ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ
ಸಮಗ್ರ ನ್ಯೂಸ್: ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಕ್ಲಾಸ್ ರೂಂನಲ್ಲಿ ವಿದ್ಯಾಭ್ಯಾಸದಲ್ಲಿ ಮಗ್ನ ವಾಗಿರುವ ಸಂದರ್ಭ ಏಕಾಏಕಿ ನಾಗರಹಾವಿನ ಮರಿಯೊಂದು ಕ್ಲಾಸ್ ರೂಂ ಗೆ ನುಗ್ಗಿದೆ.ಬಳಿಕ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ತೇಜಸ್ ನಾಗರಹಾವಿನ ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ Read More »