ರಾಷ್ಟ್ರೀಯ

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ

ಸಮಗ್ರ ನ್ಯೂಸ್: ಚಂದ್ರಯಾನ-3 ಮಿಷನ್‍ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ ನೀಡಿದೆ. ಚಂದ್ರನ ಮೇಲೆಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ ಎಂದು ಕರೆಯಲಾಗಿತ್ತು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಪ್ಯಾರಿಸ್ ಮೂಲದ ಐಎಯು ಅನುಮೋದನೆ ನೀಡಿದೆ. ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ ಖಗೋಳ ಸಂಸ್ಥೆಯು ಅನುಮೋದಿಸಿದ ಗ್ರಹಗಳ ಹೆಸರುಗಳ […]

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ Read More »

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ

ಸಮಗ್ರ ನ್ಯೂಸ್: ಭಾರತದೊಂದಿಗೆ ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ವ್ಯಾಪಾರ ಸಂಬಂಧವನ್ನು ಮತ್ತೀಗ ಪುನಃಸ್ಥಾಪಿಸಲು ಪಾಕಿಸ್ತಾನ ಒಲವು ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವಂತಿದೆ ಎಂಬ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ. ಲಂಡನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ.

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ Read More »

ನೀರಿನ ಸಂಗ್ರಹಣಾ ಮಟ್ಟ ಕುಸಿತ/ ಆತಂಕ ಸೃಷ್ಟಿಸಿದ ಕೇಂದ್ರೀಯ ಜಲ ಆಯೋಗದ ವರದಿ

ಸಮಗ್ರ ನ್ಯೂಸ್: ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ನೀರಿನ ಸಂಗ್ರಹಣಾ ಮಟ್ಟ ಆತಂಕಕಾರಿ ಮಟ್ಟದಲ್ಲಿ ಕುಸಿದಿದೆ ಎಂಬ ಆಘಾತಕಾರಿ ಅಂಶ ಕೇಂದ್ರೀಯ ಜಲ ಆಯೋಗವು ಬಿಡುಗಡೆ ಮಾಡುವ ವಾರದ ಬುಲೆಟಿನ್‍ನಲ್ಲಿ ಪ್ರಸ್ತಾಪವಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸಹಿತ ಹಲವು ರಾಜ್ಯಗಳಲ್ಲಿಯೂ ಇದೇ ಸ್ಥಿತಿ ಇದೆ ಎಂದು ಆಯೋಗ ತಿಳಿಸಿದೆ. ದೇಶದಲ್ಲಿರುವ 150 ಪ್ರಮುಖ ಜಲಾಶಯಗಳಲ್ಲಿ

ನೀರಿನ ಸಂಗ್ರಹಣಾ ಮಟ್ಟ ಕುಸಿತ/ ಆತಂಕ ಸೃಷ್ಟಿಸಿದ ಕೇಂದ್ರೀಯ ಜಲ ಆಯೋಗದ ವರದಿ Read More »

ನಿಯಮ ಉಲ್ಲಂಘನೆ/ ಏರ್ ಇಂಡಿಯಾಕ್ಕೆ 80 ಲಕ್ಷ ದಂಡ

ಸಮಗ್ರ ನ್ಯೂಸ್: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ವಿಮಾನದ ಕರ್ತವ್ಯದ ಸಮಯ ಮಿತಿಗಳು ಮತ್ತು ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಕ್ಕೆ 80 ಲಕ್ಷ ರೂ. ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಜನವರಿಯಲ್ಲಿ ಏರ್ ಇಂಡಿಯಾದ ಸ್ಪಾಟ್ ಆಡಿಟ್ ಅನ್ನು ನಡೆಸಿತ್ತು. ಆಗ ಸಂಗ್ರಹಿಸಲಾಗಿದ್ದ ಸಾಕ್ಷಾಧಾರಗಳು ಆಧಾರದ ಮೇಲೆ ದಂಡ ವಿಧಿಸಿದೆ. ಫೈಟ್ ಡ್ಯೂಟಿ ಟೈಮ್ ಲಿಮಿಟೇಷನ್ (ಎಫ್‍ಡಿಟಿಎಲ್) ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ

ನಿಯಮ ಉಲ್ಲಂಘನೆ/ ಏರ್ ಇಂಡಿಯಾಕ್ಕೆ 80 ಲಕ್ಷ ದಂಡ Read More »

ಕೇಜ್ರಿವಾಲ್ ಮದ್ಯ ನೀತಿ ಪ್ರಕರಣ/ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಸಮಗ್ರ ನ್ಯೂಸ್: ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇತ್ತ ಬಂಧಿತರಾಗಿರುವ ಪ್ರತಿವಾದಿಯು ಮುಖ್ಯಮಂತ್ರಿ ಕಚೇರಿಯನ್ನು ಹೊಂದಿದ್ದಾರೆ. ಅವರು ಕಸ್ಟಡಿಯಲ್ಲಿರುವ ಕಾರಣ ಸಾರ್ವಜನಿಕ ಸೇವಕರಾಗಿ ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿವರ್ಹಿಸೋದು ಸಾಧ್ಯವಾಗೋದಿಲ್ಲ. ಈ ಕಾರಣಕ್ಕಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಆಮ್ ಆದ್ಮಿ ಪಕ್ಷದ ನಾಯಕರು ಕೇಜ್ರಿವಾಲ್ ಅವರು

ಕೇಜ್ರಿವಾಲ್ ಮದ್ಯ ನೀತಿ ಪ್ರಕರಣ/ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ Read More »

ಕೇಜ್ರಿವಾಲ್ ಅರೆಸ್ಟ್/ ಸ್ವಯಂಕೃತ ಅಪರಾಧ ಎಂದ ಅಣ್ಣಾ ಹಜಾರೆ

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಬಂಧನದ ಕುರಿತು ಲೋಕಪಾಲ್ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರವಾಲ್ ಮದ್ಯದ ವಿರುದ್ಧ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರವಾಲ್ ಬಂಧನದಿಂದ ಬೇಸರವಾಗಿದೆ. ಈ ಬಂಧನ ಕೇಜಿವಾಲ್ ಸ್ವಯಂಕೃತ” ಎಂದಿದ್ದಾರೆ. ಈಗ ಅವರೇನು

ಕೇಜ್ರಿವಾಲ್ ಅರೆಸ್ಟ್/ ಸ್ವಯಂಕೃತ ಅಪರಾಧ ಎಂದ ಅಣ್ಣಾ ಹಜಾರೆ Read More »

ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ, ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಲೊ ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತಾನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭೂತಾನ್‍ನ ರಾಜ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ಥಾಪಿತವಾದ ಪ್ರಾಶಸ್ತ್ರದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಲೋ ಅನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಭೂತಾನ್‍ನ ಸರ್ವಶ್ರೇಷ್ಠ ಪ್ರಜೆಗೆ ಈ ಗೌರವವನ್ನು ನೀಡಲಾಗುತ್ತದೆ. ಇಲ್ಲಿಯವರೆಗೂ

ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೋದಿ Read More »

ಕೇಜ್ರಿವಾಲ್ ಅರೆಸ್ಟ್/ ಸೇವೆಯಲ್ಲಿರುವಾಗಲೇ ಅರೆಸ್ಟ್ ಆದ ಮೊದಲ ಮುಖ್ಯಮಂತ್ರಿ

ಸಮಗ್ರ ನ್ಯೂಸ್: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‍ರನ್ನು ಅಕ್ರಮ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಒಂಬತ್ತು ಬಾರಿ ಇಡಿ ಸಮನ್ಸ್ ಕೊಟ್ಟಿದ್ದರೂ ವಿಚಾರಣೆಗೆ ಗೈರಾಗಿದ್ದ ಕೇಜ್ರಿವಾಲ್, ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆಧರೆ ಅಲ್ಲಿ ಕೇಜ್ರಿವಾಲ್ ಮನವಿ ತಿರಸ್ಕಾರವಾಗಿತ್ತು. ಇಡಿ ಅಧಿಕಾರಿಗಳು ದೆಹಲಿ ಸಿಎಂ ನಿವಾಸಕ್ಕೆ ತೆರಳಿ ಎರಡು ಗಂಟೆಗಳಿಗೂ ಹೆಚ್ಚು ಸಮಯ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿದ್ದರು. ಇದರೊಂದಿಗೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಒಟ್ಟು ಐವರನ್ನು ಅರೆಸ್ಟ್ ಮಾಡಿದಂತಾಗಿದೆ. ಅರವಿಂದ್ ಕೇಜ್ರಿವಾಲ್

ಕೇಜ್ರಿವಾಲ್ ಅರೆಸ್ಟ್/ ಸೇವೆಯಲ್ಲಿರುವಾಗಲೇ ಅರೆಸ್ಟ್ ಆದ ಮೊದಲ ಮುಖ್ಯಮಂತ್ರಿ Read More »

ನರೇಂದ್ರ ಮೋದಿ ಭೂತಾನ್ ಭೇಟಿ

ಸಮಗ್ರ ನ್ಯೂಸ್: ನೆರೆಯ ದೇಶ ಭೂತಾನ್‍ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದು, ಪಾರೋ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಬೆ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಭೂತಾನ್‍ನ ಥಿಂಪುವಿನಲ್ಲಿ ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಿಸಲಾದ ಅತ್ಯಾಧುನಿಕ ಜಿಯಾಲ್ಟುನ್ಸ್ ಜೆಟ್ಸನ್ ಪೆಮಾ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನಿನ್ನೆಯೇ ಪ್ರಧಾನಿ ಮೋದಿ ಭೂತಾನ್‍ಗೆ ಭೇಟಿ ನೀಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ಒಂದು ದಿನ ತಡವಾಗಿ ಭೇಟಿ ನೀಡಿದ್ದಾರೆ.

ನರೇಂದ್ರ ಮೋದಿ ಭೂತಾನ್ ಭೇಟಿ Read More »

ಅಕ್ರಮ ಮದ್ಯ ನೀತಿ ಪ್ರಕರಣ/ ಅರವಿಂದ್ ಕೇಜ್ರಿವಾಲ್ ಅರೆಸ್ಟ್

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರವಾಲ್ ಅವರನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜಿವಾಲ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ನಿರ್ದೇಶನಾಲಯದ ಕ್ರಮದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಇದಾದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಕಾನೂನು ತಂಡವು ಸುಪ್ರೀಂಕೋರ್ಟ್‍ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದೆ. ಇದರ ನಡುವೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯ ನೀತಿ ಪ್ರಕರಣ/ ಅರವಿಂದ್ ಕೇಜ್ರಿವಾಲ್ ಅರೆಸ್ಟ್ Read More »