ರಾಷ್ಟ್ರೀಯ

‘ಬಿಂದು’ ಮೇಲೆ ಕಣ್ಣುಹಾಕಿದ ಅಂಬಾನಿ| ಎಸ್ ಜಿ ಗ್ರೂಪ್ ಗೆ ಬಹುಕೋಟಿ ಆಫರ್ ನೀಡಿದ ರಿಲಯನ್ಸ್|

ಸಮಗ್ರ ನ್ಯೂಸ್: ಉದ್ಯಮ ಕ್ಷೇತ್ರದ ದೈತ್ಯ ರಿಲಯನ್ಸ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತಂಪು ಪಾನಿಯ ಸಂಸ್ಥೆಯ ಮೇಲೆ ಕಣ್ಣು ಹಾಕಿದೆ. ಪುತ್ತೂರಿನ ಸಣ್ಣ ಗ್ರಾಮದಲ್ಲಿ ಆರಂಭವಾದ ಸಣ್ಣ ಉದ್ಯಮ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ರಿಲಯನ್ಸ್ ಕಣ್ಣಿಗೆ ಬಿದ್ದಿದ್ದು,ಬಹುಕೋಟಿ ಆಫರ್ ಕೂಡಾ ಮಾಡಿದೆ. ಆದರೆ ಪುತ್ತೂರಿನ ಕಂಪನಿ ಮಾತ್ರ ಅಂಬಾನಿಯ ಆಫರ್ ಆನ್ನು ನಯವಾಗಿ ತಿರಸ್ಕರಿಸಿದ್ದು, ಕಂಪನಿ ಬೆಳೆಸುವ ಉದ್ದೇಶ ವ್ಯಕ್ತಪಡಿಸಿದೆ. ಮಾರಾಟ ಮಾಡುವ ಉದ್ದೇಶ ಖಂಡಿತಾ ಇಲ್ಲವೆಂದು ನೇರವಾಗಿ […]

‘ಬಿಂದು’ ಮೇಲೆ ಕಣ್ಣುಹಾಕಿದ ಅಂಬಾನಿ| ಎಸ್ ಜಿ ಗ್ರೂಪ್ ಗೆ ಬಹುಕೋಟಿ ಆಫರ್ ನೀಡಿದ ರಿಲಯನ್ಸ್| Read More »

ಆರ್ಥಿಕತೆಯಲ್ಲಿ ಅತಿ ದೊಡ್ಡ ಹೆಜ್ಜೆ ಇರಿಸಿದ ಇಂಡಿಯಾ| ವಿಶ್ವದ 5ನೇ ಸ್ಥಾನಕ್ಕೆ ಭಾರತದ ಆರ್ಥಿಕತೆ

ಸಮಗ್ರ ನ್ಯೂಸ್: ಯುನೈಟೆಡ್ ಕಿಂಗ್ಡಮ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. 2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಈಗಾಗಲೇ ಕೋವಿಡ್ ನೀಡಿದ ಹೊಡೆತದಿಂದ ಪಾರಾಗಲು ಹೆಣಗಾಡುತ್ತಿರುವ ಇಂಗ್ಲೆಂಡ್ಗೆ ಈ ವರದಿ ಮತ್ತಷ್ಟು ಹೊಡೆತ ನೀಡಿದೆ. ಡಾಲರ್ ವಿನಿಮಯ ದರವನ್ನು ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ

ಆರ್ಥಿಕತೆಯಲ್ಲಿ ಅತಿ ದೊಡ್ಡ ಹೆಜ್ಜೆ ಇರಿಸಿದ ಇಂಡಿಯಾ| ವಿಶ್ವದ 5ನೇ ಸ್ಥಾನಕ್ಕೆ ಭಾರತದ ಆರ್ಥಿಕತೆ Read More »

ರಾಕೆಟ್‌ನಲ್ಲಿ ಇಂಧನ ಸೋರಿಕೆ| ಎರಡು ಗಂಟೆ ತಡವಾಗಿ ಉಡಾವಣೆ

ಕೇಪ್‌ ಕ್ಯಾನವೆರಲ್‌: ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (NASA) ಮಹತ್ವಾಕಾಂಕ್ಷೆ ಯೋಜನೆಗೆ ಶನಿವಾರ ಮತ್ತೊಮ್ಮೆ ಅಡ್ಡಿ ಎದುರಾಯಿತು. ಉಡಾವಣೆಗೆ ಸಜ್ಜಾಗಿದ್ದ 322 ಅಡಿ ಉದ್ದದ ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇಂಧನ ಸೋರಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ನಾಸಾ ತಿಳಿಸಿದೆ. ಎಂಜಿನಿಯರ್‌ಗಳು ದೋಷವನ್ನು ಸರಿಪಡಿಸಿದ ನಂತರ, ಎರಡು ಗಂಟೆ ತಡವಾಗಿ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು.

ರಾಕೆಟ್‌ನಲ್ಲಿ ಇಂಧನ ಸೋರಿಕೆ| ಎರಡು ಗಂಟೆ ತಡವಾಗಿ ಉಡಾವಣೆ Read More »

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ಲೋಪ ಆಗದೆ ಸಕ್ಸಸ್| ಆದರೆ ಜನಸಾಮಾನ್ಯನಿಗೆ ಆದ ಲೋಪಕ್ಕೆ ಯಾರು ಹೊಣೆ?

ಸಮಗ್ರ ನ್ಯೂಸ್: ಸೆ.2 ರಂದು ನಡೆದ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಆಗದಂತೆ ಭದ್ರತೆ ಕಲ್ಪಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ಆದ ಲೋಪಕ್ಕೆ ಯಾರು ಹೊಣೆ?ಎಂಬ ಪ್ರಶ್ನೆ ಎದುರಾಗಿದೆ. ಪ್ರಧಾನ ಮಂತ್ರಿ ಮಂಗಳೂರಿಗೆ ಬರುತ್ತಿರುವ ಸುದ್ದಿ ಆಗುತ್ತಿದಂತೆ ದ.ಕ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕ ಜಿಲ್ಲೆಯ ಲಕ್ಷಾಂತರ ಜನ ವಿಶ್ವ ನಾಯಕನಿಗೆ ಸ್ವಾಗತ ಕೋರಲು ಸಿದ್ದರಾಗಿದ್ದರು. ಈ ಹಿನ್ನಲೆ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಉಂಟಾಗದಂತೆ ಬಿಜೆಪಿ ಘಟಾನುಘಟಿ ನಾಯಕರ ಆದೇಶದಂತೆ

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ಲೋಪ ಆಗದೆ ಸಕ್ಸಸ್| ಆದರೆ ಜನಸಾಮಾನ್ಯನಿಗೆ ಆದ ಲೋಪಕ್ಕೆ ಯಾರು ಹೊಣೆ? Read More »

ಕಚ್ ಮತ್ತು ಭುಜ್ ನಲ್ಲಿ ನಡೆದ ರೋಡ್ ಶೋ ವೈರಲ್| ಮಂಗಳೂರಿನಲ್ಲಿ ಇಷ್ಟೊಂದು ಜನ ಸೇರಿದ್ದರೇ? ಪ್ಯಾಕ್ಟ್ ಚೆಕ್

ಸಮಗ್ರ ನ್ಯೂಸ್: ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಾಗೂ ತಮ್ಮ ತವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಆ.28ರ ಭಾನುವಾರ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ರೋಡ್ ಶೋ ನಡೆಸಿದ್ದರು. ಇದೇ ವಿಡಿಯೋವನ್ನು ಕೆಲವರು ಮಂಗಳೂರಿನಲ್ಲಿ ಸೇರಿದ್ದ ಜನಸ್ತೋಮ ಎಂದು ಸ್ಟೇಟಸ್ ಹಾಕಿದ್ದು, ಈ ವಿಡಿಯೋ ವೈರಲ್ ಆಯಿತು. ಈ ವಿಡಿಯೋದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಮೂಹವು ಮೋದಿ ಮೋದಿ ಎಂದು ಕೂಗುತ್ತಲೇ ಇದ್ದರು ಮತ್ತು ತ್ರಿವರ್ಣ ಧ್ವಜವನ್ನು ಬೀಸುತ್ತಾ ಪ್ರಧಾನಿಯವರ

ಕಚ್ ಮತ್ತು ಭುಜ್ ನಲ್ಲಿ ನಡೆದ ರೋಡ್ ಶೋ ವೈರಲ್| ಮಂಗಳೂರಿನಲ್ಲಿ ಇಷ್ಟೊಂದು ಜನ ಸೇರಿದ್ದರೇ? ಪ್ಯಾಕ್ಟ್ ಚೆಕ್ Read More »

ಕಡಲನಗರಿಯಲ್ಲಿ ಪ್ರಧಾನಮಂತ್ರಿ| ಮಂಗಳೂರಿನಿಂದ ನೇರಪ್ರಸಾರ

ಸಮಗ್ರ ನ್ಯೂಸ್: ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ‌ ಜೊತೆ ಸಂವಾದ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಚಂದನ ವಾಹಿನಿಯ ಕೃಪೆಯೊಂದಿಗೆ

ಕಡಲನಗರಿಯಲ್ಲಿ ಪ್ರಧಾನಮಂತ್ರಿ| ಮಂಗಳೂರಿನಿಂದ ನೇರಪ್ರಸಾರ Read More »

ಎಸ್​ಎಸ್​ಎಲ್​ಸಿ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆಯಲ್ಲಿ (India Post Office) 20 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸ್ಟಾಫ್​​ ಕಾರ್​​ ಡ್ರೈವರ್​ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮತ್ತು ನವದೆಹಲಿಯಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಎಸ್​ಎಸ್​ಎಲ್​ಸಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 26 ಸೆಪ್ಟೆಂಬರ್​ ಆಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ,

ಎಸ್​ಎಸ್​ಎಲ್​ಸಿ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ Read More »

ಕಾಸರಗೋಡು: ರೈಲು ಹಳಿಯಲ್ಲಿ ಕಬ್ಬಿಣದ ಬೀಮ್ ಇಟ್ಟ ಮಹಿಳೆ ಬಂಧನ| ಈಕೆಯ ಉದ್ದೇಶ ಕೇಳಿ ರೈಲ್ವೆ ಪೊಲೀಸರೇ ಸುಸ್ತು

ಸಮಗ್ರ ನ್ಯೂಸ್: ರೈಲು ಹಳಿಯಲ್ಲಿ ಕಾಂಕ್ರೀಟ್ ಒಳಗೊಂಡ ಕಬ್ಬಿಣದ ಬೀಮ್‌ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಮಹಿಳೆಯೋರ್ವಳನ್ನು ರೈಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬೇಕಲದ ಕ್ವಾಟರ್ಸ್‌ವೊಂದರಲ್ಲಿ ವಾಸವಾಗಿರುವ ತಮಿಳುನಾಡು ವಿಲ್ಲಾಪುರದ ಕನಕವಳ್ಳಿ ( 22) ಬಂಧಿತ ಮಹಿಳೆ. ಗುಜರಿ ಹೆಕ್ಕುವ ಕಾಯಕ ನಡೆಸುತ್ತಿದ್ದ ಈಕೆ ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳಿನಿಂದ ಸಿಮೆಂಟ್ ಬೇರ್ಪಡುವ ಉದ್ದೇಶದಿಂದ ರೈಲು ಹಳಿಯಲ್ಲಿ ಇಟ್ಟಿದ್ದಾಗಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು

ಕಾಸರಗೋಡು: ರೈಲು ಹಳಿಯಲ್ಲಿ ಕಬ್ಬಿಣದ ಬೀಮ್ ಇಟ್ಟ ಮಹಿಳೆ ಬಂಧನ| ಈಕೆಯ ಉದ್ದೇಶ ಕೇಳಿ ರೈಲ್ವೆ ಪೊಲೀಸರೇ ಸುಸ್ತು Read More »

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಮಂಗಳೂರಿನ ಪ್ರತಿಷ್ಠಿತ ಕ್ಲಾಕ್ ಟವರ್ ಗೆ ಕೆಪಿಟಿ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಮರುಜೀವ ನೀಡಿದ್ದಾರೆ. ಮಂಗಳೂರು ನಗರಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗಲು ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ನ ಗಂಟೆ ಕೆಟ್ಟು ಹೋಗಿತ್ತು. ಕಾಲೇಜು ಆವರಣದಲ್ಲಿದ್ದ ಈ ಟವರ್ ದುರಸ್ತಿಗೆ ಕಾಲೇಜು ಆಡಳಿತ ಸೇರಿದಂತೆ ಯಾರೊಬ್ಬರೂ ಈ ಟವರ್ ಸರಿಪಡಿಸಲು ಮುಂದೆ ಬಂದಿರಲಿಲ್ಲ. ಈ ಸಮಸ್ಯೆಯನ್ನು ಅರಿತ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಮೆಕಾನಿಕಲ್ ವಿದ್ಯಾರ್ಥಿಗಳು ದುರಸ್ತಿಗೊಳಿಸಿದ್ದು, ಮತ್ತೆ ಸರಿಯಾದ

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು Read More »

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಹಿಜಾಬ್ ವಿವಾದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧರ್ಮದ ಪ್ರತಿನಿಧಿಸುವಂತಿಲ್ಲ. ಸಮವಸ್ತ್ರ ಧರಿಸಬೇಕು ಎಂದು ಆದೇಶಿಸಿತ್ತು. ಹಿಜಾಬ್‌ ವಿವಾದ ಕುರಿತು ಸುಪ್ರೀಂಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು,

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ Read More »