ರಾಷ್ಟ್ರೀಯ

ಇಂದು ಮೋದಿ- ಬೊಮ್ಮಾಯಿ ಭೇಟಿ| ಪ್ರಮುಖ ವಿಷಯಗಳ ಕುರಿತು ಚರ್ಚೆ ಸಾಧ್ಯತೆ|

ನವದೆಹಲಿ : ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚೆ ಮಾಡುತ್ತೇನೆ. ಹಾಗೆಯೇ ಪ್ರಧಾನಿ ಅವರನ್ನು ಭೇಟಿಯಾಗಿ ಬಹಳ ದಿನಗಳಾಗಿದ್ದವು. ಹೀಗಾಗಿ ಅವರ ಭೇಟಿಗೆ ಸಮಯ ಕೇಳಿದ್ದೆ ಎಂದು ಹೇಳಿದ್ದಾರೆ. ಇಂದಿನ ಭೇಟಿ ವೇಳೆ ಹಾನಗಲ್ ಉಪಚುನಾವಣೆ […]

ಇಂದು ಮೋದಿ- ಬೊಮ್ಮಾಯಿ ಭೇಟಿ| ಪ್ರಮುಖ ವಿಷಯಗಳ ಕುರಿತು ಚರ್ಚೆ ಸಾಧ್ಯತೆ| Read More »

60 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಗೆ 100 ರೂ.ಗಿಂತಲೂ ಅಧಿಕ| ಕಚ್ಚಾ ತೈಲ ಬೆಲೆಯಲ್ಲಿ ಗರಿಷ್ಠ ಇಳಿಕೆ| ಆದರೂ ಈ ಬೆಲೆ ಏರಿಕೆ ಯಾಕೆ?

ಡಿಜಿಟಲ್ ಡೆಸ್ಕ್: ಜಾಗತಿಕ ಕಚ್ಚಾ ತೈಲ ದರವು ಮೂರು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆ ಬ್ಯಾರೆಲ್‌ಗೆ 85 ಯುಎಸ್‌ಡಿ ಇತ್ತು. ಆದರೆ ಈಗ ಜಾಗತಿಕ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 83 ಡಾಲರ್‌ಗೆ ಕುಸಿದಿದ್ದು ಇದು ಮೂರು ವರ್ಷದಲ್ಲಿ ಗರಿಷ್ಠ ಮಟ್ಟದ ಇಳಿಕೆಯಾಗಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಏರುತ್ತಿದ್ದವು. ಕೇವಲ 45 ದಿನಗಳಲ್ಲಿ 30 ಬಾರಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ

60 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಗೆ 100 ರೂ.ಗಿಂತಲೂ ಅಧಿಕ| ಕಚ್ಚಾ ತೈಲ ಬೆಲೆಯಲ್ಲಿ ಗರಿಷ್ಠ ಇಳಿಕೆ| ಆದರೂ ಈ ಬೆಲೆ ಏರಿಕೆ ಯಾಕೆ? Read More »

ನ.19 ರಂದು ಘಟಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ| ಯಾರಿಗೆ ಶುಭ| ಯಾವ ರಾಶಿಗೆ ಶುಭಫಲ| ಇಲ್ಲಿದೆ ವಿವರ…

ನ್ಯೂಸ್ ಬ್ಯೂರೋ : ನವೆಂಬರ್ 19 ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಭಾರತ, ಯುಎಸ್‌ಎ, ಉತ್ತರ ಯುರೋಪ್, ಆಸ್ಟ್ರೇಲಿಯಾ, ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಸಾಗರದ ಕೆಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದ್ದು, ಶಾಸ್ತ್ರಗಳ ಪ್ರಕಾರ ಗ್ರಹಣದ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧ. ಇನ್ನು ಈ ಗ್ರಹಣವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ 19ರಂದು

ನ.19 ರಂದು ಘಟಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ| ಯಾರಿಗೆ ಶುಭ| ಯಾವ ರಾಶಿಗೆ ಶುಭಫಲ| ಇಲ್ಲಿದೆ ವಿವರ… Read More »

ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕ್ರತೆ ಮಲಾಲಾ

ದೆಹಲಿ: ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​ ಝಾಯಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಬ್ರಿಟನ್​​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಾನು ಮತ್ತು ಅಸ್ಸರ್​ ಮದುವೆಯಾಗಿದ್ದೇವೆ ಎಂದು ಮಲಾಲಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಫೋಟೋ ಕೂಡ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ನಿಖಾ ಸಮಾರಂಭದ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಇಂದು ನನ್ನ ಬದುಕಲ್ಲಿ ಅತ್ಯಮೂಲ್ಯ ದಿನವಾಗಿದೆ. ಅಸ್ಸರ್​ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಬರ್ಮಿಂಗ್​ಹ್ಯಾಂನಲ್ಲಿ

ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕ್ರತೆ ಮಲಾಲಾ Read More »

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ

ಅಂಕೋಲಾ : ವೃಕ್ಷದೇವತೆ ಎಂದೇ ಹೆಸರು ಗಳಿಸಿರುವ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಮಾಮೂಲಿ ದಿರಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು. ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ Read More »

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ|

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕೇಂದ್ರಗಳಲ್ಲಿ 5000ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 19 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಹಲವು ಕಡೆ ಭಾರಿ ಮಳೆ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪುದುಚೇರಿ,

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ| Read More »

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ|

ನವದೆಹಲಿ: ಭಾರತ ಸರ್ಕಾರವು ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮ ಶ್ರೀ’ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರದಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಸಾಂಪ್ರದಾಯಿಕ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಕಿತ್ತಳೆ ಹಣ್ಣು ವ್ಯಾಪಾರದಿಂದ ಬಂದ ಹಣವನ್ನು ಕೂಡಿಟ್ಟು ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ನಿರ್ಮಿಸಿದ ಇವರಿಗೆ ಈಗಾಗಲೇ ಹಲವು ಪ್ರಶಸ್ತಿ ಲಭಿಸಿವೆ.

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ| Read More »

ಡಿಜಿಟಲ್ ವ್ಯವಹಾರ|ಎಚ್ಚರಿಕೆ ಅಗತ್ಯ

ನವದೆಹಲಿ: ನೋಟ್​​ ಬ್ಯಾನ್ ಆಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ, ಹಣಕಾಸು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ.ನೋಟ್​ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ನಗದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿದ್ದು, ಪ್ರಸ್ತುತ ನಗದು ವಹಿವಾಟು ಹೆಚ್ಚಾಗುತ್ತಿದೆ. ಇದರ ಜೊತೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ.ಅಂದಹಾಗೆ, ನೋಟ್ ಬ್ಯಾನ್ ಮಾಡಿದ ಉದ್ದೇಶ ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಿಸುವುದು ಮತ್ತು ಕಪ್ಪು ಹಣವನ್ನು ಹೊರಕ್ಕೆ ತರುವುದೇ ಆಗಿತ್ತು. ಈಗ ಡಿಜಿಟಲ್ ಪಾವತಿ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದು, ಎರಡೂ

ಡಿಜಿಟಲ್ ವ್ಯವಹಾರ|ಎಚ್ಚರಿಕೆ ಅಗತ್ಯ Read More »

ನೋಟು ಅಮಾನ್ಯೀಕರಣಕ್ಕೆ ಐದು ವರ್ಷ| ಏರಿಕೆಯಾದ ಡಿಜಿಟಲ್ ವ್ಯವಹಾರ

ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ ನಂತರ ದೇಶದಲ್ಲಿ ಹೊಸದಾಗಿ 2000 ರೂ. ಮತ್ತು 500 ರೂಪಾಯಿ ಹಾಗೂ 200 ರೂ.ಹೊಸ ಸರಣಿ ನೋಟು ಚಲಾವಣೆಗೆ ಬಂದಿವೆ. ನಗದು ವಹಿವಾಟಿನ ಜೊತೆಗೆ ಡಿಜಿಟಲ್ ವಹಿವಾಟು ಕೂಡ ಏರಿಕೆ ಕಂಡಿದೆ. ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ ಮೊದಲಾದವುಗಳ ಮೂಲಕ ನಗದು ರಹಿತ

ನೋಟು ಅಮಾನ್ಯೀಕರಣಕ್ಕೆ ಐದು ವರ್ಷ| ಏರಿಕೆಯಾದ ಡಿಜಿಟಲ್ ವ್ಯವಹಾರ Read More »

ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ, ಭಾರತದ ಮೀನುಗಾರನ ಹತ್ಯೆ

ಗಾಂಧಿನಗರ: ಗುಜರಾತ್‌ನ ಕರಾವಳಿ ಭಾಗದಲ್ಲಿ ಭಾರತದ ಮೀನುಗಾರನನ್ನು ಪಾಕಿಸ್ತಾನ ನೌಕಾಪಡೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ನಡೆದಿದೆ. ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ “ಜಲ್‌ಪರಿ” ಎಂಬ ಹೆಸರಿನ ಬೋಟ್‌ನಲ್ಲಿ ಪಾಕಿಸ್ತಾನದ ನೌಕಾಪಡೆಯು ಗುಂಡಿನ ದಾಳಿ ನಡೆಸಿತ್ತು. ಗುಂಡಿನ ದಾಳಿಯಿಂದ ಭಾರತದ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ, ಭಾರತದ ಮೀನುಗಾರನ ಹತ್ಯೆ Read More »