ರಾಷ್ಟ್ರೀಯ

ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ಸಮಗ್ರ ನ್ಯೂಸ್: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕುತ್ತಿಲ್ಲ ಎಂದು ಕೇರಳ ಸರ್ಕಾರ ರಾಷ್ಟ್ರಪತಿ ದೌಪದಿ ಮುರ್ಮು ಅವರ ವಿರುದ್ಧ ಸುಪ್ರೀಂ ಕೋರ್ಟ್‍ನ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳ ರಾಜ್ಯಪಾಲ ಆಸಿಫ್ ಮೊಹಮ್ಮದ್ ಖಾನ್ ಹಾಗೂ ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಈ ಅರ್ಜಿಯಲ್ಲಿ ಪ್ರತಿವಾದಿಗಳು ಎಂದು ಹೆಸರಿಸಲಾಗಿದೆ. ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 2) ಮಸೂದೆ -2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ – 2022, ವಿಶ್ವವಿದ್ಯಾಲಯ […]

ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ Read More »

ಸೈನಿಕರೊಂದಿಗೆ ಹೋಳಿ ಹಬ್ಬ ಆಚರಿಸಿದ ರಾಜನಾಥ್ ಸಿಂಗ್

ಸಮಗ್ರ ನ್ಯೂಸ್: ರಕ್ಷಣಾ ಸಚಿವಾ ರಾಜ್‍ನಾಥ್ ಸಿಂಗ್ ಲೇಹ್‍ಗೆ ತೆರಳಿ ಸೈನಿಕರೊಂದಿಗೆ ಸಂಭ್ರಮದಿಂದ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದರು. ಹೋಳಿ ಹಬ್ಬ ಆಚರಣೆ ವೇಳೆ ರಾಜನಾಥ್ ಸಿಂಗ್ ಜೊತೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಉಪಸ್ಥಿತರಿದ್ದರು. ಈ ಸಂದರ್ಭ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ನಮ್ಮ ರಾಜಧಾನಿಯಾದರೇ, ಲಡಾಖ್ ಶೌರ್ಯವನ್ನು ತೋರಿಸುವ ಮತ್ತೊಂದು ರಾಜಧಾನಿಯಾಗಿದೆ. ನಿಮ್ಮೆಲ್ಲರನ್ನು ಭೇಟಿ ಮಾಡಿ ಹೋಳಿ ಆಚರಿಸಿರುವುದು ನನಗೆ ಅತ್ಯಂತ ಸಂತೋಷದಾಯಕ ಕ್ಷಣ. ಸಿಯಾಚಿನ್

ಸೈನಿಕರೊಂದಿಗೆ ಹೋಳಿ ಹಬ್ಬ ಆಚರಿಸಿದ ರಾಜನಾಥ್ ಸಿಂಗ್ Read More »

ಜೆಎನ್‍ಯು ವಿದ್ಯಾರ್ಥಿ ಘಟಕದ ಚುನಾವಣೆ/ ಗೆದ್ದು ಬೀಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಸಮಗ್ರ ನ್ಯೂಸ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್( ಎಬಿವಿಪಿ) ದೆಹಲಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಜೆಎನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸ್ಥಾನ ಮತ್ತು ಇತರ ಮೂರು ಸ್ಥಾನಗಳನ್ನೂ ಎಬಿವಿಪಿ ಪಾಲಾಗಿದೆ. ಎಬಿವಿಪಿ ನಾಯಕ ಉಮೇಶ್ ಚಂದ್ರ ಜೆಎನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿ ಉಮೇಶ್ ಚಂದ್ರ, ಉಪಾಧ್ಯಕ್ಷನಾಗಿ ಅವಿಜಿತ್ ಘೋಷ್, ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ಆನಂದ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಗೋವಿಂದ್ ದಂಗಿ ಆಯ್ಕೆಯಾಗಿದ್ದಾರೆ.

ಜೆಎನ್‍ಯು ವಿದ್ಯಾರ್ಥಿ ಘಟಕದ ಚುನಾವಣೆ/ ಗೆದ್ದು ಬೀಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ Read More »

ಲೋಕಸಭಾ ಚುನಾವಣೆ/ ಮೋದಿ ವಿರುದ್ಧ ಮತ್ತೆ ಕಣಕ್ಕಿಳಿದ ಕಾಂಗ್ರೆಸ್ಸಿನ ಅಜಯ್ ರೈ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಪ್ರದಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಅಜಯ್ ರೈ ಹೆಸರನ್ನು ಘೋಷಿಸಿದೆ. 2014, 2019ರಲ್ಲೂ ಅಜಯ್ ರೈ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ 3ನೇ ಬಾರಿಗೆ ಅಜಯ್ ರೈ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ. ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಅಜಯ್ ರೈ ಮಾಜಿ ಬಿಜೆಪಿ ನಾಯಕ. 1996 ರಿಂದ 2007ರ ವರೆಗೆ ಉತ್ತರ ಪ್ರದೇಶದ ಕೋಲಸಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆ/ ಮೋದಿ ವಿರುದ್ಧ ಮತ್ತೆ ಕಣಕ್ಕಿಳಿದ ಕಾಂಗ್ರೆಸ್ಸಿನ ಅಜಯ್ ರೈ Read More »

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ

ಸಮಗ್ರ ನ್ಯೂಸ್: ಚಂದ್ರಯಾನ-3 ಮಿಷನ್‍ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ ನೀಡಿದೆ. ಚಂದ್ರನ ಮೇಲೆಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ ಎಂದು ಕರೆಯಲಾಗಿತ್ತು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಪ್ಯಾರಿಸ್ ಮೂಲದ ಐಎಯು ಅನುಮೋದನೆ ನೀಡಿದೆ. ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ ಖಗೋಳ ಸಂಸ್ಥೆಯು ಅನುಮೋದಿಸಿದ ಗ್ರಹಗಳ ಹೆಸರುಗಳ

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ Read More »

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ

ಸಮಗ್ರ ನ್ಯೂಸ್: ಭಾರತದೊಂದಿಗೆ ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ವ್ಯಾಪಾರ ಸಂಬಂಧವನ್ನು ಮತ್ತೀಗ ಪುನಃಸ್ಥಾಪಿಸಲು ಪಾಕಿಸ್ತಾನ ಒಲವು ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವಂತಿದೆ ಎಂಬ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ. ಲಂಡನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ.

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ Read More »

ನೀರಿನ ಸಂಗ್ರಹಣಾ ಮಟ್ಟ ಕುಸಿತ/ ಆತಂಕ ಸೃಷ್ಟಿಸಿದ ಕೇಂದ್ರೀಯ ಜಲ ಆಯೋಗದ ವರದಿ

ಸಮಗ್ರ ನ್ಯೂಸ್: ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ನೀರಿನ ಸಂಗ್ರಹಣಾ ಮಟ್ಟ ಆತಂಕಕಾರಿ ಮಟ್ಟದಲ್ಲಿ ಕುಸಿದಿದೆ ಎಂಬ ಆಘಾತಕಾರಿ ಅಂಶ ಕೇಂದ್ರೀಯ ಜಲ ಆಯೋಗವು ಬಿಡುಗಡೆ ಮಾಡುವ ವಾರದ ಬುಲೆಟಿನ್‍ನಲ್ಲಿ ಪ್ರಸ್ತಾಪವಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸಹಿತ ಹಲವು ರಾಜ್ಯಗಳಲ್ಲಿಯೂ ಇದೇ ಸ್ಥಿತಿ ಇದೆ ಎಂದು ಆಯೋಗ ತಿಳಿಸಿದೆ. ದೇಶದಲ್ಲಿರುವ 150 ಪ್ರಮುಖ ಜಲಾಶಯಗಳಲ್ಲಿ

ನೀರಿನ ಸಂಗ್ರಹಣಾ ಮಟ್ಟ ಕುಸಿತ/ ಆತಂಕ ಸೃಷ್ಟಿಸಿದ ಕೇಂದ್ರೀಯ ಜಲ ಆಯೋಗದ ವರದಿ Read More »

ನಿಯಮ ಉಲ್ಲಂಘನೆ/ ಏರ್ ಇಂಡಿಯಾಕ್ಕೆ 80 ಲಕ್ಷ ದಂಡ

ಸಮಗ್ರ ನ್ಯೂಸ್: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ವಿಮಾನದ ಕರ್ತವ್ಯದ ಸಮಯ ಮಿತಿಗಳು ಮತ್ತು ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಕ್ಕೆ 80 ಲಕ್ಷ ರೂ. ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಜನವರಿಯಲ್ಲಿ ಏರ್ ಇಂಡಿಯಾದ ಸ್ಪಾಟ್ ಆಡಿಟ್ ಅನ್ನು ನಡೆಸಿತ್ತು. ಆಗ ಸಂಗ್ರಹಿಸಲಾಗಿದ್ದ ಸಾಕ್ಷಾಧಾರಗಳು ಆಧಾರದ ಮೇಲೆ ದಂಡ ವಿಧಿಸಿದೆ. ಫೈಟ್ ಡ್ಯೂಟಿ ಟೈಮ್ ಲಿಮಿಟೇಷನ್ (ಎಫ್‍ಡಿಟಿಎಲ್) ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ

ನಿಯಮ ಉಲ್ಲಂಘನೆ/ ಏರ್ ಇಂಡಿಯಾಕ್ಕೆ 80 ಲಕ್ಷ ದಂಡ Read More »

ಕೇಜ್ರಿವಾಲ್ ಮದ್ಯ ನೀತಿ ಪ್ರಕರಣ/ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಸಮಗ್ರ ನ್ಯೂಸ್: ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇತ್ತ ಬಂಧಿತರಾಗಿರುವ ಪ್ರತಿವಾದಿಯು ಮುಖ್ಯಮಂತ್ರಿ ಕಚೇರಿಯನ್ನು ಹೊಂದಿದ್ದಾರೆ. ಅವರು ಕಸ್ಟಡಿಯಲ್ಲಿರುವ ಕಾರಣ ಸಾರ್ವಜನಿಕ ಸೇವಕರಾಗಿ ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿವರ್ಹಿಸೋದು ಸಾಧ್ಯವಾಗೋದಿಲ್ಲ. ಈ ಕಾರಣಕ್ಕಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಆಮ್ ಆದ್ಮಿ ಪಕ್ಷದ ನಾಯಕರು ಕೇಜ್ರಿವಾಲ್ ಅವರು

ಕೇಜ್ರಿವಾಲ್ ಮದ್ಯ ನೀತಿ ಪ್ರಕರಣ/ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ Read More »

ಕೇಜ್ರಿವಾಲ್ ಅರೆಸ್ಟ್/ ಸ್ವಯಂಕೃತ ಅಪರಾಧ ಎಂದ ಅಣ್ಣಾ ಹಜಾರೆ

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಬಂಧನದ ಕುರಿತು ಲೋಕಪಾಲ್ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರವಾಲ್ ಮದ್ಯದ ವಿರುದ್ಧ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರವಾಲ್ ಬಂಧನದಿಂದ ಬೇಸರವಾಗಿದೆ. ಈ ಬಂಧನ ಕೇಜಿವಾಲ್ ಸ್ವಯಂಕೃತ” ಎಂದಿದ್ದಾರೆ. ಈಗ ಅವರೇನು

ಕೇಜ್ರಿವಾಲ್ ಅರೆಸ್ಟ್/ ಸ್ವಯಂಕೃತ ಅಪರಾಧ ಎಂದ ಅಣ್ಣಾ ಹಜಾರೆ Read More »