ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ
ನವದೆಹಲಿ.ಮೇ.20: ಕೊರೋನಾ ಎರಡನೇ ಅಲೆ ಅಬ್ಬರದ ನಡುವೆಯೇ ಬ್ಲ್ಯಾಕ್ ಫಂಗಸ್ ವೈದ್ಯರ ಹಾಗೂ ಜನಸಾಮಾನ್ಯರ ಆತಂಕವನ್ನು ಹೆಚ್ಚಿಸಿದೆ. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಅಥವಾ ಮ್ಯುಕೋರ್ಮೈಕೋಸಿಸ್ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಮಾರ್ಗಸೂಚಿಯಲ್ಲಿ ವಿವರಿಸಿದೆ. ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗ ತುತ್ತಾಗುತ್ತಾರೆ. […]