ದೇಶ-ವಿದೇಶ

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ/ ತುರ್ತು ಸಭೆ ಕರೆದ ರಾಜ್ಯಪಾಲ ಆನಂದ್ ಬೋಸ್

ಸಮಗ್ರ ನ್ಯೂಸ್‌: ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ರಾಜ್ಯಪಾಲ ಆನಂದ್ ಬೋಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧ ವಿಭಾಗಗಳ ಪ್ರತಿನಿಧಿಗಳ ತುರ್ತು ಸಭೆ ಕರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಪಡೆಯಲಿದ್ದು, ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭನ್ ಸಿಂಗ್ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜಭವನಕ್ಕೆ ಪತ್ರ ಬರೆದಿದ್ದಕ್ಕೆ ರಾಜ್ಯಪಾಲರು ತ್ವರಿತವಾಗಿ ಸ್ಪಂದಿಸಿದ್ದು, ರಾಜ್ಯಪಾಲರು ಈ ವಿಷಯದಲ್ಲಿ ತೆಗೆದುಕೊಂಡ ಕ್ರಮದ […]

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ/ ತುರ್ತು ಸಭೆ ಕರೆದ ರಾಜ್ಯಪಾಲ ಆನಂದ್ ಬೋಸ್ Read More »

ಇಂದು ರಕ್ಷಾ ಬಂಧನ ಸಂಭ್ರಮ| ರಾಖಿ ಕಟ್ಟಲು ಉತ್ತಮ‌ ಸಮಯ ಯಾವುದು ಗೊತ್ತಾ?

ಸಮಗ್ರ ನ್ಯೂಸ್: ರಕ್ಷಾ ಬಂಧನ ಹಬ್ಬವನ್ನ ಭಾರತದಲ್ಲಿ ಬಹಳ ಜೋರಾಗಿಯೇ ಆಚರಿಸಲಾಗುತ್ತದೆ. ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡುವ ಹಬ್ಬ ಇದು ಎನ್ನಬಹುದು. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದರಿಂದ ಇಬ್ಬರ ನಡುವಿನ

ಇಂದು ರಕ್ಷಾ ಬಂಧನ ಸಂಭ್ರಮ| ರಾಖಿ ಕಟ್ಟಲು ಉತ್ತಮ‌ ಸಮಯ ಯಾವುದು ಗೊತ್ತಾ? Read More »

ಟ್ರಕ್ ಓಡಿಸುತ್ತಲೇ ಯೂಟ್ಯೂಬರ್ ಆದ ಟ್ರಕ್ ಡ್ರೈವರ್| ಈತನ ಆದಾಯ ಕೇಳಿದ್ರೆ ನೀವ್ ಶಾಕ್ ಆಗೋದು ಪಕ್ಕಾ!!

ಸಮಗ್ರ ನ್ಯೂಸ್: ಆತ ಟ್ರಕ್ ಓಡಿಸಿದ್ದು ಬರೋಬ್ಬರಿ 25 ವರ್ಷ. ಟ್ರಕ್​ ಡ್ರೈವರ್​ ಆಗಿಯೇ ಭಾರತದ ರಸ್ತೆಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಅಡುಗೆ ಮಾಡುವುದೆಂದರೆ ಬಲು ಪ್ರೀತಿ. ಪ್ರಯಾಣದ ವೇಳೆ ತಿನ್ನಲು ಸ್ವತಃ ತಾನೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ವಿಡಿಯೋ ಮೂಲಕ ಸೆರೆ ಹಿಡಿಯುತ್ತಿದ್ದ ಈತ ತನ್ನ ಯೂಟ್ಯೂಬ್​ ಚಾನೆಲ್​ಗೆ ಅಪ್​ಲೋಡ್ ಮಾಡುತ್ತಿದ್ದರು. ಈಗ ಯೂಟ್ಯೂಟ್ ಮೂಲಕ ಗಳಿಸಿದ ಆದಾಯದಿಂದ ಹೊಸ ಮನೆಯನ್ನೇ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ! ಟ್ರಕ್ ಡ್ರೈವರ್ ಹೆಸರು ರಾಜೇಶ್ ರಾವಾನಿ.

ಟ್ರಕ್ ಓಡಿಸುತ್ತಲೇ ಯೂಟ್ಯೂಬರ್ ಆದ ಟ್ರಕ್ ಡ್ರೈವರ್| ಈತನ ಆದಾಯ ಕೇಳಿದ್ರೆ ನೀವ್ ಶಾಕ್ ಆಗೋದು ಪಕ್ಕಾ!! Read More »

ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ

ಸಮಗ್ರ ನ್ಯೂಸ್: ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ಭಾನುವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲ್ ಅವರು ಕಳೆದ ವರ್ಷ ಜುಲೈ 19 ರಂದು ಭಾರತೀಯ ಕೋಸ್ಟ್ ಗಾರ್ಡ್ನ 25 ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪಾಲ್ ಅವರನ್ನು ಚೆನ್ನೈನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಕೋಸ್ಟ್ ಗಾರ್ಡ್ ಮಹಾನಿರ್ದೇಶಕರು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ Read More »

ಭೀಕರ ರಸ್ತೆ ಅಪಘಾತ| 10 ಮಂದಿ ಸಾವು, 20 ಮಂದಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಬುಲಂದ್ಶಹರ್‌ನ ಸೆಲಾಂಪುರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಖಾಸಗಿ ಬಸ್ ಮತ್ತು ಟೆಂಪೊ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಖಾಸಗಿ ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಲ್ಲಿ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಅಪಘಾತದಿಂದ ಕುಪಿತರಾದ ಸ್ಥಳೀಯರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಭೀಕರ ರಸ್ತೆ ಅಪಘಾತ| 10 ಮಂದಿ ಸಾವು, 20 ಮಂದಿಗೆ ಗಂಭೀರ ಗಾಯ Read More »

ತವರಿಗೆ ಮರಳಿದ ವಿನೇಶ್‌ ಪೋಗಟ್‌| ಏರ್ಪೋರ್ಟ್ ನಲ್ಲಿ ಭರ್ಜರಿ ಸ್ವಾಗತ

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ಜತೆಗಿದ್ದರು. ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ

ತವರಿಗೆ ಮರಳಿದ ವಿನೇಶ್‌ ಪೋಗಟ್‌| ಏರ್ಪೋರ್ಟ್ ನಲ್ಲಿ ಭರ್ಜರಿ ಸ್ವಾಗತ Read More »

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು | ಅದೃಷ್ಟವಶಾತ್ ಅಪಾಯದಿಂದ ಪಾರು

ಸಮಗ್ರ ನ್ಯೂಸ್: ಉತ್ತರ ಪ್ರದೇಶದಲ್ಲಿ ಸಬರಮತಿ ಎಕ್ಸ್‌ಪ್ರೆಸ್ (ವಾರಾಣಸಿ-ಅಹಮದಾಬಾದ್) ರೈಲಿನ 22 ಬೋಗಿಗಳು ಹಳಿ ತಪ್ಪಿ, ಅದೃಷ್ಟವಶಾತ್ ಪ್ರಾಣಹಾನಿಯಿಂದ ಪಾರಾದ ಘಟನೆ ಆ.17 ರಂದು ಸಂಭವಿಸಿದೆ. ಕಾನ್ಪುರ್ ಮತ್ತು ಭೀಮಸೇನ್ ನಡುವೆ ಸಬರಮತಿ ಎಕ್ಸ್ಪ್ರೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೇ ಹಳಿ ಮೇಲೆ ಮೆಮೊ ರೈಲೊಂದು ಬರುತ್ತಿತ್ತು. ಅದೃಷ್ಟವಷಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಪ್ರಯಾಣಿಕರನ್ನು ಬಸ್ಸಿನ ಮೂಲಕ ಕಾನ್ಪುರ್ ರೈಲ್ವೆ ಸ್ಟೇಷನ್ ತಲುಪಿಸಿದ್ದೇವೆ ಎಂದು ಜಿಲ್ಲಾ ಮಾಜಿಸ್ಟ್ರೇಟ್ ರಾಕೇಶ್ ವರ್ಮಾ ತಿಳಿಸಿದ್ದಾರೆ. ಸಬರಮತಿ ಎಕ್ಸ್‌ಪ್ರೆಸ್

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು | ಅದೃಷ್ಟವಶಾತ್ ಅಪಾಯದಿಂದ ಪಾರು Read More »

ಮೊಸಳೆ ಸೆರೆ ಹಿಡಿದ ಅಧಿಕಾರಿಗಳು.

ಚಿಕ್ಕೋಡಿ:- ಪ್ರವಾಹ‌ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳಲ್ಲಿ ಮೋಸಳೆಯೊಂದು ಕಾಣಿಸಿಕೊಂಡಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿತ್ತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ, ಉಗಾರ, ಕುಸನಾಳ,ಗ್ರಾಮ‌ದ ಜನರು ಮೊಸಳೆಯಿಂದ ಭಯಭೀತರಾಗಿದ್ದರು .ಇಂದು ಆ ಮೊಸಳೆಯನ್ನ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದು ನದಿ ತೀರದ ಜನರ ಆಂತಕ ದೂರಾಗಿದ್ದು ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಅಧಿಕಾರಿಗಳಾದ ರಾಕೇಶ್ ಅರ್ಜುನವಾಡೆ, ಪ್ರಶಾಂತ್ ಗಂಗಾಧರ ಸೇರಿದಂತೆ ಹಲವು ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸತತ ಕಾರ್ಯಾಚರಣೆ ನಡೆಸಿ ಮೊಸಳೆಯನ್ನ ಸೆರೆ ಹಿಡಿದಿದ್ದಾರೆ.ಅರಣ್ಯ ಅಧಿಕಾರಿಗಳ

ಮೊಸಳೆ ಸೆರೆ ಹಿಡಿದ ಅಧಿಕಾರಿಗಳು. Read More »

ಅಗ್ನಿ ಕ್ಷಿಪಣಿಗಳ ಪಿತಾಮಹ ನರೈನ್ ಅಗರ್ವಾಲ್ ವಿಧಿವಶ

ಸಮಗ್ರ ನ್ಯೂಸ್: ಅಗ್ನಿ ಕ್ಷಿಪಣಿಗಳ ಪಿತಾಮಹ, DRDO ಖ್ಯಾತ ವಿಜ್ಞಾನಿ ರಾಮ್ ನರೈನ್ ಅಗರ್ವಾಲ್(84) ನಿಧನರಾಗಿದ್ದಾರೆ. ಭಾರತದ ರಕ್ಷಣಾ ಸಂಶೋಧನೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಖ್ಯಾತ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್ ಅವರು ಗುರುವಾರ ಹೈದರಾಬಾದ್‌ ನಲ್ಲಿ ನಿಧನರಾಗಿದ್ದಾರೆ. “ಅಗ್ನಿ ಕ್ಷಿಪಣಿಗಳ ಪಿತಾಮಹ” ಎಂದೇ ಕರೆಯಲ್ಪಡುವ ಅಗರ್ವಾಲ್ ಅವರು ಭಾರತದ ದೀರ್ಘಾವಧಿಯ ರಕ್ಷಣಾ ಸಂಶೋಧನೆ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಆಶ್ರಯದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಭಾರತದ ಕ್ಷಿಪಣಿ ತಂತ್ರಜ್ಞಾನಕ್ಕೆ ಅಗರ್ವಾಲ್

ಅಗ್ನಿ ಕ್ಷಿಪಣಿಗಳ ಪಿತಾಮಹ ನರೈನ್ ಅಗರ್ವಾಲ್ ವಿಧಿವಶ Read More »

ರಾಜಧಾನಿಯಲ್ಲಿ ಮತ್ತೊಂದು ನಿಗೂಢ‌ ಸ್ಪೋಟ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಪೋಟ ವರದಿಯಾಗಿದೆ. ನಗರದ ಜೆಪಿ ನಗರ 24. ಮೇನ್ ಉಡುಪಿ ಉಪಹಾರ ಬಳಿ ಘಟನೆ ನಡೆದಿದೆ. ಈ ಸ್ಪೋಟ ಕೂಡ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ರೀತಿಯಲ್ಲೇ ನಿಗೂಢವಾಗಿದೆ ಎನ್ನಲಾಗಿದೆ. ರಾಮೇಶ್ವರಂ ಕೆಫೆಯಲ್ಲೂ ಮೊದಲು ಸಿಲಿಂಡರ್‌ ಸ್ಫೋಟ ಎನ್ನಲಾಗಿತ್ತಾದರೂ, ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನಾಸ್ಪದವಾಗಿದೆ. ಜೆಪಿ ನಗರದ ಮನೆಯಲ್ಲಿ ಈ ಘಟನೆ ನಡೆದಿದ್ದು,ಪ್ರಕರಣದಲ್ಲಿ ಇಬ್ಬರಿಗೆ ಗಾಯವಾಗಿದೆ.

ರಾಜಧಾನಿಯಲ್ಲಿ ಮತ್ತೊಂದು ನಿಗೂಢ‌ ಸ್ಪೋಟ; ಇಬ್ಬರು ಗಂಭೀರ Read More »