Ad Widget

ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ

ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಸವಾರರಿಗೆ ಬಿಗ್ ಶಾಕ್ ಎದುರಾಗಿದೆ. ಹೌದು ಏಪ್ರಿಲ್ 1ರಿಂದ ಟೋಲ್ ಶುಲ್ಕ ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Ad Widget . Ad Widget . Ad Widget . Ad Widget . Ad Widget . Ad Widget

ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ, STRR ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ.

Ad Widget . Ad Widget . Ad Widget .

ಬೆಂಗಳೂರು-ಮೈಸೂರು ಹೆದ್ದಾರಿ ಶುಲ್ಕ
ಹೆದ್ದಾರಿಯ 55.63-ಕಿಮೀ ಬೆಂಗಳೂರು-ನಿಡಘಟ್ಟ ವಿಭಾಗವನ್ನು ಬಳಸುವ ಕಾರುಗಳು/ವ್ಯಾನ್‌ಗಳು/ಜೀಪ್‌ಗಳು ಏಕಮುಖ ಪ್ರಯಾಣಕ್ಕೆ ರೂ 170 ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು ರೂ 255 ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು ಕ್ರಮವಾಗಿ 165 ಮತ್ತು 250 ರೂ. ಇದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಕ್ರಮವಾಗಿ ರೂ 270 ಮತ್ತು ರೂ 405 ಇದೆ. ಏಪ್ರಿಲ್.01ರಿಂದ ಏಕಮುಖ ಪ್ರಯಾಣಕ್ಕೆ ರೂ 275 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 415 ಪಾವತಿಸಬೇಕಾಗುತ್ತೆ.

ಟ್ರಕ್‌ಗಳು ಮತ್ತು ಬಸ್‌ಗಳು (ಎರಡು ಆಕ್ಸಲ್‌ಗಳು) ಏಕಮುಖ ಪ್ರಯಾಣಕ್ಕೆ ರೂ 580 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 870 ಪಾವತಿಸಬೇಕಾಗುತ್ತೆ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳಿಗೆ ಮಾಸಿಕ ಪಾಸ್ 340 ರೂ.ನಿಂದ 330 ರೂ. ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಿಸಲಾಗುವುದು. ನಿಡಘಟ್ಟ ಮತ್ತು ಮೈಸೂರು ನಡುವೆ 160 ರೂ (ಏಕಮುಖ ಪ್ರಯಾಣ) ಮತ್ತು ಕಾರುಗಳು/ವ್ಯಾನ್‌ಗಳು/ಜೀಪ್‌ಗಳಿಗೆ ರೂ 240 ಟೋಲ್ ಶುಲ್ಕಗಳು ಕ್ರಮವಾಗಿ ರೂ 155 ಮತ್ತು ರೂ 235 ಆಗಿರುತ್ತದೆ.

Leave a Comment

Your email address will not be published. Required fields are marked *