ರಾಷ್ಟ್ರೀಯ

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾತ್ರಿ ಬೃಹತ್ ದೀಪೋತ್ಸವ ನಡೆಯಲಿದ್ದು, 24 ಲಕ್ಷ ದೀಪಗಳಿಂದ ಸರಯೂ ನದಿ ತೀರ ಕಂಗೊಳಿಸಲಿದೆ. ಜಗತ್ತಿನಲ್ಲೇ ಪ್ರಥಮ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ರಾಮ ಜನ್ಮಭೂಮಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಅಯೋಧ್ಯೆಯ ಸರಯೂ ನದಿಯ ತೀರದ ಉದ್ದಕ್ಕೂ ದೀಪಗಳನ್ನು ಬೆಳಗಿಸಲಾಗುತ್ತದೆ. ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾನಿಲಯವು ಈ ದೀಪೋತ್ಸವಕ್ಕೆ ಅದ್ಧೂರಿ ವ್ಯವಸ್ಥೆಯನ್ನು ಮಾಡಿದ್ದು, ಸರಯೂ ನದಿ ತೀರದ 51 ಘಾಟ್‍ಗಳಲ್ಲಿ 24 ಲಕ್ಷ ಮಣ್ಣಿನ […]

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ Read More »

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI

ಸಮಗ್ರ ನ್ಯೂಸ್: ಸಹಕಾರಿ ಸಂಘಗಳು ಬ್ಯಾಂಕ್ ಹೆಸರನ್ನು ಬಳಸಬಾರದು ಎಂದು ಆರ್‌ಬಿಐ ಪತ್ರಿಕೆಯ ಜಾಹೀರಾತಿನ ಮೂಲಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಜಾಹೀರಾತು ನೀಡಿರುವ ಆರ್‌ಬಿಐನ ಸಹಕಾರಿ ಸಂಘಗಳಲ್ಲಿನ ಹೂಡಿಕೆಗೆ ಯಾವುದೇ ರಕ್ಷಣೆ ಇಲ್ಲ ಎಂದು ಹೇಳುತ್ತದೆ. ಸಚಿವ ವಿ.ಎನ್.ವಾಸವನ್ ಮಾತನಾಡಿ, ಸಹಕಾರಿ ಸಂಘಗಳ ಹೆಸರನ್ನು ಬ್ಯಾಂಕ್ ಎಂದು ಬಳಸದಂತೆ ರಿಸರ್ವ್ ಬ್ಯಾಂಕ್ ಈ ಹಿಂದೆಯೇ ನಿರ್ದೇಶನ ನೀಡಿದೆ. ಹೊಸ ಅಧಿಸೂಚನೆಯನ್ನು ಸಹಕಾರ ಇಲಾಖೆ ಪರಿಶೀಲಿಸಲಿದೆ ಎಂದು ಸಚಿವರು ಹೇಳಿದರು. ಆರ್‌ಬಿಐ ವಿರುದ್ಧ ರಾಜ್ಯವೂ ನ್ಯಾಯಾಲಯದ ಮೊರೆ ಹೋಗಿತ್ತು.

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI Read More »

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ

ಸಮಗ್ರ ನ್ಯೂಸ್: ಸರಕಾರದಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲದಿದ್ದರೂ, ಇಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ವಕ್ಫ್ ಎಸ್ಟೇಟ್‍ನಿಂದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆ ಇದೆ. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೋಮು ಸಂಘರ್ಷದ ಭೀತಿ ಎದುರಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದ್ದಾರೆ.

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ Read More »

ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ

ಸಮಗ್ರ ನ್ಯೂಸ್: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ತನ್ನ ಮೊದಲ ಸೌರ ಕಾರ್ಯಾಚರಣೆಗಾಗಿ ರವಾನಿಸಿದ್ದ ಆದಿತ್ಯ-L1 ಬಾಹ್ಯಾಕಾಶ ನೌಕೆಗೆ ಲಗತ್ತಿಸಲಾದ ಎಕ್ಸ್‌- ರೇ ಸ್ಪೆಕ್ಟ್ರೋಮೀಟರ್, ಹೆಚ್‌ಇಎಲ್‌1ಒಎಸ್‌ ಎಕ್ಸ್‌- ಕಿರಣದ ಮೂಲಕ ಉನ್ನತ ಶಕ್ತಿಯ ಸೌರ ಜ್ವಾಲೆಗಳ ಮೊದಲ ನೋಟವನ್ನು ಸೆರೆಹಿಡಿಯಿತು. ಇಸ್ರೋ ಮಂಗಳವಾರ (ನ.7) ಈ ಕುರಿತು ಅಪ್ಡೇಟ್ಸ್ ನೀಡಿದ್ದು, ಆದಿತ್ಯ-ಎಲ್ 1 ಬೋರ್ಡ್‌ನಲ್ಲಿರುವ ಸ್ಪೆಕ್ಟ್ರೋಮೀಟರ್ ಸುಮಾರು ಅಕ್ಟೋಬರ್ 29 ರಿಂದ ಅದರ ಮೊದಲ ವೀಕ್ಷಣಾ ಅವಧಿಯಲ್ಲಿ ಸೌರ ಜ್ವಾಲೆಗಳ ಹಠಾತ್ ಹಂತವನ್ನು ದಾಖಲಿಸಿದೆ ಎಂಬ

ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ Read More »

ದೆಹಲಿ ವಾಯುಮಾಲಿನ್ಯ/ ವಾಹನಗಳಿಗೆ ಬೆಸ-ಸಮ ನಿಯಮ, ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದೀಗ ದೆಹಲಿ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನವೆಂಬರ್ 13ರಿಂದ 20ರವರೆಗೆ ವಾಹನಗಳಿಗೆ ಬೆಸ-ಸಮ ನಿಯಮ ಜಾರಿಗೆ ಬರಲಿದ್ದು, 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪಟಾಕಿಗಳನ್ನು ನಿಷೇಧ ಮಾಡುವುದು ಮತ್ತು ಸ್ಮಗ್ ಗನ್‍ಗಳನ್ನು ಅಳವಡಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು

ದೆಹಲಿ ವಾಯುಮಾಲಿನ್ಯ/ ವಾಹನಗಳಿಗೆ ಬೆಸ-ಸಮ ನಿಯಮ, ಶಾಲೆಗಳಿಗೆ ರಜೆ Read More »

ಉಗ್ರರ ಕೆಂಗಣ್ಣಿನಿಂದ ಜಸ್ಟ್ ಮಿಸ್ ಆಯ್ತು‌ ಕರ್ನಾಟಕ!? NIA ತನಿಖೆಯಲ್ಲಿ ಬಯಲಾಯ್ತು ಆ ಆತಂಕಕಾರಿ ವಿಚಾರ

ಸಮಗ್ರ ನ್ಯೂಸ್: ನಿಜಕ್ಕೂ ಕರ್ನಾಟಕದ ಜನ ಬೆಚ್ಚಿ ಬೀಳೋ ಸುದ್ದಿಯಿದು. ಸ್ವಲ್ಪ ಯಾಮಾರಿದ್ದರೂ ಕರ್ನಾಟಕದಲ್ಲಿ ನಡೆಯುತ್ತಿತ್ತಾ ಭಾರೀ ವಿದ್ವಂಸಕ ಕೃತ್ಯ? ಹೀಗೊಂದು ಶಂಕೆ ಇದೀಗ ಶುರುವಾಗಿದೆ. ಕಳೆದ ಜುಲೈ ತಿಂಗಳಲ್ಲಿ ಪುಣೆ ಬಳಿ ರಾಷ್ಟ್ರೀಯ ತನಿಖಾ (NIA) ಸಂಸ್ಥೆ ಬಂಧಿಸಿದ್ದ 7 ಮಂದಿ ಶಂಕಿತ ಉಗ್ರರ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ವೇಳೆ ಬಂಧಿತ ಶಂಕಿತ ಉಗ್ರರು ಕರ್ನಾಟಕದಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎನ್ನುವ ವಿಚಾರ ಪ್ರಸ್ತಾಪಿಸಲಾಗಿದೆ. ಕಳೆದ ಜುಲೈನಲ್ಲಿ ಪುಣೆ ಬಳಿ

ಉಗ್ರರ ಕೆಂಗಣ್ಣಿನಿಂದ ಜಸ್ಟ್ ಮಿಸ್ ಆಯ್ತು‌ ಕರ್ನಾಟಕ!? NIA ತನಿಖೆಯಲ್ಲಿ ಬಯಲಾಯ್ತು ಆ ಆತಂಕಕಾರಿ ವಿಚಾರ Read More »

ಉತ್ತರಪ್ರದೇಶದಲ್ಲಿ ಭೂಕಂಪ/ ಅಯೋಧ್ಯೆಯಿಂದ 215 ಕಿ.ಮೀ ದೂರದಲ್ಲಿ ಕಂಪನ ಬಿಂದು.

ಸಮಗ್ರ ನ್ಯೂಸ್: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭೂ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.6 ಎಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು, ಭಾನುವಾರ ಮುಂಜಾನೆ 1 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು, ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಕಂಪನ ಬಿಂದುವನ್ನು ಅಯೋಧ್ಯೆಯಿಂದ ಉತ್ತರಕ್ಕೆ 215 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ.

ಉತ್ತರಪ್ರದೇಶದಲ್ಲಿ ಭೂಕಂಪ/ ಅಯೋಧ್ಯೆಯಿಂದ 215 ಕಿ.ಮೀ ದೂರದಲ್ಲಿ ಕಂಪನ ಬಿಂದು. Read More »

ಮಹಿಳೆಯನ್ನ ಕೆಲಸದಿಂದ ಲೇ ಆಫ್​ ಮಾಡಿದ​ ಗೂಗಲ್! ಯಾಕೆ ಏನಾಯ್ತು?

ಕೋವಿಡ್ ನಂತರದ ಸಮಯ ಸಹ ಕೋವಿಡ್ ಸಮಯದಷ್ಟೇ ಕಠಿಣವಾಗಿದೆ: ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಂತರದ ಸಮಯ ಅನೇಕರ ಹೊಟ್ಟೆಯ ಮೇಲೆ ಮತ್ತು ಜೀವನದ ಮೇಲೆ ಮಾಸದ ಬರೆ ಎಳೆದಿದೆ ಅಂತ ಹೇಳಬಹುದು. ಹೌದು, ಕೋವಿಡ್ ಶುರುವಾದಾಗಿನಿಂದ ದೊಡ್ಡ ದೊಡ್ಡ ಕಂಪನಿಗಳು ಸರಿಯಾದ ವ್ಯವಹಾರವಿಲ್ಲದೆ, ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಆರ್ಥಿಕ ಸಂಕಷ್ಟದ ಕಾರಣವನ್ನು ಮುಂದಿಟ್ಟುಕೊಂಡು ಕೆಲಸದಿಂದ ರಾತ್ರೋರಾತ್ರಿ ವಜಾಗೊಳಿಸಿದ್ದು ನಿಜಕ್ಕೂ ಅನೇಕರಿಗೆ ಅಚ್ಚರಿ ಮತ್ತು ನಿರಾಶೆಯನ್ನು ಸಹ ಮೂಡಿಸಿದೆ. ನಿಜವಾಗಿಯೂ ಕೋವಿಡ್ ನಂತರದ ಸಮಯ

ಮಹಿಳೆಯನ್ನ ಕೆಲಸದಿಂದ ಲೇ ಆಫ್​ ಮಾಡಿದ​ ಗೂಗಲ್! ಯಾಕೆ ಏನಾಯ್ತು? Read More »

ನೇಪಾಳದಲ್ಲಿ ಪ್ರಬಲ ಭೂಕಂಪ| ಮಲಗಿದ್ದಲ್ಲೇ ಅಸುನೀಗಿದ ಹಲವರು| ಸಾವಿನ‌ ಸಂಖ್ಯೆ 129ಕ್ಕೆ ಏರಿಕೆ

ಸಮಗ್ರ ನ್ಯೂಸ್: ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ನೇಪಾಳದಲ್ಲಿ ಈವರೆಗೆ 129 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಇದು ಒಂದು ತಿಂಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ಪ್ರಬಲ ಭೂಕಂಪವಾಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಮಿದಂಡಾ ಪ್ರದೇಶದಲ್ಲಿತ್ತು. ಇಲ್ಲಿ 92 ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ರುಕುಮ್ ಜಿಲ್ಲೆಯಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಈವರೆಗೆ 129 ಜನರು ಪ್ರಾಣ

ನೇಪಾಳದಲ್ಲಿ ಪ್ರಬಲ ಭೂಕಂಪ| ಮಲಗಿದ್ದಲ್ಲೇ ಅಸುನೀಗಿದ ಹಲವರು| ಸಾವಿನ‌ ಸಂಖ್ಯೆ 129ಕ್ಕೆ ಏರಿಕೆ Read More »

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ| 69 ಮಂದಿ ಸಾವು, ಅಪಾರ ಹಾನಿ

ಸಮಗ್ರ ನ್ಯೂಸ್: ನೇಪಾಳ ಮತ್ತು ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು 20 ರಿಂದ 40 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ ಕಂಡು ಬಂದಿದೆ. ಭೂಮಿಯ ತೀವ್ರ ಕಂಪನದಿಂದಾಗಿ ಜನರಲ್ಲಿ ಭೀತಿ ಉಂಟಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಹಳ ಸಮಯದವರೆಗೆ ನಡುಕ ಅನುಭವಿಸಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ| 69 ಮಂದಿ ಸಾವು, ಅಪಾರ ಹಾನಿ Read More »