ರಾಷ್ಟ್ರೀಯ

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ

ಕಾಸರಗೋಡು: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ನಲ್ಲಿ ಚುನಾವಣೆ ನಡೆದು ಮೇ ತಿಂಗಳಲ್ಲಿ ಫಲಿತಾಂಶ ಹೊರಬಂದಿತ್ತು. ವಿಧಾನಸಭಾ ಚುನಾವಣೆ ವೇಳೆ ಹಣ ಹಾಗೂ ಆಮಿಷ ನೀಡಿ ನಾಮಪತ್ರ ಹಿಂತೆಗೆಯಲು ಅನ್ಯ ಪಕ್ಷದ ಅಭ್ಯರ್ಥಿ ಓರ್ವರಿಗೆ ಒತ್ತಡ ಹೇರಿದ ಆರೋಪದ ಮೇಲೆ ಸುರೇಂದ್ರನ್ ಅವರ ಮೇಲೆ ಕೇಸು ದಾಖಲಿಸಿ ಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರವರ ಹೇಳಿಕೆ ಹಿನ್ನಲೆಯಲ್ಲಿ, ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ರಮೇಶನ್ ನೀಡಿದ ದೂರಿನನ್ವಯ ಇದೀಗ […]

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ Read More »

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು

ಕೇರಳ : ಆಂಬುಲೆನ್ಸ್ ಒಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ಸೋಮವಾರ ನಡೆದಿದೆ. ಮೃತರನ್ನು ಪಯ್ಯನ್ನೂರು ನಿವಾಸಿಗಳಾದ ಬೀಜೋ (45), ಆತನ ಸಹೋದರಿ ರಜಿನಾ (37), ಮತ್ತು ಆಂಬುಲೆನ್ಸ್ ಚಾಲಕ ನಿತಿನ್ ರಾಜ್ (40) ಎಂದು ಗುರುತಿಸಲಾಗಿದೆ. ಜೊತೆಯಲ್ಲಿ ಇದ್ದ ಬೆಣ್ಣಿ ಎಂಬವರು ಗಂಭೀರ ಗಾಯಗೊಂಡಿದ್ದು ಕಣ್ಣೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದರಿಂದ ನಿಯಂತ್ರಣ

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು Read More »

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು

ಪುಣೆ: ಇಲ್ಲಿಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆ ಸಿಲುಕಿ 17 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಲ್ಶಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಎಸ್‌ಯುಎಸ್‌ ಅಕ್ವಾ ಟೆಕ್ನಾಲಜೀಸ್’ ರಾಸಾಯನಿಕ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, 15 ಮಹಿಳೆಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಣ್ಣಪುಟ್ಟ ಗಾಯಗೊಂಡ 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಣೆ ಜಿಲ್ಲಾಡಳಿತ ತಿಳಿಸಿದೆ.ಬೆಂಕಿ ನಂದಿಸಿ ಅವಶೇಷಗಳ ತೆರವು ಕಾರ್ಯಾಚರಣೆ ಮತ್ತು ಮೃತ ವ್ಯಕ್ತಿಗಳ ಗುರುತು ಪತ್ತೆ

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು Read More »

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ

ನವದೆಹಲಿ: ಲಸಿಕೆ ಹಂಚಿಕೆಯಲ್ಲಿ ರಾಜ್ಯಗಳಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ‌ ಮತ್ತೆ ಲಸಿಕಾ ನೀತಿಯಲ್ಲಿ ಯೂ ಟರ್ನ್ ಹೊಡೆದಿದೆ.ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇದೇ 21ರಿಂದ ಕೇಂದ್ರ ಸರ್ಕಾರವೇ ಹದಿನೆಂಟು ವರ್ಷ ಮೀರಿದ ಎಲ್ಲರಿಗೂ ಉಚಿತ ಲಸಿಕೆ‌ ನೀಡುವುದಾಗಿ ಪ್ರಕಟಿಸಿದ್ದು, ರಾಜ್ಯಗಳಿಗೆ ಲಸಿಕೆ ಹಂಚುವ ಜವಾಬ್ದಾರಿಯನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.ಕೊರೊನ ಎರಡನೇ ಅಲೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಶಕ್ತಿಮೀರಿ ಪ್ರಯತ್ನ ‌ನಡೆಸಿದೆ. ಅದಾಗ್ಯೂ ಹಲವು ಮಂದಿ ತಮ್ಮವರನ್ನು

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ Read More »

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು. ಮೋದಿ ಭಾಷಣದ ಸಾರಾಂಶವೇನು?:ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದ್ದು, ಅನೇಕು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ Read More »

ಎರಡು ಮಕ್ಕಳ ತಾಯಿ, ಮಗನ ವಯಸ್ಸಿನ ಬಾಲಕನ ಜೊತೆ ಪರಾರಿ: ಕಾರಣ ನಿಗೂಢ

ಛತ್ತೀಸ್‌ಗಢ: ಇಲ್ಲಿನ ಕೋರಬಾದದಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಸಮನವಾದ 14 ವರ್ಷದ ಬಾಲಕನೊಂದಿಗೆ ಓಡಿ ಹೋದ ಘಡನೆ ನಡೆದಿದೆ. ಈ ಮಹಿಳೆಗೆ ಎರಡು ಮಕ್ಕಳಿದ್ದು ಈ ರೀತಿ ಪರಾರಿಯಾಗಿರುವುದು ಆತಂಕ ಉಂಟುಮಾಡಿದೆ. ಈಕೆಯ ಗಂಡ ಸರಕಾರಿ ನೌಕರನಾಗಿದ್ದ. ಈಕೆಗೆ ಅದೇ ಊರಿನ ಬಾಲಕನೊಂದಿಗೆ ಪ್ರೇಮಾಂಕುರಗೊಂಡಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರ ನಡುವೆ ಕುಚುಕು ಪ್ರೇಮ ಕೂಡ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇವರಿಬ್ಬರ ನಡುವಿನ ಈ ವಿಚಿತ್ರ ಪ್ರೇಮ ದೈಹಿಕ ಸಂಪರ್ಕದವರೆಗೂ ತಲುಪಿತ್ತು. ಇದಕ್ಕೆ

ಎರಡು ಮಕ್ಕಳ ತಾಯಿ, ಮಗನ ವಯಸ್ಸಿನ ಬಾಲಕನ ಜೊತೆ ಪರಾರಿ: ಕಾರಣ ನಿಗೂಢ Read More »

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್ಸೈಟ್ incometax.gov.in – ಇಂದಿನಿOದ (ಜೂನ್ ೭, ೨೦೨೧) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್ ಫಾರ್ಮ್ ಮತ್ತು ಸರಳ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ ೨.೦ ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು Read More »

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

ನವದೆಹಲಿ: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಕೋವಿಡ್ ಎರಡನೇ ಅಲೆ ಹಿಮ್ಮೆಟ್ಟಲು ಕಳೆದೊಂದು ತಿಂಗಳಿನಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಹಲವು ರಾಜ್ಯಗಳಲ್ಲಿ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ. ಅದಲ್ಲದೆ ರಾಷ್ಟ್ರಾದಾದ್ಯಂತ ಕೊರೋನ ವ್ಯಾಕ್ಸಿನ್ ಚುಚ್ಚು ಮದ್ದು ಹಂತಹಂತವಾಗಿ ನೀಡಲಾಗುತ್ತಿದೆ. ಅದರಂತೆ ಕೋವಿಡ್ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇನ್ನು ಮುಂದಿನ ನಡೆಯ ಬಗ್ಗೆ ದೇಶದ

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ Read More »

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐನೂರು ದಾಟಿದ್ದು ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಮಾತ್ರ 154 ದಾಟಿಲ್ಲ. ಆಸ್ಪತ್ರೆಗಳು ಕೊರೊನಾದಿಂದ ಸಾವು ಸಂಭವಿಸಿದೆ ಎಂದರು ಆರೋಗ್ಯ ಇಲಾಖೆ ಮಾತ್ರ ಅದನ್ನು ಅಲ್ಲಗಳೆದಿದೆ. ಇನ್ನು ಕೋವಿಡ್ ನಿಂದ ಸಾವು ಸಂಭವಿಸಿದಾಗ ಅದನ್ನು ದಾಖಲೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದ ಕೆಲವು ನಿಬಂಧನೆಗಳಿವೆ. ಅದಕ್ಕನುಗುಣವಾಗಿ ಸಾವಿನ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಇನ್ನು ಸರಕಾರ ಕೈಗೊಂಡ ನಿಬಂಧನೆಗಳಲ್ಲಿರುವ ಕುಂದುಕೊರತೆಗಳಿಂದಾಗಿ ಈ ದಾಖಲೆಗಳಲ್ಲಿ ಕೊರತೆ ಉಂಟಾಗಿದೆ

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ Read More »

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್

ನವದೆಹಲಿ: ದಿಲ್ಲಿ ರಾಜ್ಯ ಸರಕಾರದ ಮನೆಬಾಗಿಲಿಗೆ ಪಡಿತರ ತಲುಪಿಸುವ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಕೇಂದ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೇಷನ್ ಮಾಫಿಯಾದ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ರೇಷನ್ ಅಂಗಡಿಗಳಲ್ಲಿ ಜನ ಸೇರುವ ಕಾರಣ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ಹೋಗಲಾಡಿಸಲು ಮನೆಮನೆಗೆ ರೇಷನ್ ತಲುಪಿಸಿದರೆ ಒಳಿತು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿ ಇನ್ನೆರಡು ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಕೈ ಹಾಕಿತ್ತು. ಈ ನಡುವೆ

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್ Read More »