ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 8 ರೂ. ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 6 ರೂ. ಇಳಿಕೆ ಮಾಡಲಾಗಿದೆ.ಅಬಕಾರಿ ಸುಂಕ ಕಡಿತವಾದ ಹಿನ್ನೆಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 9.5 ರೂಪಾಯಿ ಇಳಿಕೆಯಾಗಿದೆ. ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ ನ ಮೇಲೆ 6 ರೂ.ನಷ್ಟು ಕಡಿಮೆ […]

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ Read More »

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು ರಪ್ತಿಗೆ ಸುಪ್ರಿಂ ಗ್ರೀನ್ ಸಿಗ್ನಲ್

ಸಮಗ್ರನ್ಯೂಸ್: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ ಉತ್ಖನನ ಮಾಡಿದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿಗಾರಿಕೆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿ ಕಬ್ಬಿಣದ ಅದಿರಿನ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತು ಮತ್ತು ಅಧಿಕಾರಿಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವಂತೆ ಸಂಸ್ಥೆಗಳಿಗೆ ಸೂಚಿಸಿತು. ಈಗಾಗಲೇ ಅಗೆದ ಕಬ್ಬಿಣದ ಅದಿರು ದಾಸ್ತಾನನ್ನು

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು ರಪ್ತಿಗೆ ಸುಪ್ರಿಂ ಗ್ರೀನ್ ಸಿಗ್ನಲ್ Read More »

ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ‌ ಶಿವಲಿಂಗ ಪತ್ತೆ| ಮಸೀದಿ ಸುತ್ತ ಪೊಲೀಸ್ ಸರ್ಪಗಾವಲು

ಸಮಗ್ರ ನ್ಯೂಸ್: ವಿವಾದಿತ ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ ಶಿವಲಿಂಗ ಪತ್ತೆಯಾಗಿದ್ದು, ಶಿವಲಿಂಗ ಪತ್ತೆಯಾದ ಸ್ಥಳಕ್ಕೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆಯಲ್ಲದೆ, ಅದರ 100 ಅಡಿ ವ್ಯಾಪ್ತಿ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಸಿಆರ್ ಪಿಎಫ್ ಕಮಾಂಡೆಟ್ ಗೆ ಶಿವಲಿಂಗ ಸ್ಥಳದ ರಕ್ಷಣೆ ಜವಾಬ್ದಾರಿ ನೀಡಲಾಗಿದೆ. ಯಾವುದೇ ವ್ಯಕ್ತಿ ಅಲ್ಲಿ ಪ್ರವೇಶಿಸುವಂತಿಲ್ಲ ಎಂದು ಆದೇಶಿಸಲಾಗಿದೆ. ಕೋರ್ಟ್ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಸಮೀಕ್ಷೆ ಹಾಗೂ ವಿಡಿಯೋ ಚಿತ್ರಿಕರಣ ನಡೆಸಲಾಗಿದ್ದು , ಇಂದು ಸಮೀಕ್ಷೆ ಬಹುತೇಕ

ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ‌ ಶಿವಲಿಂಗ ಪತ್ತೆ| ಮಸೀದಿ ಸುತ್ತ ಪೊಲೀಸ್ ಸರ್ಪಗಾವಲು Read More »

ಭಾರೀ ಮಳೆ ಸಾಧ್ಯತೆ; ಮುಂದಿನ 4 ದಿನ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು,ರಾಜ್ಯದಲ್ಲಿ‌ ಮೇ 18 ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಲ್ಲದೆ, ಮೇ,18,19ರಂದು ಈ ಜಿಲ್ಲೆಗಳಲ್ಲಿ ಇನ್ನಷ್ಟು ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂ.ಗ್ರಾಮಾಂತರ,

ಭಾರೀ ಮಳೆ ಸಾಧ್ಯತೆ; ಮುಂದಿನ 4 ದಿನ ಅಲರ್ಟ್ Read More »

ಬೆಂಗಳೂರು ಏರ್‌ಪೋರ್ಟ್‌ ಪ್ರಯಾಣಕ್ಕೆ ಇನ್ಮುಂದೆ ಹೆಲಿಕಾಪ್ಟರ್‌ ಸೇವೆ| ದರ ಎಷ್ಟು? ಪ್ರಯಾಣ ಹೇಗೆ? ಇಲ್ಲಿದೆ ಮಾಹಿತಿ…

ಸಮಗ್ರ ನ್ಯೂಸ್: ಎಲೆಕ್ಟ್ರಾನಿಕ್‌ ಸಿಟಿ, ಹಳೆ ಎಚ್‌ಎಎಲ್‌ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಲು ಬ್ಲೇಡ್‌ ಇಂಡಿಯಾ ಸಂಸ್ಥೆಯು ಹೆಲಿಕಾಪ್ಟರ್‌ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಅಂದಾಜು 4000 ರೂಪಾಯಿಯಲ್ಲಿ ನಾಗರಿಕರು ಟ್ರಾಫಿಕ್‌ಜಾಮ್‌ ಕಿರಿಕಿರಿ ಇಲ್ಲದೆ, ಕಡಿಮೆ ಅವಧಿಯಲ್ಲಿ ಏರ್‌ಪೋರ್ಟ್‌ ತಲುಪಬಹುದಾಗಿದೆ. ಜುಲೈನಿಂದ ಈ ಸೇವೆ ಆರಂಭವಾಗಲಿದೆ. ತುಂಬಿ ಏವಿಯೇಶನ್‌ ಸಂಸ್ಥೆಯು ಈ ಹಿಂದೆ ಇದೇ ಮಾದರಿಯ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿತ್ತಾದರೂ ಮೂರು ವರ್ಷದ ಹಿಂದೆಯೇ ಸೇವೆ ಸ್ಥಗಿತಗೊಂಡಿದೆ. ಬ್ಲೇಡ್‌ ಇಂಡಿಯಾ ಸಂಸ್ಥೆಯು ಕೊಡಗಿಗೂ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿದೆ. ”ವಾರದಲ್ಲಿ

ಬೆಂಗಳೂರು ಏರ್‌ಪೋರ್ಟ್‌ ಪ್ರಯಾಣಕ್ಕೆ ಇನ್ಮುಂದೆ ಹೆಲಿಕಾಪ್ಟರ್‌ ಸೇವೆ| ದರ ಎಷ್ಟು? ಪ್ರಯಾಣ ಹೇಗೆ? ಇಲ್ಲಿದೆ ಮಾಹಿತಿ… Read More »

ಭಾರತದಿಂದ ಹೊರಹೋಗುತ್ತಿರುವ ವಿದೇಶಿ ಹೂಡಿಕೆ| 25 ಸಾವಿರ ಕೋಟಿಗೂ ಮಿಕ್ಕಿ ಹೂಡಿಕೆ ಹಿಂತೆಗೆತ

ಸಮಗ್ರ ನ್ಯೂಸ್: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಮಾರುಕಟ್ಟೆಯಿಂದ ನಿರಂತರವಾಗಿ ಬಂಡವಾಳ ಹಿಂದಕ್ಕೆ ಪಡೆಯುತ್ತಲೇ ಇದ್ದು, ಬಂಡವಾಳ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಮೇ 2 ರಿಂದ 13ರವರೆಗಿನ ಅವಧಿಯಲ್ಲಿ ಷೇರುಪೇಟೆಯಿಂದ ₹ 25,200 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಡ್ಡಿದರ ಹೆಚ್ಚಳ ಆಗಿರುವುದು ಮತ್ತು ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ‘ಕಚ್ಚಾ ತೈಲ ದರ ಗರಿಷ್ಠ ಮಟ್ಟದಲ್ಲಿ ಇರುವುದು, ಹಣದುಬ್ಬರ ಏರಿಕೆ, ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದು ಷೇರುಪೇಟೆಯ

ಭಾರತದಿಂದ ಹೊರಹೋಗುತ್ತಿರುವ ವಿದೇಶಿ ಹೂಡಿಕೆ| 25 ಸಾವಿರ ಕೋಟಿಗೂ ಮಿಕ್ಕಿ ಹೂಡಿಕೆ ಹಿಂತೆಗೆತ Read More »

ಪ್ರತ್ಯೇಕ ಬೆಂಕಿ ಅವಘಡ| 31 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಜಮ್ಮುವಿನ ಕತ್ರಾ ಬಳಿ ವೈಷ್ಣೋದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘೋರ ದುರಂತ ಶುಕ್ರವಾರ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕತ್ರಾದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಹಠಾತ್ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ. ದೆಹಲಿಯಲ್ಲಿ 27 ಮಂದಿ ಸಾವು!ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೊ ನಿಲ್ದಾಣ ಸಮೀಪದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ

ಪ್ರತ್ಯೇಕ ಬೆಂಕಿ ಅವಘಡ| 31 ಮಂದಿ ಸಜೀವ ದಹನ Read More »

ರಾಯಪುರ: ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಗಳು ಸಾವು

ಸಮಗ್ರ ನ್ಯೂಸ್: ಹಾರಾಟ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಸರಕಾರಿ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೊಳಗಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ದುರಂತ ಛತ್ತೀಸ್‌ಗಡ ರಾಜಧಾನಿಯಲ್ಲಿ ಗುರುವಾರ (ಮೇ 12) ರಾತ್ರಿ ಸಂಭವಿಸಿದೆ. ರಾಯಪುರ್‌ನ ಸ್ವಾಮಿ ವಿವೇಕಾನದ ವಿಮಾನ ನಿಲ್ದಾಣದಲ್ಲಿ ರಾತ್ರಿ 9:10ರ ಆಸುಪಾಸು ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪಘಾತಕ್ಕೊಳಗಾದ ಹೆಲಿಕಾಪ್ಟರ್ ಅಗಸ್ಟಾ ಕಂಪನಿಯದ್ದಾಗಿದೆ. ದುರಂತಕ್ಕೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಮಾಮೂಲಿಯ ಹಾರಾಟ ಅಭ್ಯಾಸ ನಡೆಸುವಾಗ ಅಪಘಾತವಾಗಿದೆ. ಹೆಲಿಕಾಪ್ಟರ್ ಅನ್ನು ಕೆಳಗೆ ಇಳಿಸುವಾಗ ಬೆಂಕಿ

ರಾಯಪುರ: ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಗಳು ಸಾವು Read More »

ಮೇ.15ರಿಂದ ಮುಂಗಾರು ಆಗಮನ| ಈ ಬಾರಿ 15 ದಿನ ಮೊದಲೇ ಕಾಲಿಡಲಿದೆ ಮಾನ್ಸೂನ್

ಸಮಗ್ರ ನ್ಯೂಸ್: ನೈರುತ್ಯ ಮಾನ್ಸೂನ್ ಈ ಬಾರಿ ಹದಿನೈದು ದಿನ ಮುಂಚೆಯೇ ಆಗಮಿಸಲಿದೆ. ಮೇ 15 ರಂದೇ ನೈರುತ್ಯ ಮಾನ್ಸೂನ್ ಆಗಮನದ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸಾಮಾನ್ಯವಾಗಿ ಮೇ ಕೊನೆ ಇಲ್ಲವೇ ಜೂನ್ ಮೊದಲವಾರದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮೇ 15 ರಿಂದಲೇ ಆರಂಭವಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ರಂದು ಮೊದಲ ಋತುಮಾನದ ಮಳೆಯಾಗಲಿದೆ. ಇದರೊಂದಿಗೆ ನೈರುತ್ಯ ಮಾನ್ಸೂನ್

ಮೇ.15ರಿಂದ ಮುಂಗಾರು ಆಗಮನ| ಈ ಬಾರಿ 15 ದಿನ ಮೊದಲೇ ಕಾಲಿಡಲಿದೆ ಮಾನ್ಸೂನ್ Read More »

ಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ| ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ|

ಸಮಗ್ರ ನ್ಯೂಸ್: ಒಂದೆಡೆ ಭಾರತೀಯ ರೂಪಾಯಿ ಮೌಲ್ಯ ಯುಎಸ್ ಡಾಲರ್ ಎದುರು ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡರೆ, ಇನ್ನೊಂದೆಡೆ ಭಾರತೀಯ ಷೇರು ಮಾರುಕಟ್ಟೆಗಳ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.2ಕ್ಕಿಂತಲೂ ಹೆಚ್ಚು ಇಳಿಕೆ ದಾಖಲಿಸಿವೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 50 ಇಂಡೆಕ್ಸ್ ಶೇ.2.22 ಅಥವಾ 359.10 ಅಂಶ ಕಡಿಮೆಯಾಗಿ 15,808 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಇನ್ನು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶೇ.2.14ರಷ್ಟು ಅಥವಾ 1,158.08ರಿಂದ 52,930.31 ಮಟ್ಟಕ್ಕೆ ಇಳಿಕೆಯಾಗಿದೆ. ಈ

ಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ| ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ| Read More »