ಶತಕೋಟಿ ವ್ಯಾಕ್ಸಿನ್ ನಮ್ಮ ಸಾಮರ್ಥ್ಯದ ಪ್ರತಿಬಿಂಬ|ದೀಪಾವಳಿಗೆ ದೇಶೀಯ ಉತ್ಪನ್ನ ಖರೀದಿಸಿ – ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ನಮ್ಮ ದೇಶ ಕರ್ತವ್ಯವನ್ನು ಪಾಲಿಸಿದ್ದು ಅದರಲ್ಲಿ ಯಶಸ್ಸು ಸಿಕ್ಕಿದೆ. ಅಕ್ಟೋಬರ್ 21ಕ್ಕೆ ದೇಶದಲ್ಲಿ ಶತಕೋಟಿ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಹೇಳಿದ್ದಾರೆ. ಇಂದು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ 100 ಕೋಟಿ ಲಸಿಕೆ ಗುರಿಯನ್ನು ಸಾಧಿಸಿದ ಸಂತೋಷವನ್ನು ಹಂಚಿಕೊಂಡರು. ಇದು ಎಲ್ಲರ ಸಾಧನೆ, ಹೃದಯಪೂರ್ವಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. […]