ್ಡೀವ್ಸ್‍ಗೆ ಸನಿಹದಲ್ಲೇ, ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್‍ನಲ್ಲಿ ಐಎನ್‍ಎಸ್ ಜಟಾಯು ಹೆಸರಿನ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಮತ್ತೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ. ಮಾಲ್ಡೀವ್ಸ್‍ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ. ಅರಬ್ಬೀ ಸಮುದ್ರದಲ್ಲಿ ಜಟಾಯು ವಾಯುನೆಲೆಯಿಂದ ಭಾರತದ ಬಲ ಮತ್ತಷ್ಟು ವೃದ್ಧಿಯಾಗಲಿದ್ದು, ಹಡಗು ಕಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಇದರ ಜತೆಗೆ ಭಾರತದ ಮುಖ್ಯ

ಮಾಲ್ಡೀವ್ಸ್‍ಗೆ ಮತ್ತೆ ಸೆಡ್ಡು ಹೊಡೆದ ಭಾರತ/ ಮಿನಿಕಾಯ್‍ನಲ್ಲಿ ವಾಯುನೆಲೆ ಸ್ಥಾಪನೆ Read More »

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದವನು ಅರೆಸ್ಟ್

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಿದ ಮೊಹಮ್ಮದ್ ರಸೂಲ್ ಕಡ್ದಾರೆನನ್ನು (45) ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆ ನಿವಾಸಿಯಾಗಿರುವ ರಸೂಲ್ ಕಡ್ದಾರೆ ಹೈದರಾಬಾದ್​ನಲ್ಲಿ ಕೂಲಿ ಮಾಡುತ್ತಿದ್ದನು. ಕೈಯಲ್ಲಿ ತಲ್ವಾರ್ ಹಿಡಿದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ “ಕಾಂಗ್ರೆಸ್ ಹೀಗೆಲ್ಲ ಆಡಳಿತ ಮಾಡಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗದ್ದೇನೆ ಎಂದು ನಾಟಕ ಮಾಡುತ್ತಿದ್ದಿಯಾ?

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಿದವನು ಅರೆಸ್ಟ್ Read More »

ಮೋದಿ ಎರಡು ಸಾವಿರ ದೇಣಿಗೆ/ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ

ಸಮಗ್ರ ನ್ಯೂಸ್: ನಮೊ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪಕ್ಷಕ್ಕೆ 2 ಸಾವಿರ ರು. ದೇಣಿಗೆ ನೀಡಿದ್ದು, ಇತರರು ಸಹ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದ್ದಾರೆ. ವಿಕಸಿತ ಭಾರತ ನಿರ್ಮಿಸಲು ಬಿಜೆಪಿಗೆ ನಾನು 2 ಸಾವಿರ ರು. ದೇಣಿಗೆ ನೀಡಿದ್ದೇನೆ ಎಂದು ತಿಳಿಸಲು ಹರ್ಷವಾಗುತ್ತಿದೆ. ನೀವು ಸಹ ದೇಣಿಗೆ ನೀಡಿ ರಾಷ್ಟ್ರದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಿ ಎಂದು ರಸೀತಿಯನ್ನೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‍ಗಳನ್ನು

ಮೋದಿ ಎರಡು ಸಾವಿರ ದೇಣಿಗೆ/ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ Read More »

ಮಾ.03 ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ ವಿಶೇಷ ಪ್ರಕಟಣೆ

ಸಮಗ್ರ ನ್ಯೂಸ್: ಪೊಲಿಯೋ ರಾಷ್ಟ್ರೀಯ ರೋಗನಿರೋಧಕ ದಿನದ ಅಂಗವಾಗಿ ಮಾರ್ಚ್ 3ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ. ಪ್ರವಾಸಿ ಸ್ಥಳಗಳು, ಜನಸಂದಣಿ ಹೆಚ್ಚು ಇರುವ

ಮಾ.03 ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ ವಿಶೇಷ ಪ್ರಕಟಣೆ Read More »

ಗರಿಗೆದರಿದ ಷೇರು ಮಾರುಕಟ್ಟೆ| ವಾರಾಂತ್ಯದಲ್ಲಿ ಸಖತ್ ಏರಿಕೆ ಕಂಡ ಸೆನ್ಸೆಕ್ಸ್, ನಿಪ್ಟಿ

ಸಮಗ್ರ ನ್ಯೂಸ್: ಷೇರು ಮಾರುಕಟ್ಟೆ ವಾರಾಂತ್ಯದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ. ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಬಹಳಷ್ಟು ಷೇರುಗಳು ಸಕಾರಾತ್ಮಕ ಸ್ಪಂದನೆ ಪಡೆದಿವೆ. ಹಲವು ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಭರ್ಜರಿ ಏರಿಕೆ ಪಡೆದಿವೆ. ಅದರಲ್ಲೂ ಸೆನ್ಸೆಕ್ಸ್ ಹೊಸ ಎತ್ತರಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ (bse) ಇಂದು ಶುಕ್ರವಾರ 73,574 ಅಂಕಗಳ ಮಟ್ಟ ಮುಟ್ಟಿತ್ತು. ಇದು ಈವರೆಗೆ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ50 ಸೂಚ್ಯಂಕ

ಗರಿಗೆದರಿದ ಷೇರು ಮಾರುಕಟ್ಟೆ| ವಾರಾಂತ್ಯದಲ್ಲಿ ಸಖತ್ ಏರಿಕೆ ಕಂಡ ಸೆನ್ಸೆಕ್ಸ್, ನಿಪ್ಟಿ Read More »

ಮಾ. 2, ಐಲೇಸಾ ಜೂಮ್ ವೇದಿಕೆಯಲ್ಲಿ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ| ಇಲ್ಲಿದೆ ಜೂಮ್ ಮೀಟಿಂಗ್ ಲಿಂಕ್

ಸಮಗ್ರ ನ್ಯೂಸ್:ಕೃತಕ ಬುದ್ದಿ ಮತ್ತೆ ಮುಂದಿನ ಅನಿವಾರ್ಯತೆ AI(Artificial Intelligence) -ADOPTION INVITABLE_ ಎಂಬ ವಿಚಾರವಾಗಿ ಮಾ. 2ರಂದು ಸಂಜೆ ಐಲೇಸಾ ಜೂಮ್ ವೇದಿಕೆಯಲ್ಲಿ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ ಆ ವೇಗಕ್ಕೆ ಹೊಂದಿಕೊಂಡು ನಮ್ಮ ವೃತ್ತಿ ಪ್ರವೃತ್ತಿಗಳನ್ನು ಬದಲಾಯಿಸಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯಗಳಲ್ಲಿ ಒಂದು ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಯಾವ ಮಟ್ಟದಲ್ಲಿ ಮುಂದುವರಿದು ಇಡೀ ವಿಶ್ವಕ್ಕೆ ಬೆರಗನ್ನು ಹುಟ್ಟಿಸಿತು ಅನ್ನುವುದು ಈಗ ಇತಿಹಾಸ. ಮುಂದಿನ ದಿನಗಳು ತಾಂತ್ರಿಕತೆಯ ಜೊತೆಗೆ

ಮಾ. 2, ಐಲೇಸಾ ಜೂಮ್ ವೇದಿಕೆಯಲ್ಲಿ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ| ಇಲ್ಲಿದೆ ಜೂಮ್ ಮೀಟಿಂಗ್ ಲಿಂಕ್ Read More »

ಅಡ್ಡ ಮತದಾನ/ ಹಿಮಾಚಲ ಪ್ರದೇಶದಲ್ಲಿ ಆರು ಕಾಂಗ್ರೆಸ್ ಶಾಸಕರು ಅನರ್ಹ

ಸಮಗ್ರ ನ್ಯೂಸ್: ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ಅಡ್ಡ ಮತದಾನ ಪ್ರಕ್ರಿಯೆಗೆ ಇದೀಗ ಕಾಂಗ್ರೆಸ್ ನಾಯಕರು ನಿರ್ಣಾಯಕ ತಿರುವು ನೀಡಿದ್ದು, ಇದೀಗ ಹಿಮಾಚಲ ಪ್ರದೇಶದ ಸ್ಪೀಕರ್ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನಡಿ ಕ್ರಮ ಕೈಗೊಂಡಿದ್ದು, ಅಗತ್ಯವಿದ್ದರೆ ಅನರ್ಹ ಶಾಸಕರು ನ್ಯಾಯಾಲಯದ ಮೊರೆ ಹೋಗಲಿ ಎಂದು ಹಿಮಾಚಲ ಪ್ರದೇಶ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ಯಾರಿಗಾದರೂ ಮತ ಹಾಕಬಹುದು ಎಂದು ಹಿಂದಿನ ನ್ಯಾಯಾಲಯ

ಅಡ್ಡ ಮತದಾನ/ ಹಿಮಾಚಲ ಪ್ರದೇಶದಲ್ಲಿ ಆರು ಕಾಂಗ್ರೆಸ್ ಶಾಸಕರು ಅನರ್ಹ Read More »

ದಾಖಲೆ ಬರೆದ ಕೋಕ್ಕೋ ಧಾರಣೆ| ₹ 130 ತಲುಪಿದರೂ ಪೂರೈಕೆ ಕೊರತೆ

ಸಮಗ್ರ ನ್ಯೂಸ್: ಮೊದಲ ಬಾರಿಗೆ 100 ರೂಪಾಯಿಗೆ ತಲುಪಿದ್ದ ಹಸಿ ಕೊಕ್ಕೋ ಧಾರಣೆ ಇದೀಗ ಕೆ.ಜೆ. 130 ರೂ.ಗೆ ಏರಿಕೆಯಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಇಳುವರಿ ಇಲ್ಲದಿರುವುದು ರೈತರಿಗೆ ಕನ್ನಡಿಯ ಗಂಟಾಗಿ ಪರಿಣಮಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೋ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕೊಕ್ಕೋ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇತ್ತು. 2-3 ವಾರದ ಹಿಂದೆ ಹಸಿ ಕೊಕ್ಕೋ ಬೀಜ ಕೆಜಿಗೆ 100 ರೂ.ಗೆ ತಲುಪಿತ್ತು. ಬಳಿಕ 120 ರೂ. ವರೆಗೆ ಕ್ಯಾಂಪ್ಕೋ ಸಂಸ್ಥೆ ಖರೀದಿಸಿತ್ತು. ಇದೀಗ ಕ್ಯಾಂಪ್ಕೋ

ದಾಖಲೆ ಬರೆದ ಕೋಕ್ಕೋ ಧಾರಣೆ| ₹ 130 ತಲುಪಿದರೂ ಪೂರೈಕೆ ಕೊರತೆ Read More »