ದೇಶ-ವಿದೇಶ

ಮಸ್ಕತ್ ನ ಶಿಯಾ ಮಸೀದಿ ಬಳಿ ಗುಂಡಿನ ದಾಳಿ| ಓರ್ವ ಭಾರತೀಯ ಸಹಿತ 9 ಮಂದಿ‌ ಸಾವು

ಸಮಗ್ರ ನ್ಯೂಸ್: ಒಮಾನ್ ರಾಜಧಾನಿ ಮಸ್ಕತ್ನ ಶಿಯಾ ಮಸೀದಿಯ ಬಳಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಸಾವನ್ನಪ್ಪಿದ್ದಾರೆ ಎಂದು ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ. ಒಮಾನ್’ನ ಶಿಯಾ ಮುಸ್ಲಿಂ ಮಸೀದಿಯ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ದಾಳಿಕೋರರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಮತ್ತು ಒಬ್ಬ ಪೊಲೀಸ್ ಸೇರಿದ್ದಾರೆ ಎಂದು ಪಾಕಿಸ್ತಾನ ಮತ್ತು ಒಮಾನ್ […]

ಮಸ್ಕತ್ ನ ಶಿಯಾ ಮಸೀದಿ ಬಳಿ ಗುಂಡಿನ ದಾಳಿ| ಓರ್ವ ಭಾರತೀಯ ಸಹಿತ 9 ಮಂದಿ‌ ಸಾವು Read More »

ವಿಚ್ಚೇದನ ಇಲ್ಲದೇ ಮದುವೆ| ಸುಪ್ರೀಂ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್ ವಿಚ್ಛೇದನವಿಲ್ಲದೆ ಎರಡನೇ ಬಾರಿಗೆ ಮದುವೆಯಾದ ದಂಪತಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ಅಸಾಧಾರಣವಾಗಿರುವುದರಿಂದ ಆರೋಪಿಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಅದೇನೆಂದರೆ ದಂಪತಿಗೆ ಚಿಕ್ಕ ಮಗುವಿದೆ. ಹೀಗಾಗಿ ಅವರಿಗೆ ವಿವಿಧ ಸಮಯಗಳಲ್ಲಿ ಶಿಕ್ಷೆಯನ್ನು ಅನುಭವಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಒಬ್ಬ ಆರೋಪಿಯ ಶಿಕ್ಷೆ ಪೂರ್ಣಗೊಂಡ ನಂತರ, ಇನ್ನೊಬ್ಬರು ಎರಡು ವಾರಗಳಲ್ಲಿ ಶರಣಾಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತಿ ಮೊದಲು ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಮಹಿಳೆ ಎರಡು

ವಿಚ್ಚೇದನ ಇಲ್ಲದೇ ಮದುವೆ| ಸುಪ್ರೀಂ ಮಹತ್ವದ ತೀರ್ಪು Read More »

ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತದ ಪರಿಹಾರ/ 2.5 ಮಿಲಿಯನ್ ಡಾಲರ್‌ ಪರಿಹಾರ ಧನ ಬಿಡುಗಡೆ

ಸಮಗ್ರ ನ್ಯೂಸ್‌: ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತವು 2.5 ಮಿಲಿಯನ್ ಡಾಲರ್‌ನ ಮೊದಲ ಕಂತನ್ನು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ (UNRWA) ಬಿಡುಗಡೆ ಮಾಡಿದೆ. ನೋಂದಾಯಿತ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ನೇರ ಪರಿಹಾರ ಮತ್ತು ಕೆಲಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದು ಯುಎನ್ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಕೊಡುಗೆಯಾಗಿ ಹಣ ನೀಡುತ್ತಿದೆ. UNRWA, 1950 ರಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದ ಬೆಂಬಲವು ಪ್ಯಾಲೇಸ್ವಿನಿಯನ್ ನಿರಾಶ್ರಿತರಿಗೆ ಒದಗಿಸಲಾದ ಶಿಕ್ಷಣ, ಆರೋಗ್ಯ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಏಜೆನ್ಸಿಯ ಪ್ರಮುಖ ಕಾರ್ಯಕ್ರಮಗಳು ಮತ್ತು

ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ಭಾರತದ ಪರಿಹಾರ/ 2.5 ಮಿಲಿಯನ್ ಡಾಲರ್‌ ಪರಿಹಾರ ಧನ ಬಿಡುಗಡೆ Read More »

ಟ್ರಂಪ್ ಮೇಲೆ‌ ಗುಂಡಿನ ದಾಳಿ| ಅಮೇರಿಕಾದ ಮಾಜಿ ಅಧ್ಯಕ್ಷ ಗಂಭೀರ

ಸಮಗ್ರ ನ್ಯೂಸ್: ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರವಾಗಿ ಗಾಯಗೊಂಡಿದ್ದಾರೆ ವರದಿಯಾಗಿದೆ. ‌ದಾಳಿಯಿಂದ ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಒಸರುತ್ತಿರುವುದು ಕಂಡುಬಂದಿದೆ. ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಭದ್ರತಾ ಸಿಬ್ಬಂದಿ ಮಾಜಿ ಅಧ್ಯಕ್ಷರನ್ನು ತ್ವರಿತವಾಗಿ ರಕ್ಷಿಸಿ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಿದ್ದಂತೆ ಅನೇಕ ಪ್ರೇಕ್ಷಕರಿಂದ ಕಿರುಚಾಟಗಳು

ಟ್ರಂಪ್ ಮೇಲೆ‌ ಗುಂಡಿನ ದಾಳಿ| ಅಮೇರಿಕಾದ ಮಾಜಿ ಅಧ್ಯಕ್ಷ ಗಂಭೀರ Read More »

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ

ಸಮಗ್ರ ನ್ಯೂಸ್‌: ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಸುಧಾರಣೆ’ ತರುವ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಅನುವಾಗುವ ಮಹತ್ವದ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಜುಲೈ 22 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಜು.23ರಂದು ಬಜೆಟ್‌ ಮಂಡನೆ ನಡೆಯಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳಲ್ಲಿ ಸರ್ಕಾರ ಬ್ಯಾಂಕಿಂಗ್ ಕಾಯ್ದೆಗಳಲ್ಲಿ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ‘ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970’ ಮತ್ತು ’ಬ್ಯಾಂಕಿಂಗ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ Read More »

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಮಧ್ಯ ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು ಸುಮಾರು 63 ಪ್ರಯಾಣಿಕರು ಮೃತರಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡೂ ಬಸ್ಸುಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಇದ್ದರು ಎನ್ನಲಾಗಿದೆ. ಮುಂಜಾನೆ 3.30ರ ಸುಮಾರಿಗೆ ಭೂಕುಸಿತವಾಗಿ ಬಸ್ಸುಗಳು ನದಿಯಲ್ಲಿ ಕೊಚ್ಚಿಕೊಂಡು ಹೋಯಿತು. ನಾವು ಘಟನಾ ಸ್ಥಳದಲ್ಲಿದ್ದೇವೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದ ಬಸ್ಸುಗಳನ್ನು, ಜನರನ್ನು ಹುಡುಕುವ

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ Read More »

ಮತ್ತೊಮ್ಮೆ ತೆರೆಯಲಿದೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ಸಮಗ್ರ ನ್ಯೂಸ್‌: ನಾಲ್ಕು ದಶಕಗಳ ನಂತರ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ. ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು. 2018ರಲ್ಲಿ ಇದರ ತನಿಖೆ

ಮತ್ತೊಮ್ಮೆ ತೆರೆಯಲಿದೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ Read More »

ಬಾಲಕನಿಗೆ ಕಿರುಕುಳ ನೀಡಿದ ಆರೋಪ/ ದಲೈಲಾಮ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ

ಸಮಗ್ರ ನ್ಯೂಸ್‌: ಟಿಬೆಟನ್ ಧರ್ಮಗುರು ದಲೈಲಾಮ ವಿರುದ್ಧ ಬಾಲಕನೊಬ್ಬನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಬಾಲಕನ ತುಟಿ ಚುಂಬಿಸಿ, ತಮ್ಮ ನಾಲಿಗೆ ಚೀಪುವಂತೆ ದಲೈಲಾಮ ಅವರು ಹೇಳುವ ವಿಡಿಯೋ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದಕ್ಕೆ ಕಾರಣವಾಗಿತ್ತು. ದಲೈಲಾಮ ವಿರುದ್ಧ ಪೋಟೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ‘ಕಾನ್ಸೆಡರೇಷನ್ ಆಫ್ ಎನ್‌ಜಿಒ’ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ

ಬಾಲಕನಿಗೆ ಕಿರುಕುಳ ನೀಡಿದ ಆರೋಪ/ ದಲೈಲಾಮ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ Read More »

ಉತ್ತರಪ್ರದೇಶದಲ್ಲಿ ಭೀಕರ ಅಪಘಾತ| ಮಗು ಸೇರಿ 18 ಮಂದಿ ದುರ್ಮರಣ

ಸಮಗ್ರ ನ್ಯೂಸ್::ಉತ್ತರ ಪ್ರದೇಶದ ಉನ್ನಾವ್‌ ಬಳಿ ಭೀಕರ ರಸ್ತೆ ಅಪಘಾತದ ಸಂಭವಿಸಿದ್ದು, ಮಗು, ಮೂವರು ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಹ್ತಾ ಮುಜಾವರ್ ಪ್ರದೇಶದ ಗರ್ಹಾ ಗ್ರಾಮದ ಬಳಿ ಮುಂದೆ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್ ನ ಹಿಂಭಾಗಕ್ಕೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಮುಂಜಾನೆ 5:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್ ಹಿಂದಿನಿಂದ ಮುಂದೆ ಚಲಿಸುತ್ತಿದ್ದ

ಉತ್ತರಪ್ರದೇಶದಲ್ಲಿ ಭೀಕರ ಅಪಘಾತ| ಮಗು ಸೇರಿ 18 ಮಂದಿ ದುರ್ಮರಣ Read More »

ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ/ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರದಾನ ಮಾಡಿದ ವ್ಲಾದಿಮಿರ್‌ ಪುತಿನ್‌

ಸಮಗ್ರ ನ್ಯೂಸ್‌: ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾಗಿದ್ದು, ಮಂಗಳವಾರ ಮಾಸ್ಕೋ ಕ್ರೆಮಿನ್ ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಸಾಂಪ್ರದಾಯಿಕವಾಗಿ ಪ್ರದಾನ ಮಾಡಿದರು. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ಭಾರತದ ಪ್ರಧಾನಿಗೆ

ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ/ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರದಾನ ಮಾಡಿದ ವ್ಲಾದಿಮಿರ್‌ ಪುತಿನ್‌ Read More »