ದೇಶ-ವಿದೇಶ

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ

ಸಮಗ್ರ ನ್ಯೂಸ್: ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್‍ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿರುವ ಹೊತ್ತಿನಲ್ಲಿ, ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮಥ್ರ್ಯ ಹೊಂದಿರುವ ಅತ್ಯಾಧುನಿಕ ರೋಬೋಟ್ ನಾಯಿಗಳನ್ನು ಅಭಿವೃದ್ಧಿಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ […]

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ Read More »

ಮುಂಗಾರು ಪೂರ್ವ ಮಳೆಯಬ್ಬರ| ಕೇರಳದಲ್ಲಿ 6 ಸಾವು

ಸಮಗ್ರ ನ್ಯೂಸ್: ಮಂಗಳವಾರ ಸುರಿದ ಮುಂಗಾರುಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೋಟ್ಟಾಯಂ ಜಿಲ್ಲೆಯ ಭರಣಂಙಾನಂ ಬಳಿ ಭೂಕುಸಿತ ಸಂಭವಿಸಿದೆ. ಆದರೆ ಜೀವಹಾನಿ ವರದಿಯಾಗಿಲ್ಲ. ತಿರುವನಂತಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು, ಆಲಪ್ಪುಳ, ಎರ್ನಾಕುಳಂ ಮತ್ತು ಕೋಟಯಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ವಾರ ಮಳೆಯಿಂದ ಆದ ಅವಘಡಗಳಿಗೆ ತುತ್ತಾಗಿ ಐದು ಮಂದಿ ಮೃತಪಟ್ಟಿದ್ದರು. ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ

ಮುಂಗಾರು ಪೂರ್ವ ಮಳೆಯಬ್ಬರ| ಕೇರಳದಲ್ಲಿ 6 ಸಾವು Read More »

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ

ಸಮಗ್ರ ನ್ಯೂಸ್: ಇಂದಿನಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ಸೂಚಿಸಿದೆ. ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ Read More »

ಧ್ವನಿ ಸಂದೇಶದ ಅವಧಿ ಹೆಚ್ಚಿಸಿದ ವಾಟ್ಸಾಪ್/ ಇನ್ಮುಂದೆ ಕಳುಹಿಸಬಹುದು ಒಂದು ನಿಮಿಷದ ಧ್ವನಿ ಸಂದೇಶ

ಸಮಗ್ರ ನ್ಯೂಸ್: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಧ್ವನಿ ಸಂದೇಶಗಳ ಕಾಲಾವಧಿಯನ್ನು ಹೆಚ್ಚಿಸಿ ಹೊಸ ಅಪ್‍ಡೇಟ್ ನೀಡಿದೆ. ವಾಟ್ಸ್ ಆಪ್ ಆವೃತ್ತಿಯು ಬಳಕೆದಾರರಿಗೆ ಪ್ರಸ್ತುತ ಕೇವಲ 30 ಸೆಕೆಂಡ್ ಗಳಷ್ಟು ಅವಧಿಯ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. ಒಂದು ನಿಮಿಷದವರೆಗೆ ಧ್ವನಿ ಸಂದೇಶಗಳನ್ನು ಕಳುಹಿಸುವ ವಿಧಾನವನ್ನು ಬೆಂಬಲಿಸಲು

ಧ್ವನಿ ಸಂದೇಶದ ಅವಧಿ ಹೆಚ್ಚಿಸಿದ ವಾಟ್ಸಾಪ್/ ಇನ್ಮುಂದೆ ಕಳುಹಿಸಬಹುದು ಒಂದು ನಿಮಿಷದ ಧ್ವನಿ ಸಂದೇಶ Read More »

ಮಿಜೋರಾಂ ನಲ್ಲಿ ಕಲ್ಲು ಕ್ವಾರಿ‌ ಕುಸಿತ| 10 ಜನ ಸಾವು; ಹಲವರು ನಾಪತ್ತೆ

ಸಮಗ್ರ ನ್ಯೂಸ್: ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್ ನಲ್ಲಿ ಮಂಗಳವಾರ ಬೆಳಿಗ್ಗೆ ಕಲ್ಲಿನ ಕ್ವಾರಿ ಕುಸಿದು 10 ಜನ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಮಳೆಯ ಪರಿಣಾಮ ಈ ಕ್ವಾರಿ ಕುಸಿದಿದೆ ಎಂದು ಪೊಲೀಸರು ಹೇಳಿದ್ದಾರೆ. ನಗರದ ದಕ್ಷಿಣ ಹೊರವಲಯದಲ್ಲಿರುವ ಮೆಲ್ಥಮ್ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 10 ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಜೋರಾಂ ನಲ್ಲಿ ಕಲ್ಲು ಕ್ವಾರಿ‌ ಕುಸಿತ| 10 ಜನ ಸಾವು; ಹಲವರು ನಾಪತ್ತೆ Read More »

ಶಾಂತ ಸ್ಥಿತಿಯತ್ತ ರೆಮಾಲ್/ ಕುಸಿತಗೊಂಡ ಚಂಡಮಾರುತದ ವೇಗ

ಸಮಗ್ರ ನ್ಯೂಸ್: 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ರೆಮಾಲ್ ಚಂಡಮಾರುತದ ವೇಗ ನಿಧಾನವಾಗಿ ಕುಸಿಯುತ್ತಿದ್ದು, ಇಂದು ರಾತ್ರಿ ಹೊತ್ತಿಗೆ ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್ ನಿಂದ 50-70 ಕಿಲೋಮೀಟರಗೆ ಕುಸಿಯುವ ಸಾಧ್ಯತೆಯಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿ ಗಡಿಯ ತೀರಕ್ಕೆ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ

ಶಾಂತ ಸ್ಥಿತಿಯತ್ತ ರೆಮಾಲ್/ ಕುಸಿತಗೊಂಡ ಚಂಡಮಾರುತದ ವೇಗ Read More »

ದುಬೈ ಪ್ರಯಾಣಿಕರೇ ಹುಷಾರು/ ರಿಟರ್ನ್ ಟಿಕೆಟ್ ಇಲ್ಲದೇ ವಿಮಾನ ಹತ್ತಬೇಡಿ

ಸಮಗ್ರ ನ್ಯೂಸ್: ಅಕ್ರಮ ವಲಸೆಯನ್ನು ತಡೆಯಲು ಮಧ್ಯಪ್ರಾಚ್ಯ ರಾಷ್ಟ್ರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿ ವೀಸಾ ಹೊಂದಿರುವವರಿಗೆ ವಾಪಸ್‌ ಟಿಕೆಟ್‌, ಸುತ್ತಾಡಲು ಕನಿಷ್ಠ ಹಣ ಹಾಗೂ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಆಗಿದ್ದರಷ್ಟೇ ರಾಷ್ಟ್ರದ ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಕಳೆದ ತಿಂಗಳು ಹತ್ತಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕಳುಹಿಸಲಾಗಿದೆ. ಗಡಿಪಾರು ಸಮಸ್ಯೆ ತಡೆಯುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳಿಂದಲೇ ಕಟ್ಟುನಿಟ್ಟಾಗಿ ದಾಖಲಾತಿಗಳನ್ನು ಪರಿಶೀಲಿಸಿ ಯುಎಇ ವಿಮಾನ ಹತ್ತಲು ಅನುಮತಿಸಲಾಗುತ್ತಿದೆ. ಯುಎಇಯಲ್ಲಿ ದುಬೈ

ದುಬೈ ಪ್ರಯಾಣಿಕರೇ ಹುಷಾರು/ ರಿಟರ್ನ್ ಟಿಕೆಟ್ ಇಲ್ಲದೇ ವಿಮಾನ ಹತ್ತಬೇಡಿ Read More »

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಿ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಆದೇಶ ಹೊರಡಿಸಲಾಗಿದೆ. ಈಗಾಗಲೇ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಪೋನ್ ಗಳನ್ನು ನಿಷೇಧಿಸಲಾಗಿದ್ದು, ಇದೀಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಪೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಐಜಿ ಹಾಗೂ ರಾಮಮಂದಿರ ಟ್ರಸ್ಟ್ ಅಧಿಕಾರಿ ಆಯುಕ್ತರ ಜತೆಗಿನ ಸಭೆಯಲ್ಲಿ ಮೊಬೈಲ್ ಪೋನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್ Read More »

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು

ಸಮಗ್ರ ನ್ಯೂಸ್: ಉತ್ತರ ಪ್ರದೇಶದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 11 ಜನ ಸ್ಥಳದಲ್ಲೇ ದುರ್ಮರಣ ಹೊಂದಿ 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿ ಶಹಜಹಾನ್‌ಪುರ ಜಿಲ್ಲೆಯ ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉತ್ತರಾಖಂಡಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್ ಡಿಕ್ಕಿಯಾಗಿದೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಭಕ್ತರು ಸೀತಾಪುರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೇಥಾ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು Read More »

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ| 7 ನವಜಾತ ಶಿಶುಗಳು ಸಾವು

ಸಮಗ್ರ ನ್ಯೂಸ್: ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದು 7 ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ಭೀಕರ ಅಪಘಾತದಲ್ಲಿ 12 ಶಿಶುಗಳನ್ನು ರಕ್ಷಿಸಲಾಗಿದೆ, ಅದರಲ್ಲಿ 7 ಶಿಶುಗಳು ಸಾವನ್ನಪ್ಪಿವೆ. 5 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಒಬ್ಬರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಇದೆ. ನಿನ್ನೆ ರಾತ್ರಿ 11.32 ಕ್ಕೆ ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ 9 ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸ್ವತಃ

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ| 7 ನವಜಾತ ಶಿಶುಗಳು ಸಾವು Read More »