ದೇಶ-ವಿದೇಶ

ವಾರಣಾಸಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಇದೇ ವಾರಾಣಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಬಾರಿಯೂ ಗೆಲುವಿನ ನಗೆ ಬೀರುವ ಮೂಲಕ ಹ್ಯಾಟ್ರಿಕ್​ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾರಂಭದ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ ಅವರು ಪರಾಜಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 62ರಿಂದ 35ಕ್ಕೆ ಕುಸಿತ ಕಂಡಿದೆ. […]

ವಾರಣಾಸಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡ ಪ್ರಧಾನಿ ಮೋದಿ Read More »

ರಾಮನಾಡಿನಲ್ಲಿ ಬಿಜೆಪಿಗೆ ಹಿನ್ನಡೆ| ಅಯೋಧ್ಯೆಯಲ್ಲಿ ಮುನ್ನಡೆ ಸಾಧಿಸಿದ ಎಸ್ಪಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದು, ಎನ್‌ಡಿಎ ಆರಂಭಿಕ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಉತ್ತರ ಪ್ರದೇಶವನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಕಂಡಿದ್ದ ಬಿಜೆಪಿಗೆ ಆಘಾತ ಎದುರಾಗಿದೆ. ಆರಂಭಿಕ ಹಂತದಲ್ಲಿ ಕೇವಲ 35 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮುನ್ನಡೆ ಪಡೆದುಕೊಂಡಿದ್ದು, 35 ಕ್ಷೇತ್ರಗಳಲ್ಲಿ ಸಮಜಾವಾದಿ ಪಕ್ಷ ಮುನ್ನಡೆ ಸಾಧಿಸಿದೆ. ಅಯೋಧ್ಯೆ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ

ರಾಮನಾಡಿನಲ್ಲಿ ಬಿಜೆಪಿಗೆ ಹಿನ್ನಡೆ| ಅಯೋಧ್ಯೆಯಲ್ಲಿ ಮುನ್ನಡೆ ಸಾಧಿಸಿದ ಎಸ್ಪಿ Read More »

ಎಕ್ಸಿಟ್ ಪೋಲ್ ಸುಳ್ಳು ಮಾಡಿದ ಇಂಡಿಯಾ ಒಕ್ಕೂಟ| 225 + ಸ್ಥಾನಗಳಲ್ಲಿ ಲೀಡ್

ಸಮಗ್ರ ನ್ಯೂಸ್: 543 ಲೋಕಸಭಾ ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಆರಂಭಿಕ ಹಂತಗಳಲ್ಲಿ 272 ರ ಮೆಜಾರಿಟಿಯನ್ನು ದಾಟಿದೆ. ಆದರೆ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ನೀಡಿದ್ದ ಹಲವು ಸಮೀಕ್ಷೆಗಳನ್ನು ಇಂಡಿಯಾ ಒಕ್ಕೂಟ ಸುಳ್ಳು ಮಾಡಿಸಿದೆ. ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಕೂಡ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 150 ರಿಂದ 180 ಸ್ಥಾನಗಳನ್ನು ದಾಟುವುದಿಲ್ಲ ಎಂದು ಫಲಿತಾಂಶ ನೀಡಿದ್ದವು. ಆದರೆ, ಈ ಫಲಿತಾಂಶವನ್ನು ಇಂಡಿಯಾ ಒಕ್ಕೂಟ ಸುಳ್ಳು ಮಾಡಿದ್ದು, ಬೆಳಗ್ಗೆ

ಎಕ್ಸಿಟ್ ಪೋಲ್ ಸುಳ್ಳು ಮಾಡಿದ ಇಂಡಿಯಾ ಒಕ್ಕೂಟ| 225 + ಸ್ಥಾನಗಳಲ್ಲಿ ಲೀಡ್ Read More »

ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಗೆಲುವು/ ಮೆಕ್ಸಿಕೋ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ

ಮೆಕ್ಸಿಕೋ ದೇಶದ 200 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆಮೆಕ್ಸಿಕೋ ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಭಾರೀ ಅಂತರದಿಂದ ಜಯಗಳಿಸಿ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದು, ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೇನ್‌ಬಾಮ್ 58.3 ರಿಂದ 60.7 ಪ್ರತಿಶತದಷ್ಟು ಮತಗಳನ್ನು ಪಡೆದು ವಿಜಯವನ್ನು ಸಾಧಿಸಿದ್ದಾರೆ ಎಂದು ಮೆಕ್ಸಿಕೋದ ಚುನಾವಣಾ ಸಂಸ್ಥೆಯು ಘೋಷಿಸಿತು. ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತೇನೆ. ಮೆಕ್ಸಿಕೋ ಶಾಂತಿಯುತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ನಾವು ತೋರಿಸಿದ್ದೇವೆ. ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ

ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಗೆಲುವು/ ಮೆಕ್ಸಿಕೋ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ Read More »

ದೇಶವಾಸಿಗಳಿಗೆ ಟೋಲ್ ಶಾಕ್| ಟೋಲ್ ದರಗಳಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಮವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಅನ್ನು 3% ರಿಂದ 5% ಗೆ ಹೆಚ್ಚಿಸಿದ್ದು, ದೇಶದಾದ್ಯಂತ ರಾಷ್ಟ್ರೀಯ ರಸ್ತೆಗಳು ಮತ್ತು ಎಕ್ಸ್‍ಪ್ರೆಸ್‍ವೇಗಳಲ್ಲಿ ಇಂದಿನಿಂದ ಟೋಲ್ ದರಗಳು ಹೆಚ್ಚಾಗಲಿವೆ. 18ನೇ ಲೋಕಸಭೆ ಚುನಾವಣೆಯಲ್ಲಿ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ಈ ದರವು ಪ್ರತಿ ವರ್ಷ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ. ಆದರೆ, ಚುನಾವಣೆಯ ಕಾರಣ ಬಳಕೆ ಶುಲ್ಕವನ್ನು ತಡೆಹಿಡಿಯಲಾಗಿತ್ತು. ಇಂದಿನಿಂದ ಸುಮಾರು 1,100 ಟೋಲ್

ದೇಶವಾಸಿಗಳಿಗೆ ಟೋಲ್ ಶಾಕ್| ಟೋಲ್ ದರಗಳಲ್ಲಿ ಹೆಚ್ಚಳ Read More »

ಅಬಕಾರಿ ಹಗರಣ/ ತಿಹಾರ್ ಜೈಲಿಗೆ ವಾಪಾಸಾದ ಕೇಜ್ರಿವಾಲ್

ಸಮಗ್ರ ನ್ಯೂಸ್: ಅಬಕಾರಿ ಹಗರಣದಲ್ಲಿ ಬಂಧಿತರಾದ ಬಳಿಕ ಲೋಕಸಭೆ ಚುನಾವಣೆ ಕಾರಣ ಜಾಮೀನು ಪಡೆದಿದ್ದ ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಮರಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿ, ಜೂ.2ರಂದು ಜೈಲಿಗೆ ಮರಳಬೇಕು ಎಂದು ಕೇಜ್ರಿವಾಲ್‍ಗೆ ತಾಕೀತು ಮಾಡಿತ್ತು. ಈ ನಡುವೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ವಿಸ್ತರಣೆ ಕೋರಿದ್ದ ಅರ್ಜಿಯ ತೀರ್ಪು ಜೂ.5ಕ್ಕೆ ಮುಂದೂಡಿಕೆ ಆದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಭಾನುವಾರ ಜೈಲಿಗೆ

ಅಬಕಾರಿ ಹಗರಣ/ ತಿಹಾರ್ ಜೈಲಿಗೆ ವಾಪಾಸಾದ ಕೇಜ್ರಿವಾಲ್ Read More »

ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸುನೀತಾ ವಿಲಿಯಮ್ಸ್

ಸಮಗ್ರ ನ್ಯೂಸ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್ ಸ್ಟಾರ್‍ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. ಶನಿವಾರ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಕಳೆದ ತಿಂಗಳ 7 ರಂದೇ ಸುನೀತಾ ಅಂತರಿಕ್ಷ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಮುಂದೂಡಲಾಗಿತ್ತು. ವಿಲಿಯಮ್ಸ್ ಹೊರತಾಗಿ ಬುಚ್ ವಿಲ್ಮೋರ್ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸುನಿತಾ ಮತ್ತು ವಿಲ್ಮೋರ್

ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸುನೀತಾ ವಿಲಿಯಮ್ಸ್ Read More »

ಭಾರತ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ/ ಕೋಚ್ ಆಯ್ಕೆಯ ಕುರಿತ ವದಂತಿಗಳಿಗೆ ತೆರೆ ಎಳೆದ ಗಂಭೀರ್

ಸಮಗ್ರ ನ್ಯೂಸ್: ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಅಯ್ಕೆಯ ಕುರಿತು ಎದ್ದಿರುವ ಊಹಾಪೋಹಗಳ ನಡುವೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗುವುದುಗೌರವದ ವಿಚಾರ ಎಂದು ಹೇಳಿದ್ದಾರೆ ನಾನು ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ. ನಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ” ಎಂದು ಹೇಳಿದ್ದಾರೆ. ಭಾರತವು ತನ್ನ T20 ವಿಶ್ವಕಪ್ ಅಭಿಯಾನವನ್ನು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಪ್ರಾರಂಭಿಸಲಿರುವುದರಿಂದ, ಮೆನ್ ಇನ್ ಬ್ಲೂ

ಭಾರತ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ/ ಕೋಚ್ ಆಯ್ಕೆಯ ಕುರಿತ ವದಂತಿಗಳಿಗೆ ತೆರೆ ಎಳೆದ ಗಂಭೀರ್ Read More »

ಎಕ್ಸಿಟ್‌ ಪೋಲ್‌ ಗಳಲ್ಲಿ ಭರ್ಜರಿ ವಿಜಯದ ದಿಕ್ಸೂಚಿ ಬೆನ್ನಲ್ಲೇ ಪ್ರಧಾನಿ ಸಭೆ..!

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಏಳು ಹಂತದ ಮತದಾನ ಪೂರ್ಣಗೊಂಡಿದೆ, ನಿನ್ನೆ ಎಕ್ಸಿಟ್‌ ಪೋಲ್‌ ಫಲಿತಾಂಶವೂ ಹೊರಬಿದ್ದಿವೆ. ಇದರಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುತ್ತದೆ ಎಂಬ ಮಾಹಿತಿಯೂ ಲಭಿಸಿದೆ. ಈ ಮಾಹಿತಿ ಸಿಕ್ಕಾಗಿಂದ ಪ್ರಧಾನಿ ಮೋದಿ ಇಂದು 7 ಸಭೆಗಳನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಕೈಗೆತ್ತಿಕೊಳ್ಳಬಹುದಾದ ಯೋಜನೆ ಹಾಗೂ ದೇಶಾದ್ಯಂತ ತಲೆದೋರಿರುವ ಬಿಸಿಗಾಳಿ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಅಧಿಕೃತ ಮೂಲಗಳ

ಎಕ್ಸಿಟ್‌ ಪೋಲ್‌ ಗಳಲ್ಲಿ ಭರ್ಜರಿ ವಿಜಯದ ದಿಕ್ಸೂಚಿ ಬೆನ್ನಲ್ಲೇ ಪ್ರಧಾನಿ ಸಭೆ..! Read More »

ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ/ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಸಮಗ್ರ ನ್ಯೂಸ್: “ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು’ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬೇಕು ಎಂದರೆ ನನ್ನ ಆಯ್ಕೆ ರಾಹುಲ್ ಗಾಂಧಿ, ದೇಶದ ಯುವಕ-ಯುವತಿಯರು, ದೇಶದ ಶಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ. ಹಾಗಾಗಿ, ರಾಹುಲ್ ಗಾಂಧಿ ಅವರೇ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಎನ್‍ಡಿಟಿವಿಯೊಂದಿಗೆ ಸಂದರ್ಶನದಲ್ಲಿ ಅವರು ಹೇಳಿದ್ದಾರೆ ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದ್ದು ಜೂನ್ 4ರ ಫಲಿತಾಂಶದತ್ತ

ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ/ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ Read More »