ದೇಶ-ವಿದೇಶ

ಆಫ್ರಿಕಾ : ಧಾರಾಕಾರ ಮಳೆಯಿಂದ ಮಹಾ ಪ್ರವಾಹ: 90 ಜನ ಕಾಣೆ, 350ಕ್ಕೂ ಅಧಿಕ ಜನ ಮೃತ್ಯು

ಸಮಗ್ರ ನ್ಯೂಸ್ : ಕಳೆದೊಂದು ವಾರದಿಂದ ಕೀನ್ಯಾ ಮತ್ತು ತಂಜಾನಿಯಾದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹಾಗೂ ಸಾಕು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದಾಗಿ ಸುಮಾರು 350ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹಕ್ಕೆ ಮನೆಗಳು, ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಇನ್ನೂ ಭೀಕರ ಮಳೆಯಿಂದಾಗಿ ಕಿನ್ಯಾದ ಲಕ್ಷಕ್ಕೂ ಅಧಿಕ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 100ಕ್ಕೂ ಹೆಚ್ಚು […]

ಆಫ್ರಿಕಾ : ಧಾರಾಕಾರ ಮಳೆಯಿಂದ ಮಹಾ ಪ್ರವಾಹ: 90 ಜನ ಕಾಣೆ, 350ಕ್ಕೂ ಅಧಿಕ ಜನ ಮೃತ್ಯು Read More »

ಮಹಾರಾಷ್ಟ್ರ : ಮನೆಯಲ್ಲಿ ಬೆಂಕಿ ಅವಘಡ: 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ

ಸಮಗ್ರ ನ್ಯೂಸ್ : ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಏಳು ಮಂದಿ ವಯಸ್ಕರು ಹಾಗೂ 2–3 ಮಕ್ಕಳು ಇದ್ದರು. ಸಿಲಿಂಡರ್‌ ಬ್ಲಾಸ್ಟ್‌ನಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಸದಾಫ್ ಇರ್ಫಾನ್ ಶೇಖ್ (3) ಮೃತಪಟ್ಟರೆ, ರಿಜ್ವಾನ್ ಖಾನ್ (40), ರೆಹಾನ್ ಶೇಖ್ (17), ಆದಿಲ್ ಖಾನ್ (10), ಫೈಜಾನ್

ಮಹಾರಾಷ್ಟ್ರ : ಮನೆಯಲ್ಲಿ ಬೆಂಕಿ ಅವಘಡ: 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ Read More »

ರಾಯ್ ಬರೇಲಿ ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ/ ರಾಹುಲ್ ಗಾಂಧಿ ಟ್ವೀಟ್

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ರಾಯ್ ಬರೇಲಿ ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ. ಈ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದು ನನಗೆ ಭಾವನಾತ್ಮಕ ಕ್ಷಣ. ನಮ್ಮ ಕುಟುಂಬದ ‘ಕರ್ಮಭೂಮಿ’ ಮತ್ತು ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶದ ಜವಾಬ್ದಾರಿಯನ್ನು ನನ್ನ ತಾಯಿ ನನಗೆ ವಹಿಸಿದ್ದಾರೆ ಎಂದು ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೇಥಿ ಮತ್ತು ರಾಯ್‍ಬರೇಲಿಯ ಜನರು ಯಾವಾಗಲೂ ನಮ್ಮ ಕುಟುಂಬಸ್ಥರಿದ್ದಂತೆ ಎಂದು ಟ್ವೀಟ್ ಮಾಡಿದ್ದಾರೆ. ಅಮೇಥಿ ಮತ್ತು ರಾಯ್ ಬರೇಲಿ ನನಗೆ

ರಾಯ್ ಬರೇಲಿ ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ/ ರಾಹುಲ್ ಗಾಂಧಿ ಟ್ವೀಟ್ Read More »

ರೋಹಿತ್ ವೇಮುಲ ದಲಿತನಲ್ಲ/ ತನಿಖೆ ಮುಕ್ತಾಯಗೊಳಿಸಿದ ತೆಲಂಗಾಣ ಪೊಲೀಸರು

ಸಮಗ್ರ ನ್ಯೂಸ್: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪಿಎಚ್‍ಡಿ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಪ್ರಕರಣದ ತನಿಖೆಯನ್ನು ತೆಲಂಗಾಣ ಪೊಲೀಸರು ಮುಕ್ತಾಯಗೊಳಿಸಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಂದಿನ ಸಿಕಂದರಾಬಾದ್ ಸಂಸದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಮತ್ತು ಉಪಕುಲಪತಿ ಅಪ್ಪಾ ರಾವ್ ಅವರನ್ನು ದೋಷಮುಕ್ತಗೊಳಿಸಿದ್ದಾರೆ. 2016ರ ಜನವರಿ 17ರಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದ. ಈತನು ದಲಿತನೆಂದು, ವಿಶ್ವವಿದ್ಯಾಲಯದಲ್ಲಿ ದಲಿತ

ರೋಹಿತ್ ವೇಮುಲ ದಲಿತನಲ್ಲ/ ತನಿಖೆ ಮುಕ್ತಾಯಗೊಳಿಸಿದ ತೆಲಂಗಾಣ ಪೊಲೀಸರು Read More »

ಷೇರು ಪೇಟೆಯಲ್ಲಿ ಕರಡಿ ಕುಣಿತ| ಕೋಟಿ ಕೋಟಿ ನಷ್ಟ ಕಂಡ ಹೂಡಿಕೆದಾರರು

ಸಮಗ್ರ ನ್ಯೂಸ್: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ಮೇ 3) ತಲ್ಲಣ ಸೃಷ್ಟಿಯಾಗಿದ್ದು, ಎನ್‌ಎಸ್‌ಇ ನಿಫ್ಟಿ ಹಾಗೂ ಬಿಎಸ್‌ಇ ಸೆನ್ಸೆಕ್ಸ್‌ ಭಾರಿ ಕುಸಿತ ಕಂಡ ಕಾರಣ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಎನ್‌ಎಸ್‌ಇ ನಿಫ್ಟಿ 50 ಸುಮಾರು 172.35 ಪಾಯಿಂಟ್‌ಗಳ ಕುಸಿತ ಕಂಡರೆ, ಬಿಎಸ್‌ಇ ಸೆನ್ಸೆಕ್ಸ್‌ (BSE Sensex) 733 ಪಾಯಿಂಟ್‌ಗಳ ಕುಸಿತ ಕಂಡಿದೆ. ಆರಂಭದಲ್ಲಿ ಲಾಭ ಕಂಡ ಹೂಡಿಕೆದಾರರು ದಿನದ ಅಂತ್ಯಕ್ಕೆ ನಷ್ಟ ಅನುಭವಿಸಿದರು. ಎನ್‌ಎಸ್‌ಇ ನಿಫ್ಟಿ 50

ಷೇರು ಪೇಟೆಯಲ್ಲಿ ಕರಡಿ ಕುಣಿತ| ಕೋಟಿ ಕೋಟಿ ನಷ್ಟ ಕಂಡ ಹೂಡಿಕೆದಾರರು Read More »

ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು

ಸಮಗ್ರ ನ್ಯೂಸ್‌ : ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದು ಪರೇಲಿ ಎಂಬ ಐಷಾರಾಮಿ ಹಡಗು ಮಂಗಳೂರಿನ ಹಳೇ ಬಂದರಿಗೆ ಬಂದಿದೆ. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್‌ ಬಂದಿಳಿದಿದ್ದಾರೆ. ಕಳೆದ ಏಳು ವರ್ಷಗಳಿಂದ ಲಕ್ಷದ್ವೀಪದಿಂದ ಕೇವಲ ಸರಕು ಸಾಗಣೆ ಹಡಗುಗಳಷ್ಟೇ ಬರುತ್ತಿತ್ತು. ಸದ್ಯ

ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು Read More »

ಕೋಲ್ಕತ್ತ : ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌

ಸಮಗ್ರ ನ್ಯೂಸ್‌ : ಬಿಜೆಪಿ ಅಧಿಕಾರದಲ್ಲಿರುವ ನವಭಾರತದಲ್ಲಿ ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಾಂವಿಧಾನಿಕ ನಡೆಯ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದರು. ಧರ್ಮ ಯಾವತ್ತಿಗೂ ಇರುತ್ತದೆ. ಬಿಜೆಪಿ ಆಡಳಿತದ ನವಭಾರತದಲ್ಲಿ ರಾಜಕೀಯ ಸ್ವಹಿತಾಸಕ್ತಿಗಾಗಿ ಅದನ್ನು ಬಳಸಲಾಗುತ್ತಿದೆ ಎನ್ನುವುದು ಹೊಸ ವಿಚಾರ ಎಂದು ಹೇಳಿದರು. ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯು ಅಪಾಯದಲ್ಲಿದೆ. ಕೇಂದ್ರ ಸರ್ಕಾರವು

ಕೋಲ್ಕತ್ತ : ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌ Read More »

ಲಕ್ನೋ: ರಾಯ್‌ ಬರೇಲಿಯಲ್ಲಿ ರಾಹುಲ್, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯಲ್ಲಿ ರಾಯ್‌ ಬರೇಲಿ ಹಾಗೂ ಅಮೇಥಿ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ನೇಮಕ ಮಾಡಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ರಾಯ್‌ ಬರೇಲಿಯಿಂದ ಸ್ಪರ್ಧೆ ಮಾಡಲಿದ್ದು, ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಲಾಗಿದೆ. ಐದನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಇದೀಗ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ

ಲಕ್ನೋ: ರಾಯ್‌ ಬರೇಲಿಯಲ್ಲಿ ರಾಹುಲ್, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧೆ Read More »

ಹೊಸ ಅಪ್​ಡೇಟ್ ತರುತ್ತಿದೆ ವಾಟ್ಸ್​ಆ್ಯಪ್ | ಇಂಟರ್​ನೆಟ್ ಇಲ್ಲದಿದ್ದರೂ ಫೋಟೊ ಕಳಿಸಿ!

ಸಮಗ್ರ ನ್ಯೂಸ್:ವಾಟ್ಸ್​ಆ್ಯಪ್ ಹೊಸ ಫೀಚರ್​ವೊಂದನ್ನು ಪರೀಕ್ಷಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವಿಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದು. ಬೀಟಾ ಆವೃತ್ತಿಯಲ್ಲಿ ಇದು ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ವಾಟ್ಸ್​ಆ್ಯಪ್ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹೊಸ ಹೊಸ ಫೀಚರ್​ಗಳನ್ನು ನೂತನ ಅಪ್​ಡೇಟ್ ಮೂಲಕ ವಾಟ್ಸ್​ಆ್ಯಪ್ ಒದಗಿಸುತ್ತದೆ. ಜತೆಗೆ ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ. ವಾಟ್ಸ್​ಆ್ಯಪ್ ಹೊಸ

ಹೊಸ ಅಪ್​ಡೇಟ್ ತರುತ್ತಿದೆ ವಾಟ್ಸ್​ಆ್ಯಪ್ | ಇಂಟರ್​ನೆಟ್ ಇಲ್ಲದಿದ್ದರೂ ಫೋಟೊ ಕಳಿಸಿ! Read More »

ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಮೋದಿ ಪೋಟೋ ತೆರವು/ ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ

ಸಮಗ್ರ ನ್ಯೂಸ್: ಕೋವಿಡ್ ಲಸಿಕೆ ಪಡೆದ ಬಳಿಕ ಡೌನ್‍ಲೋಡ್ ಮಾಡಲಾಗುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಪೋಟೋ ಹಾಕಲಾಗುತ್ತಿದ್ದು, ಆದರೆ ಈಗ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಪೋಟೋ ತೆರವು ಮಾಡಲಾಗಿದೆ. ಇದು ಕೋವಿಶೀಲ್ಡ್ ಅಡ್ಡಪರಿಣಾಮದ ಬಳಿಕ ಕೇಂದ್ರ ಬಿಜೆಪಿ ಸರ್ಕಾರ ತೆಗೆದಿದೆ ಎಂದು ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣ ಪ್ರಮಾಣಪತ್ರ, ವೆಬ್‍ಸೈಟ್ ಸೇರಿದಂತೆ ಅಲ್ಲೆಡೆಯಿಂದ ಪೋಟೋಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ. ಲೋಕಸಭಾ ಚುನಾವಣೆ

ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಮೋದಿ ಪೋಟೋ ತೆರವು/ ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ Read More »