ಶಿಕ್ಷಣ

ಪ.ಪೂ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಲಾಖೆ ಸೂಚನೆ

ಸಮಗ್ರ ನ್ಯೂಸ್: 2023 -24ನೇ ಶೈಕ್ಷಣಿಕ ಸಾರಿಗೆ 4055 ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಬಡ್ತಿ, ನಿಧನ, ವಯೋ ನಿವೃತ್ತಿ, ಖಾಲಿ ಇರುವ ಹುದ್ದೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಟ್ಟಾರೆ 4055 ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರಿಗೆ, ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ […]

ಪ.ಪೂ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಲಾಖೆ ಸೂಚನೆ Read More »

ಇಂದಿನಿಂದ ರಾಜ್ಯದಲ್ಲಿ ಶೈಕ್ಷಣಿಕ ವರ್ಷಾರಂಭ| ”ಶಾಲೆಗೆ ಹೊರಡುವೆವು ನಾವು”

ಸಮಗ್ರ ನ್ಯೂಸ್: ಬೇಸಿಗೆ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಲಿವೆ. 2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿರಲಿದ್ದು, ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈಗಾಗಲೇ ಶಾಲೆ ಪ್ರಾರಂಭೋತ್ಸವಕ್ಕೆ ಎಲ್ಲಾ ಶಾಲೆಗಳಲ್ಲಿಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ ಮತ್ತು ಮಂಗಳವಾರ ಶಾಲೆಯ ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನು ಹಿರಿಯ ವಿದ್ಯಾರ್ಥಿಗಳು

ಇಂದಿನಿಂದ ರಾಜ್ಯದಲ್ಲಿ ಶೈಕ್ಷಣಿಕ ವರ್ಷಾರಂಭ| ”ಶಾಲೆಗೆ ಹೊರಡುವೆವು ನಾವು” Read More »

ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅರ್ಜಿಗೆ ಆಹ್ವಾನ

ಸಮಗ್ರ ನ್ಯೂಸ್: ಇಲ್ಲಿನ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿಗೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜೂನ್ 7ರೊಳಗೆ ಇಲಾಖೆಯ ವೆಬ್‍ಸೈಟ್ www.cite.karnataka.gov.in ಮೂಲಕ ಅಥವಾ ಈ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಸ್ಥೆಯಲ್ಲಿ ನಿಗದಿತ ಪ್ರಮಾಣದಲ್ಲಿ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೆ ಇದ್ದಲ್ಲಿ ಪುರುಷ ಅಭ್ಯರ್ಥಿಗಳಿಗೆ ಪ್ರವೇಶ ಪಡೆಯಲು ಅಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2216360, 9880119147

ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅರ್ಜಿಗೆ ಆಹ್ವಾನ Read More »

ಕಾಲೇಜು ಪ್ರವೇಶಾತಿಗೆ ‘ಏಕರೂಪ ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ

ಸಮಗ್ರ ನ್ಯೂಸ್: ಉನ್ನತ ಶಿಕ್ಷಣ ಇಲಾಖೆಯು 2023-24 ನೇ ಸಾಲಿನಿಂದ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ ಕೋರ್ಸುಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಪ್ರಸ್ತುತ ಸಾಲಿನಲ್ಲಿ ಮೇ.22 ರಿಂದ ಜುಲೈ 15 ರೊಳಗೆ ಪದವಿ ಕಾಲೇಜುಗಳ ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜು.17 ರಿಂದ ತರಗತಿಗಳನ್ನು ಆರಂಭಿಸಿ, ನವೆಂಬರ್ 18 ಕ್ಕೆ ಮುಕ್ತಾಯಗೊಳಿಸಬೇಕು. ನವೆಂಬರ್ 20 ರಿಂದ ಪರೀಕ್ಷೆಗಳನ್ನು

ಕಾಲೇಜು ಪ್ರವೇಶಾತಿಗೆ ‘ಏಕರೂಪ ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ Read More »

ಇಂದು(ಮೇ.8) ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿಯು ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಘೋಷಣೆಯ ದಿನಾಂಕ ಹಾಗೂ ಸಮಯದ ಬಗ್ಗೆ ಮಾಹಿತಿಯನ್ನು ಪ್ರಕಟಿಸಿದೆ. ಇಂದು(ಮೇ.8) ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಫಲಿತಾಂಶ ಘೋಷಣೆ ಮಾಡಲಿದೆ. karresults.nic.in ಮತ್ತು kseab.karnataka.gov.in ನಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. 2022-23ನೇ ಶೈಕ್ಷಣಿಕ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಯು ಮಾರ್ಚ್​ 28ರಿಂದ ಏಪ್ರಿಲ್​

ಇಂದು(ಮೇ.8) ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ Read More »

ಮೇ.8ಕ್ಕೆ ಎಸ್ಎಸ್ಎಲ್ ಸಿ ‌ಫಲಿತಾಂಶ| ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಮೇ 8 ರಂದು ಪ್ರಕಟವಾಗುವ ಸಾಧ್ಯತೆಯಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಫಲಿತಾಂಶ ಪ್ರಕಟಗೊಂಡ ನಂತರದಲ್ಲಿ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ – kseab.karnataka.gov.in ಅಥವಾ karresults.nic.in ಗೆ ಭೇಟಿ ನೀಡುವ ಮೂಲಕ ಕರ್ನಾಟಕ SSLC ಫಲಿತಾಂಶ 2023ವನ್ನು ವೀಕ್ಷಿಸಬಹುದಾಗಿದೆ. ಕೆಎಸ್‌ಇಎಬಿ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಅವರು ಮಾತನಾಡಿ, ನಾವು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೇ 8

ಮೇ.8ಕ್ಕೆ ಎಸ್ಎಸ್ಎಲ್ ಸಿ ‌ಫಲಿತಾಂಶ| ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ನೋಂದಣಿ ಆರಂಭ

ಸಮಗ್ರ ನ್ಯೂಸ್: ಕರ್ನಾಟಕ ದ್ವಿತೀಯ ಪಿಯುಸಿ 2023 ರ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ (ಪೂರಕ) ಪರೀಕ್ಷೆಯ ನೋಂದಣಿ ಇಂದು kseab.karnataka.gov.in ನಲ್ಲಿ ಆರಂಭವಾಗಲಿದೆ. ಮಂಡಳಿಯು ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, ಫಲಿತಾಂಶಗಳ ಪ್ರಕಟಣೆಯ ದಿನಾಂಕದಿಂದ ನೋಂದಣಿ ಪ್ರಾರಂಭವಾಗುತ್ತದೆ ಮತ್ತು ದಂಡವಿಲ್ಲದೆ ಏಪ್ರಿಲ್ 26, 2023 ರವರೆಗೆ ಅರ್ಜಿ ಸಲ್ಲಿಸಬಹುದು. ದಂಡದೊಂದಿಗೆ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 27 ರಂದು ಪ್ರಾರಂಭವಾಗುತ್ತದೆ ಮತ್ತು ಮೇ 2, 2023 ರಂದು ಮುಕ್ತಾಯಗೊಳ್ಳುತ್ತದೆ. ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ನೋಂದಣಿ ಆರಂಭ Read More »

ಸುಳ್ಯ: ಪತ್ರಕರ್ತ ದಿ.ರವಿರಾಜ್ ವಳಲಂಬೆ ಪುತ್ರಿಯರಿಬ್ಬರಿಗೆ ಡಿಸ್ಟಿಂಕ್ಷನ್

ಸಮಗ್ರ ನ್ಯೂಸ್: ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾಗಿ ಹೆಸರುವಾಸಿಯಾಗಿದ್ದ ಸುಳ್ಯ ತಾ. ಗುತ್ತಿಗಾರಿನ ದಿ.ರವಿರಾಜ್ ವಳಲಂಬೆಯವರ ಅವಳಿ ಹೆಣ್ಣು ಮಕ್ಕಳಿಬ್ಬರು ವಿಶೇಷ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಖ್ಯಾತ ಪತ್ರಕರ್ತ ದಿ.ರವಿರಾಜ್ ವಳಲಂಬೆ ಅವರ ಅವಳಿ ಪುತ್ರಿಯರು ಉತ್ತಮ ಅಂಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ. ಉಡುಪಿಯ ವಿದ್ಯೋದಯ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾದ ಸಂಜನಾ ಎಂ.ಆರ್. 568 ಅಂಕ ( ಶೇ.94 ) ಹಾಗೂ ಸಿಂಚನಾ ಎಂ.ಆರ್. 571 ಅಂಕ ( ಶೇ.95 ) ಗಳಿಸಿ ಡಿಸ್ಟಿಂಕ್ಷನ್ ನಲ್ಲಿ

ಸುಳ್ಯ: ಪತ್ರಕರ್ತ ದಿ.ರವಿರಾಜ್ ವಳಲಂಬೆ ಪುತ್ರಿಯರಿಬ್ಬರಿಗೆ ಡಿಸ್ಟಿಂಕ್ಷನ್ Read More »

ಪುತ್ತೂರು: ಪಿಯು ಪರೀಕ್ಷೆ ಬರೆದ ಗ್ರಾಮ ಪಂಚಾಯತ್‌ ಅಧ್ಯಕ್ಷೆ|ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ

ಸಮಗ್ರ ನ್ಯೂಸ್: ಪುತ್ತೂರು ಪಾಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗ್ರಾ. ಪಂ. ಅಧ್ಯಕ್ಷೆಯಾದ ಭಾರತಿ ಭಟ್‌ 24 ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಬರೆದಿದ್ದಾರೆ ಇನ್ನೂ ಇವರು ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ 1997-98ರಲ್ಲಿ 8ನೇ ತರಗತಿ ತೇರ್ಗಡೆ ಹೊಂದಿದ್ದು, ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಅನಂತರ ವೆಂಕಟ್ರಮಣ

ಪುತ್ತೂರು: ಪಿಯು ಪರೀಕ್ಷೆ ಬರೆದ ಗ್ರಾಮ ಪಂಚಾಯತ್‌ ಅಧ್ಯಕ್ಷೆ|ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ Read More »

ನಾಳೆ(ಎ24)ಯಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ಆರಂಭ| ಮೇ ಎರಡನೇ ವಾರದಲ್ಲಿ ರಿಸಲ್ಟ್

ಸಮಗ್ರ ನ್ಯೂಸ್: ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಎ.24ರಿಂದ ಆರಂಭವಾಗಲಿದ್ದು, ಮೇ 2 ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ.ಈ ಬಾರಿ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಗೆ 8.60 ಲಕ್ಷವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 10 ನೇ ತರಗತಿ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ನಾಳೆ(ಎ24)ಯಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ಆರಂಭ| ಮೇ ಎರಡನೇ ವಾರದಲ್ಲಿ ರಿಸಲ್ಟ್ Read More »