ದೇಶ-ವಿದೇಶ

ಪ್ರಧಾನಿ ಮೋದಿಯ ಗಡ್ಡ ಎಳೆದು‌ ಮುದ್ದಾಡುತ್ತಿರುವ ಈ ಬಾಲೆಯ ಹಿನ್ನೆಲೆ ಗೊತ್ತೇ? ಕರುಳು ಹಿಂಡುವ ಸ್ಟೋರಿ ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ಮೋದಿಯ ಗಡ್ಡ ಹಿಡಿದು ಎಳೆದು, ಮೋದಿಯ ಕನ್ನಡಕ ಮುಟ್ಟುತ್ತಾ, ಮುದ್ದಾಡುತ್ತಿರುವ ಮೂರು ವರ್ಷದ ಆ ಮಗಳ ವೀಡಿಯೋ ವೈರಲ್‌ ಆಗುತ್ತಿದೆ. ಆ ವಿಡಿಯೋ ನೋಡುತ್ತಿದ್ದರೆ ಎಂಥವರ ಮುಖದಲ್ಲಿಯೂ ನಗು ಮೂಡುವುದು. ಆ ಮಗುವಿಗೆ ತನ್ನ ಎದುರಿಗಿರುವುದು ಪ್ರಧಾನಿಯೆಂದು ಗೊತ್ತಿಲ್ಲ, ಆದರೆ ಆ ವ್ಯಕ್ತಿಯನ್ನು ನೋಡಿದಾಗ ಮಗುವಿಗೆ ರಕ್ಷಕಂತೆ ಅಥವಾ ತುಂಬಾ ಆಪ್ತನಂತೆ ಅನಿಸಿರಬಹುದು, ಇಲ್ಲದಿದ್ದರೆ ಹತ್ರಕ್ಕೂ ಬರಲ್ಲ, ಆದರೆ ಈ ಮಗು ಮೋದಿಯನ್ನು ತುಂಬಾ ಚೆನ್ನಾಗಿ ಗೊತ್ತಿರುವಂತೆ ಮೋದಿಯನ್ನು ಅಪ್ಪಿಕೊಂಡು ಬಿಳಿಗಡ್ಡ ಎಳೆದು ಮೋದಿಯನ್ನು […]

ಪ್ರಧಾನಿ ಮೋದಿಯ ಗಡ್ಡ ಎಳೆದು‌ ಮುದ್ದಾಡುತ್ತಿರುವ ಈ ಬಾಲೆಯ ಹಿನ್ನೆಲೆ ಗೊತ್ತೇ? ಕರುಳು ಹಿಂಡುವ ಸ್ಟೋರಿ ಇಲ್ಲಿದೆ ನೋಡಿ… Read More »

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರು ಮಂಡಿಸಿದ “ಮಾರ್ಕೆಟಿಂಗ್ ಸ್ಟ್ರಾಟಜಿಸ್ ಆಫ್ ಸೋಷಿಯಲ್ ಎಂಟರ್ಪ್ರೈಸಸ್ – ಎ ಸ್ಟಡಿ ವಿಥ್ ಸೆಲೆಕ್ಟ್ ಸೋಶಿಯಲ್ ಎಂಟರ್ಪ್ರೈಸಸ್” ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಆದ ಪ್ರೋ. ಡಾ. ಉದಯ್ ಕುಮಾರ್ ಇರ್ವತ್ತೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ Read More »

ಈ ಬಾರಿ ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ? ಗೊಂದಲ ಬೇಡ; ಇಲ್ಲಿದೆ ಸರಳ ಉತ್ತರ…

ಸಮಗ್ರ ನ್ಯೂಸ್: 1947ರ ಆಗಸ್ಟ್ 15 ಭಾರತೀಯರ ಪಾಲಿಗೆ ಐತಿಹಾಸಿಕ ದಿನವಾಗಿದ್ದು, ಬ್ರಿಟೀಷರ ಕಪಿ ಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ದೊರೆತ ದಿನ. ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ಬಲಿದಾನಗೈದಿದ್ದಾರೆ. ಅವರ ನೆತ್ತರ ಹನಿಗಳಿಂದಾಗಿ ನಾವಿಂದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಪ್ರತಿ ವರ್ಷ ಆಗಸ್ಟ್ 15ರಂದು ದೇಶದ ನಾಗರಿಕರು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುತ್ತೇವೆ. 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು. ಭಾರತ ಸ್ವಾತಂತ್ರ್ಯ ದಿನದ ಹಿಂದಿನ ರಾತ್ರಿ ಆಗಸ್ಟ್ 14, 1947 ರಂದು,

ಈ ಬಾರಿ ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ? ಗೊಂದಲ ಬೇಡ; ಇಲ್ಲಿದೆ ಸರಳ ಉತ್ತರ… Read More »

ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಡೆತ್‌ ನೋಟ್‌ ಬರೆದಿಟ್ಟು ಬೆಂಗಳೂರಿನಲ್ಲಿ ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ನಗರ ಹೊರವಲಯದ ಯಲಹಂಕದಲ್ಲಿ ನಡೆದಿದೆ. ನನ್ನ ಸಾವಿಗೆ‌ ನಾನೇ ಕಾರಣ ಎಂದು ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ವೀರ್ ಮೃತ ವಿದ್ಯಾರ್ಥಿ. ಪ್ರತಿಷ್ಠಿತ ರೇವಾ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದ ತನ್ವೀರ್, ಭಾನುವಾರ ಇದ್ದಕ್ಕಿದ್ದಂತೆ ಪಿ.ಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿ.ಜಿಯಲ್ಲಿನ ಕೆಲ‌ ವಿದ್ಯಾರ್ಥಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ

ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ Read More »

ಮತ್ತೊಂದು ಪಾದಯಾತ್ರೆ/ ಅತೃಪ್ತ ಬಿಜೆಪಿ ನಾಯಕರಿಂದ ಬಳ್ಳಾರಿ ಚಲೋ

ಸಮಗ್ರ ನ್ಯೂಸ್‌: ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ‘ಮೈಸೂರು ಚಲೋ’ ಪಾದಯಾತ್ರೆ ಮುಗಿದಿದ್ದು, ಇದೀಗ ಅತೃಪ್ತ ಬಿಜೆಪಿ ನಾಯಕರು ಸೆ.17ರಿಂದ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿಯ ಅತೃಪ್ತ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ, ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಅರವಿಂದ ಲಿಂಬಾವಳಿ, ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ ಸೇರಿದಂತೆ 12 ಬಿಜೆಪಿ ನಾಯಕರು ಗೌಪ್ಯ ಸಭೆ ನಡೆಸಿದರು. ಪಾದಯಾತ್ರೆಯಲ್ಲಿ ವಾಲ್ಮೀಕಿ ಕಾಂಗ್ರೆಸ್ ಅಭಿವೃದ್ಧಿ ನಿಗಮದ ಹಗರಣಗಳು ಹಾಗೂ

ಮತ್ತೊಂದು ಪಾದಯಾತ್ರೆ/ ಅತೃಪ್ತ ಬಿಜೆಪಿ ನಾಯಕರಿಂದ ಬಳ್ಳಾರಿ ಚಲೋ Read More »

ಭಾರೀ ಮಳೆ/ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಸಮಗ್ರ ನ್ಯೂಸ್‌: ಭಾರೀ ಮಳೆ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಹಲ್ಲಾಮ್ ಮಾರ್ಗ ಮತ್ತು ಬಲ್ಟಾಲ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಈ ಕಾರಣದಿಂದ ಎರಡೂ ಕಡೆಗಳಲ್ಲಿ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಬುಧವಾರ ನಿರ್ವಹಣೆಗಾಗಿ ಪಹಲ್ಲಾಮ್ ಮಾರ್ಗವನ್ನು ಮುಚ್ಚಲಾಗಿತ್ತು. ಅಮರನಾಥ ಯಾತ್ರೆಯ ಪಹಲ್ಲಾಮ್ ಮತ್ತು ಬಾಲ್ ಮಾರ್ಗಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಬಿದುರಿ ಹೇಳಿದ್ದಾರೆ. ಮಳೆಯ ಕಾರಣ ಅಮರನಾಥ ಯಾತ್ರೆಯ ಬಾಲ್ಟಾಲ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಿದೆ.

ಭಾರೀ ಮಳೆ/ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ Read More »

ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ನಟ್ವರ್ ಸಿಂಗ್ ಇನ್ನಿಲ್ಲ

ಸಮಗ್ರ ನ್ಯೂಸ್: ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಕೆ. ನಟ್ವರ್‌ ಸಿಂಗ್‌ (95) ಅವರು ನಿಧನರಾಗಿದ್ದಾರೆ. ಸುದೀರ್ಘ ಅವಧಿಯಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ ಭಾರತದ ರಾಜತಾಂತ್ರಿಕತೆಗೆ ಅಪಾರ ಕೊಡುಗೆ ನೀಡಿದ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ನಟ್ವರ್‌ ಸಿಂಗ್‌ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ನೇಹ, ಸಂಬಂಧ ಮೂಡಲು ಎರಡೂ ದೇಶಗಳು

ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ನಟ್ವರ್ ಸಿಂಗ್ ಇನ್ನಿಲ್ಲ Read More »

ಮನೀಶ್ ಸಿಸೋಡಿಯಾ ಜೈಲು ವಾಸ ಮುಕ್ತಾಯ/ 17 ತಿಂಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆ

ಸಮಗ್ರ ನ್ಯೂಸ್‌: 17 ತಿಂಗಳ ಜೈಲು ವಾಸದ ಬಳಿಕ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಬಳಿಕ ಸಿಸೋಡಿಯಾ ಅವರು ಬಿಡುಗಡೆಯಾಗಿ ಹೊರ ಬಂದಿದ್ದಾರೆ. ಸಿಸೋಡಿಯಾ ಅವರನ್ನು 2023 ರ ಫೆಬ್ರವರಿ 26ರಂದು ಸಿಬಿಐ, ಎರಡು ವಾರಗಳ ನಂತರ ಇಡಿ ಬಂಧಿಸಿತ್ತು. ಈಗ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ

ಮನೀಶ್ ಸಿಸೋಡಿಯಾ ಜೈಲು ವಾಸ ಮುಕ್ತಾಯ/ 17 ತಿಂಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆ Read More »

ಹರಿಯಾಣದ ಶಾಲೆಗಳಲ್ಲಿ ಇನ್ಮುಂದೆ ಗುಡ್‌ ಮಾರ್ನಿಂಗ್‌ ಬದಲು ʼಜೈ ಹಿಂದ್‌ʼ/ ಸರ್ಕಾರದ ಆದೇಶ

ಸಮಗ್ರ ನ್ಯೂಸ್‌: ಹರಿಯಾಣದ ಎಲ್ಲಾ ಶಾಲೆಗಳಲ್ಲಿ ʼಶುಭೋದಯ’ (ಗುಡ್ ಮಾರ್ನಿಂಗ್) ಬದಲಿಗೆ ʼಜೈ ಹಿಂದ್’ ಎಂದು ಹೇಳಲು ನಿರ್ಧರಿಸಲಾಗಿದೆ. ಹರಿಯಾಣ ಸರ್ಕಾರವು ಆರಂಭಿಸಿರುವ ಈ ಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಸುತ್ತೋಲೆಯನ್ನು ಕಳುಹಿಸಿದೆ.. ಸುತ್ತೋಲೆಯ ಪ್ರಕಾರ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಿಂದಲೇ

ಹರಿಯಾಣದ ಶಾಲೆಗಳಲ್ಲಿ ಇನ್ಮುಂದೆ ಗುಡ್‌ ಮಾರ್ನಿಂಗ್‌ ಬದಲು ʼಜೈ ಹಿಂದ್‌ʼ/ ಸರ್ಕಾರದ ಆದೇಶ Read More »

ಮುಂಬೈನ ಕಾಲೇಜಿನಲ್ಲಿ ಹಿಜಾಬ್‌ ಬ್ಯಾನ್‌/ ತಡೆ ನೀಡಿದ ಸುಪ್ರೀಂ

ಸಮಗ್ರ ನ್ಯೂಸ್‌: ಮುಂಬೈನ ಕಾಲೇಜಿನ ಆವರಣದಲ್ಲಿ ಹಿಜಾಬ್, ಬುರ್ಖಾ, ಕ್ಯಾಪ್ ರೀತಿಯ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಿ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದ್ದು, ತರಗತಿಯೊಳಗೆ ಹುಡುಗಿಯರು ಯಾವುದೇ ರೀತಿಯ ಬುರ್ಖಾವನ್ನು ಧರಿಸಲು ಅನುಮತಿ ನೀಡಲಾಗುವುದಿಲ್ಲ ಮತ್ತು ಕ್ಯಾಂಪಸ್‌ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಮಹಿಳಾ ಸಬಲೀಕರಣ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ʼಹೆಣ್ಣುಮಕ್ಕಳು ಧರಿಸುವುದನ್ನು ನಿರ್ಬಂಧಿಸುವ ಮೂಲಕ ನೀವು

ಮುಂಬೈನ ಕಾಲೇಜಿನಲ್ಲಿ ಹಿಜಾಬ್‌ ಬ್ಯಾನ್‌/ ತಡೆ ನೀಡಿದ ಸುಪ್ರೀಂ Read More »