ರಾಷ್ಟ್ರೀಯ

ಪಾಕಿಸ್ತಾನದಲ್ಲಿ ಕಿರುಕುಳ: ಭಾರತದಲ್ಲಿ ಕೇರ್ ಲೆಸ್: ವಲಸೆ ಹಿಂದೂಗಳ ಸ್ಥಿತಿ ಅಧೋಗತಿ

ನವದೆಹಲಿ(ಜೂ.12): ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳ ಪರಿಸ್ಥಿತೆ ಶೋಚನೀಯವಾಗಿದೆ. ಜಟಿಲ ನಿಯಮದಿಂದ ಭಾರತಕ್ಕೆ ವಲಸೆ ಬಂದು 20 ವರ್ಷಗಳಾದರೂ ಯಾವ ಸೌಲಭ್ಯವೂ ಇಲ್ಲದೆ, ಇನ್ನೂ ನಿರಾಶ್ರಿತರಾಗಿಯೇ ದಿನದೂಡುವ ಪರಿಸ್ಥಿತಿ ಇದೆ. ಅತ್ತ ಪಾಕಿಸ್ತಾನ ಕಿರುಕುಳ ತಾಳಲಾರದೆ ಭಾರತಕ್ಕೆ ಬಂದರೆ ಇಲ್ಲಿನ ನಿರ್ಲಕ್ಷ್ಯ ನಿರಾಶ್ರಿತ ಹಿಂದೂಗಳನ್ನು ಅತಂತ್ರರನ್ನಾಗಿ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ: ನಿರಾಶ್ರಿತರಿಗೆ ಹೊಸ ಬದುಕಿನ ವಾಯ್ದೆ!. ಈ ರೀತಿ ಭಾರತದಿಂದ ಕಡೆಗಣಿಸಲ್ಪಟ್ಟ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳ ಕತೆ ಮನಕಲುಕುತ್ತಿದೆ. 20 ವರ್ಷಗಳ ಹಿಂದೆ […]

ಪಾಕಿಸ್ತಾನದಲ್ಲಿ ಕಿರುಕುಳ: ಭಾರತದಲ್ಲಿ ಕೇರ್ ಲೆಸ್: ವಲಸೆ ಹಿಂದೂಗಳ ಸ್ಥಿತಿ ಅಧೋಗತಿ Read More »

ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..!

ನವದೆಹಲಿ: ಕೊರೊನಾ ವೈರಸ್ ನ ಎರಡನೆಯ ಅಲೆಯ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಲ್ಲಿ ಕಡಿತ ಉಂಟಾಗುವ ಸಾಧ್ಯತೆ ಇದೆ. ಕೊರೊನಾದಿಂದಾಗಿ ಸರ್ಕಾರದ ಬೊಕ್ಕಸ ಭಾರಿ ಒತ್ತಡಕ್ಕೆ ಒಳಗಾಗಿದೆ. ಕೊರೊನಾ ಕಾರಣ ಒಂದೆಡೆ ಸರ್ಕಾರದ ವೆಚ್ಚದಲ್ಲಿ ನಿರಂತರ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಆದಾಯದಲ್ಲಿ ಕೊರತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ವೆಚ್ಚದ ಕಡಿತ ಸರ್ಕಾರದ ಕಛೇರಿಗಳು ಹಾಗೂ ನೌಕರರವರೆಗೆ ತಲುಪಿದೆ.

ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..! Read More »

ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್’ನಲ್ಲಿ ಇಂದು ಉಗ್ರರ ದಾಳಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಸೊಪೋರ್’ನ ಅರಂಪೋರಾ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಹಾಗೂ ಇಬ್ಬರು ನಾಗರೀಕರು ಸಾವನ್ನಪ್ಪಿ, ಮತ್ತಿಬ್ಬರು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ Read More »

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ ಬೆನ್ನಲ್ಲಿ ಇಂದು ಡೀಸೆಲ್ ಬೆಲೆ 100 ರೂ. ಗೆ ಮಾರಾಟವಾಗಿದೆ. ರಾಜಸ್ಥಾನದ ಗಂಗಾನಗರ ಎಂಬಲ್ಲಿ ಇಂದು 100.05 ರೂ. ಗೆ ಮಾರಾಟವಾಗುವ ಮೂಲಕ ಡೀಸೆಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ನೂರು ರೂ. ಆಸುಪಾಸಿನಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದ್ದು, 95ರ ಆಸುಪಾಸಿನ ದರಕ್ಕೆ ಡೀಸೆಲ್ ಬಿಕರಿಯಾಗುತ್ತಿದೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್ Read More »

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು

ಮುಂಬೈ: ಕಿರುತೆರೆ ನಟ ಪರ್ಲ್ ವಿ ಪುರಿ ಅಪ್ರಾಪ್ತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ತಾಯಿಯೇ ನಟ ನಿರಪರಾಧಿ ಎಂದಿದ್ದಾರೆ. ಕಳೆದೊಂದು ವಾರಗಳ ಹಿಂದೆ ಯುವತಿ ಹಾಗೂ ಯುವತಿಯ ತಂದೆ, ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿ ಮೇಲೆ ಅತ್ಯಾಚಾರ ಪ್ರಕರಣ ಧಾಖಲಿಸಿದ್ದರು. ಧಾರಾವಾಹಿ ಒಂದರಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ, ನಟ ನೊಂದಿಗೆ ಸೇರಿ ಕೆಲವು ಯುವಕರು ಕಾರೊಂದರಲ್ಲಿ ನನ್ನ ಮೇಲೆ

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು Read More »

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕಪ್ಪು ಶಿಲೀಂದ್ರ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಇದುವರೆಗೆ 2,100 ಕ್ಕೂ ಅಧಿಕ ಜನ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ದೇಶವ್ಯಾಪಿ ಈವರೆಗೆ 31,220 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2,110ಕ್ಕೂ ಹೆಚ್ಚು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಬ್ಲಾಕ್​ ಫಂಗಸ್​ ಸೋಂಕು ಏರಿಕೆಗೆ ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ Read More »

ನಿರಂತರ ಹತ್ತು ದಿನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ…!

ಒರಿಸ್ಸಾ: ಯುವತಿಯೊಬ್ಬಳನ್ನು ಕತ್ತಲೆ ಕೋಣೆಯೊಂದರಲ್ಲಿ ಕೂಡಿ ಹಾಕಿ 12 ಜನ ಕಾಮುಕರು ಬರೋಬ್ಬರಿ ಹತ್ತು ದಿನ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜ್ಯದ ಪುರಿ ಜಿಲ್ಲೆಯಲ್ಲಿ ನಡೆದಿದೆ. ಪುರಿಯ ಕೊನಾರ್ಕ್ ಸೂರ್ಯ ದೇವಾಲಯದ ಸಮೀಪದ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಯುವತಿ ಕೊಲ್ಕತ್ತಾ ಮೂಲದವಳಾಗಿದ್ದು ಕೆಲಸಕ್ಕಾಗಿ ರಾಜ್ಯಕ್ಕೆ ಬಂದಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಕಾಮುಕರ ಪರಿಚಯವಾಗಿದ್ದು, ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ನಿರಂತರ ಹತ್ತು ದಿನ ಅತ್ಯಾಚಾರ ಎಸಗಿದ್ದಾರೆ. ಹತ್ತು ದಿನಗಳಿಂದ ಕಾಮಕರ ವಿಕೃತಿಗೆ ಗುರಿಯಾಗಿದ್ದ

ನಿರಂತರ ಹತ್ತು ದಿನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ…! Read More »

10 ವರ್ಷದ ಬಾಲಕಿ‌ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳಲ್ಲಿ 6 ಜನ ಮಕ್ಕಳು!

ಹರಿಯಾಣ: ಅಂತರ್ಜಾಲದಿಂದ ಎಷ್ಟು ಉಪಯೋಗ ಇದೆಯೋ‌ ಅಷ್ಟೇ ಕೆಡುಕು ಕೂಡಾ ಇದೆ ಎನ್ನುವುದಕ್ಕೆ ಈ ಘಟನೆ‌ ಸಾಕ್ಷಿ. ಯಾರೂ ಊಹಿಸಲಾಗದ ಈ ಘಟನೆ ನಡೆದದ್ದು ಮೇ 24 ರಂದು ಗುರುಗ್ರಾಮ್​ನ ರೆವಾರಿ ಎಂಬ ಗ್ರಾಮದ ಒಂದು ಶಾಲೆಯಲ್ಲಿ. ಇಲ್ಲಿ 10-ವರ್ಷದ ಬಾಲಕಿಯ ಮೇಲೆ ಏಳು ಹುಡುಗರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಕೃತ್ಯ ನಡೆಯುವ ಮೊದಲು ಸಂತ್ರಸ್ತೆ ಮತ್ತು ಅರೋಪಿಗಳು ಅದೇ ಶಾಲೆಯ ಮೈದಾನದಲ್ಲಿ ಆಡುತ್ತಿದ್ದರು. ಅತ್ಯಾಚಾರ ನಡೆಸಿರುವವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲ10-12 ವರ್ಷ ವಯಸ್ಸಿನ ಮಕ್ಕಳು!! ಈ

10 ವರ್ಷದ ಬಾಲಕಿ‌ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳಲ್ಲಿ 6 ಜನ ಮಕ್ಕಳು! Read More »

ಮಾತೃಪಕ್ಷಕ್ಕೆ ಜಂಪ್ ಹೊಡೆದ ಮುಕುಲ್ ರಾಯ್ , ಬಿಜೆಪಿಗೆ ಆಘಾತ

ತೃಣ ಮೂಲ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಜಿಗಿದು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಇಂದು ಟಿಎಂಸಿ ಪಕ್ಷ ಸೇರ್ಪಡೆಯಾಗುವ ಮೂಲಕ ಮರಳಿ ಗೂಡಿಗೆ ಸೇರ್ಪಡೆಯಾಗಿದ್ದಾರೆ.ಮುಕುಲ್ ರಾಯ್ ಮತ್ತು ಅವರ ಪುತ್ರ ಸುಬ್ರಾಂಶು ರಾಯ್ ಅವರು ಕೋಲ್ಕತ್ತಾ ದಲ್ಲಿರುವ ಟಿಎಂಸಿ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.ವಿಧಾನಸಭಾ ಚುನಾವಣೆಗೂ ಮುನ್ನ ಟಿಎಂಸಿ ಇಂದ ಬಿಜೆಪಿಗೆ ಜಿಗಿದ ಅನೇಕ ಮುಖಂಡರು ಇದೀಗ ಮರಳಿ ಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಅದಕ್ಕೆ ಮುಕುಲ್ ರಾಯ್ ಆರಂಭ ನೀಡಿದ್ದಾರೆ.ಒಂದು

ಮಾತೃಪಕ್ಷಕ್ಕೆ ಜಂಪ್ ಹೊಡೆದ ಮುಕುಲ್ ರಾಯ್ , ಬಿಜೆಪಿಗೆ ಆಘಾತ Read More »

ಸೊಂಕಿತರಿಗೆ ಲಸಿಕೆಯ ಅಗತ್ಯವಿಲ್ಲ | ಅವೈಜ್ಞಾನಿಕ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ದಾರಿ: ಕೇಂದ್ರಕ್ಕೆ ತಜ್ಞರ ಎಚ್ಚರಿಕೆ

ದೆಹಲಿ: ಸರಿಯಾದ ಯೋಜನೆಯಿಲ್ಲದ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ಕಾರಣವಗಬಹುದು ಎಂದು ತಜ್ಞರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಹಾಗು ಕೋವಿಡ್ ಸೊಂಕಿಗೊಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಸಲಹೆ ನೀಡಿದೆ. ಸರಿಯಾದ ವೈಜ್ಞಾನಿಕ ರೀತಿ ಅನುಸರಿಸದೆ, ವಿವೇಚನಾ ರಹಿತವಾಗಿ ಮತ್ತು ಅಪೂರ್ಣವಾದ ಸಾಮೂಹಿಕ ಲಸಿಕೀಕರಣವು ರೂಪಾಂತರ ತಳಿಗಳ ಸೃಷ್ಟಿಗೆ ಪ್ರಚೋದನೆ ನೀಡುತ್ತದೆ ಎಂದು ತಜ್ಞ ವೈದ್ಯರ ಸಮಿತಿ ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ. ಏಮ್ಸ್‌ನ ವೈದ್ಯರು, ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ

ಸೊಂಕಿತರಿಗೆ ಲಸಿಕೆಯ ಅಗತ್ಯವಿಲ್ಲ | ಅವೈಜ್ಞಾನಿಕ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ದಾರಿ: ಕೇಂದ್ರಕ್ಕೆ ತಜ್ಞರ ಎಚ್ಚರಿಕೆ Read More »