ರಾಷ್ಟ್ರೀಯ

ಬಜೆಟ್ 2024| ಯಾವ ಕ್ಷೇತ್ರಕ್ಕೆ‌ ಏನು ಸಿಕ್ತು? ಇಲ್ಲಿದೆ ಹೈಲೈಟ್ಸ್…

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಭಾಷಣದಲ್ಲಿ, ಬಜೆಟ್ ನಲ್ಲಿ ನಿಗದಿಪಡಿಸಿದ ಗುರಿಗಳನ್ನು ಅನುಸರಿಸಿ, ನಾವು ಒಂಬತ್ತು ಆದ್ಯತೆಗಳನ್ನು ನಿಗದಿಪಡಿಸಿದ್ದೇವೆ, ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ಮಾಡಲಾಗುವುದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. 2024-25ನೇ ಸಾಲಿನ ಕೇಂದ್ರ […]

ಬಜೆಟ್ 2024| ಯಾವ ಕ್ಷೇತ್ರಕ್ಕೆ‌ ಏನು ಸಿಕ್ತು? ಇಲ್ಲಿದೆ ಹೈಲೈಟ್ಸ್… Read More »

ಕಾರ್ಗಿಲ್ ವಿಜಯ್ ದಿವಸ್‌ನ 25ನೇ ವಾರ್ಷಿಕೋತ್ಸವ/ ಲಡಾಖ್‌ನಲ್ಲಿ ಸಂಭ್ರಮಾಚರಣೆ ಮಾಡಲಿರುವ ಮೋದಿ

ಸಮಗ್ರ ನ್ಯೂಸ್‌: ಕಾರ್ಗಿಲ್ ವಿಜಯ್ ದಿವಸ್‌ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜುಲೈ 26ರಂದು ಲಡಾಖ್‌ನ ದ್ರಾಸ್‌ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಲಡಾಖ್‌ನ ಲೆಫ್ಟಿನೆಂಟ್‌ ಜನರಲ್‌ ಮಿಶ್ರಾ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 2022ರಲ್ಲಿ ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು ಮತ್ತು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿದ್ದರು.

ಕಾರ್ಗಿಲ್ ವಿಜಯ್ ದಿವಸ್‌ನ 25ನೇ ವಾರ್ಷಿಕೋತ್ಸವ/ ಲಡಾಖ್‌ನಲ್ಲಿ ಸಂಭ್ರಮಾಚರಣೆ ಮಾಡಲಿರುವ ಮೋದಿ Read More »

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ನೂತನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ|

ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್‌ ಅಧಿವೇಶನವು ಇಂದಿನಿಂದ (ಜುಲೈ 22) ಆರಂಭವಾಗಲಿದ್ದು, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಜ್ಜಾಗಿದ್ದಾರೆ. ಇಂದಿನಿಂದ ಆರಂಭವಾಗುವ ಬಜೆಟ್‌ ಅಧಿವೇಶನವು ಆಗಸ್ಟ್‌ 12ರವರೆಗೆ ನಡೆಯಲಿದೆ. ಜುಲೈ 23ರಂದು ಬಜೆಟ್‌ ಮಂಡಿಸಲಾಗುತ್ತದೆ. ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ನೂತನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ| Read More »

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌

ಸಮಗ್ರ ನ್ಯೂಸ್: ಇತ್ತೀಚೆಗೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ಇದೀಗ ಕ್ಷಮೆಯಾಚಿಸಿದ್ದಾರೆ. ಈ ಕಾರಣಕ್ಕೆ ಕರ್ನಾಟಕದಾದ್ಯಂತ ಬಾಯ್ಕಾಟ್‌ ಫೋನ್‌ ಪೇ (Boycott PhonePe) ಎಂಬ ಅಭಿಯಾನ ಆರಂಭವಾದ ಬೆನ್ನಲ್ಲೇ, ಸಮೀರ್‌ ನಿಗಮ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ನಿಗಮ್‌ ಅವರು ಪೋಸ್ಟ್‌ ಮಾಡಿದ್ದಾರೆ. “ಕಳೆದ ವಾರ

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌ Read More »

ಉ.ಪ್ರದೇಶ ಸಿಎಂ ಯೋಗಿಯಿಂದ ಮಾರ್ಕೆಟಿಂಗ್ ಸರ್ಜಿಕಲ್ ಸ್ಟ್ರೈಕ್| ರಾಜ್ಯಾದ್ಯಂತ ಅಂಗಡಿ ಬೋರ್ಡ್ ನಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಆದೇಶ

ಸಮಗ್ರ ನ್ಯೂಸ್: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್- ರೆಸ್ಟೋರೆಂಟ್ ಮತ್ತಿತರ ಆಹಾರದ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕೆಂಬ ಮುಜಾಫರ್​ನಗರ ಜಿಲ್ಲಾ ಪೊಲೀಸರ ವಿವಾದಾತ್ಮಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಜಿಲ್ಲಾ ಪೊಲೀಸರು ಸೋಮವಾರ ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೊಂದು ‘ಮುಸ್ಲಿಂ-ವಿರೋಧಿ ಕ್ರಮ’ ಎಂದು ವಿಪಕ್ಷಗಳು ಟೀಕಿಸಿದ್ದವು. ಈ ಆದೇಶವು ಮುಸ್ಲಿಂ ವರ್ತಕರನ್ನು ಟಾರ್ಗೆಟ್ ಮಾಡಿದೆಯೆಂದು ಆಳುವ ಪಕ್ಷದ ಕೆಲವು ಮಿತ್ರ ಪಕ್ಷಗಳು ಕೂಡ ಆರೋಪಿಸಿರುವುದರಿಂದ ವಿವಾದದ ಕಾವು

ಉ.ಪ್ರದೇಶ ಸಿಎಂ ಯೋಗಿಯಿಂದ ಮಾರ್ಕೆಟಿಂಗ್ ಸರ್ಜಿಕಲ್ ಸ್ಟ್ರೈಕ್| ರಾಜ್ಯಾದ್ಯಂತ ಅಂಗಡಿ ಬೋರ್ಡ್ ನಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಆದೇಶ Read More »

ಪೋಷಕರೇ ಇಲ್ಲಿ ಕೇಳಿ| ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ಮಕ್ಕಳು ಈ ಕಾಯಿಲೆಗೆ ತುತ್ತಾಗಬಹುದು!

ಸಮಗ್ರ ನ್ಯೂಸ್: ಹೊರಗಡೆ ಹೋಗಿ ಕ್ರಿಕೆಟ್, ಪುಟ್‌ಬಾಲ್ ಇನ್ನಿತರ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸು, ಅದರೆ ಇಂತಹ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಮಕ್ಕಳು ಆಟ ಆಡುತ್ತಿದ್ದಾರೆ. ಊಟಾ ಬಿಟ್ಟರು ಮೊಬೈಲ್ ಬಿಡಲ್ಲ ಅಂತಿದ್ದಾರೆ. ಮಕ್ಕಳ ಮೊಬೈಲ ಸ್ಕೀನಿಂಗ್ ಟೈಮ್ ಏರಿಕೆಯಿಂದ ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ ಶುರುವಾಗಿದ್ದು ವೈದ್ಯರು ಅಚ್ಚರಿಯ ಅಂಶ ಹೊರ ಹಾಕಿದ್ದಾರೆ. ಮಯೋಪಿಯಾ ಡಿಸೀಸ್​ಗೆ ವೈದ್ಯರೇ ಶಾಕ್:ಕೊವಿಡ್ ನಂತರ ಮಕ್ಕಳ ಆರೋಗ್ಯ ಬಗ್ಗೆ

ಪೋಷಕರೇ ಇಲ್ಲಿ ಕೇಳಿ| ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ಮಕ್ಕಳು ಈ ಕಾಯಿಲೆಗೆ ತುತ್ತಾಗಬಹುದು! Read More »

ವಿಚ್ಚೇದನ ಇಲ್ಲದೇ ಮದುವೆ| ಸುಪ್ರೀಂ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್ ವಿಚ್ಛೇದನವಿಲ್ಲದೆ ಎರಡನೇ ಬಾರಿಗೆ ಮದುವೆಯಾದ ದಂಪತಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ಅಸಾಧಾರಣವಾಗಿರುವುದರಿಂದ ಆರೋಪಿಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಅದೇನೆಂದರೆ ದಂಪತಿಗೆ ಚಿಕ್ಕ ಮಗುವಿದೆ. ಹೀಗಾಗಿ ಅವರಿಗೆ ವಿವಿಧ ಸಮಯಗಳಲ್ಲಿ ಶಿಕ್ಷೆಯನ್ನು ಅನುಭವಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಒಬ್ಬ ಆರೋಪಿಯ ಶಿಕ್ಷೆ ಪೂರ್ಣಗೊಂಡ ನಂತರ, ಇನ್ನೊಬ್ಬರು ಎರಡು ವಾರಗಳಲ್ಲಿ ಶರಣಾಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತಿ ಮೊದಲು ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಮಹಿಳೆ ಎರಡು

ವಿಚ್ಚೇದನ ಇಲ್ಲದೇ ಮದುವೆ| ಸುಪ್ರೀಂ ಮಹತ್ವದ ತೀರ್ಪು Read More »

ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತದ ಪರಿಹಾರ/ 2.5 ಮಿಲಿಯನ್ ಡಾಲರ್‌ ಪರಿಹಾರ ಧನ ಬಿಡುಗಡೆ

ಸಮಗ್ರ ನ್ಯೂಸ್‌: ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತವು 2.5 ಮಿಲಿಯನ್ ಡಾಲರ್‌ನ ಮೊದಲ ಕಂತನ್ನು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ (UNRWA) ಬಿಡುಗಡೆ ಮಾಡಿದೆ. ನೋಂದಾಯಿತ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ನೇರ ಪರಿಹಾರ ಮತ್ತು ಕೆಲಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದು ಯುಎನ್ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಕೊಡುಗೆಯಾಗಿ ಹಣ ನೀಡುತ್ತಿದೆ. UNRWA, 1950 ರಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದ ಬೆಂಬಲವು ಪ್ಯಾಲೇಸ್ವಿನಿಯನ್ ನಿರಾಶ್ರಿತರಿಗೆ ಒದಗಿಸಲಾದ ಶಿಕ್ಷಣ, ಆರೋಗ್ಯ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಏಜೆನ್ಸಿಯ ಪ್ರಮುಖ ಕಾರ್ಯಕ್ರಮಗಳು ಮತ್ತು

ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತದ ಪರಿಹಾರ/ 2.5 ಮಿಲಿಯನ್ ಡಾಲರ್‌ ಪರಿಹಾರ ಧನ ಬಿಡುಗಡೆ Read More »

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ

ಸಮಗ್ರ ನ್ಯೂಸ್‌: ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಸುಧಾರಣೆ’ ತರುವ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಅನುವಾಗುವ ಮಹತ್ವದ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಜುಲೈ 22 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಜು.23ರಂದು ಬಜೆಟ್‌ ಮಂಡನೆ ನಡೆಯಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳಲ್ಲಿ ಸರ್ಕಾರ ಬ್ಯಾಂಕಿಂಗ್ ಕಾಯ್ದೆಗಳಲ್ಲಿ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ‘ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970’ ಮತ್ತು ’ಬ್ಯಾಂಕಿಂಗ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ Read More »

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಮಧ್ಯ ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು ಸುಮಾರು 63 ಪ್ರಯಾಣಿಕರು ಮೃತರಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡೂ ಬಸ್ಸುಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಇದ್ದರು ಎನ್ನಲಾಗಿದೆ. ಮುಂಜಾನೆ 3.30ರ ಸುಮಾರಿಗೆ ಭೂಕುಸಿತವಾಗಿ ಬಸ್ಸುಗಳು ನದಿಯಲ್ಲಿ ಕೊಚ್ಚಿಕೊಂಡು ಹೋಯಿತು. ನಾವು ಘಟನಾ ಸ್ಥಳದಲ್ಲಿದ್ದೇವೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದ ಬಸ್ಸುಗಳನ್ನು, ಜನರನ್ನು ಹುಡುಕುವ

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ Read More »