ರಾಷ್ಟ್ರೀಯ

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!”

ಫ್ಲೋರಿಡಾ: ಮಾಡೆಲ್ ಒಬ್ಬಳು ತನ್ನ ತಂದೆಯ ಶವದ ಮುಂದೆಯೇ ಫೋಟೋಶೂಟ್ ಮಾಡಿಸಿಕೊಂಡು ಭಾರೀ ಚರ್ಚೆಗೆ ಗ್ರಾಸವಾದ ಘಟನೆ ಫ್ಲೋರಿಡಾದಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ಮಾಡೆಲ್ ಅನ್ನು ಜಯೆ ರಿವೇರಾ(20) ಎಂದು ಗುರುತಿಸಲಾಗಿದ್ದು, ಈಕೆ ಫ್ಲೋರಿಡಾದ ಮೈಮಿ ನಗರದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದು, ಇದೀಗ ಈಕೆಯ ಫೋಟೋಶೂಟ್ ಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಇನ್‌ಸ್ಟಾ ಖಾತೆಯಲ್ಲಿ ರಿವೇರಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ. ಅಲ್ಲದೆ ಆ ಫೋಟೋಗಳನ್ನು […]

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!” Read More »

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಿದೆ. ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ Read More »

ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!ಠಾಣೆ ಮೆಟ್ಟಿಲೇರಿದ ಬಡ ರಿಕ್ಷಾ ಚಾಲಕ

ಮಥುರಾ: ಬಡ ಸೈಕಲ್ ರಿಕ್ಷಾ ಚಾಲಕರೊಬ್ಬರಿಗೆ ಬರೋಬ್ಬರಿ 3 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿ ನೀಡಿದ್ದು, ಈ ಹಿನ್ನಲೆ ಸೈಕಲ್ ರಿಕ್ಷಾ ಚಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಹೆಸರಿನ ಸೈಕಲ್ ರಿಕ್ಷಾ ಚಾಲಕ ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ. ಈ ಕುರಿತು ಪ್ರತಾಪ್ ಸಿಂಗ್ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, `ಬ್ಯಾಂಕ್‍ನವರು ಐ.ಟಿ

ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!ಠಾಣೆ ಮೆಟ್ಟಿಲೇರಿದ ಬಡ ರಿಕ್ಷಾ ಚಾಲಕ Read More »

ರಾಮಲಲ್ಲಾ ದರ್ಶನ ಪಡೆದ ಕೇಜ್ರಿವಾಲ್| ಅಯೋಧ್ಯೆ ಭೇಟಿ ಬಳಿಕ ದೆಹಲಿ ಸಿಎಂ ಹೇಳಿದ್ದೇನು?

ಅಯೋಧ್ಯೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಅ.26 ರಂದು ಅರವಿಂದ್ ಕೇಜ್ರಿವಾಲ್ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಭಗವಾನ್ ರಾಮಲಲ್ಲಾ ಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಭಾಷಣವನ್ನು ಜೈ ಶ್ರೀರಾಮ್ ಘೋಷಣೆಯೊಂದಿಗೆ ಅವರು ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಅವರು, ” ರಾಷ್ಟ್ರರಾಜಧಾನಿಯ ಹಿರಿಯ ನಾಗರಿಕರಿಗೆ ಕಲ್ಪಿಸಲಾಗುವ ಉಚಿತ ತೀರ್ಥಯಾತ್ರೆಗಳ ಪ್ರದೇಶಗಳ ಪಟ್ಟಿಯಲ್ಲಿ ಅಯೋಧ್ಯೆಯ ರಾಮ ಮಂದಿರವನ್ನೂ ಸೇರಿಸುವ ವಿಷಯವಾಗಿ ಅ.27 ರಂದು ವಿಶೇಷ ಸಚಿವ

ರಾಮಲಲ್ಲಾ ದರ್ಶನ ಪಡೆದ ಕೇಜ್ರಿವಾಲ್| ಅಯೋಧ್ಯೆ ಭೇಟಿ ಬಳಿಕ ದೆಹಲಿ ಸಿಎಂ ಹೇಳಿದ್ದೇನು? Read More »

ನೀವು ಸಾಲ ಮಾಡಿ ಕಳ್ಳತನ‌ ಮಾಡಿ; ಆದ್ರೆ ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ: ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್​​ ತರಾಟೆ

ಬೆಂಗಳೂರು: ದಾಸರಹಳ್ಳಿ ವಿಭಾಗದಲ್ಲಿ ರಸ್ತೆ ದುಸ್ಥಿತಿ ಹಿನ್ನೆಲೆ, ಇಲ್ಲಿ ನಿಜಕ್ಕೂ ರಸ್ತೆಗಳು ಅಸ್ತಿತ್ವದಲ್ಲಿವೆಯೇ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಮಳೆ‌ ಮುಗಿದ ನಂತರ ರಸ್ತೆ ಕಾಮಗಾರಿ ನಡೆಸಲಾಗುವುದು. ಅನುದಾನ ಲಭ್ಯವಾದರೆ ಶೀಘ್ರ ಕಾಮಗಾರಿ ನಡೆಸುವುದು ಎಂದು ಹೈಕೋರ್ಟ್​​ಗೆ ಬಿಬಿಎಂಪಿ ಪರ ವಕೀಲ‌ ವಿ. ಶ್ರೀನಿಧಿ ಹೇಳಿಕೆ ನೀಡಿದ್ದಾರೆ. ನೀವು ಸಾಲ ಮಾಡಿ, ಕಳ್ಳತನ‌ ಮಾಡಿ. ಆದರೆ, ಮೂಲಭೂತ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಮಳೆಯ‌ ನಂತರ ಬೆಂಗಳೂರಿನ ರಸ್ತೆಗಳು ಇನ್ನೂ

ನೀವು ಸಾಲ ಮಾಡಿ ಕಳ್ಳತನ‌ ಮಾಡಿ; ಆದ್ರೆ ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ: ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್​​ ತರಾಟೆ Read More »

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021ಕ್ಕೆ ರಾಜ್ಯಪಾಲರಿಂದ ಅಂಕಿತ

ಬೆಂಗಳೂರು: ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಕಾಯ್ದೆ-2021 ಮಸೂದೆಗೆ ರಾಜ್ಯಪಾಲ ಥಾವರ್​ ಚಂದ್‌ ಗೆಹ್ಲೋಟ್​​​ ಅಂಕಿತ ಹಾಕಿದ್ದಾರೆ. ಈ ಮೂಲಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021 ಜಾರಿಗೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು, ನ್ಯಾಯಾಲಯ, ನ್ಯಾಯಮಂಡಳಿ, ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶ ಇದ್ದರೂ ಕಾಯ್ದೆ ಜಾರಿಯಾದ ದಿನದವರೆಗೆ ಅಸ್ತಿತ್ವದಲಿರುವ ಧಾರ್ಮಿಕ ಕಟ್ಟಡಗಳನ್ನು (ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ, ಮಜರ್ ಇತರೆ) ಸಂರಕ್ಷಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಅಥವಾ ಯಾವುದೇ

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021ಕ್ಕೆ ರಾಜ್ಯಪಾಲರಿಂದ ಅಂಕಿತ Read More »

ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್|

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ. ನಂತರ ಆರ್ಯನ್​ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ರಂದು ವಿಚಾರಣೆಗೆ ನಡೆಯಲಿದೆ. ಏತನ್ಮಧ್ಯೆ, ಆರ್ಯನ್ ಜೈಲಿನಲ್ಲಿ ಸಮಯ ಕಳೆಯಲು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಏಳದೇ ಇರದು. ಅವರು ಜೈಲಿನಲ್ಲಿ ಕಾಲಕಳೆಯಲು ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆರ್ಥರ್ ರೋಡ್ ಜೈಲಿನ ಗ್ರಂಥಾಲಯದಿಂದ ಆರ್ಯನ್ ಎರಡು ಪುಸ್ತಕಗಳನ್ನು

ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್| Read More »

ಕೋವಿಡ್ ಹೊಸ ರೂಪದಲ್ಲಿ ಪತ್ತೆ| ಮುಂದೇನಾಗುತ್ತೋ…?

ಡಿಜಿಟಲ್ ಡೆಸ್ಕ್: ಕೋವಿಡ್ -19 ರ ಡೆಲ್ಟಾ ರೂಪಾಂತರದ ಹೊಸ ರೂಪಾಂತರ ತಳಿ ಪತ್ತೆಯಾಗಿದ್ದು, ಈಗ ಹೆಚ್ಚಿನ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇದು ಪ್ರಬಲವಾದ ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತದೆ ಈ ತಳಿ ಹೆಚ್ಚಿನ ಮಂದಿ ಸೋಂಕು ಹರಡುತ್ತಿದೆ ಎನ್ನಲಾಗಿದೆ. ಡೆಲ್ಟಾ AY.4.2 ಎಂದು ಕರೆಯಲ್ಪಡುವ ಡೆಲ್ಟಾ ವೇರಿಯಂಟ್ ಉಪ-ವಂಶಾವಳಿಯನ್ನು 2021 ರ ಅಕ್ಟೋಬರ್ 2021 ರಂದು ಯುಕೆ ಆರೋಗ್ಯ ಭದ್ರತಾ ಏಜೆನ್ಸಿ ತನಿಖೆಯ ಅಡಿಯಲ್ಲಿ ಗುರುತಿಸಲಾಗಿದೆ ಮತ್ತು ಅಧಿಕೃತ ಹೆಸರನ್ನು VUI-21OCT-01

ಕೋವಿಡ್ ಹೊಸ ರೂಪದಲ್ಲಿ ಪತ್ತೆ| ಮುಂದೇನಾಗುತ್ತೋ…? Read More »

14 ವರ್ಷಗಳ ಬಳಿಕ ಏರಿಕೆಯಾಗಲಿದೆ ಬೆಂಕಿಪೆಟ್ಟಿಗೆ ಬೆಲೆ| ಇದು ಬೆಲೆಏರಿಕೆ ಇಫೆಕ್ಟ್|

ಶಿವಕಾಶಿ: ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ ಸರದಿ. ಇದೂ ಕೂಡ ಈಗ ಬೆಲೆಏರಿಕೆಯ ಬೆಂಕಿ ಹಚ್ಚಲಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ. ಒಂದು ರೂಪಾಯಿಯಿದ್ದ ಬೆಲೆ

14 ವರ್ಷಗಳ ಬಳಿಕ ಏರಿಕೆಯಾಗಲಿದೆ ಬೆಂಕಿಪೆಟ್ಟಿಗೆ ಬೆಲೆ| ಇದು ಬೆಲೆಏರಿಕೆ ಇಫೆಕ್ಟ್| Read More »

ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

ವಾಷಿಂಗ್ಟನ್: ಅಮೆರಿಕಾದಲ್ಲಿ ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಹೊಂದಿರದ ಯಾವುದೇ ಸಂಪೂರ್ಣ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕಾದ 37 ರಾಜ್ಯಗಳಲ್ಲಿ 650ಕ್ಕೂ ಹೆಚ್ಚು ಜನರು ಸಾಲ್ಮೊನೆಲ್ಲಾ ಎಂಬ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, 75% ಜನರು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಈರುಳ್ಳಿ ಬಳಸಿದ ಖಾದ್ಯ ಅಥವಾ ಹಸಿ ಈರುಳ್ಳಿಯನ್ನು ಹೊಂದಿರುವ ಭಕ್ಷ್ಯಗಳನ್ನು ಆಹಾರದ ಜೊತೆಗೆ ಸೇವಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಮೆಕ್ಸಿಕೋದ ಚಿಹುವಾದಿಂದ ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಈ ವೈರಸ್

ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು Read More »